ಧನು ರಾಶಿಗೆ ಇದೊಂದು ಚೆನ್ನಾಗಿರಲ್ವಾ? 

0

ನಾವು ಈ ಲೇಖನದಲ್ಲಿ ಧನಸ್ಸು ರಾಶಿಯ ಫೆಬ್ರವರಿ ಮಾಸ ಭವಿಷ್ಯ ಹೇಗೆ ಇರುತ್ತದೆ. ಎಂದು ತಿಳಿದುಕೊಳ್ಳೋಣ. ತಿಂಗಳ ಮೊದಲ 11 ದಿನಗಳಲ್ಲಿ ಶುಕ್ರ ಗ್ರಹ ನಿಮ್ಮ ರಾಶಿಯಲ್ಲೇ ಇರುವುದರಿಂದ , ಬಹಳಷ್ಟು ಒಳ್ಳೆಯ ಫಲಗಳನ್ನು ಕೊಡುತ್ತಾನೆ . ರಾಶಿಯಿಂದ ಹೋದರೂ ಕೂಡ , ದ್ವಿತೀಯ ಭಾವಕ್ಕೆ ಹೋಗುತ್ತದೆ . ಈ ದ್ವಿತೀಯ ಬಾವ ಎಂದರೆ, ಕಲಸು ಮೇಲೋಗರೆ ತರ ಇರುತ್ತದೆ. ಅಂದರೆ , ಈ ತಿಂಗಳಲ್ಲಿ ಬೇರೆ ಬೇರೆ ಗ್ರಹಗಳು , ಬೇಡದ ಗ್ರಹಗಳು ಕೂಡ ಇರುತ್ತವೆ. ಸ್ವಲ್ಪ ಹಣದ ಬಗ್ಗೆ ಹೆಚ್ಚಿನ ಯೋಚನೆ ಮಾಡುವ ಸಂದರ್ಭಗಳನ್ನು ತರುತ್ತವೆ. ಆದರೂ ಹಣದ ವಿಚಾರದಲ್ಲಿ ನಿಭಾಯಿಸುವ ಸಾಮರ್ಥ್ಯ

ಈ ತಿಂಗಳಲ್ಲಿ ನಿಮಗೆ ಇರುತ್ತದೆ. ಶುಕ್ರ ಮತ್ತು ಬುಧ ಎರಡು ನಿಮ್ಮ ರಾಶಿಯಲ್ಲಿ ದ್ವಿತೀಯಾ ಬಾವದಲ್ಲಿ ಇರುವುದು . ಸ್ವಲ್ಪ ಗೊಂದಲ ಉಂಟು ಮಾಡಿದರೂ ಸಹ ಅಂತಿಮವಾಗಿ ಸರಿಯಾದ ದಾರಿಯಲ್ಲಿ ಕರೆದುಕೊಂಡು ಹೋಗುತ್ತವೆ . ವಿಶೇಷವಾಗಿ ಭೌತಿಕ ಕಾರ್ಯಗಳು ನಿರ್ವಹಿಸುವವರಿಗೆ ಬುಧ ಮತ್ತು ಶುಕ್ರ ಗ್ರಹಗಳಿಂದ ಬಹಳಷ್ಟು ಯಶಸ್ಸು ದೊರೆಯುತ್ತದೆ . ಬುಧ ಗ್ರಹ ದ್ವಿತೀಯದಲ್ಲಿ ಇರುತ್ತದೆ . ಫೆಬ್ರವರಿ 19ನೇ ತಾರೀಖಿನವರೆಗೆ . ಶುಕ್ರ ಗ್ರಹ ಕೂಡ ದ್ವಿತೀಯದಲ್ಲಿರುತ್ತದೆ

. ಫೆಬ್ರವರಿ 11 ನೇ ತಾರೀಖಿನಿಂದ ಶುರು ಮಾಡಿ ಫೆಬ್ರವರಿ ಕೊನೆಯವರೆಗೂ ಇರುತ್ತದೆ . ಇವೆರಡರಲ್ಲಿ ಒಂದು ಗ್ರಹ ತಿಂಗಳ ಪೂರ್ತಿ ಇದ್ದೇ ಇರುತ್ತದೆ . ಹಣಕಾಸಿನ ತೊಂದರೆ ಇರುವುದಿಲ್ಲ . ಮತ್ತು ವಾಕ್ ಚಾತುರ್ಯ ಚೆನ್ನಾಗಿರುತ್ತದೆ . ಬಹಳಷ್ಟು ಕೆಲಸಗಳಲ್ಲಿ ಸರಿ-ತಪ್ಪು ಇವೆರಡು ನಡೆಯುತ್ತಲೇ ಇರುತ್ತವೆ . ನಿಮಗೆ ಗೊತ್ತಿಲ್ಲದೆ ತಪ್ಪುಗಳು ನಡೆಯುವುದು . ಮತ್ತು ಆಕಸ್ಮಿಕವಾಗಿ ಸರಿಯಾದ ಕೆಲಸ ಮಾಡುವುದು . ನಿಮ್ಮ ಮಾತು ಬೇರೆಯವರ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುತ್ತದೆ . ಕು

ಟುಂಬದ ಸದಸ್ಯರ ನಡುವೆ ತಾವು ಕೂಡ ಪ್ರಭಾವ ವ್ಯಕ್ತಿಗಳಾಗುವ ಸಾಧ್ಯತೆ ಇರುತ್ತದೆ . ಸಾಮರಸ್ಯದಿಂದ ಬದುಕುವುದಕ್ಕೆ ಸಹಾಯ ಮಾಡುವ ಗುಣ ಇರುತ್ತದೆ . ಕೆಲವು ಗ್ರಹಿಣಿಯರು ಮನೆಯಲ್ಲಿ ಇದ್ದಾರೆ. ಅಂದರೆ, ಖುಷಿ , ತೃಪ್ತಿ , ನೆಮ್ಮದಿಯ ವಾತಾವರಣಾ ಮನೆಯಲ್ಲಿ ಸೃಷ್ಟಿಯಾಗುತ್ತದೆ. ವಾಕ್ ಸಿದ್ಧಿ ಅನ್ನುವುದು ತುಂಬಾ ಪ್ರಮುಖವಾಗುತ್ತದೆ. ಇಂತಹ ಒಂದು ಸಿದ್ಧಿ ನಿಮಗೆ ಈ ತಿಂಗಳಲ್ಲಿ ಇದೆ. ರವಿ ತೃತೀಯಾ ಬಾವಕ್ಕೆ ಹೋಗಲೇಬೇಕು. 13 ನೇ ತಾರೀಖಿನಂದು ಕುಂಭ ರಾಶಿಗೆ ರವಿ ಹೋದಾಗ , ಸರ್ಕಾರಿ ಕೆಲಸ ಕಾರ್ಯಗಳು ಸಾಧ್ಯವಾಗುವ ಸಾಧ್ಯತೆ ಇದೆ. ಜನ ಮೆಚ್ಚುಗೆ, ಮನ್ನಣೆ , ಬೇರೆಯವರಿಗೆ ಪ್ರೇರಣೆ ಆಗುವುದು,

ನಿಮ್ಮ ಮೇಲೆ ಪ್ರಭಾವ ಬೀರುವ ಅಥವಾ ಮಾರ್ಗದರ್ಶನ ಕೊಡುವ ಪ್ರೇರಣೆ ಆಗುವುದು , ಅಂತಹ ಯಾವುದಾದರೂ ವ್ಯಕ್ತಿ ನಿಮಗೆ ಸಿಗುವಂತದ್ದು , ಹೀಗೆ ಸಾಕಷ್ಟು ರೀತಿಯ ಧನ, ಮತ್ತು ಸಕಾರಾತ್ಮಕ ಕೆಲಸಗಳು ಈ ಫೆಬ್ರವರಿ ತಿಂಗಳಲ್ಲಿ ರವಿ ಗ್ರಹದಿಂದಾಗಿ ಆಗುವ ಸಾಧ್ಯತೆ ಇರುತ್ತದೆ . ಕುಜ ಗ್ರಹ ತೃತೀಯ ಭಾವದಲ್ಲಿ ಇರುತ್ತದೆ .ಧನಸ್ಸು ರಾಶಿಗೆ ಬಹಳ ಒಳ್ಳೆಯ ಫಲಗಳೇ ಇದೆ . ಸ್ವಷ್ಟವಾದ ನಕಾರಾತ್ಮಕತೆ ಯಾವುದು ಕಾಣುವುದಿಲ್ಲ . ಸಾಕಷ್ಟು ಸಕಾರಾತ್ಮಕತೆ ಇದ್ದಾಗ, ಎಲ್ಲರಲ್ಲೂ ಒಂದು ನ್ಯೂನ್ಯತೆ ಕಾಣಿಸುತ್ತದೆ .

ಶನಿ ತೃತೀಯದಲ್ಲಿ ಇರುವಾಗ ಬಹಳಷ್ಟು ಒಳ್ಳೆಯ ಫಲಗಳನ್ನು ತಂದುಕೊಡುತ್ತದೆ . ಗುರು ಪಂಚಮದಲ್ಲಿ ಇರುವಾಗ ಸತತವಾಗಿ ಒಳ್ಳೆಯದನ್ನು ಮಾಡುತ್ತದೆ . ದಶಮ ಸ್ಥಾನದಲ್ಲಿ ಕೇತು ಕೂಡ ಬಹಳ ಒಳ್ಳೆಯದು . ಬುಧ ಮತ್ತು ಕೇತು ಯಾವ ರೀತಿ ಒಳ್ಳೆಯದನ್ನು ತಂದು ಕೊಡುತ್ತಾರೆ ಎಂದು ಮೊದಲೇ ತಿಳಿಸಲಾಗಿದೆ . ಮೊದಲನೆಯದಾಗಿ ಇವೆಲ್ಲಾ ಒಳ್ಳೆಯದನ್ನು ಪಡೆದುಕೊಳ್ಳುವ ಭಾಗ್ಯ ನಿಮ್ಮ ಹಣೆಯಲ್ಲಿ ಬರೆದಿರಬೇಕು .ಇನ್ನು ಜಾತಕ ಕೂಡ ಪ್ರಮುಖವಾಗುತ್ತದೆ .

ಮತ್ತು ಇಲ್ಲಿ ನಿಮ್ಮ ಪ್ರಯತ್ನ ಕೂಡ ಮುಖ್ಯವಾಗುತ್ತದೆ . ಸದ್ಯಕ್ಕೆ ನಿಮ್ಮ ರಾಶಿಯಿಂದ ಪಂಚಮ ಸ್ಥಾನದಲ್ಲಿ ಗುರುಗ್ರಹ ಇದೆ . ಧಾರ್ಮಿಕ ಕೆಲಸ ಕಾರ್ಯಗಳಿಗೆ ಇದು ಬಹಳಷ್ಟು ಸಹಕಾರವಾಗುತ್ತದೆ .ಧಾರ್ಮಿಕ ಕಾರ್ಯವೆಂದರೆ ಜೀವನದಲ್ಲಿ ಒಂದು ಮಹತ್ವಾಕಾಂಕ್ಷೆ ಇರುತ್ತದೆ . ಜೀವನದ ಉದ್ದೇಶದ ಸಾಧನೆಗಾಗಿ ಬಾಹ್ಯವಾಗಿ ಮಾಡುವ ಪ್ರಯತ್ನ , ಇಂಥಹ ಕರ್ತವ್ಯವನ್ನು ನಿಭಾಯಿಸುವ ಶಕ್ತಿ ಇರುತ್ತದೆ . ಮತ್ತು ಸಂಕಲ್ಪ ಬಲ . ಇಂತಹ ಒಂದು ಪ್ರಾರ್ಥನೆಯನ್ನು ರೂಡಿಸಿಕೊಳ್ಳುವುದು .

“ಯಾ ದೇವಿ ಸರ್ವ ಭೂತೇಷು ವಿದ್ಯಾ ರೂಪೇಣ ಸಂಸ್ಥಿತಾ ನಮಸ್ತಸ್ಮೈ ನಮಸ್ತಸ್ಮೈ ನಮಸ್ತಸ್ಯೈ ನಮೋ ನಮಃ || ” ದೇವಿಯನ್ನು ಪ್ರಾರ್ಥನೆ ಮಾಡುವುದು . ಅಂದರೆ ವಿದ್ಯಾರ್ಥಿಗಳು ಯಶಸ್ಸು ಬೇಕು ಎಂದರೆ ಈ ಪ್ರಾರ್ಥನೆಯನ್ನು ಮಾಡುವಂತದ್ದು . ನಿಮ್ಮ ಜೀವನದಲ್ಲಿ ಹಣ ಬೇಕು ಅಂದುಕೊಂಡರೆ, ಈ ರೀತಿಯಾಗಿ ಪ್ರಾರ್ಥನೆ ಮಾಡುವುದು .
“ಯಾ ದೇವಿ ಸರ್ವ ಭೂತೇಷು ಲಕ್ಷ್ಮಿ ರೂಪೇಣ ಸಂಸ್ಥಿತಾ ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ” II
ಮತ್ತೊಂದು ಕೆಲಸ ಕಾರ್ಯಗಳಲ್ಲೂ ಸಾಧನೆ ಮಾಡಬೇಕು ಅಂದುಕೊಂಡರೆ, ಈ ರೀತಿಯಾಗಿ ಪ್ರಾರ್ಥನೆಯನ್ನು ಮಾಡಬೇಕು.

” ಯಾ ದೇವಿ ಸರ್ವ ಭೂತೇಷು ಸಿದ್ಧಿ ರೂಪೇಣ ಸಂಸ್ಥಿತಾ ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ || ” ಇಂತಹ ಸಾಧನೆಗಳನ್ನು ಮಾಡುವುದಕ್ಕೆ ಇದನ್ನು ಪಠಣೆ ಮಾಡಬೇಕು . ಇದು ಒಂದು ಸಂಕಲ್ಪ ಬಲವನ್ನು ಕೊಡುತ್ತದೆ . ಆ ಮಂತ್ರಕ್ಕೆ ನಿಮ್ಮ ಮನಸ್ಸಿನಲ್ಲಿರುವ ಉದ್ದೇಶವನ್ನು ಈಡೇರಿಸುವ ಶಕ್ತಿ ಇರುತ್ತದೆ . ನಿಮ್ಮ ಮೆದುಳಿನಲ್ಲಿ ಗಾಢವಾಗಿ ಉಳಿದುಕೊಳ್ಳುತ್ತದೆ . ಉಳಿದುಕೊಳ್ಳುವ ಕೆಲಸವನ್ನು ಆ ಮಂತ್ರ ಮಾಡುತ್ತದೆ . ನಂಬಿಕೆಯಿಂದ ಹೇಳಿದಾಗ ಒಂದು ಸಕಾರಾತ್ಮಕ ಶಕ್ತಿ ಬರುತ್ತದೆ . ಆಗ ಆ ಸಂಕಲ್ಪ ಸ್ಥಾಪನೆಯಾಗುತ್ತದೆ . ಯಾವುದು ಸಾಧ್ಯವಾಗುವುದಿಲ್ಲ ಅದನ್ನು ಸಾಧಿಸುವುದಕ್ಕೆ

ಈ ರೀತಿಯಾದ ಪ್ರಯತ್ನ ಮಾಡಬೇಕು . ವಿಶೇಷವಾಗಿ ಗುರು ಪಂಚಮದಲ್ಲಿ ಇರುವಾಗ , ಈ ರೀತಿಯ ಸಂಕಲ್ಪ ಮಾಡುವುದರಿಂದ ಬಹಳ ಒಳ್ಳೆಯದಾಗುತ್ತದೆ . ಗುರು ಪಂಚಮದಲ್ಲಿ ಇರುವಾಗ ಅದು ಸಿದ್ಧಿ ಆಗುವುದಕ್ಕೆ ಒಂದು ವಾತಾವರಣವನ್ನು ಸೃಷ್ಟಿಸುತ್ತದೆ. ಈ ತರಹದ ವಾತಾವರಣ ಮೇ ನಂತರ ಬರುವುದು ಸ್ವಲ್ಪ ಕಷ್ಟ . ಹಾಗಾಗಿ ಈ ಕ್ಷಣದಲ್ಲಿ ನೀವು ಅದರ ಬಗ್ಗೆ ಎಚ್ಚರ ವಹಿಸಬೇಕು . ಆ ಸಂಕಲ್ಪವನ್ನು ಈಗಲೇ ನಿಮ್ಮ ಮನಸ್ಸಿನಲ್ಲಿ ತಂದುಕೊಳ್ಳಿ . ಇದನ್ನು ಮುಂದುವರಿಸಿಕೊಂಡು ಹೋಗಲು ನಿಮಗೆ ಬೇಕಾದ ಶಕ್ತಿ ದೊರೆಯುತ್ತದೆ .

ಚತುರ್ಥ ಭಾವದಲ್ಲಿ ರಾಹು ಗ್ರಹ ಇದೆ ಇದು ಕೇಂದ್ರ ಸ್ಥಾನದಲ್ಲಿದೆ . ನಕಾರಾತ್ಮಕತೆಯನ್ನು ಉಂಟುಮಾಡುವಂತಹ ಗ್ರಹ . ನಾಲ್ಕನೇ ಮನೆ ಅಂದರೆ ಸುಖ ಸ್ಥಾನ ಅಷ್ಟೊಂದು ಒಳ್ಳೆಯದಲ್ಲ .ಮಾತೃ ಸ್ಥಾನಕ್ಕೂ ಕೂಡ ಸಣ್ಣ ಪುಟ್ಟ ತೊಂದರೆಗಳು . ತಾಯಿಯ ಆರೋಗ್ಯದಲ್ಲಿ , ಅವರ ಭಾವನೆಗಳಲ್ಲಿ , ಸಂಬಂಧದಲ್ಲಿ ಅಡಚಣೆಗಳು , ಅಡ್ಡಿ ಆತಂಕಗಳು , ನಿಮ್ಮ ಸುಖದಲ್ಲಿ ತೊಂದರೆ , ಸುಖದ ಕಲ್ಪನೆಯನ್ನು ತಂದುಕೊಳ್ಳದ ಸ್ಥಿತಿಯಲ್ಲಿ ಇರುವುದು . ಮತ್ತು ಇರುವ ಸುಖವನ್ನು ಗಮನಿಸದೇ ಇರುವುದು .

ವಾಸ್ತವದಲ್ಲಿ ಏನು ಇಲ್ಲ, ಯಾರು ಇಲ್ಲ , ಅಂತ ಜೀವಿಸುವವರನ್ನು ನಾವು ನೋಡಿರುತ್ತೇವೆ. ಕಷ್ಟ ಎಲ್ಲರಿಗೂ ಇದ್ದೇ ಇರುತ್ತದೆ . ಆದರೆ ಭಾವನೆ ತುಂಬಾ ಮುಖ್ಯವಾಗುತ್ತದೆ . ನಮಗಿಂತ ಕಷ್ಟದಲ್ಲಿ ಇರುವವರನ್ನು ನೋಡಿಕೊಂಡು ಸಮಾಧಾನ ಮಾಡಿಕೊಳ್ಳುವ ಗುಣ ಇದ್ದಾಗ , ಸಮಾಧಾನ ತಂದುಕೊಳ್ಳುವುದು ತುಂಬಾ ಮುಖ್ಯವಾಗುತ್ತದೆ. ರಾಹು ನಾಲ್ಕನೇ ಬಾವದಲ್ಲಿ ಇರುವ ಸಂದರ್ಭದಲ್ಲಿ ಇಂತಹ ಒಂದು ಭಾವನೆ ನಿಮ್ಮ ಮನಸ್ಸಿಗೆ ತಂದುಕೊಳ್ಳಬೇಕು.

Leave A Reply

Your email address will not be published.