ನಾವು ಈ ಲೇಖನದಲ್ಲಿ ಮನೆಯಲ್ಲಿ ಸದಾ ಲಕ್ಷ್ಮಿ ವಾಸವಾಗಿ ಇರಲು ಈ ಸಲಹೆಗಳನ್ನು ನೀಡಲಾಗಿದೆ .ಸದಾ ಲಕ್ಷ್ಮಿ ನೆಲೆಯಾಗಿರಲು ಯಾವಾಗಲೂ ಮನೆಯನ್ನು ಸ್ವಚ್ಛವಾಗಿಡಬೇಕು. ಮನೆಯ ಸುತ್ತಲೂ ಹಾಕಿರುವ ಕಂಪೌಂಡಿನ ಒಳಗಡೆ ಯಾವುದೇ ರೀತಿಯ ಬೇಡವಾದ ಕಸ ಕಡ್ಡಿಗಳು ಇರಬಾರದು. ಸ್ವಚ್ಛತೆ ಬಹಳ ಮುಖ್ಯ , ಹಾಗಿದ್ದಲ್ಲಿ ಮಾತ್ರ ಲಕ್ಷ್ಮಿದೇವಿ ಮನೆಯಲ್ಲಿ ನೆಲೆಸುತ್ತಾಳೆ .
ಹಬ್ಬ ಹರಿದಿನಗಳಲ್ಲಿ ಮನೆಯನ್ನು ಸ್ವಚ್ಛ ಮಾಡುವುದು ಬೇರೆ ಆದರೆ, ದಿನನಿತ್ಯ ಮನೆಯನ್ನು ಸ್ವಚ್ಛ ಮಾಡುವಾಗ , ಯಾವಾಗಲೋ ಒಮ್ಮೆ ಮನೆಯನ್ನು ಸ್ವಚ್ಛ ಮಾಡುವುದರ ಬದಲು , ಪ್ರತಿನಿತ್ಯ ಆದಾಗ ಸ್ವಲ್ಪ ಸ್ವಲ್ಪವೇ ಸ್ವಚ್ಛ ಮಾಡುವುದರಿಂದ , ಸುಲಭವಾಗುತ್ತದೆ.
ಮನೆಯ ಗೇಟು ಮತ್ತು ಮುಖ್ಯದ್ವಾರದ ಬಾಗಿಲು ಯಾವುದೇ ರೀತಿಯ ಕೆಟ್ಟ ಶಬ್ದ ಬರದ ಹಾಗೆ ಎಚ್ಚರಿಕೆ ವಹಿಸಿ . ಮನೆಯ ಒಳಗಡೆ ಬರುವಾಗ ಬಾಗಿಲಲ್ಲಿ ಪಾದರಕ್ಷೆಗಳು ಕಾಣದಂತೆ ಇಡಬೇಕು . ಮನೆಯ ಹೊಸ್ತಿಲಿಗೆ ಯಾವಾಗಲೂ ರಂಗೋಲಿಯನ್ನು ಹಾಕಿ . ಅರಿಶಿಣ ಕುಂಕುಮ ಮತ್ತು ಹೂವನ್ನು ಇಡಬೇಕು. ತಳಿರು ತೋರಣದಿಂದ ಅಲಂಕೃತವಾದ ಮನೆಯನ್ನು ಲಕ್ಷ್ಮೀದೇವಿ ತುಂಬಾ ಇಷ್ಟಪಡುತ್ತಾಳೆ .
ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ತುಳಸಿ ಗಿಡವನ್ನು ಇಡುವ ಪದ್ಧತಿ ಇದೆ, ತುಳಸಿ ಕಟ್ಟೆಯ ಮುಂದೆ ಪ್ರತಿನಿತ್ಯ ರಂಗೋಲಿಯನ್ನು ಹಾಕಬೇಕು . ದಿನನಿತ್ಯ ದೇವರಿಗೆ ಪೂಜೆ ಮಾಡುವ ಸಮಯದಲ್ಲಿ ತುಳಸಿ ಕಟ್ಟೆಗೂ ಪೂಜೆ ಮಾಡುವುದು ತುಂಬಾ ಉತ್ತಮ . ಬೆಳಿಗ್ಗೆ ಸಾಧ್ಯವಿಲ್ಲವೆಂದಾದರೆ ಸಂಜೆಯ ಸಮಯದಲ್ಲಾದರೂ ದೀಪ ಹಚ್ಚುವುದು , ಮಾತೆ ತುಳಸಿಗೆ ಪ್ರದಕ್ಷಿಣೆ ಹಾಕುವುದು , ಇವೆಲ್ಲವೂ ಕೂಡ ತುಂಬಾ ವಿಶೇಷವಾಗಿ ತಪ್ಪದೇ ಮಾಡುವಂತಹ ಪ್ರತಿನಿತ್ಯದ ಕೆಲಸಗಳಲ್ಲಿ ಇದು ಒಂದು .
ವಾಸ್ತು ಬಾಗಿಲಿಗೆ ವಿಶೇಷವಾಗಿ ಮೇಲ್ಭಾಗದಲ್ಲಿ ಅರಿಶಿಣ , ಕುಂಕುಮ ಹಚ್ಚಿ ಗೆಜ್ಜೆ ವಸ್ತ್ರವನ್ನು ಇಡಬೇಕು. ಮನೆಯ ವರಾಂಡದಲ್ಲಿ ಕಸ ಕಡ್ಡಿಗಳು ಇರಬಾರದು, ಪ್ರತಿನಿತ್ಯ ಗುಡಿಸಬೇಕು. ಮನೆಯಲ್ಲಿ ಎಲ್ಲೂ ಜೇಡರ ಬಲೆ ಕಟ್ಟಿರಬಾರದು .
ಇನ್ನು ದೇವರ ಮನೆಯ ಬಗ್ಗೆ ಹೇಳಬೇಕೆಂದರೆ , ದೇವರ ಮನೆ ಯಾವಾಗಲೂ ಶುದ್ಧವಾಗಿ ಸ್ವಚ್ಛವಾಗಿರಬೇಕು. ಯಾವಾಗಲೂ ನೀರು ತುಂಬಿದ ಪಾತ್ರೆ ದೇವರ ಮುಂದೆ ಇರಲೇಬೇಕು. ದೇವರ ಮನೆಯಲ್ಲಿ ಶಂಖ, ಗಂಟೆ ಇರಬೇಕು . ದೀಪ ಯಾವಾಗಲೂ ಉರಿಯುತ್ತಲೇ ಇರಬೇಕು. ಎಡ ಬಾಗದಲ್ಲಿ ತೈಲ ದೀಪ ಅಥವಾ ಎಣ್ಣೆಯ ದೀಪ ಇರಬೇಕು . ಬಲಭಾಗದಲ್ಲಿ ತುಪ್ಪದ ದೀಪವನ್ನು ಇಡಬೇಕು. ತುಪ್ಪದ ದೀಪವನ್ನು ಎಲ್ಲರಿಗೂ ಎಲ್ಲಾ ಕಾಲದಲ್ಲೂ ಉರಿಸಲು ಸಾಧ್ಯವಿಲ್ಲ , ಹಾಗಾಗಿ ಎಣ್ಣೆ ದೀಪವನ್ನಾದರೂ ಹಚ್ಚಬೇಕು .
ಮಲಗುವ ಕೋಣೆಯಲ್ಲಿ ಉಪಯೋಗಿಸುವ ಹಾಸಿಗೆ ಇವೆಲ್ಲವನ್ನೂ ಪ್ರತಿನಿತ್ಯ ಎತ್ತಿಡಬೇಕು, ಒಂದು ವೇಳೆ ಮಲಗಲು ಮಂಚವನ್ನು ಉಪಯೋಗಿಸುತ್ತಿದ್ದರೆ, ಮಂಚದ ಮೇಲ್ಭಾಗದಲ್ಲಿ ಒಂದು ಹೊದಿಕೆಯನ್ನು ಸುಕ್ಕಾಗದಂತೆ ಹಾಕಬೇಕು. ಗೋಡೆಗೆ ಜಾಸ್ತಿ ಮೊಳೆಗಳನ್ನು ಹೊಡೆದು, ಫೋಟೋಗಳನ್ನು ಹಾಕುವುದು ಅಷ್ಟು ಶೋಭೆಯಲ್ಲ .
ಮನೆಯಲ್ಲಿ ಯಾವಾಗಲೂ ಹರಿದ ಬಟ್ಟೆಗಳನ್ನು ಇಟ್ಟುಕೊಳ್ಳಬಾರದು. ಇವುಗಳ ಜೊತೆಯಲ್ಲಿ ಪಾದರಕ್ಷೆಗಳನ್ನು ಒಂದು ಮೂಲೆಯಲ್ಲಿ ಇಡುವ ಪದ್ದತಿಯನ್ನು ರೂಢಿಯಲ್ಲಿ ಇಟ್ಟುಕೊಳ್ಳಬೇಕು. ಹಾಗೆಯೇ ಪ್ರತಿನಿತ್ಯ ಅದೇ ಜಾಗದಲ್ಲಿ ಜೋಡಿಯಾಗಿ ಪಾದರಕ್ಷೆಗಳನ್ನು ಇಡುವುದು ಉತ್ತಮ .
ಕಸವನ್ನು ಗುಡಿಸುವ ಪೊರಕೆಯನ್ನು ಎಲ್ಲೆಂದರೆಲ್ಲಿ ಇಡಬಾರದು . ಪೊರಕೆಗೂ ಕೂಡ ನಿರ್ದಿಷ್ಟವಾದ ಸ್ಥಳವನ್ನು ರೂಢಿಯಲ್ಲಿಟ್ಟು , ಪ್ರತಿನಿತ್ಯ ಆ ಜಾಗದಲ್ಲೇ ಇಡುವುದು ಉತ್ತಮ .
ಎಲ್ಲಾ ದೇವರ ಫೋಟೋ ಅಥವಾ ವಿಗ್ರಹವನ್ನು ಇಡುವುದು ಉತ್ತಮವಲ್ಲ . ಎಲ್ಲಾ ದೇವರಿಗೂ ಅದರದ್ದೇ , ಆದ ಪೂಜೆ ಪುನಸ್ಕಾರಗಳಿವೆ . ನೈವೇದ್ಯಗಳಿವೆ, ಆದ್ದರಿಂದ ಮನೆದೇವರ ಫೋಟೋ, ಕುಟುಂಬ, ಮನೆಯವರ ರಕ್ಷಣೆಗಾಗಿ ಆಂಜನೇಯ ಫೋಟೋ ಅಥವಾ ಲಕ್ಷ್ಮಿ ವೆಂಕಟೇಶ್ವರ ಪೋಟೋ ಇತ್ಯಾದಿ ಫೋಟೋಗಳನ್ನು ಹಾಕಿ. ಮನೆಯ ತುಂಬಾ ದೇವರ ಎಲ್ಲಾ ಫೋಟೋ ವಿಗ್ರಹಗಳನ್ನು ಇಡುವುದು ಒಳ್ಳೆಯದಲ್ಲ .
ಗತಿಸಿ ಹೋದವರ ಫೋಟೋವನ್ನು ಪಶ್ಚಿಮ ದಿಕ್ಕಿನಲ್ಲಿ ಹಾಕಿ, ಪೂರ್ವ ದಿಕ್ಕಿನಲ್ಲಿ ನೋಡುವುದರಿದ , ಪಿತೃದೇವತಿಗಳಿಗೆ ಸಾಕಷ್ಟು ನೆಮ್ಮದಿ ಇರುತ್ತದೆ, ಪಿತೃದೇವತೆಗಳು ಕೂಡ ಮನೆಯವರ ಕುಟುಂಬದ ಬಗ್ಗೆ ಸಂತೃಪ್ತಿ ಆಗುತ್ತಾರೆ. ಇದರಿಂದ ಪಿತೃ ದೋಷವು ಬರುವುದಿಲ್ಲ . ಪಿತೃ ದೋಷವಿಲ್ಲದ ಮನೆಯಲ್ಲಿ ಲಕ್ಷ್ಮಿದೇವಿ ಯಾವಾಗಲೂ ನೆಲೆಸುತ್ತಾಳೆ ಎಂದು ಹೇಳುತ್ತಾರೆ .
ನಾವು ಮಾಡುವ ಸಣ್ಣಪುಟ್ಟ ಕೆಲಸಗಳು ಕೂಡ ತೊಂದರೆಯಾಗುವಂತೆ ಮಾಡುತ್ತದೆ . ಅಂದರೆ ನಾವು ಅಡುಗೆ ಮಾಡುವಾಗ ಒಲೆಯ ಮೇಲೆ ಏನಾದರೂ ಕುದಿಸಲು ಇಟ್ಟಾಗ , ಅದು ಉಕ್ಕಿ ಚೆಲ್ಲಿದರು ಕೂಡ , ಅನಿಷ್ಟವೆಂದು ಹೇಳುತ್ತಾರೆ. ಹಾಗಾಗಿ ಸಾಧ್ಯವಾದಷ್ಟು ಈ ರೀತಿ ಆಗದಂತೆ ನೋಡಿಕೊಳ್ಳಬೇಕು. ಅಡುಗೆ ಮನೆಯಲ್ಲಿರುವ ಪಾತ್ರೆಗಳು ಶುದ್ದವಾಗಿರಬೇಕು.
ಮನೆಯಲ್ಲಿ ತಿಜೋರಿ ಅಥವಾ ದುಡ್ಡು ಇಡುವ ಜಾಗವು ಸ್ವಲ್ಪ ಕತ್ತಲೆಯಲ್ಲಿ ಇರಬೇಕು . ಬೆಳಕಿನಲ್ಲಿ ಇಡಬಾರದು ಎಂದು ಹೇಳುತ್ತಾರೆ. ನಾವು ದುಡ್ಡು ತೆಗೆಯುವಾಗ ಇಡುವಾಗ ನಾಲ್ಕು ಜನರ ಕಣ್ಣಿಗೆ ಕಾಣಬಾರದು. ಲಕ್ಷ್ಮಿದೇವಿ ನಿಲ್ಲುವಂತ ಸ್ಥಳವೇ ಕುಬೇರ ಮೂಲೆ . ಆದ್ದರಿಂದ ಕುಬೇರನ ಮೂಲೆಯಲ್ಲಿ ಬೀರು ಅಥವಾ ಹಣವನ್ನು ಇಡುವುದು ಉತ್ತಮ . ಆಗ ಕುಬೇರಲಕ್ಷ್ಮಿ ಅಥವಾ ಲಕ್ಷ್ಮಿ ಅನುಗ್ರಹ ಸಿಗಲು ಸಾಧ್ಯ.
ಎಲ್ಲಾ ದೇವರುಗಳ ಅನುಗ್ರಹ ಪಡೆಯಲು ಮೊದಲು ಲಕ್ಷ್ಮಿ ದೇವಿಯ ಅನುಗ್ರಹವನ್ನು ಪಡೆಯಬೇಕು . ಲಕ್ಷ್ಮಿ ದೇವಿಯ ಅನುಗ್ರಹದಿಂದ ಸಮಾಜದಲ್ಲಿ ಒಂದು ಉತ್ತಮ ವ್ಯಕ್ತಿಯಾಗಿ ಮನೆಯಲ್ಲಿ ಧನ, ಸಂಪತ್ತು , ಸುಖ, ಶಾಂತಿ, ನೆಮ್ಮದಿ , ವೃದ್ಧಿಯಾಗುತ್ತದೆ.