ಏಪ್ರಿಲ್‌ನಲ್ಲಿ ಇಷ್ಟೆಲ್ಲ ಆಗೋದಿದೆ ಮೀನ ರಾಶಿಗೆ

0

ನಾವು ಈ ಲೇಖನದಲ್ಲಿ ಮೀನ ರಾಶಿಯವರ ಏಪ್ರಿಲ್ ಮಾಸ ಭವಿಷ್ಯವನ್ನು ತಿಳಿದುಕೊಳ್ಳೋಣ. ಏಪ್ರಿಲ್ ಮಾಸದಲ್ಲಿ ನಿಮಗೆ ಉಷ್ಣತೆಯು ಹೆಚ್ಚಿಗೆ ಇರುತ್ತದೆ. ಒಂದು ವೇಳೆ ತಲೆ ಬಿಸಿಯಾದರೆ ಮತ್ತೊಂದು ಸಾರಿ ಕಾಲಿನಲ್ಲಿ ಬಿಸಿ ಇರುತ್ತದೆ. ಮತ್ತು ಸಾಡೇಸಾತಿ ನಡೆಯುತ್ತಿರುವುದರಿಂದ, ಮತ್ತು ಶನಿಯ ಅಕ್ಕಪಕ್ಕ ರವಿ ಮತ್ತು ಕುಜ ಗ್ರಹಗಳ ಸಂಚಾರ ವಾಗುತ್ತದೆ. ಅಗ್ನಿಯ ತತ್ವ ಹೆಚ್ಚಾಗಲಿದೆ .ಇದನ್ನು ಸಮತೋಲನ ಮಾಡಲು ನೀವು ತುಂಬಾ ಕಷ್ಟ ಪಡಬೇಕಾಗುತ್ತದೆ.

ನಿಮ್ಮ ಮಾನಸಿಕ ಒತ್ತಡವನ್ನು ಹಿಡಿತದಲ್ಲಿಡಿ .ಜೊತೆಗೆ ದೇಹದ ಉಷ್ಣಾಂಶವು ಹೆಚ್ಚಿಗೆ ಆಗದಂತೆ ನೋಡಿಕೊಳ್ಳಿ. ಆರೋಗ್ಯದಲ್ಲಿ ಅಂದರೆ ಅಸಿಡಿಟಿಯ ಸಮಸ್ಯೆ ಉಂಟಾಗಬಹುದು. ನೀರನ್ನು ಹೆಚ್ಚಿಗೆ ಸೇವಿಸುವುದು. ವಾತಾವರಣದಲ್ಲಿ ಬಿಸಿಲಿನ ತಾಪ ಹೆಚ್ಚಿಗೆ ಇರುವುದರಿಂದ ನೀರು ಸಹ ನಿಮಗೆ ಬಿಸಿಯ ಅನುಭವವನ್ನು ಉಂಟುಮಾಡುತ್ತದೆ .ಆದರೆ ನೀರು ಗಾಳಿಯ ಜೊತೆ ಸೇರಿದಾಗ ತಣ್ಣನೆಯ ಅನುಭವವಾಗುತ್ತದೆ. ಪದೇ ಪದೇ ನೀರನ್ನು ಕಣ್ಣು ಮತ್ತು ಕಾಲಿಗಳಿಗೆ ಲೇಪಿಸಿಕೊಳ್ಳಿ.

ಇದರಿಂದ ನಿಮಗೆ ತಣ್ಣನೆಯ ಅನುಭವವಾಗುತ್ತದೆ. ವಿಶೇಷವಾಗಿ ದೇಹದಲ್ಲಿ ಉಷ್ಣಾಂಶ ಹೆಚ್ಚಿಗೆ ಇರುವವರಿಗೆ ಅಸಿಡಿಟಿಯ ಸಮಸ್ಯೆ ಹೆಚ್ಚಿಗೆ ಆಗುತ್ತದೆ . ಇದನ್ನು ನೀವು ಕಡಿಮೆ ಮಾಡಿಕೊಳ್ಳಲು ನೀರಿನ ಬಳಕೆ ಅತಿ ಅವಶ್ಯಕ. ಮತ್ತು ಅಂಗೈಗಳಿಗೆ ನೀರನ್ನು ಹಚ್ಚಿಕೊಂಡು ಅದು ತಾನೇ ಒಣಗಲು ಬಿಡಿ . ಇದು ಒಂದು ಪ್ರಾಕೃತಿಕ ಚಿಕಿತ್ಸೆಯಾಗಿದೆ. ಹೆಚ್ಚಿನ ಗ್ರಹಗಳು ನಿಮ್ಮ ರಾಶಿಯ ಅಕ್ಕಪಕ್ಕದಲ್ಲೇ ಸಂಚಾರ ಮಾಡಲಿದೆ. ಅಂದರೆ ಸ್ವಲ್ಪ ನಿಮ್ಮತನದ ಬಗ್ಗೆಯೇ ಹೆಚ್ಚಿಗೆ ಯೋಚನೆ ಮಾಡುತ್ತೀರಾ. .

ಸಾಡೆ ಸಾತಿ ನಡೆಯುವಾಗ ಇವೆಲ್ಲವೂ ನಡೆಯುತ್ತದೆ . ಇದು ನನ್ನದು ನನ್ನವರು ನಾನು ಮಾಡಬೇಕಾದ ಕೆಲಸ ಎನ್ನುವ ಇಂಥ ವಿಚಾರಗಳ ಬಗ್ಗೆ ಭ್ರಮಾತ್ಮಕವಾಗಿ ನೀವು ನಡೆದುಕೊಳ್ಳುತ್ತೀರಾ. ರಾಹುವಿನ ಪ್ರಭಾವ ಬೀರುವುದರಿಂದ ನಿಮಗೆ ಹೀಗೆಲ್ಲಾ ಆಗುತ್ತದೆ. ನಿಮಗೆ ಒಂದುವರೆ ಸಾಡೇಸಾತಿ ಇರುವುದರಿಂದ ಈ ರೀತಿಯ ಅನುಭವವಾಗುತ್ತದೆ. ಒಂದುವರೆ ಸಾಡೇಸಾತ್ ಎಂದರೆ ಒಂದು ಕಡೆ ಸಾಡೇಸಾತಿ ನಡೆಯುತ್ತದೆ. ಶನಿಯ ಒಂದಷ್ಟು ನಕಾರಾತ್ಮಕ ಅಂಶಗಳನ್ನು ತರುವವನು ರಾಹುಗ್ರಹವಾಗಿರುತ್ತದೆ.

ಅದು ನಿಮ್ಮ ರಾಶಿಯಲ್ಲಿ ಇರುತ್ತದೆ. ನಡೆಯುತ್ತಿರುವ ಶನಿ ಮತ್ತು ಜನ್ಮ ರಾಹು ಇವುಗಳು ಕೂಡಿಕೊಂಡು, ಪ್ರಬಲ ಭ್ರಮಾತ್ಮಕ ಭಾವನೆಗಳನ್ನು ಕೊಡುವುದು ಮತ್ತು ನಷ್ಟಗಳನ್ನು ತರುವುದು, ಮತ್ತು ಧನ ನಷ್ಟಗಳನ್ನು ತರುವುದು ವಿಶೇಷವಾಗಿ ದೊಡ್ಡ ದೊಡ್ಡ ವ್ಯವಹಾರಗಳನ್ನು ನಡೆಸುವ ವ್ಯಕ್ತಿಗಳಿಗೆ ಗಮನ ಬರದೆ ನಿಮ್ಮ ಹಣವು ನಷ್ಟವಾಗುತ್ತದೆ. ಈ ಒಂದುವರೆ ಸಾಡೇಸಾತಿಯು ಹಣದ ವಿಷಯದಲ್ಲಿ ಮತ್ತು ಜೀವನದ ವಿಷಯದಲ್ಲಿ ನಷ್ಟಗಳನ್ನು ತರುವ ಸಾಧ್ಯತೆ ಇದೆ.

ಈ ನಕಾರಾತ್ಮಕ ಬೆಳವಣಿಗೆಗಳನ್ನು ಸಕಾರಾತ್ಮಕವಾಗಿ ಬದಲಾಯಿಸುವಂತಹ ಅಥವಾ ನಿಮ್ಮ ನಷ್ಟಗಳನ್ನು ತಪ್ಪಿಸುವಂತಹ ಕೆಲವೊಂದು ಬದಲಾವಣೆಗಳು ನಿಮಗೆ ಇದ್ದೇ ಇರುತ್ತದೆ. ಆದಾಯದ ಹರಿವು ಹೆಚ್ಚಿಗೆ ಇದ್ದಾಗ ನಷ್ಟವಾಗುವ ಸಾಧ್ಯತೆ ಇದ್ದೇ ಇರುತ್ತದೆ. ಆದರೆ ಆದಾಯವೇ ಇಲ್ಲದಿದ್ದಾಗ ನಷ್ಟವಾಗುವ ಪ್ರಶ್ನೆಯೇ ಇರುವುದಿಲ್ಲ . ದೊಡ್ಡ ಮತ್ತು ಆದಾಯದ ವಿಷಯದಲ್ಲಿ ನೀವು ತುಂಬಾ ಜಾಗೃತೆ ವಹಿಸಬೇಕು. ಇದೆಲ್ಲವನ್ನು ಸಮತೋಲನ ಮಾಡುವರು ಈ ತಿಂಗಳಿನಲ್ಲಿ ಏನೇನು ಅನುಸರಿಸಬೇಕು ಎಂಬುದರ ಬಗ್ಗೆ ತಿಳಿದುಕೊಳ್ಳೋಣ .ವಿಶೇಷವಾದ ಪರಿವರ್ತನೆಗಳು ಈ ತಿಂಗಳಿನ ಕೊನೆಯಲ್ಲಿ ನಿಮಗೆ ಕಂಡುಬರುವ ಸಾಧ್ಯತೆ ಇದೆ .

ಮೀನ ರಾಶಿಯವರಿಗೆ ಈ ತಿಂಗಳಿನಲ್ಲಿ ಶುಕ್ರದಶೆಯು ಬಹಳ ಪ್ರಬಲವಾಗಿರುತ್ತದೆ. ಲಾಭ ಮತ್ತು ವ್ಯಯದ ಜೊತೆಗೆ ನಿಂತುಕೊಂಡು ಶುಕ್ರನು ನಿಮಗೆ ರಕ್ಷಣೆಯನ್ನು ನೀಡುತ್ತಿರುತ್ತಾನೆ. ನಿಮಗೆ ತುಂಬಾ ಕಷ್ಟವಾದರೂ, ನಿಮಗೆ ಸಾಲದ ಸೌಲಭ್ಯವು ಸಹ ಸಿಗುತ್ತದೆ. ಈ ರೀತಿಯ ಎಲ್ಲಾ ಪ್ರಯತ್ನಗಳನ್ನು ಮಾಡಲು ನಿಮಗೆ ಶುಕ್ರಗ್ರಹದಿಂದ ಅನುಕೂಲತೆ ಸಿಗುತ್ತದೆ. ವಿಶೇಷವಾಗಿ ನಿಮ್ಮ ತೃತೀಯ ಭಾವ ಅಂದರೆ ಸಹೋದರ , ಅಥವಾ ಸಹೋದರಿಯರಿಂದ ಒಳ್ಳೆಯ ಅನುಕೂಲತೆ ಸಿಗುತ್ತದೆ. ವ್ಯವಹಾರ ಮತ್ತು ವ್ಯಾಪಾರಸ್ಥರಿಗೆ

ಈ ತಿಂಗಳು ಉತ್ತಮ ಧನ ಲಾಭವಾಗುತ್ತದೆ. ಶುಕ್ರನಿಗೆ ಹೊಂದಾಣಿಕೆಯಾಗುವಂತೆ ನಿಮಗೆ ಅನುಕೂಲತೆಯನ್ನು ಮಾಡಿಕೊಡಲು ಮತ್ತೊಂದು ಗ್ರಹ ಕುಜ ಗ್ರಹವು ಒಳ್ಳೆಯ ಫಲಗಳನ್ನು ಮತ್ತು ಯಶಸ್ಸನ್ನು ತಂದುಕೊಡುತ್ತದೆ .ವಿಶೇಷವಾಗಿ ಭೂಮಿ ಸ್ಥಿರಾಸ್ತಿ ಸಮಸ್ತ ತಂತ್ರಜ್ಞಾನ ಮಾಹಿತಿಗೆ ಸಂಬಂಧ ಪಟ್ಟ ಉದ್ದಿಮೆ ಮತ್ತು ವ್ಯವಹಾರಗಳಲ್ಲಿ, ಇದೆಲ್ಲದರಲ್ಲೂ ಮೀನ ರಾಶಿಯವರಿಗೆ ಯಶಸ್ಸು ಸಿಗುತ್ತದೆ. ಇದು ಇಡೀ ತಿಂಗಳಿಗೆ ಇರುವುದಿಲ್ಲ .ಒಂದು ಅವಧಿಗೆ ಮಾತ್ರ ಸೀಮಿತವಾಗಿರುತ್ತದೆ. 15ನೇ ತಾರೀಖಿನವರೆಗೆ ಕುಜ ಗ್ರಹವು ಬಹಳ ಬಲಿಷ್ಠನಾಗಿರುತ್ತಾನೆ. ಕುಜನು ರಾಶಿಯಲ್ಲಿ ,

ಇರುವುದರಿಂದ ನಿಮಗೆ ಯಶಸ್ಸನ್ನು ತಂದು ಕೊಡುತ್ತಾನೆ .ಆರೋಗ್ಯ ಸಮಸ್ಯೆಗಳಿಂದ ಸರಿಯಾದ ಔಷಧಗಳನ್ನು ತೆಗೆದುಕೊಂಡರೆ ಈ ಅವಧಿಯಲ್ಲಿ ನೀವು ಹೊರಗೆ ಬರಲು ಸಾಧ್ಯವಾಗುತ್ತದೆ. 15ನೇ ತಾರೀಕಿನ ಅವಧಿಯ ನಂತರ ನೀವು ತುಂಬಾ ಎಚ್ಚರಿಕೆಯಿಂದ ಇರಬೇಕಾಗುತ್ತದೆ .ಅಂದರೆ ಉಷ್ಣತೆಯು ಹೆಚ್ಚಾಗುತ್ತದೆ. ಬಹಳ ವಿಶೇಷವಾದಂತಹ ಬುಧ ಮತ್ತು ಗುರುವಿನ ಸಂಯೋಗವು ನಿಮ್ಮ ದ್ವಿತೀಯ ಭಾಗದಲ್ಲಿ ಆಗುತ್ತದೆ .ಇದು ಬಹಳ ಶುಭಫಲಗಳನ್ನು ನೀಡುತ್ತದೆ. ಗುರುವಿನಿಂದ ನಿಮಗೆ ಶ್ರೀರಕ್ಷೆ ಇದ್ದೇ ಇರುತ್ತದೆ. ದ್ವಿತೀಯದ ಗುರು ಆಗಿರುವುದರಿಂದ ಮೇ ತಿಂಗಳಿನವರೆಗೂ ತುಂಬಾ ಬಲಾಢ್ಯನಾಗಿರುತ್ತಾನೆ .

ದುಡ್ಡಿನ ವಿಚಾರದಲ್ಲಿ , ಮಾತಿನ ವಿಚಾರದಲ್ಲಿ , ಕೆಲಸ ಕಾರ್ಯಗಳ ವಿಚಾರದಲ್ಲಿ , ಯಶಸ್ಸನ್ನು ತಂದು ಕೊಡುತ್ತಾನೆ. ಗುರುವಿನ ಶಕ್ತಿಯೊಡನೆ ಬುಧನು ಬಂದು ಸೇರಿಕೊಂಡಾಗ ಧನ ಸಂಪತ್ತು ಇಂಥ ವಿಚಾರಗಳಿಗೆ ಬಹಳ ಬಲಿಷ್ಠತೆಯನ್ನು ಕೊಡುತ್ತದೆ. ಶಿಕ್ಷಣದ ವಿಷಯಕ್ಕೆ ಬಂದರೆ ಪರೀಕ್ಷೆಯ ಸಮಯದಲ್ಲಿ ಮಾರ್ಚ್ 27ರ ನಂತರ ಹೆಚ್ಚಾಗಿ ಅಂಕಗಳಿಸುವ ಸಾಮರ್ಥ್ಯವು ನಿಮಗೆ ಬರಬಹುದು. ಗುರು ಮತ್ತು ಬುಧನ ಸಂಯೋಗದಿಂದ ನಿಮಗೆ ವಿಶೇಷವಾದಂತಹ ತಿಳುವಳಿಕೆಯು ಬರುತ್ತದೆ.

ಆ ತಿಳುವಳಿಕೆಯು ನಿಮ್ಮ ಮುಂದಿನ ಜೀವನಕ್ಕೆ ಸಹಕಾರವನ್ನು ಒದಗಿಸುತ್ತದೆ . ವಿಶೇಷವಾಗಿ ದಾಂಪತ್ಯ ವಿಚಾರದಲ್ಲಿ ಬರುವಂತಹ ಬಿಕ್ಕಟ್ಟನ್ನು ಎದುರಿಸಲು ವಿಶೇಷವಾದಂತಹ ಜ್ಞಾನ, ಸಲಹೆ ಮತ್ತು ಮಾರ್ಗದರ್ಶನ ಸಿಗುತ್ತದೆ. ಸಂಬಂಧಗಳನ್ನು ಸರಿ ಮಾಡಿಕೊಳ್ಳಲು ಮತ್ತು ಯಾವುದೇ ಬಿಕ್ಕಟ್ಟನ್ನು ನಿಭಾಯಿಸಲು, ಅಂತಹ ಸಾಮರ್ಥ್ಯವನ್ನು ಕೊಡುವ ಶಕ್ತಿ ಬುಧ ಗ್ರಹಕ್ಕಿದೆ. ಆ ತಿಳುವಳಿಕೆಯು, ನಿಮ್ಮಲ್ಲಿ ಬಂದು ನಿಮ್ಮ ಜೀವನದಲ್ಲಿ ಸುಖ ಶಾಂತಿ ನೆಲೆಸುತ್ತದೆ.

Leave A Reply

Your email address will not be published.