ಮಕರ ರಾಶಿಗೆ ಆಗ್ತಿರೋದಾದ್ರೂ ಏನು?

0

ನಾವು ಈ ತಿಂಗಳಲ್ಲಿ ಮಕರ ರಾಶಿಯ ಏಪ್ರಿಲ್ ತಿಂಗಳ ಮಾಸ ಭವಿಷ್ಯ ಹೇಗೆ ಇರುತ್ತದೆ ಎಂದು ತಿಳಿಯೋಣ. ಒಂದು ಸಣ್ಣ ಬದಲಾವಣೆಯಿಂದ ಸಾಕಷ್ಟು ರೀತಿಯ ಪರಿವರ್ತನೆ ಆಗುವ ಸಾಧ್ಯತೆ ಇರುತ್ತದೆ . ಸಕಾರಾತ್ಮಕ ಬದಲಾವಣೆಯನ್ನು ತರುವ ಶಕ್ತಿಯನ್ನು ಹೊಂದಿರುತ್ತದೆ. ನಾವು ಇರುವ ಮಟ್ಟದಿಂದ ಮೇಲಕ್ಕೆ ಹೋಗುವುದಕ್ಕೆ ಒಂದು ಬದಲಾವಣೆ ಸಾಕಾಗುತ್ತದೆ. ಸುಖ ನೆಮ್ಮದಿ ಜೀವನಕ್ಕೆ ಒಂದು ರಹ ದಾರಿ ತೆರೆದುಕೊಳ್ಳುತ್ತದೆ. ಈ ರೀತಿಯ ಕಾಲ ಘಟ್ಟದಲ್ಲಿ ಇರುತ್ತೀರಾ.

ಮೇಲಕ್ಕೆ ಹೋಗಲು ಒಂದು ಸಣ್ಣದಾದ ಪ್ರೇರಣೆ ಸಾಕಾಗುತ್ತದೆ. ಈ ಪ್ರೇರಣೆ ನಮ್ಮ ಮನಸ್ಸಿನಲ್ಲಿ ಒಳಗಡೆಯಿಂದ ಬರುತ್ತದೆ. ಇದು ತುಂಬಾ ಎತ್ತರಕ್ಕೆ ಕರೆದುಕೊಂಡು ಹೋಗುವ ಶಕ್ತಿಯನ್ನು ಹೊಂದಿರುತ್ತದೆ. ಆಡುವ ಒಂದು ಮಾತು , ನೀವು ಮಾಡುವ ಒಂದು ವಿನಂತಿ , ಬೇರೆಯವರು ಕೊಡುವ ಒಂದು ಸಲಹೆ , ಅಥವಾ ಮಾರ್ಗದರ್ಶನ , ಸರ್ಕಾರಿ ಸೌಲಭ್ಯಗಳು, ಸಾಲ , ಈ ಎಲ್ಲಾ ಪರಿವರ್ತನೆಗಳಿಗೆ ಪ್ರಚೋದನೆ ಇರುತ್ತದೆ. ಎಷ್ಟೋ ಜನರು ಬಹಳ ಕಷ್ಟದಿಂದ ಬಂದಿರುತ್ತಾರೆ.

ಇಂತಹ ಜನರು ತುಂಬಾ ಮೇಲಕ್ಕೆ ಏರುವ ಸಾಧ್ಯತೆ ಇರುತ್ತದೆ . ನಿರೀಕ್ಷೆ ಮಾಡದ ಮಟ್ಟದಲ್ಲಿ ಇವರು ಮುಂದೆ ಹೋಗುತ್ತಾರೆ. ಸಾಡೇಸಾತಿ ಮುಗಿಯುವ ಹಂತದಲ್ಲಿ ಬಹಳಷ್ಟು ಬದಲಾವಣೆಗಳು ಆಗುತ್ತವೆ. ಸೋತು ಸೋತು ಸಾಕಾಗಿರುವ ಜನರಿಗೆ ಮೇಲಕ್ಕೆ ಹೋಗುವ ಅವಕಾಶವನ್ನು ಶನಿ ಮಾಡಿಕೊಡುತ್ತಾನೆ. ಈ ಒಂದು ಅನುಗ್ರಹ ಬಹಳ ಮುಖ್ಯವಾಗುತ್ತದೆ. ಈ ತಿಂಗಳಲ್ಲಿ ನಿಮಗೆ ಪ್ರಚೋದನೆ ನಡೆಯುತ್ತದೆ. ಅಂದರೆ ಒಳ್ಳೆಯ ಪರಿವರ್ತನೆಗಳಿಗೆ ಸಹಕಾರಿಯಾಗುತ್ತದೆ. ರವಿ ಗ್ರಹ ಮೂರನೇ ಭಾವಕ್ಕೆ ಹೋಗುತ್ತದೆ.

ರಾಶಿಯಿಂದ ಮೂರನೇ ಭಾವದಲ್ಲಿ ರವಿ ತುಂಬಾ ಬಲಾಡ್ಯನಾಗಿ ಇರುತ್ತಾನೆ. ಮೀನ ರಾಶಿಯಲ್ಲಿ ರಾಹು ಗ್ರಹ ಇರುತ್ತದೆ. ರಾಹು ಗ್ರಹ ಕೂಡ ಬಲವಾಗಿ ಇರುತ್ತದೆ. ಕೆಲವೊಂದು ವಿಚಿತ್ರವಾದ ವಿಷಯಗಳು ಇರುತ್ತವೆ .ಅದರಲ್ಲಿ ಯಶಸ್ಸು ತಂದು ಕೊಡುತ್ತದೆ. ನೀವು ನಿರೀಕ್ಷೆ ಮಾಡದ ರೀತಿಯಲ್ಲಿ ಯಶಸ್ಸು ದೊರೆಯುತ್ತದೆ . ಇಂತಹ ರೀತಿಯಲ್ಲಿ ಆಕಸ್ಮಿಕ ಬೆಳವಣಿಗೆ ನಡೆಯುತ್ತದೆ . ಅದರಲ್ಲಿ ಮಕರ ರಾಶಿಯ ಮಟ್ಟಿಗೆ ಲಾಭ ಆಗುತ್ತದೆ . ಆ ಶಕ್ತಿ ರಾಹು ಗ್ರಹಕ್ಕೆ ಇರುತ್ತದೆ . ಇಂದಲ್ಲಾ ನಾಳೆ ಆಗುತ್ತದೆ ಎಂಬ ಭರವಸೆ ..

ಆಗುತ್ತದೆ ಎಂಬ ನಿರೀಕ್ಷೆಯನ್ನು ಇಟ್ಟುಕೊಳ್ಳಬಹುದು . ಇದು ಅನಿರೀಕ್ಷಿತವಾಗಿ ನಡೆಯುವಂತದ್ದು . ರವಿ ಗ್ರಹದ ಕಾರಣದಿಂದಾಗಿ ನಿರೀಕ್ಷಿತ ಘಟನೆಗಳು ನಡೆಯಬಹುದು . ಕೆಲಸ ಕಾರ್ಯಗಳಲ್ಲಿ ಮುನ್ನಡೆ ಸಾಗಿಸುವುದು ಆಗುವ ಸಾಧ್ಯತೆ ಇರುತ್ತದೆ . ನಿಮ್ಮ ಕಡೆಯಿಂದ ಪ್ರಯತ್ನ ಇದ್ದರೆ ಆ ಪ್ರಯತ್ನವನ್ನು ತೀವ್ರವಾಗಿ ಮುಂದುವರಿಸಿ . ಅವರು ಅಂದು ಕೊಂಡಿರುವಂತಹ ಕೆಲಸಗಳು ಕಾರ್ಯರೂಪಕ್ಕೆ ಬರುವ ಸಾಧ್ಯತೆ ಇರುತ್ತದೆ .ತೃತೀಯದಲ್ಲಿ ರವಿ ಇರುವಾಗ ಖುಷಿಯನ್ನು ತಂದು ಕೊಡುತ್ತಾನೆ .

ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಯಶಸ್ಸು ದೊರೆಯುತ್ತದೆ . ಆದಾಯ ವೃದ್ಧಿಯಾಗುತ್ತದೆ . ರೋಗ ರುಜಿನಗಳು ಇದ್ದರೆ ಅದರಿಂದ ಮುಕ್ತಿ ಸಿಗುವ ಸಾಧ್ಯತೆ ಇರುತ್ತದೆ . ರವಿ ಗ್ರಹ ಶತ್ರು ನಾಶಕನಾಗಿ ಕೆಲಸ ಮಾಡುತ್ತದೆ . ಸರ್ಕಾರಿ ಕೆಲಸ ಕಾರ್ಯಗಳು ಸರಾಗವಾಗಿ ನಡೆಯುತ್ತವೆ. ತೃತೀಯ ಭಾವದಲ್ಲಿ ರವಿ ಇದ್ದಾಗ ಕೋರ್ಟು ಕಚೇರಿ ಇಂತಹ ಕೆಲಸಗಳಲ್ಲಿ ನಿಮ್ಮ ಕೈ ಮೇಲುಗೈ ಆಗುತ್ತದೆ . ಕೆಲಸ ಆಗುವುದಿಲ್ಲ ಎಂದು ಕೈಬಿಡುವ ಸಂದರ್ಭದಲ್ಲಿ ಸ್ವಲ್ಪ ಸಮಾಧಾನ ಸಿಗುವ ಸಾಧ್ಯತೆ ಇರುತ್ತದೆ .

ಸಕಾರಾತ್ಮಕ ವಾತಾವರಣ ನಿರ್ಮಾಣವಾಗುತ್ತದೆ . ರವಿಯಿಂದ ಆಗಬೇಕಾದ ವಿಚಾರಗಳು ನಡೆಯದೇ ಇದ್ದರೂ ಕೂಡ ಸ್ಥಾನಮಾನ’, ಗೌರವ , ಘನತೆ, ಈ ರೀತಿಯ ಅವಕಾಶಗಳು ಸಿಗದೇ ಹೋದರು ಕೂಡ , ಕ್ರಮೇಣ ನಿಮ್ಮನ್ನು ಸರಿದಾರಿಗೆ ತರುವಂತಹ ಗ್ರಹ ಶುಕ್ರ ಗ್ರಹವಾಗಿರುತ್ತದೆ . ಇಂತಹ ಸಮಯದಲ್ಲಿ ಸರಿಯಾದ ಮಾರ್ಗದರ್ಶನ , ಸಲಹೆ ಸಿಗುವ ಸಾಧ್ಯತೆ ಇರುತ್ತದೆ .ದ್ವಿತೀಯ ಭಾವದಲ್ಲಿ ಶುಕ್ರ ಗ್ರಹ ಇರುತ್ತದೆ . ರವಿ ಗ್ರಹ ಹೇಗೆ ಸಕಾರಾತ್ಮಕ ವಾತಾವರಣವನ್ನು ನಿರ್ಮಾಣ ಮಾಡುತ್ತದೆಯೋ , ಹಣಕಾಸಿನ ವಿಷಯದಲ್ಲಿ ಕೆಲಸದ ವಿಷಯದಲ್ಲಿ ಅದೇ ರೀತಿಯಾಗಿ ಶುಕ್ರ ಗ್ರಹ ಕೂಡ ನೀಡುತ್ತದೆ.

ವ್ಯಾಪಾರಸ್ಥರಿಗೆ ಹೆಚ್ಚಿನ ಲಾಭ ಆಗುವ ಸಾಧ್ಯತೆ ಇರುತ್ತದೆ . ಒಟ್ಟಾರೆಯಾಗಿ ಎಲ್ಲಾ ವ್ಯಾಪಾರಸ್ಥರಿಗೂ ಲಾಭ ಆಗುವ ಸಾಧ್ಯತೆ ಇದೆ . ಸಾಡೇಸಾತಿ ಇನ್ನು ಮುಗಿದಿಲ್ಲ .ನಿಮ್ಮ ಜೀವನದಲ್ಲಿ ಕೆಲವೊಂದು ಹೋರಾಟಗಳನ್ನು ಮಾಡಬೇಕಾಗುತ್ತದೆ . ಧೈರ್ಯವಾಗಿ ಇರುವುದು ಮತ್ತು ದೇವರ ಮೇಲೆ ಭಾರ ಹಾಕಿ ಹೋರಾಡುವುದು . ನಿಮ್ಮ ಜೀವನದಲ್ಲಿ ಹೋರಾಟವನ್ನು ಮುಂದುವರಿಸುವುದು . ಇದು ನೀವು ಮುಖ್ಯವಾಗಿ ತೆಗೆದು ಕೊಳ್ಳಬೇಕಾಗಿರುವ ಅಂಶಗಳು . ಈ ತಿಂಗಳಲ್ಲಿ ಹಣಕಾಸಿನ ವಿಷಯದಲ್ಲಿ ಗಂಭೀರವಾದ ಸಮಸ್ಯೆ ಇರುತ್ತದೆ .

ಸಮಸ್ಯೆಗಳು ಬಂದರೆ ಹಣಕಾಸಿನ ವಿಚಾರದಲ್ಲಿ ಬರಬಹುದು . ನಿಮ್ಮ ಆದಾಯದ ವಿಚಾರದಲ್ಲಿ ಸಾಕಷ್ಟು ರೀತಿಯ ವಿರೋಧಭಾಷಗಳು ಕಂಡುಬರುತ್ತವೆ . ಈ ರೀತಿಯ ಪರಿಸ್ಥಿತಿಗಳನ್ನು ನೋಡಿದಾಗ ಖುಷಿಯ ಬದಲಿಗೆ ನಿಮಗೆ ಆತಂಕದ ಛಾಯೆಗಳು ಹೆಚ್ಚಾಗುತ್ತವೆ . ನೀವು ಒಂದು ರೀತಿಯ ಪ್ರೇರಣೆಯನ್ನು ಇಟ್ಟುಕೊಂಡು ಮುಂದೆ ಸಾಗುವುದರಿಂದ ಸಮಸ್ಯೆಗಳು ಕಡಿಮೆ ಆಗುವ ಸಾಧ್ಯತೆ ಇರುತ್ತದೆ .

Leave A Reply

Your email address will not be published.