ಮನೆಯಲ್ಲಿ ಪೊರಕೆಯನ್ನು ಯಾವ ದಿಕ್ಕಿನಲ್ಲಿ ಇಡಬೇಕು ಯಾವ ದಿಕ್ಕಿನಲ್ಲಿ ಇಟ್ಟರೆ ಐಶ್ವರ್ಯ

ನಾವು ಈ ಲೇಖನದಲ್ಲಿ ಮನೆಯಲ್ಲಿ ಪೊರಕೆಯನ್ನು ಯಾವ ದಿಕ್ಕಿನಲ್ಲಿ ಇಡಬೇಕು . ಯಾವ ದಿಕ್ಕಿನಲ್ಲಿ ಇಟ್ಟರೆ ಐಶ್ವರ್ಯ ಹೇಗೆ ಬರುತ್ತದೆ. ಎಂದು ತಿಳಿಯೋಣ . ಕಸದ ಪೊರಕೆಯನ್ನು ಮಹಾಲಕ್ಷ್ಮಿಗೆ ಪ್ರತೀಕವಾಗಿ ಭಾವಿಸುತ್ತಾರೆ . ಮನೆಯನ್ನು ಶುಚಿಯಾಗಿ ಇಡುವಂತಹ ಕಸ ಪೊರಕೆ ಎಂದರೆ, ಶ್ರೀ ಸಾಕ್ಷಾತ್ ಮಹಾಲಕ್ಷಿಯ ಸ್ವರೂಪ ಎನ್ನುತ್ತಾರೆ ಹಿರಿಯರು .

ಏಕೆಂದರೆ ಮನೆಯನ್ನು ಶುಚಿಯಾಗಿ ಶುಭ್ರವಾಗಿ ಗುಡಿಸುವ ಕೆಲಸ ಅದು ಮಾಡಿ ಮನೆಯಲ್ಲಿ ಮಹಾಲಕ್ಷಿ ಸ್ಥಿರವಾಗಿ ನೆಲೆಸುವಂತೆ ಮಾಡುತ್ತದೆ. ಆದ್ದರಿಂದ ಅದನ್ನು ಮಹಾಲಕ್ಷಿ ಯ ಪ್ರತಿರೂಪ ಎಂದು ಭಾವಿಸುತ್ತಾರೆ. ಎಲ್ಲಿ ಅಪರಿಶುಭ್ರತೆ ಇರುತ್ತದೆ. ಅಲ್ಲಿ ದಾರಿದ್ರ ದೇವತೆ ಇರುತ್ತಾಳೆ. ಹಾಗಾಗಿ ಪರಿಶುದ್ಧವಾಗಿ ಇರಬೇಕು ಅಂದರೆ , ಮನೆಯಲ್ಲಿ ಕಸದ ಪೊರಕೆ ಇರಬೇಕು. ಇನ್ನೂ ಕಸದ ಪೊರಕೆಗೆ ಕೆಲವೊಂದು ನಿಯಮಗಳನ್ನು ಪಾಲಿಸುವುದರಿಂದ
ಸಮಸ್ತ ಕುಟುಂಬದ ಸದಸ್ಯರು ಯಾವ ಸಮಸ್ಯೆ ಮತ್ತು ತೊಂದರೆಗಳಿಗೆ ಒಳಗಾಗುವುದಿಲ್ಲ .

ಕಸದ ಪೊರಕೆಯನ್ನು ಎಲ್ಲೆಂದರೆ ಅಲ್ಲಿ ಇಡಬಾರದು .ಅದಕ್ಕೆ ಪ್ರತ್ಯೇಕವಾದ ಸ್ಥಾನವನ್ನು ಕಲ್ಪಿಸಿ , ಅಲ್ಲಿ ಶಿಸ್ತಿನಿಂದ ಇಡಬೇಕು . ಮುಖ್ಯವಾಗಿ ಕಸದ ಪೊರಕೆ ಯಾರ ದೃಷ್ಟಿಗೂ ಬೀಳದಂತೆ ಎಚ್ಚರ ವಹಿಸಬೇಕು . ಸಾಧ್ಯವಾದರೆ ಪೊರಕೆಯನ್ನು ಪಶ್ಚಿಮದ ದಿಸೆಯಲ್ಲಿ ಇಡಬೇಕು . ಇನ್ನು ಭೋಜನ ಮಾಡುವ ಸ್ಥಳದಲ್ಲಿ ಅಥವಾ ಅಡುಗೆ ಮನೆಯಲ್ಲಿ ಕಸದ ಪೊರಕೆಯನ್ನು ಇಡಬಾರದು . ಇದರಿಂದ ಧನ ಧಾನ್ಯದ ಕೊರತೆ ಉಂಟಾಗುತ್ತದೆ . ಊಟ ತಿಂಡಿಗೆ ಸಮಸ್ಯೆ ಉಂಟಾಗಬಹುದು .

ಅಷ್ಟೇ ಅಲ್ಲದೆ ಕುಟುಂಬದ ಸದಸ್ಯರಿಗೆ ಅನಾರೋಗ್ಯದ ಸಮಸ್ಯೆ ಕಾಡುತ್ತದೆ . ಆದ್ದರಿಂದ ಅಡುಗೆ ಮನೆಯಲ್ಲಿ ಕಸದ ಪೊರಕೆಯನ್ನು ಇಡಬಾರದು . ರಾತ್ರಿ ಮಲಗುವುದಕ್ಕಿಂತ ಮುಂಚೆ ಮನೆಯ ಪ್ರಧಾನ ದ್ವಾರದ ಬಳಿ ಕಸದ ಪೊರಕೆಯನ್ನು ಇಡುವುದರಿಂದ ಮನೆಯ ಒಳಗೆ ಯಾವುದೇ ರೀತಿಯ ನಕಾರಾತ್ಮಕ ಶಕ್ತಿ ಪ್ರವೇಶ ಮಾಡುವುದಿಲ್ಲ ಎಂದು ಹೇಳಲಾಗುತ್ತದೆ .ಈ ವಿಷಯವನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು . ಅದು ಏನು ಅಂದರೆ , ರಾತ್ರಿ ಮಾತ್ರ ಕಸದ ಪೊರಕೆಯನ್ನು ಪ್ರಧಾನ ದ್ವಾರದ ಬಳಿ ಇಡಬೇಕು.

ಬೆಳಗ್ಗೆ ಎದ್ದ ತಕ್ಷಣ ಪೊರಕೆಯನ್ನು ಅಲ್ಲಿಂದ ತೆಗೆಯಬೇಕು . ಪ್ರತಿದಿನ ಬೆಳಿಗ್ಗೆ ಸಾಂಪ್ರದಾಯಿಕವಾಗಿ ಮನೆಯ ಮುಂದೆ ರಂಗೋಲಿ ಹಾಕುವುದು ನಮ್ಮ ದಿನ ನಿತ್ಯದ ಕೆಲಸ . ಹೀಗೆ ಮಾಡುವುದರಿಂದ ದಾರಿದ್ರ್ಯ ದೂರವಾಗಿ ಶನಿ ಅನುಗ್ರಹಿಸುತ್ತಾನೆ . ಶನಿಯ ಅನುಗ್ರಹದಿಂದ ಸಿರಿ ಸಂಪತ್ತಿನಿಂದ ಕೂಡಿರುತ್ತದೆ . ಮನೆಯನ್ನು ಶುಚಿಯಾಗಿ ಇಟ್ಟು ಕೊಳ್ಳುವುದಲ್ಲದೆ ಮನೆಯ ಮುಂದೆ ಕೂಡ ಶುಚಿಯಾಗಿ ಇಟ್ಟುಕೊಳ್ಳಬೇಕು . ಇದರಿಂದ ದೇವಾನು ದೇವತೆಗಳು ಸುಪ್ರೀತರಾಗುತ್ತಾರೆ .

ಕಸದ ಪೊರಕೆಯನ್ನು ಕೊಂಡುಕೊಳ್ಳಲು ಶನಿವಾರ ಉತ್ತಮ ದಿನವಾಗಿ ಇರುತ್ತದೆ . ಇದರಿಂದ ಆಕಸ್ಮಿಕ ಧನ ಲಾಭ ಉಂಟಾಗುತ್ತದೆ . ಇನ್ನು ಸಂಜೆಯ ಸಮಯ ಅಥವಾ ಗೋಧೂಳಿ ಸಮಯದಲ್ಲಿ ಮನೆಯ ಕಸವನ್ನು ಗುಡಿಸಬಾರದು .ಏಕೆಂದರೆ ಮನೆಯನ್ನು ಗುಡಿಸಿದರೆ ಗುಡಿಸಿ ದಂತೆ ಆಗುತ್ತದೆ ಎಂದು ಹಿರಿಯರು ಹೇಳುತ್ತಾರೆ . ಆದ್ದರಿಂದ ಸಂಜೆಯ ವೇಳೆ ಮನೆಯನ್ನು ಗುಡಿಸುವುದರಿಂದ ಮಹಾಲಕ್ಷ್ಮಿ ಹೊರಗೆ ಹೋಗುತ್ತಾಳೆ ಎಂದು ಹೇಳುತ್ತಾರೆ .

ಸಾಧ್ಯವಾದಷ್ಟು ಸಂಜೆಯ ವೇಳೆ ಮನೆಯ ಕಸವನ್ನು ಗುಡಿಸಬಾರದು . ಕಸದ ಪೊರಕೆಯ ಮೇಲೆ ಕಾಲು ಇಡಬಾರದು, ಒದೆಯಬಾರದು , ಮತ್ತು ತುಳಿಯಬಾರದು . ಹೀಗೆ ಮಾಡಿದರೆ ನಾವು ಮಹಾಲಕ್ಷ್ಮಿಯನ್ನು ಅವಮಾನ ಮಾಡಿದಂತೆ ಆಗುತ್ತದೆ . ಹೀಗೆ ಮಾಡುವುದರಿಂದ ದಾರಿದ್ರ್ಯ ದೇವತೆಯ ಪ್ರವೇಶ ಆಗುತ್ತದೆ . ಇನ್ನೂ ಕಸದ ಪೊರಕೆಯನ್ನು ನಿಲ್ಲಿಸಬಾರದು,

ಮತ್ತು ಚಿಕ್ಕದಾದ ಕಸ ಪೊರಕೆಯನ್ನು ಇಟ್ಟುಕೊಳ್ಳಬಾರದು . ಹೊಸ ಮನೆಗೆ ಹೋಗುವಾಗ ಹಳೆ ಮನೆಯ ಕಸದ ಪೊರಕೆಯನ್ನು ಅಲ್ಲೇ ಬಿಟ್ಟು ಹೊಸ ಮನೆಗೆ ಹೊಸ ಪೊರಕೆಯನ್ನು ತೆಗೆದುಕೊಳ್ಳಬೇಕು . ಹೀಗೆ ಕಸದ ಪೊರಕೆಯ ಕೆಲವು ನಿಯಮಗಳನ್ನು ಪಾಲಿಸುವುದರಿಂದ ಮನೆಯಲ್ಲಿ ದರಿದ್ರ ಲಕ್ಷ್ಮಿ ಓಡಿ ಹೋಗಿ ಮಹಾಲಕ್ಷ್ಮಿ ಸ್ಥಿರವಾಗಿ ನೆಲೆಯಾಗುತ್ತಾಳೆ . ಮನೆಯಲ್ಲಿ ಸಿರಿ ಸಂಪತ್ತು ಸುಖ ಶಾಂತಿ ಸಿರಿ ಭೋಗ ಭಾಗ್ಯಗಳು ಬಂದು ಒದಗುತ್ತದೆ . ಎಂದು ಹೇಳುತ್ತಾರೆ ಶಾಸ್ತ್ರಕಾರರು .

Leave a Comment