ನಾವು ಈ ಲೇಖನದಲ್ಲಿ ಯಾವ 9 ಲಕ್ಷಣಗಳಿದ್ದರೆ ಅವರು ಸಾಮಾನ್ಯರಲ್ಲ , ಅವರು ದೈವ ಸಂಭೂತರು ಎಂಬುದನ್ನು ತಿಳಿದುಕೊಳ್ಳೋಣ. ಭಗವಂತನು ಸರ್ವಾಂತರಯಾಮಿ . ಅವನು ನಿಮ್ಮಲ್ಲಿ ನಮ್ಮಲ್ಲಿ ಎಲ್ಲಾ ಕಡೆಯೂ ಇರುತ್ತಾನೆ . ಈ ವಿಶ್ವದಲ್ಲಿ ಜೀವ ಇರುವ ಮತ್ತು ನಿರ್ಜೀವ ವಸ್ತುಗಳಲ್ಲಿಯೂ ದೇವರು ಇರುತ್ತಾನೆ . ನಮಗೆ ದೇವರು ಕಾಣಿಸದೆ ಇರಬಹುದು. ಆದರೆ ಅವನು ಇರುವಂತೆ ನಮಗೆ ಅನೇಕ ಸಂದರ್ಭಗಳಲ್ಲಿ ಕಾಣಿಸುತ್ತದೆ. ಯಾವುದಾದರೂ ಅಪಾಯಗಳಿಂದ ಅನಿರೀಕ್ಷಿತವಾಗಿ, ತಪ್ಪಿಸಿ ಕೊಳ್ಳುವುದು.
ಎಳೆ ಮಕ್ಕಳು ಕೆಳಗೆ ಬೀಳುತ್ತಿದ್ದರು ಅವರಿಗೆ ಏನು ಆಗದೇ ಇರುವುದು , ಮರಣಾಂತಿಕ ವ್ಯಾಧಿಗಳು ಬಂದರೂ ಕೂಡ ಸಾವಿನಿಂದ ತಪ್ಪಿಸಿಕೊಳ್ಳುವುದು. ಹೀಗೆ ಎಷ್ಟೋ ಘಟನೆಗಳನ್ನು ನಾವು ನೋಡುತ್ತಿರುತ್ತೇವೆ. ಇವುಗಳೆಲ್ಲವೂ ಆ ಭಗವಂತನ ಅಭಯ ಹಸ್ತದಿಂದ ನಡೆಯುತ್ತವೆ. ಅದರಿಂದಲೇ ಈ ಮನುಷ್ಯನ ಜನ್ಮ ತುಂಬಾ ಶ್ರೇಷ್ಠವಾಗಿದೆ. ನಾವುಗಳು ಭಗವಂತನ ಪ್ರತಿರೂಪಗಳಾಗಿದ್ದು , ಆ ಭಗವಂತನನ್ನು ನೆನೆಯುವ ಶಕ್ತಿಯನ್ನು ನಾವು ಹೊಂದಿದ್ದೇವೆ. ಈ ಭೂಮಿಯ ಮೇಲೆ ಸುಮಾರು 87 ಲಕ್ಷ ಗಳಷ್ಟು ,
ಜೀವ ರಾಶಿಗಳಿದ್ದರೂ ಕೇವಲ ಮನುಷ್ಯನಿಗೆ ಮಾತ್ರವೇ ಆ ಶಕ್ತಿ ಇರುತ್ತದೆ. ಅಂತಹ ಸರ್ವ ಶ್ರೇಷ್ಠವಾದ ಜನ್ಮ ನಮಗೆ ದೊರಕ್ಕಿರುವುದಕ್ಕೆ ನಾವು ಬಹಳ ಧನ್ಯತಾ ಭಾವದಿಂದ ಶ್ರದ್ದೆಯಿಂದ ಜೀವನ ಸಾಗಿಸಬೇಕು. ಸಾಧಾರಣ ಮನುಷ್ಯರಿಗೂ ಮತ್ತು ವಿಶಿಷ್ಟವಾದ ಮನುಷ್ಯರಿಗೂ ಬಹಳಷ್ಟೂ ಬದಲಾವಣೆಗಳಿವೆ. ಈ ವಿಶಿಷ್ಟವಾದಂತಹ ಗುಣಗಳನ್ನು ಹೊಂದಿರುವವರನ್ನು ಸರ್ವ ಶ್ರೇಷ್ಠರಾದವರು ಎಂದು , ಮತ್ತು ಅಸಾಮಾನ್ಯರು ಎಂದು ಪುರಾಣಗಳು ಹೇಳುತ್ತವೆ .ಇವರಿಗೆ ಜನ್ಮತಹ ಅಥವಾ ಈಶ್ವರನ ಅನುಗ್ರಹದಿಂದ ಕೆಲವು ಲಕ್ಷಣಗಳು ಇರುತ್ತವೆ.
ಮತ್ತು ಕೆಲವು ಸಂಕೇತಗಳು ಸಿಗುತ್ತವೆ. ಶ್ರೀ ಕೃಷ್ಣ ಪರಮಾತ್ಮರು ಹೇಳಿದ ಪ್ರಕಾರ ಈ ಒಂಬತ್ತು ಗುಣಗಳಿರುವವರಿಗೆ ಸೋಲಿಲ್ಲ. ಇವರು ಇನ್ನಷ್ಟು ಜನರನ್ನು ಧರ್ಮ ಮಾರ್ಗದಲ್ಲಿ ನಡೆಸುವವರಾಗಿರುತ್ತಾರೆ. ಆ 9 ಗುಣಗಳ ಬಗ್ಗೆ ತಿಳಿದುಕೊಳ್ಳೋಣ. ಶ್ರೀ ಕೃಷ್ಣನ ಪ್ರಕಾರ ಸರ್ವ ಶ್ರೇಷ್ಠ ಮನುಷ್ಯನಿಗೆ ಇರಬೇಕಾದಂತಹ ,
ಮೊಟ್ಟ ಮೊದಲ ಗುಣವೆಂದರೆ, ಕೆಲಸದ ಮೇಲೆ ಶ್ರದ್ಧೆ. ಯಾವುದೇ ಕೆಲಸವನ್ನು ಮಾಡಬೇಕಾದರೆ ಸುಖ ದುಃಖಗಳ ಬಗ್ಗೆ ಆಗಲಿ , ಪರಿಸ್ಥಿತಿಯು ವಿರುದ್ಧವಾಗಿದ್ದರೂ ಸಹ ಅಂದರೆ ಅನಾರೋಗ್ಯ ಎಂದು ಸಬೂಬು ಹೇಳುವುದನ್ನು ಬಿಟ್ಟು ಕೆಲಸ ಮಾಡಬೇಕು . ಆ ಕೆಲಸವನ್ನು ಬಿಡಬಾರದು. ಅವರು ನಂಬಿದ ಮಾರ್ಗದಲ್ಲಿ ಮುನ್ನಡೆಯುತ್ತಾ ಬೇರೆಯವರ ಬಗ್ಗೆ ಯೋಚನೆ ಮಾಡದೆ ಕಾಯಕವೇ ಕೈಲಾಸ ಎಂದು ನಂಬಿ ನಡೆಯಬೇಕು. ಹಾಗೆ ಮಾಡಿದ ವ್ಯಕ್ತಿಗೆ ತನ್ನ ಮೇಲೆ ಭಗವಂತನ ಮೇಲೆ , ತನ್ನ ಕೆಲಸದ ಮೇಲೆ ಪೂರ್ತಿ ನಂಬಿಕೆ ಇರುತ್ತದೆ. ಹಾಗೆಯೇ ಅವರು ಮಾಡುವ ಕೆಲಸಗಳೆಲ್ಲವೂ ಸಫಲವಾಗುತ್ತದೆ.
ಎರಡನೆಯದಾಗಿ ಸರ್ವಶ್ರೇಷ್ಠವಾದ ಮನುಷ್ಯ ಇತರರನ್ನು ದೂರುವುದಿಲ್ಲ. ಬೇರೆಯವರನ್ನು ನಿಂದಿಸುವುದು, ಮತ್ತು ಅವಾಚ್ಯ ಶಬ್ದಗಳನ್ನು ಬಳಸುವುದು , ಅವಹೇಳನ ಮಾಡುವುದು. ಇದನ್ನು ಮಾಡದೆ ಇರುವವರು ಶ್ರೇಷ್ಠವಾದ ವ್ಯಕ್ತಿಗಳು . ಈ ಕಾಲದಲ್ಲಿ ಚಿಕ್ಕ ಪುಟ್ಟ ವಿಷಯಗಳಿಗೂ ಸಹ ಅಕ್ಕಪಕ್ಕದವರನ್ನು ನಿಂದಿಸುವುದು, ಬೇರೆಯವರನ್ನು ತೆಗಳುವುದು ಸರ್ವೇಸಾಮಾನ್ಯವಾಗಿದೆ .ಕೆಲವರಿಗೆ ಬೇರೆಯವರನ್ನು ನಿಂದಿಸದಿದ್ದರೆ ,ತೆಗಳದಿದ್ದರೆ, ನಿದ್ದೆಯೇ ಬರುವುದಿಲ್ಲ. ಅಂಥವರು ಭಗವಂತನನ್ನು ಸ್ಮರಿಸಿದರು ಕೂಡ ಪ್ರಯೋಜನವಾಗುವುದಿಲ್ಲ. ಆದ್ದರಿಂದ ಒಳ್ಳೆಯ ಮಾತನಾಡುವುದು , ಎಲ್ಲರೊಡನೆ ಸಮಾಜದಲ್ಲಿ ಉತ್ತಮವಾಗಿ ಬೆರೆಯುವುದು ಒಳ್ಳೆಯ ಮಾರ್ಗವೆಂದು ಶ್ರೀ ಕೃಷ್ಣ ಪರಮಾತ್ಮರು ಹೇಳಿದ್ದಾರೆ.
ಮೂರನೆಯದಾಗಿ ಎಷ್ಟೇ ಒತ್ತಡದ ಜೀವನವಿದ್ದರೂ , ದೀಪಾರಾಧನೆ ಮಾಡದೆ ತಮ್ಮ ದೈನಂದಿನ ಕೆಲಸವನ್ನು ಶುರು ಮಾಡುವುದಿಲ್ಲ. ಅಂದರೆ ಅವರಿಗೆ ಆ ಸಮಯದಲ್ಲಿ ಭಗವಂತನನ್ನು ಸ್ಮರಿಸಬೇಕು . ಮತ್ತು ಆ ಸಮಯವನ್ನು ದೇವರಿಗೆ ಅರ್ಪಿಸಬೇಕು ಎನಿಸುತ್ತದೆ. ಹಾಗೆ ಮಾಡುವುದರಿಂದ ದೈವಶಕ್ತಿಯೂ ಸದಾ ಕಾಲ ಅವರೊಡನಿದ್ದು ಮುನ್ನಡೆಸುತ್ತಾ ಅವರು
ಅಂದಕೊಂಡ ಕೆಲಸಗಳನ್ನೆಲ್ಲವನ್ನು ಸುಗಮವಾಗಿ ನಡೆಯುವಂತೆ ಮಾಡುತ್ತದೆ. ಆದ್ದರಿಂದ ನೀವು ಎಷ್ಟೇ ಕೆಲಸ ಮಾಡಿದರೂ ನಿಮ್ಮ ಸಮಯದಲ್ಲಿ ಸ್ವಲ್ಪ ಸಮಯವನ್ನು ಭಗವಂತನಿಗೆ ಮೀಸಲಿಡಿ .ಈ ರೀತಿ ಮಾಡಿದರೆ ನಿಮ್ಮ ಅನೇಕ ಸಮಸ್ಯೆಗಳು ದೂರವಾಗುತ್ತದೆ. ಮತ್ತು ಆಧ್ಯಾತ್ಮಿಕ ಮಾರ್ಗದಲ್ಲಿ ನಡೆಯಲು ನಿಮಗೆ ಅವಕಾಶವಿರುತ್ತದೆ . ಈ ಸಮಾಜದಲ್ಲಿ ಒಬ್ಬ ವ್ಯಕ್ತಿಗೆ ಇರುವ ಜವಾಬ್ದಾರಿಯನ್ನು ಗ್ರಹಿಸಬೇಕು. ಎಂದು ಶ್ರೀ ಕೃಷ್ಣ ಪರಮಾತ್ಮರು ಹೇಳಿದ್ದಾರೆ.
ನಾಲ್ಕನೇದಾಗಿ, ಅವಶ್ಯಕತೆ ಇರುವವರಿಗೆ ಸಹಾಯ ಮಾಡುವುದು. ಸತ್ಕಾರ್ಯಗಳನ್ನು ಮಾಡುವುದು. ಪ್ರಾಣಿ ಪಕ್ಷಿಗಳನ್ನು , ಧನ್ಯತಾ ಭಾವದಿಂದ ನೋಡಿ ಅವುಗಳಿಗೆ ಅವಶ್ಯಕವಾದ ವಸ್ತುಗಳನ್ನು ಪೂರೈಸುವುದು ಸಮಾಜದಲ್ಲಿ ಅಂಗ ವೈಕಲ್ಯತೆಗಳನ್ನು ಎದುರಿಸುವವರನ್ನು, ಹೀಯಾಳಿಸುವುದೇ ಇರುವುದು. ಮತ್ತು ಅವರಿಗೆ ಸಹಾಯ ಮಾಡುವುದು ಸ್ತ್ರೀಯರನ್ನು ಗೌರವಿಸುವುದು . ಈ ಗುಣಗಳು ಸರ್ವ ಶ್ರೇಷ್ಠ ವ್ಯಕ್ತಿಯಲ್ಲಿರುವ ಸಾಮಾಜಿಕ ಲಕ್ಷಣಗಳಾಗಿವೆ. ಹೀಗೆ ಮಾಡುವುದು ಎಲ್ಲರಿಂದಲೂ ಸಾಧ್ಯವಿಲ್ಲ .ಕೇವಲ ಭಗವಂತನ ಕೃಪೆಯಿಂದಲೇ ಸಮಭಾವವಿರುತ್ತದೆ. ಇತರರಿಗೆ ಮೋಸ ಮಾಡದೆ ಇರುವುದು ಮತ್ತು ಅನ್ಯಾಯ ಮಾಡದೇ ಇರುವುದು.
ಅಸಾಮಾನ್ಯ ವ್ಯಕ್ತಿಗಳಲ್ಲಿರುವ ಐದನೇ ಲಕ್ಷಣವಾಗಿದೆ. ಶ್ರೀ ಕೃಷ್ಣ ಭಗವಾನನು ಭಗವದ್ಗೀತೆಯಲ್ಲಿ ಸ್ಪಷ್ಟವಾಗಿ ಹೇಳಿರುವಂತೆ , ಯಾವ ವ್ಯಕ್ತಿಯೂ ಇತರರ ಹಣದ ಬಗ್ಗೆ ಆಸೆ ಇಲ್ಲವೋ, ಮತ್ತು ಇತರರನ್ನು ಮೋಸ ಮಾಡುವುದಿಲ್ಲವೋ, ಅಂತಹ ವ್ಯಕ್ತಿಯು ಬಹಳ ಉತ್ತಮನಾಗಿರುತ್ತಾನೆ .ಎಂದು ಹೇಳಿದ್ದಾರೆ. ಆ ವ್ಯಕ್ತಿಗೆ ಇತರರನ್ನು ದ್ವೇಷಿಸುವ ಮನಸ್ಸು ಇರುವುದಿಲ್ಲ.
ಆದರೆ ಪರಿಸ್ಥಿತಿಗಳ ಪ್ರಭಾವದಿಂದಾಗಿ ಸರಿಯಾದ ಆಲೋಚನೆ ಇಲ್ಲದಿರುವುದರಿಂದ, ನಾವುಗಳು ತಪ್ಪನ್ನು ಮಾಡುವುದು ನಡೆಯುತ್ತದೆ. ಈ ಸುಳಿಯಿಂದ ಬಹಳ ಮಂದಿ ತಪ್ಪಿಸಿಕೊಳ್ಳಲಾರರು . ಅಕ್ರಮ ಸಂಬಂಧಗಳನ್ನು ಇಟ್ಟುಕೊಳ್ಳುವುದು . ದುರಾಸೆಯಿಂದ ಅಪರಾಧಗಳನ್ನು ಮಾಡುವುದು , ನಂಬಿದವರಿಗೆ ನಂಬಿಕೆ ದ್ರೋಹ ಮಾಡುವುದು, ಇವುಗಳನ್ನು ಪರಿಹರಿಸುತ್ತಾ ಒಳ್ಳೆಯ ರೀತಿ ನಡೆದುಕೊಳ್ಳುವುದೆಂದರೆ ಆ ಭಗವಂತನಿಗೆ ಭಗವಂತನ ಆಜ್ಞೆಯನ್ನು ಪಾಲಿಸುವುದು.
ಆರನೇದಾಗಿ ಕೆಲವೇ ವ್ಯಕ್ತಿಗಳಿಗೆ ಯಾವುದಾದರೂ ಕೆಡಕು ನಡೆಯುತ್ತದೆ . ಎಂದರೆ ಮುಂಚಿತವಾಗಿಯೇ ತಿಳಿಯುತ್ತದೆ. ಕನಸ್ಸಿನ ರೂಪದಲ್ಲಿ , ದೇಹವು ಆಲಸೀತನದಿಂದ ಕೂಡಿದಂತೆ ಮನಸ್ಸಿನಲ್ಲಿ ಏನೋ ಒಂದು ರೀತಿಯ ತಳಮಳ ಹೀಗೆ ಅನೇಕ ರೀತಿಯ ಸಂಕೇತಗಳು ಅಪಾಯವನ್ನು ತಿಳಿಯಪಡಿಸುತ್ತದೆ. ಇವುಗಳನ್ನು ಅರ್ಥ ಮಾಡಿಕೊಂಡು ಜಾಣ್ಮೆಯಿಂದ ಜಾಗೃತೆ ವಹಿಸಿಕೊಳ್ಳಬೇಕು.
ಇತರರಿಗೆ ಜಾಗೃತಿಯನ್ನು ವಹಿಸಿಕೊಳ್ಳಲು ಹೇಳುತ್ತಾರೆ . ಹಾಗೆಯೇ ಕೆಲವರಿಗೆ ಇದು ಹುಟ್ಟಿನಿಂದಲೇ ಬಂದಿರುತ್ತದೆ . ಇನ್ನು ಕೆಲವರಿಗೆ ವಯಸ್ಸಿಗೆ ಬಂದಾಗ ಬರುತ್ತದೆ. ಇಂತಹ ಭವ್ಯವಾದ ದಿವ್ಯಶಕ್ತಿಯನ್ನು ಭಗವಂತನು ಪ್ರಸಾದಿಸುತ್ತಾನೆ. ಈ ಗುಣವನ್ನು ಸದ್ವಿನಿಯೋಗ ಮಾಡಿಕೊಂಡು, ಒಳ್ಳೆಯದನ್ನು ಮಾಡಲು ಶತ ಪ್ರಯತ್ನ ಮಾಡುತ್ತಾರೆ.
ಏಳನೇ ಸಂಕೇತವೆಂದರೆ ಸುವಾಸನೆ ಸರ್ವ ಶ್ರೇಷ್ಠವಾದ ವ್ಯಕ್ತಿಗಳು ತಮ್ಮ ಸುತ್ತಲೂ ಯಾವಾಗಲೂ ಸುವಾಸನೆ ಬೀರುವ ಅನುಭೂತಿ ಹೊಂದುತ್ತಾರೆ. ಅಗರಬತ್ತಿಗಳು ದೂಪಗಳು , ದೀಪಗಳು, ಹೂವುಗಳು , ಸುವಾಸನೆ ಬೀರುವಂತೆ ಇವರು ಬಿಂಬಿಸುತ್ತಾರೆ. ಅಂತಹ ಪವಿತ್ರತೆ ಎಲ್ಲರಿಗೂ ಬರುವುದಿಲ್ಲ. ಭಗವಂತನ ಮೇಲೆ ವಿಶ್ವಾಸ ಮತ್ತು ನಿಷ್ಕಲ್ಮಶ ಜೀವನವನ್ನು ನಡೆಸುವವರಿಗೆ ಮಾತ್ರ ಇಂತಹ ನಿರ್ಮಲವಾದ ಸುವಾಸನೆ ಬರುತ್ತದೆ. ಆ ಸುವಾಸನೆಗೆ ಭಗವಂತನ ಆಶೀರ್ವಾದವು ಆ ವ್ಯಕ್ತಿಯ ಮೇಲಿದೆ ಎಂಬುದನ್ನು ತಿಳಿಸುವ ಸಂಕೇತವಾಗಿದೆ.
ಎಂಟನೇದಾಗಿ ಮುಂಜಾನೆ ಮೂರು ಗಂಟೆ 30 ನಿಮಿಷದ ಬ್ರಹ್ಮ ಮುಹೂರ್ತ ಆರಂಭವಾಗುತ್ತದೆ . ಈ ಸಮಯವನ್ನು ಬಹಳ ಶ್ರೇಷ್ಠ ಮತ್ತು ಮಹತ್ವದ ಸಮಯವೆಂದು ಭಾವಿಸುತ್ತಾರೆ. ಸಮಯದಲ್ಲಿ ಸಕಾರಾತ್ಮಕ ಶಕ್ತಿಯ ಅನುಭವ ಬಹಳಷ್ಟು ಇರುತ್ತದೆ. ಹಾಗೆಯೇ ಈ ಪ್ರಪಂಚವೆಲ್ಲ ನಿದ್ದೆ ಮಾಡುತ್ತಾ ಪ್ರಶಾಂತವಾಗಿರುವುದರಿಂದ, ಏಕಾಗ್ರತೆಯಿಂದ ಯಾವುದೇ ಕೆಲಸವನ್ನು ಮಾಡಿದರೂ ಒಳ್ಳೆಯದೇ ಆಗುತ್ತದೆ. ಹಾಗೆಯೇ ದೇವಾನುದೇವತೆಗಳು ಈ ಕಾಲದಲ್ಲಿ ಸಂಚರಿಸುತ್ತಾರೆ .
ಎಂದು ಹೇಳಲಾಗುತ್ತದೆ. ಆದ್ದರಿಂದಲೇ ಆ ಸಮಯದಲ್ಲಿ ಅಂದರೆ ಬ್ರಹ್ಮ ಮುಹೂರ್ತದಲ್ಲಿ ಬೆಳಗ್ಗೆ ಬೇಗ ಏಳುವುದು ತುಂಬಾ ಒಳ್ಳೆಯದು ಎಂಬುದನ್ನು ನಮ್ಮ ಧರ್ಮಶಾಸ್ತ್ರದಲ್ಲಿ ಹೇಳಲಾಗಿದೆ. ಆದರೆ ನಾವುಗಳು ಆ ಸಮಯದಲ್ಲಿ ತುಂಬಾ ಗಾಡ ನಿದ್ರೆಯಲ್ಲಿ ಇರುತ್ತೇವೆ. ಯಾವ ವ್ಯಕ್ತಿಯು ತುಂಬಾ ಶ್ರೇಷ್ಠವಾದ ಗುಣಗಳನ್ನು ಹೊಂದಿರುತ್ತಾನೋ, ಆ ವ್ಯಕ್ತಿಯು ಆ ಬ್ರಹ್ಮ ಮುಹೂರ್ತದಲ್ಲಿಯೇ ಸರಿಯಾದ ಸಮಯಕ್ಕೆ ಎಚ್ಚರಗೊಳ್ಳುತ್ತಾನೆ. ಪ್ರತಿದಿನ ಬ್ರಹ್ಮ ಮುಹೂರ್ತದಲ್ಲಿ ಏಳುವವರಿಗೆ ಭಗವಂತನ ರಕ್ಷಣೆ ಇರುತ್ತದೆ.
ಯಾವುದೇ ಕೆಲಸದಲ್ಲಿ ಇವರು ಸೋಲನ್ನು ಅನುಭವಿಸುವುದಿಲ್ಲ. ಸದಾಕಾಲವು ಸಂತೋಷದಿಂದ ಇರುತ್ತಾರೆ. ಮತ್ತು ಭಗವಂತನನ್ನು ಸ್ಮರಿಸುತ್ತಿರುತ್ತಾರೆ. ಇವರಿಗೆ ಮೇದಸ್ಸಿನ ಶಕ್ತಿ ಹೆಚ್ಚಾಗಿರುತ್ತದೆ. ಮತ್ತು ಮನಸ್ಸು ಪ್ರಶಾಂತವಾಗಿರುತ್ತದೆ. ಇಂಥವರು ಇತರರ ಜೊತೆ ಜಗಳವಾಡುವುದಿಲ್ಲ . ತಪ್ಪಾಗಿ ವರ್ತಿಸುವುದಿಲ್ಲ. ಹೀಗೆ ಇರುವ ಶಕ್ತಿ ಅವರಿಗೆ ದೇವರ ಬಳಿಯಿಂದಲೇ ಬಂದಿರುತ್ತದೆ . ನೀವು ಬ್ರಹ್ಮ ಮುಹೂರ್ತದಲ್ಲಿ ನಿಮ್ಮ ಕೆಲಸಗಳನ್ನು ಮಾಡಿಕೊಂಡು ಅಥವಾ ಓದುವುದರಿಂದ ಎಷ್ಟು ಕಷ್ಟವಾದ ವಿಷಯ ಕೂಡ ನಿಮಗೆ ಸುಲಭವಾಗಿ ಅನಿಸುತ್ತದೆ. ಬಹಳಷ್ಟು ಕಡಿಮೆ ಸಮಯದಲ್ಲಿ ನಿಮಗೆ ಬೇಗ ಅರ್ಥವಾಗುತ್ತದೆ.
9 ನೇದಾಗಿ ನಮಗೆ ಏಕಾಗ್ರತೆ ಇರಬೇಕು . ನಾವು ದೇವಾಲಯಕ್ಕೆ ಹೋದರೆ ಭಜನೆಗಳು ,ಕಥೆಗಳು, ಪ್ರವಚನಗಳು, ನಡೆಯುತ್ತಿರುತ್ತವೆ. ನಾವು ಅವುಗಳನ್ನು ಏಕಾಗ್ರತೆಯಿಂದ ಕೇಳಬೇಕು. ನಮಗೆ ಬೇಕಾದವರ ಬಗ್ಗೆ ನಮ್ಮ ಸಮಸ್ಯೆಗಳ ಬಗ್ಗೆ ಅಥವಾ ಸುತ್ತಮುತ್ತ ಏನು ನಡೆಯುತ್ತಿದೆ ಎಂದು ನಮ್ಮ ಮನಸ್ಸು ತೆರಳುತ್ತಿರುತ್ತದೆ . ಆದರೆ ಕೆಲವರು ದೇವರ ಬಗ್ಗೆ ಹೇಳಲು ಶುರು ಮಾಡಿದರೆ ಯಾವುದೇ ಚಿಂತೆ ಇಲ್ಲದೆ ಅದೇ ಧ್ಯಾನದಲ್ಲಿ ಸಂಪೂರ್ಣವಾಗಿ ಮಗ್ನರಾಗಿ ಬಿಡುತ್ತಾರೆ.
ಭಗವಂತನ ಬಗ್ಗೆ ಬೇರೆ ಯಾರು ಹೇಳುತ್ತಿದ್ದಾರೆ ಎಂದು ತಿಳಿಯದೆ ಸ್ವತಹ ಭಗವಂತನ ವೃತ್ತಾಂತವೇ ನಮ್ಮ ಕಣ್ಣೆದುರಿಗೆ ನಡೆಯುತ್ತಿದೆ . ಎಂಬಂತೆ ಪರವಶರಾಗಿ ಬಿಡುತ್ತಾರೆ .ಅಂತಹ ವ್ಯಕ್ತಿಗಳು ಯಾವುದೇ ವಿಷಯದಲ್ಲಿಯೂ ಕೂಡ ಇತರರನ್ನು ದೂಷಿಸುವುದಿಲ್ಲ. ತಾಳ್ಮೆ ಅವರ ಆಯುಧವಾಗಿರುತ್ತದೆ. ಧರ್ಮ ಮಾರ್ಗದಲ್ಲಿ ನಡೆಯುತ್ತಾರೆ .ಮತ್ತು ಯಾವಾಗಲೂ ಸಂತೋಷದಿಂದ ಇರುತ್ತಾರೆ. ಈ ಗುಣಗಳನ್ನು ರೂಡಿಸಿಕೊಂಡವವರು ಸರ್ವ ಶ್ರೇಷ್ಠರು ಮತ್ತು ಅಸಾಮಾನ್ಯರಾಗಿರುತ್ತಾರೆ.