10 ವಾಸ್ತು ಟಿಪ್ಸ್ ಮನೆಯ ಅಭಿವೃದ್ಧಿ ಗೆ

0

ನಾವು ಈ ಲೇಖನದಲ್ಲಿ ಮನೆಯ ಅಭಿವೃದ್ಧಿಗಾಗಿ ವಾಸ್ತು ಸಲಹೆಗಳು ಯಾವುದು ಎಂದು ತಿಳಿಯೋಣ . ಮನೆಯಲ್ಲಿ ಪದೇ ಪದೇ ಜಗಳ ಆಗುತ್ತಿದ್ದರೆ, ಈ ವಾಸ್ತು ಸಲಹೆಗಳನ್ನು ಅನುಕರಣೆ ಮಾಡಿ.ಮನೆಯಲ್ಲಿ ಶಾಂತಿ, ಸಂಸತ್ತು, ಆರೋಗ್ಯ , ಉತ್ತಮವಾಗಿರಬೇಕು ಅಂದರೆ, ವಾಸ್ತು ಬಹು ಮುಖ್ಯ ಪಾತ್ರ ವಹಿಸುತ್ತದೆ . ಆದ್ದರಿಂದ ಯಾರೇ ಆಗಲಿ ಮನೆ ಕಟ್ಟುವಾಗ ವಾಸ್ತು ಶಾಸ್ತ್ರವನ್ನು ಪಾಲಿಸಲೇಬೇಕು ಎನ್ನುತ್ತಾರೆ ಜ್ಯೋತಿಷಿಗಳು .

1 . ಧನಾತ್ಮಕ ಮತ್ತು ಋಣಾತ್ಮಕ ಶಕ್ತಿಗಳೆರಡೂ ನಮ್ಮ ಮನೆ ಮತ್ತು ಜೀವನದಲ್ಲಿ ಪ್ರಭಾವಶಾಲಿ ಪಾತ್ರವನ್ನು ವಹಿಸುತ್ತದೆ . ಈ ಎರಡು ಶಕ್ತಿಗಳ ಸಮತೋಲನವನ್ನು ಕಾಪಾಡುವಲ್ಲಿ ವಾಸ್ತು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ . ಗೃಹ ವಾಸ್ತು ದೋಷ , ಆರ್ಥಿಕ ಸಮಸ್ಯೆ , ಅನಾರೋಗ್ಯ , ಕಲಹ ಮತ್ತು ವಿವಾದಗಳಂತಹ ಸಮಸ್ಯೆಗಳನ್ನು ನಿವಾರಿಸುವ ಮಾರ್ಗಗಳ ಬಗ್ಗೆ ಇಲ್ಲಿ ತಿಳಿಯೋಣ .

2 . ಮನೆಯಲ್ಲಿ ಪ್ರತಿಷ್ಠಾಪಿಸಲಾದ ದೇವರ ಕೋಣೆಯನ್ನು ಯಾವಾಗಲೂ ಮನೆಯ ವಾಯುವ್ಯ ಅಥವಾ ಈಶಾನ್ಯ ದಿಕ್ಕಿನಲ್ಲಿ ಇಡಬೇಕು. ಜೊತೆಗೆ ಆ ಸ್ಥಳವನ್ನು ಸಹ ಯಾವಾಗಲೂ ಸ್ವಚ್ಛವಾಗಿ ಇಡಬೇಕು .

3 . ವಾಸ್ತು ದೋಷ ಹೋಗಲಾಡಿಸಲು ಮನೆಯ ಮುಂಬಾಗಿಲನ್ನು ಸದಾ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಮನೆಯ ಮುಖ್ಯ ದ್ವಾರದಲ್ಲಿ ಶೂಗಳು ಅಥವಾ ನಕಾರಾತ್ಮಕ ಶಕ್ತಿಯ ಮೂಲಗಳನ್ನು ಇಡಬಾರದು. ಇಲ್ಲದಿದ್ದರೆ ಕೆಲವು ನಕಾರಾತ್ಮಕ ಶಕ್ತಿ ನಮ್ಮ ಮನೆಗೆ ಪ್ರವೇಶಿಸುತ್ತದೆ. ಮನೆಯ ಮುಖ್ಯ ಬಾಗಿಲು ಅಥವಾ ಪ್ರವೇಶ ದ್ವಾರದ ಉತ್ತಮ ಅಲಂಕಾರವು ಮನೆಯಲ್ಲಿ ಧನಾತ್ಮಕ ಪರಿಣಾಮ ಬೀರುತ್ತದೆ.

4 . ಮನೆಯ ನೈಋತ್ಯ ಗೋಡೆಯ ಮೇಲೆ ಇಡೀ ಕುಟುಂಬ ಇರುವ ಪೋಟೋ ಪ್ರೇಮ್ ಹಾಕಬೇಕು. ಇದು ಕುಟುಂಬ ಸದಸ್ಯರ ನಡುವೆ ಪರಸ್ಪರ ಪ್ರೀತಿ ಮತ್ತು ಸಂತೋಷವನ್ನು ಕಾಪಾಡುತ್ತದೆ.

5 . ಯಾವಾಗಲೂ ದಕ್ಷಿಣಕ್ಕೆ ತಲೆ ಇಟ್ಟು ಮಲಗಿಕೊಳ್ಳಿ , ಉತ್ತರ ದಿಕ್ಕಿಗೆ ತಲೆ ಇಟ್ಟು ಮಲಗಬೇಡಿ. ಇದು ಯಾವಾಗಲೂ ನಮ್ಮ ಮೆದುಳನ್ನು ಉತ್ತಮಗೊಳಿಸುತ್ತದೆ. ಮತ್ತು ದೇಹದಲ್ಲಿ ಧನಾತ್ಮಕ ಹಾರ್ಮೋನ್ ಗಳನ್ನು ಬಿಡುಗಡೆ ಮಾಡುತ್ತದೆ.

6 . ಮನೆಯ ಬಾಗಿಲು ತೆರೆದಾಗ ಪೂರ್ವ ದಿಕ್ಕಿನಲ್ಲಿ ತೆರೆಯುವ ರೀತಿಯಲ್ಲಿ ಇಡಬೇಕು. ಹಾಗೆಯೇ ಒಣ ಹೂವುಗಳನ್ನು ಎಂದಿಗೂ ಮನೆಯಲ್ಲಿ ಇಡಬಾರದು . ಒಣಗಿದ ಹೂವುಗಳನ್ನು ಮನೆಯಲ್ಲಿ ಇಡುವುದು ದುರಾದೃಷ್ಟವನ್ನು ತರುತ್ತದೆ ಎಂದು ನಂಬಲಾಗಿದೆ.

7 . ಪೊರಕೆಯನ್ನು ಯಾವಾಗಲೂ ಮನೆಯಲ್ಲಿ ಸರಿಯಾದ ಸ್ಥಳದಲ್ಲಿ ಇಡಬೇಕು. ಇನ್ನು ಪೊರಕೆಯನ್ನು ಎಲ್ಲೆಂದರಲ್ಲಿ ಬಿಸಾಡಬಾರದು . ಇದರಿಂದ ಮನೆಯಲ್ಲಿ ಕೆಲವೊಂದು ಆರ್ಥಿಕ, ಆರೋಗ್ಯದಲ್ಲಿ ಸಮಸ್ಯೆಗಳು ಉಂಟಾಗಬಹುದು.

8 . ಯಾವುದೇ ರೀತಿಯಲ್ಲಿ ಮನೆಯಲ್ಲಿ ಮುರಿದ ಪಾತ್ರೆಗಳನ್ನು ತಪ್ಪಾಗಿಯೂ ಬಳಸಬೇಡಿ . ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ಹೆಚ್ಚಿಸಲು ಪ್ರತಿ ದಿನ ಬೆಳಿಗ್ಗೆ ಅಥವಾ ಸಂಜೆ ಕರ್ಪೂರವನ್ನು ಸುಟ್ಟು ಪ್ರತಿ ಮೂಲೆಯಲ್ಲಿ ಇರಿಸಿ. ಇದು ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ರವಾನಿಸಲು ಸಹಾಯ ಮಾಡುತ್ತದೆ.

9 . ಬಾತ್ ರೂಮ್ ಅಥವಾ ಶೌಚಾಲಯದ ಬಾಗಿಲು, ಮನೆಯಲ್ಲಿ ಅಡುಗೆ ಮನೆಯ ಎದುರು ಇದ್ದರೆ, ಮತ್ತು ಅದು ವಾಸ್ತು ದೋಷಕ್ಕೆ ಮುಖ್ಯ ಕಾರಣಗಳಲ್ಲಿ ಒಂದಾಗುತ್ತದೆ. ಅದನ್ನು ತಪ್ಪಿಸಲು , ಸ್ನಾನ ಗೃಹ ಮತ್ತು ಅಡುಗೆ ಮನೆಯ ನಡುವಿನ ಜಾಗದಲ್ಲಿ ಸ್ಕ್ರೀನ್ ಅನ್ನು ಅಳವಡಿಸಬೇಕು .

Leave A Reply

Your email address will not be published.