ಬಿಲ್ವಪತ್ರೆ ಮತ್ತು ಬಿಲ್ವಮರದ ಹಣ್ಣಿನ ಬಗ್ಗೆ ಇರುವ ಆರೋಗ್ಯಕರ ಲಾಭಗಳನ್ನು ಈ ಲೇಖನಗಳಲ್ಲಿ ತಿಳಿಸಿಕೊಡುತ್ತೇವೆ. ಬಿಲ್ವಪತ್ರೆ ಶೈವ ಸಂಪ್ರದಾಯದಲ್ಲಿ ಶಿವನ ಪೂಜೆಗೆ ಪ್ರಿಯವಾಗಿರುವ ಪದಾರ್ಥ ಎಂದು ಉಲ್ಲೇಖ ಮಾಡಲಾಗಿದೆ. ಬಿಲ್ವಪತ್ರೆ ಹಲವಾರು ಲಾಭಗಳನ್ನು ಹೊಂದಿದೆ ಎಂದು ಆಯುರ್ವೇದ ಗ್ರಂಥಗಳಲ್ಲಿ ಉಲ್ಲೇಖ ಮಾಡಿದ್ದಾರೆ. ಸುಶೃತ ಮತ್ತು ಚರಕ, ವಾಗ್ಭಟ್ಟ ಮಹರ್ಷಿಗಳಾಗಿರಬಹುದು ಬಿಲ್ವಪತ್ರೆಯ ಮಹತ್ವವನ್ನು ತಮ್ಮ ಆಯುರ್ವೇದ ಗ್ರಂಥಗಳಲ್ಲಿ ತಿಳಿಸಿದ್ಧಾರೆ.
ಬಿಲ್ವಪತ್ರೆಯು ಶುದ್ಧೀಕರಣ ಮಾಡಲು ಅದ್ಭುತವಾದ ಪದಾರ್ಥ. ಇದು ಶರೀರವನ್ನು ಶುದ್ಧೀಕರಣ ಮಾಡುತ್ತದೆ ಹಾಗೂ ಶರೀರಕ್ಕೆ ಬಲವನ್ನು ಕೊಡುವ ಅದ್ಭುತವಾದ ಪದಾರ್ಥ ಎಂದು ಹೇಳಬಹುದು. ಇದನ್ನು ಯಾವ ರೀತಿ ಬಳಸಬೇಕು ಎಂದರೆ? ಇದನ್ನು ಬಳಸುವುದರಿಂದ ಶರೀರದಲ್ಲಿ ಏನೆಲ್ಲಾ ಪ್ರಯೋಜನಗಳು ಉಂಟಾಗುತ್ತದೆ? ಲಾಭಗಳೇನು ಎಂಬುದನ್ನ ಈ ಲೇಖನದ ಮೂಲಕ ತಿಳಿಸಿಕೊಡುತ್ತಿದ್ದೇವೆ. ಬಿಲ್ವಪತ್ರೆಯ ಎಲೆಯನ್ನು ಪೂಜೆಗೆ ಬಳಸಿ ಅದನ್ನು ಬೀಸಾಡುತ್ತೇವೆ.
ಇನ್ನು ಮುಂದೆ ಬೀಸಾಡೆ ಮನೆಯಲ್ಲಿ ನೆರಳಿನಲ್ಲಿ ಸಂಗ್ರಹಣೆ ಮಾಡಿ. ಯಾವ ಮರದ ಎಲೆಗಳು ನೆರಳಿನಲ್ಲಿ ಒಣಗುತ್ತದೆಯೋ ಅದರಲ್ಲಿ ಸತ್ವವು ಹಾಗೆಯೇ ಇರುತ್ತದೆ. ಬಿಸಿಲಿನಲ್ಲಿ ಒಣಗಿಸಿದರೇ ಸತ್ತ್ವು ಕಡಿಮೆಯಾಗುತ್ತಾ ಬರುತ್ತದೆ. ಒಣಗಿರುವ ಬಿಲ್ವಪತ್ರೆಯ ಎಲೆಯನ್ನು ಚೆನ್ನಾಗಿ ಪೌಡರ್ ಮಾಡಿಕೊಳ್ಳಿ. ಬೆಳಿಗ್ಗೆ ಮತ್ತು ರಾತ್ರಿ ಖಾಲಿ ಹೊಟ್ಟೆಯಲ್ಲಿ ಆ ಪೌಡರ್ ಅನ್ನು ಸ್ಪೂನ್ ನಷ್ಟು ಒಂದು ಲೋಟದಷ್ಟು ಉಗುರು ಬೆಚ್ಚಗಿನ ನೀರಿನ ಜೊತೆ ಸೇವನೆ ಮಾಡಿದರೇ ನಿಮ್ಮ ಶರೀರದಲ್ಲಿ ಕರುಳು ಶುದ್ಧೀಕರಣವಾಗುತ್ತದೆ.
ಕರುಳು ಶುದ್ದೀಯಾದರೇ ರಕ್ತ ಶುದ್ಧೀಕರಣವಾಗುತ್ತದೆ. ಸಪ್ತದಾತುಗಳು ಶುದ್ದೀಕರಣವಾಗುತ್ತದೆ. ಆ ಸಪ್ತದಾತುಗಳು ಯಾವುವು ಎಂದರೆ ರಸ, ರಕ್ತ, ಮಾಂಸ, ಮೇಧ, ಅಸ್ತಿ, ಮಜ್ಜೆ, ಶುಕ್ರ ಎಂಬ ಸಪ್ತದಾತುಗಳು. ಮಾನಸಿಕ ಮತ್ತು ದೈಹಿಕ ಕಾಯಿಲೆಯಾದ ಐಬಿಎಸ್ ಎಂಬ ಕಾಯಿಲೆಯನ್ನು ಸಂಪೂರ್ಣವಾಗಿ ಗುಣಮಾಡುವ ಶಕ್ತಿ ಈ ಬಿಲ್ವಪತ್ರೆಯ ಪುಡಿಗೆ ಇದೆ. ಬಿಲ್ವಪತ್ರೆಯ ಹಣ್ಣಿನಲ್ಲಿರುವ ತಿರುಳನ್ನು ಒಂದು ಚಮಚದಷ್ಟು ಸೇವನೆಯನ್ನು ಮಾಡಿದರೂ ಒಳ್ಳೆಯದು. IBS ಎಂಬುದು ಹೆಚ್ಚಾದರೇ ಕ್ಯಾನ್ಸರ್, ಅಲ್ಸರ್, ಲಿವರ್ ನ ಸಮಸ್ಯೆ ಉಂಟಾಗುತ್ತದೆ.
ಮಲಶುದ್ಧಿ ಸರಿಯಾಗಿದ್ದರೇ ಜೀವನದಲ್ಲಿ ಯಾವುದೇ ಸಮಸ್ಯೆಗಳು ಬರುವುದಿಲ್ಲ. ಈ ಎಲೆಯ ಪೌಡರ್ ಅನ್ನು ಸೇವನೆ ಮಾಡಿದರೇ ಶ್ವಾಸಕೋಶಗಳ ಸಮಸ್ಯೆಗಳು ದೂರವಾಗುತ್ತದೆ. ಟ್ಯುಬರ್ ಕ್ಯುಲೆಸಿಸ್, ಅಲರ್ಜಿಟಿಕ್ ಬ್ರೋಂಕೆಟಿಸ್ ಶ್ವಾಸಕೋಶದ ಎಲ್ಲಾ ಸಮಸ್ಯೆಗಳಿಗೂ ಬಿಲ್ವ ಅತ್ಯಂತ ಅದ್ಭುತವಾದ ಶಕ್ತಿಯನ್ನು ಒದಗಿಸಿ ಆ ಸಮಸ್ಯೆಗಳನ್ನು ಪರಿಹಾರ ಮಾಡುತ್ತದೆ. ದೃಷ್ಠಿ ಸಮಸ್ಯೆ ಮತ್ತು ಮೆದುಳಿನ ತೊಂದರೆ ಮತ್ತು ಮೆದುಳಿನ ಒಳಗಡೆ ಇರುವ ರಕ್ತನಾಳಗಳನ್ನು ಶುದ್ದೀಕರಣ ಮಾಡುವಂತಹ ಶಕ್ತಿ ಈ ಮರದ ಎಲೆಗಿದೆ.
ಇದೇ ಚೂರ್ಣವನ್ನು ಬಿಸಿ ನೀರಿಗೆ ಹಾಕಿ ಸೇವನೆ ಮಾಡಿದರೇ ನಿಮ್ಮ ಮೆದುಳಿನ ಪ್ರತಿಯೊಂದು ನರನಾಡಿಗಳು ಕೂಡ ಕ್ರಿಯಾಶೀಲವಾಗುತ್ತದೆ. ನಮ್ಮ ಚರ್ಮ ವ್ಯಾದಿಗಳನ್ನು ನಿವಾರಿಸಿಕೊಳ್ಳಲು ಇದನ್ನು ಬಳಸಿಕೊಳ್ಳಬಹುದು. ಗ್ಯಾಂಗ್ರಿನ್, ಸೋರಿಯಾಸಿಸ್, ಹುಳುಕಡ್ಡಿ, ಚರ್ಮದಲ್ಲಿ ಮಡವೆಗಳು ಬರುತ್ತಿದ್ದರೇ, ದೇಹದಲ್ಲಿ ಉಷ್ಣ ಹೆಚ್ಚಾಗಿದ್ದರೇ ಈ ಪೌಡರ್ ಜೊತೆಗೆ ಅಲೋವೆರಾವನ್ನು ಮಿಕ್ಸ್ ಮಾಡಿ ಸೇವನೆ ಮಾಡಬಹುದು. ಅರ್ಧ ಚಮಚ ಈ ಪೌಡರ್ ಒಂದು ಚಮಚ ಅಲೋವೆರಾವನ್ನು ಸೇವನೆ ಮಾಡಬೇಕು.
ಬೆಳಿಗ್ಗೆ ಮತ್ತು ಸಾಯಂಕಾಲ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಬೇಕು. ಸಕ್ಕೆರೆ ಕಾಯಿಲೆ ಇರುವವರಿಗೆ ಈ ಬಿಲ್ವ ಎಲೆಯು ವರದಾನವೆಂದರೆ ತಪ್ಪಾಗಲಾರದು. ಬಿಲ್ವಪತ್ರೆಯ ಹಣ್ಣಿನಲ್ಲಿರುವ ತಿರುಳನ್ನು ತೆಗೆದು ಚೆನ್ನಾಗಿ ನೆರಳಿನಲ್ಲಿ ಒಣಗಿಸಿ ಅವರಿಕಿ ಅಥವಾ ಹೊನ್ನರಿಕೆ ಎಂದು ಕರೆಯುವ ಹೂಅನ್ನು ಒಣಗಿಸಿ ಪೌಡರ್ ಮಾಡಬೇಕು. ಬಿಲ್ವಪತ್ರೆಯ ಹಣ್ಣಿನಲ್ಲಿರುವ ತಿರುಳು ಮತ್ತು ಹೊನ್ನರಿಕೆ ಹೂವು ಎರಡೂ ಸಮ ಪ್ರಮಾಣದಲ್ಲಿರಬೇಕು. ಬೆಳಿಗ್ಗೆ ಮತ್ತು ರಾತ್ರಿ ಖಾಲಿ ಹೊಟ್ಟೆಯಲ್ಲಿ ಒಂದು ಸ್ಪೂನ್ ನಷ್ಟು ಸೇವನೆ ಮಾಡಿದರೇ ದೇಹದಲ್ಲಿರುವ ಸಕ್ಕರೆಯ ಅಂಶವು ಕಡಿಮೆಯಾಗುತ್ತದೆ.
ಒಂದು ನಿಂಬೆಹಣ್ಣು, ಒಂದು ಸ್ಪೂನ್ ನಷ್ಟು ಬಿಲ್ವಪತ್ರೆಯ ಎಲೆಯ ಪೌಡರ್, ಒಂದು ಚಮದ ಚಕ್ಕೆ ಪೌಡರ್, ಒಂದು ಚಮಚ ಅರಿಶಿಣ ಪುಡಿ ಮೂರನ್ನು ಸೇರಿಸಿ ಒಂದು ಲೀಟರ್ ನೀರಿಗೆ ಹಾಕಿ ಅದು ಅರ್ಧ ಲೀಟರ್ ಆಗುವಷ್ಟು ಕುದಿಸಿ ಅರ್ಧ ಗಂಟೆವರೆಗೂ ಅದನ್ನು ಆರಿಸಿ ಮತ್ತೆ ಅದನ್ನು ಕುದಿಸಿ, ಆರದಿ ಮೇಲೆ ಮತ್ತೆ ಅದು 100ಎಂಎಲ್ ಆಗುವವರೆಗೆ ಕುದಿಸಬೇಕು. ಹೀಗೆ ಬೆಳಿಗ್ಗೆ ಮತ್ತು ರಾತ್ರಿ ಹೊಟ್ಟೆಯಲ್ಲಿ 50 ಎಂಎಲ್ ನಷ್ಟು ಕುಡಿದರೇ ಹಾರ್ಟ್ ನಲ್ಲಿ ಡ್ಯಾಮೇಜ್, ರಕ್ತನಾಳಗಳ ಬ್ಲಾಕೇಜ್ ಗಳು ಸರಿಹೋಗುತ್ತದೆ.
ರಕ್ತನಾಳಗಳಲ್ಲಿ ಉರಿಊತವಾಗಿದ್ದರೇ ಅದನ್ನೆಲ್ಲಾ ಸರಿಮಾಡುತ್ತದೆ. ಬಿಲ್ವಪತ್ರೆಯ ಎಲೆಯ ಪೌಡರ್ಗೆ ಕೊಬ್ಬರಿ ಎಣ್ಣೆಯನ್ನು ಮಿಶ್ರಣ ಮಾಡಿ ಹಚ್ಚುವುದರಿಂದ ಹಳೆಯ ಮಾಯದ ಗಾಯಗಳು ನಿವಾರಣೆಯಾಗುತ್ತದೆ. ಸಂಧಿವಾತ, ಆಮವಾತದಂತಹ ಸಮಸ್ಯೆಗಳಿಗೆ ಈ ಎಲೆಯ ಪೌಡರ್ ಜೊತೆಗೆ ಅಮೃತಬಳ್ಳಿಯ ಪೌಡರ್ ಈ ಎರಡೂ ಎಲೆಗಳ ಪೌಡರ್ ಸಮನಾದ ಪ್ರಮಾಣದಲ್ಲಿ ಮಿಶ್ರಣ ಮಾಡಿರಿ. ಒಂದು ಲೀಟರ್ ನೀರು ಹಾಕಿ ಎರಡು ಚಮಚ ಚೂರ್ಣವನ್ನು ಹಾಕಿ 200 ಎಂಎಲ್ ಆಗುವಷ್ಟು ಕುದಿಸಿ.
ಬೆಳಿಗ್ಗೆ ಮತ್ತು ರಾತ್ರಿ 100 ಎಂಎಲ್ ನಷ್ಟು ಕುಡಿದರೇ ನಿಮ್ಮ ಸಂಧಿವಾತ, ಆಮವಾತದಂತಹ ಸಮಸ್ಯೆಗಳು ದೂರವಾಗುತ್ತದೆ. ಬಿಲ್ವಪತ್ರೆಯ ಪೌಡರ್ ಅನ್ನು ಗೋಧಿ ಹಿಟ್ಟು ಅಥವಾ ಕಡ್ಲೆ ಹಿಟ್ಟಿಗೆ ಮಿಶ್ರಣ ಮಾಡಿ ಮೈಗೆ ಲೇಪನ ಮಾಡಿ ಸ್ನಾನ ಮಾಡಿದರೇ ದೇಹದ ದುರ್ಗಂಧ ಮಾಯವಾಗುತ್ತದೆ. ಬಿಲ್ವಪತ್ರೆಯ ಎಲೆಯ ಪೌಡರ್ ಜೊತೆಗೆ ಅಲೋವೆರಾವನ್ನು ಮಿಶ್ರಣ ಮಾಡಿ ತಲೆಗೆ ಹಚ್ಚಿಕೊಂಡು ಸ್ವಲ್ಪ ಹೊತ್ತು ಬಿಟ್ಟು ಸ್ನಾನ ಮಾಡಿದರೇ ತಲೆಯ ಕೂದಲು ಪಳಪಳ ಹೊಳೆಯುತ್ತದೆ ಮತ್ತು ಗಟ್ಟಿಯಾಗುತ್ತದೆ. ಥೈರಾಯ್ಡ್ ಸಮಸ್ಯೆ, ಅಸಿಡಿಟಿಯನ್ನ ಹೋಗಲಾಡಿಸುತ್ತದೆ.