ಮನೆಯ ಸಂಸ್ಕಾರ ಅಡುಗೆ ಮನೆ ಮತ್ತು ದೇವರ ಕೋಣೆಯ ಪಕ್ಕದಲ್ಲಿ ಬಚ್ಚಲು ಮನೆ ಇರಬಾರದು. ಒಂದು ವೇಳೆ ನೀವು ಮನೆಯಲ್ಲಿ ಊಟ ಮಾಡುತ್ತಿರುವಾಗ ಯಾರಾದರೂ ಬಂದರೆ, ಎಂಜಲು ಕೈಯಿಂದ ಯಾರಿಗೂ ಏನನ್ನು ಕೊಡಬಾರದು. ಕೈ ತೊಳೆದುಕೊಂಡು ಕೊಡಬೇಕು ಹಾಗೆಯೇ ಎಂಜಲು ಕೈಯಿಂದ ಊಟ ಮಾಡಿದ ತಟ್ಟೆ ಮತ್ತು ಎಲೆಯನ್ನು ತೆಗೆಯಬಾರದು.
ಹೊಸ ಬಟ್ಟೆಯನ್ನು ಮನೆಗೆ ತಂದು ಧರಿಸದೇ ಹಾಗೇ ಇಡಬಾರದು. ಹೆಣ್ಣು ಮಕ್ಕಳು ದೇವಸ್ಥಾನಕ್ಕೆ ಹೋದಾಗ ಅರಿಶಿಣ ಕುಂಕುಮ ಹೂವನ್ನು ಮುಡಿದುಕೊಳ್ಳದೆ ಹೋಗಬಾರದು. ಮನೆಯಲ್ಲಿ ಹೆಣ್ಣು ಮಕ್ಕಳು ಕೆಟ್ಟ ಪದಗಳನ್ನು ಬಳಸಿ ಜಗಳ ಮಾಡಬಾರದು.
ಮನೆಯ ಮಹಾಲಕ್ಷ್ಮಿಯಾದ ಹೆಣ್ಣು ಮುಸ್ಸಂಜೆ ಹೊತ್ತು ಕಣ್ಣೀರಾಕಬಾರದು. ಹಾಗೆಯೇ ಮಂಗಳವಾರ ಮತ್ತು ಶುಕ್ರವಾರ ಮನೆಯಲ್ಲಿ ಕಣ್ಣೀರ ಹಾಕಲೇಬಾರದು. ಮದುವೆಯಾದ ಹೆಣ್ಣು ಮುತ್ತೈದೆ ಭಾಗ್ಯ ಪಡೆದುಕೊಂಡಿದ್ದು ಕಾಲುಂಗುರ ಮತ್ತು ಮಾಂಗಲ್ಯವನ್ನು ತೆಗೆದು ಇಡಬಾರದು ಹಾಗೆಯೇ ಮನೆಯಿಂದ ಹೊರಗಡೆ ಹೋಗಬಾರದು ಇದರಿಂದ ಲಕ್ಷ್ಮಿ ಕೃಪೆ ಸಿಗುವುದಿಲ್ಲ.
ದೇವರಿಗೆ ಉಪಯೋಗಿಸುವ ಕುಂಕುಮ ಮತ್ತು ಅರಿಶಿಣವನ್ನು ಮನೆಗೆ ಬಂದ ಮಹಿಳೆಯರಿಗೆ ಕೊಡಬಾರದು ಏಕೆಂದರೆ ದೇವರಿಗೆ ಹಚ್ಚುವ ಕುಂಕುಮ ಮಡಿಯಲ್ಲಿರಬೇಕು. ಅನ್ನವನ್ನು ಯಾವುದೇ ಕಾರಣಕ್ಕೂ ಕಾಲಿನಿಂದ ತುಳಿಯಬಾರದು. ಊಟ ಮಾಡಿದ ನಂತರ ಕೈ ಒಣಗಿಸಬಾರದು ಅದರ ಜೊತೆಗೆ ಉಂಡ ತಟ್ಟೆಯನ್ನು ಒಣಗಿಸಬಾರದು. ಅಡುಗೆ ಮನೆಯನ್ನು ಯಾವಾಗಲೂ ಸ್ವಚ್ಛವಾಗಿಟ್ಟುಕೊಳ್ಳಬೇಕು.