ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆ / ಯಾರು ಮಾಡಬೇಕು? ಎಷ್ಟು ಬಾರಿ ಮಾಡಬೇಕು? ಉಪವಾಸ ನಿಯಮವೇನು?

ನಾವು ಈ ಲೇಖನದಲ್ಲಿ ಸತ್ಯನಾರಾಯಣ ಸ್ವಾಮಿಯ ಪೂಜೆಯ ಬಗ್ಗೆ ಮಾಹಿತಿಗಳನ್ನು ತಿಳಿದುಕೊಳ್ಳೋಣ. ಯಾವ ರೀತಿಯ ಪೂಜೆ ಮಾಡಬೇಕು ಅದರಲ್ಲಿ ಕೆಲವೊಂದು ಗೊಂದಲಗಳಿರುತ್ತದೆ . ಹೊಸದಾಗಿ ಪೂಜೆ ಮಾಡಿಸಬೇಕು ಎಂದರೆ ಯಾವ ದಿನದಲ್ಲಿ ಮಾಡಿಸಬೇಕು ನಾವು ಮಾಂಸಹಾರವನ್ನು ಎಷ್ಟು ದಿನ ತ್ಯಜಿಸಬೇಕು. ಆ ಗೊಂದಲದ ವಿಷಯಗಳ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ. ಎಲ್ಲರೂ ಶುಭ ಕಾರ್ಯವನ್ನು ಮಾಡುವ ಮುಂಚೆ ಸತ್ಯನಾರಾಯಣ ಸ್ವಾಮಿಯ ಪೂಜೆಯನ್ನು ಮಾಡಿಸುತ್ತಾರೆ.

ಯಾವ ದಿನದಲ್ಲಿ ಮಾಡಿಸುವುದು ಶ್ರೇಷ್ಠ ಎನ್ನುವುದಾದರೆ ಹೊಸದಾಗಿ ಮದುವೆಯಾದ ನವ ದಂಪತಿಗಳ ಜೀವನ ಚೆನ್ನಾಗಿರಲಿ ಎಂದು ಸತ್ಯನಾರಾಯಣ ಸ್ವಾಮಿಯ ಪೂಜೆಯನ್ನು ಮಾಡಿಸುತ್ತೇವೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಒಳ್ಳೆಯ ಏಳಿಗೆ ಇರಲಿ ಎಂದು ಗೃಹಪ್ರವೇಶದ ಸಮಯದಲ್ಲಿ ಸತ್ಯನಾರಾಯಣ ಸ್ವಾಮಿ ಪೂಜೆ ಮತ್ತು ನವಗ್ರಹ ಹೋಮವನ್ನು ಕಡ್ಡಾಯವಾಗಿ ಮಾಡಿಸುತ್ತಾರೆ. ಹೊಸದಾಗಿ ವ್ಯಾಪಾರವನ್ನು ಶುರು ಮಾಡಿದಾಗ ಈ ಪೂಜೆಯನ್ನು ಮಾಡಿಸಬಹುದು.

ಕೆಲವು ಮನೆಗಳಲ್ಲಿ ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ಸಿಟ್ಟಾಗುವುದು ಮನೆಯಲ್ಲಿ ಶಾಂತಿಯು ನೆಲಸದೇ ಇರುವುದು ಮತ್ತು ನೀವು ಮಾಡುವ ಕಾರ್ಯಗಳು ಅರ್ಧಕ್ಕೆ ನಿಂತಿರುವಾಗ ನೀವು ಗೊಂದಲಕ್ಕೆ ಈಡಾದಾಗ ಸತ್ಯನಾರಾಯಣ ಸ್ವಾಮಿ ಪೂಜೆಯನ್ನು ಮಾಡಿಸುವುದರಿಂದ ನಿಮ್ಮ ಅಡೆತಡೆಗಳು. ನಿವಾರಣೆಗೊಂಡು ಸಕಲ ಕೆಲಸಗಳಲ್ಲಿಯೂ ಯಶಸ್ಸು ಸಿಗುತ್ತದೆ . ಮನಸ್ಸಿಗೆ ನೆಮ್ಮದಿ ಸಿಗುತ್ತದೆ .ಇ

ದನ್ನು ಯಾವ ದಿನಗಳಲ್ಲಿ ಮಾಡಿಸುವುದು ಶ್ರೇಷ್ಠ ಎನ್ನುವುದಾದರೆ ,ಶುಭ ಕಾರ್ಯಗಳನ್ನು ಮಾಡುವ ಸಮಯವನ್ನು ಬಿಟ್ಟು ಬೇರೆ ದಿನಗಳಲ್ಲಿ ಈ ಪೂಜೆಯನ್ನು ಮಾಡಿಸುವುದಾದರೆ ಹುಣ್ಣಿಮೆ, ಏಕಾದಶಿ , ಗುರುವಾರ, ಶ್ರಾವಣ ಮಾಸ ಹೀಗೆ ವಿಶೇಷ ದಿನಗಳಲ್ಲಿ ಈ ಪೂಜೆಯನ್ನು ಮಾಡಿಕೊಳ್ಳಬಹುದು. ನಿಮಗೆ ಕಷ್ಟಗಳು ಜಾಸ್ತಿಯಾದಾಗ ನಿಮ್ಮ ಮನಸ್ಸಿನಲ್ಲಿ ನೀವು ಸಂಕಲ್ಪವನ್ನು ಮಾಡಿಕೊಂಡಾಗ ಈ ವಿಶೇಷ ದಿನಗಳನ್ನು ಆಯ್ದುಕೊಂಡು ಪೂಜೆಯನ್ನು ಮಾಡಬಹುದು.

ಶನಿವಾರವು ವೆಂಕಟರಮಣ ಸ್ವಾಮಿಯ ವಾರವಾಗಿರುವುದರಿಂದ ಆ ದಿನಗಳಲ್ಲಿಯೂ ಸಹ ನೀವು ಈ ಪೂಜೆಯನ್ನು ಮಾಡಿಕೊಳ್ಳಬಹುದು. ಹುಣ್ಣಿಮೆ ಈ ಪೂಜೆಯನ್ನು ಏಕೆ ಮಾಡಬೇಕೆಂದರೆ ಆ ದಿನ ಚಂದ್ರನು ತುಂಬಾ ಹತ್ತಿರ ಬಂದು ದೈವಿಕವಾಗಿ ಆಶೀರ್ವಾದ ಮಾಡುತ್ತಾನೆ ಎಂದು ನಂಬಿಕೆ ಇದೆ. ಹಾಗಾಗಿ ಹುಣ್ಣಿಮೆಗೆ ಹೆಚ್ಚು ಪ್ರಾಧ್ಯಾನತೆಯನ್ನು ಕೊಡುತ್ತಾರೆ. ಹೀಗಾಗಿ ಹುಣ್ಣಿಮೆಯ ದಿನ ವಿಶೇಷವಾದಂತಹ ಫಲಗಳು ನಿಮಗೆ ದೊರಕುತ್ತವೆ. ಹುಣ್ಣಿಮೆಯಲ್ಲಿ ಸತ್ಯನಾರಾಯಣ ಸ್ವಾಮಿಯ ಪೂಜೆಯನ್ನು ಮಾಡಿಸುವುದರಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯು ಹೆಚ್ಚಾಗುತ್ತದೆ. ‌

ಅಂದುಕೊಂಡಂತಹ ಕೆಲಸಗಳು ಯಶಸ್ಸು ಕಾಣುತ್ತದೆ. ಹುಣ್ಣಿಮೆ ಗುರುವಾರ ಶನಿವಾರ ಏಕಾದಶಿ ಇಂತಹ ದಿನಗಳನ್ನು ಬಿಟ್ಟರೆ ಶುಕ್ಲ ಪಕ್ಷದ ಶುಭ ಸಮಯದಲ್ಲಿ ಯಾವಾಗ ಬೇಕಾದರೂ ಈ ಪೂಜೆಯನ್ನು ಮಾಡಿಕೊಳ್ಳಬಹುದು. ಈ ಸತ್ಯನಾರಾಯಣ ಸ್ವಾಮಿ ಪೂಜೆಯಲ್ಲಿ ನಾವು ವಿಷ್ಣುವಿನ ಆರಾಧನೆಯನ್ನು ಮಾಡುತ್ತೇವೆ. ಭಗವಾನ್ ಶ್ರೀ ಮಹಾವಿಷ್ಣುವಿಗೆ ಈ ಹುಣ್ಣಿಮೆಯ ದಿನವೂ ತುಂಬಾ ಪ್ರಿಯವಾಗಿರುತ್ತದೆ. ಹೀಗಾಗಿ ನಾವು ಈ ಹುಣ್ಣಿಮೆಯ ದಿನ ಸತ್ಯನಾರಾಯಣ ಸ್ವಾಮಿ ಪೂಜೆಯನ್ನು ಮಾಡುತ್ತೇವೆ.

ವಿಷ್ಣುವಿನ ಆರಾಧನೆ ಮಾಡುವುದರ ಜೊತೆಗೆ ಉಪವಾಸವನ್ನು ಸಹ ಮಾಡಬೇಕಾಗುತ್ತದೆ. ಬಾಣಂತಿಯರು ಮತ್ತು ಆರೋಗ್ಯದ ಸಮಸ್ಯೆ ಇರುವವರು ಆಹಾರವನ್ನು ತೆಗೆದುಕೊಳ್ಳಬೇಕು. ಇನ್ನುಳಿದಂತಹವರು ದೇವರ ಪೂಜೆ ಮುಗಿಯುವ ತನಕವೂ ಯಾವುದೇ ರೀತಿ ಆಹಾರವನ್ನು ತೆಗೆದುಕೊಳ್ಳುವಂತಿಲ್ಲ. ಸಂಬಂಧಿಕರನ್ನು ಮತ್ತು ಅಕ್ಕ ಪಕ್ಕದವರು ಎಲ್ಲರನ್ನು ಕರೆದು ಪೂಜೆಯ ದಿನ ಊಟವನ್ನು ಹಾಕಿಸಬೇಕು. ಪ್ರಸಾದ ಸೇವನೆಯ ನಂತರ ನೀವು ಊಟವನ್ನು ಮಾಡಬಹುದು.

ಜನವರಿ 25ನೇ ತಾರೀಕು ಹುಣ್ಣಿಮೆ ಇರುತ್ತದೆ. ಪುಷ್ಯ ಪೂರ್ಣಿಮೆ ಆಗಿರುತ್ತದೆ. ಇದರ ತಿಥಿ ಪ್ರಾರಂಭವಾಗುವುದು ಜನವರಿ 24 ನೇ ತಾರೀಕು ರಾತ್ರಿ 9 ಗಂಟೆ 49 ನಿಮಿಷಕ್ಕೆ ಪ್ರಾರಂಭವಾದರೆ ಇದು ಕೊನೆಗೊಳ್ಳುವುದು ಜನವರಿ 25ನೇ ತಾರೀಕು 11 ಗಂಟೆ 23 ನಿಮಿಷಕ್ಕೆ ಸೂರ್ಯೋದಯದ ತಿಥಿಯನ್ನು ಗಣನೆಗೆ ತೆಗೆದುಕೊಂಡು 25ನೇ ತಾರೀಕು ಹುಣ್ಣಿಮೆಯನ್ನು ಆಚರಣೆ ಮಾಡಬೇಕಾಗುತ್ತದೆ. ಸತ್ಯನಾರಾಯಣ ಸ್ವಾಮಿಯ ಪೂಜೆಯನ್ನು ಮನೆಯಲ್ಲಿ ಮಾಡಿಸುವುದರಿಂದ ಸಾವಿರಾರು ಯಾಗಕ್ಕೆ ಸಮಾನವಾದ ಫಲಿತಾಂಶ ಸಿಗುತ್ತದೆ

ಎನ್ನುವ ಮಾತು ಪುರಾಣದಲ್ಲಿ ಉಲ್ಲೇಖವಿದೆ. ಸತ್ಯನಾರಾಯಣ ಸ್ವಾಮಿಯ ಫೋಟೋವನ್ನು ನಾವು ಪೂರ್ವದ ಉತ್ತರ ದಿಕ್ಕಿಗೆ ಮುಖವನ್ನು ಮಾಡಿ ಫೋಟೋವನ್ನು ಇಟ್ಟು ಪೂಜೆ ಮಾಡಬೇಕು. ಮೊದಲಿಗೆ ನಾವು ಗಣಪತಿಯನ್ನು ಪೂಜೆ ಮಾಡಿ ನಂತರದಲ್ಲಿ ಈ ಪೂಜೆಯನ್ನು ಪ್ರಾರಂಭ ಮಾಡಬೇಕು. . ಇದನ್ನು ನೀವು ಸರಳವಾಗಿ ಮನೆಯಲ್ಲೇ ಮಾಡುವುದಾದರೆ ಮನೆಯಲ್ಲಿ ಶುದ್ದಿ ಮಾಡಿಕೊಂಡು ಸ್ನಾನವನ್ನು ಮಾಡಿ ಸತ್ಯನಾರಾಯಣ ಸ್ವಾಮಿಯ ಫೋಟೋವನ್ನು ಇಟ್ಟು ಅದರ ಮುಂದೆ ಕಳಶವನ್ನು ಪ್ರತಿಷ್ಠಾಪಿಸಿ ಬೇಕು.

ಪ್ರಸಾದಕ್ಕೆ ಸಿಹಿ ಸಜ್ಜಿಗೆಯನ್ನು ಮಾಡಿಕೊಳ್ಳಬೇಕು. ತಾಂಬೂಲವನ್ನು ಸಹ ಇಡಬೇಕು . ತೀರ್ಥ ಪ್ರೋಕ್ಷಣೆ ಮಾಡಬೇಕಾದರೆ ತುಳಸಿಯ ದಳಗಳನ್ನು ಉಪಯೋಗಿಸಿಕೊಳ್ಳಬೇಕು. ತುಳಸಿ ಮಾಲೆಗಳನ್ನು ಹಾಕಿ ಕಲಶವನ್ನ ಪ್ರತಿಷ್ಠಾಪನೆ ಮಾಡಿಕೊಳ್ಳಬೇಕು. ಸತ್ಯನಾರಾಯಣ ಸ್ವಾಮಿಯ ಪೂಜೆಯನ್ನು ಹುಣ್ಣಿಮೆ ದಿನ ಮಾಡುವುದಾದರೆ. ಅದರ ಹಿಂದಿನ ದಿನವೇ ನೀವು ತುಳಸಿ ದಳಗಳನ್ನು ತೆಗೆದಿಟ್ಟುಕೊಳ್ಳಬೇಕು. ಪೂಜೆಯ ದಿನ ಇದನ್ನು ಉಪಯೋಗಿಸಿಕೊಳ್ಳಬೇಕು. ಉಪವಾಸವಿದ್ದು ಆಚರಣೆ ಮಾಡಿಕೊಳ್ಳಬೇಕು.

ತಿಂಗಳಿಗೊಮ್ಮೆ ಮಾಡುವುದಾದರೆ ಸರಳವಾಗಿ ಸಂಕಲ್ಪವನ್ನು ಮಾಡಿಕೊಂಡು ಒಂದು ವರ್ಷವೂ ,ಅಥವಾ 21 ತಿಂಗಳು ಒಂಬತ್ತು ತಿಂಗಳು ಪೂಜೆ ಮಾಡಿ ನಂತರದಲ್ಲಿ ಉದ್ಯಾಪನೆಯನ್ನು ಮಾಡುತ್ತೇವೆ ಎನ್ನುವ ಸಂಕಲ್ಪ ಮಾಡಿಕೊಂಡು ಪೂಜೆಯನ್ನು ಮಾಡಬಹುದು. ಮನೆಯಲ್ಲಿ ತುಂಬಾ ಕಷ್ಟ ಇರುವಾಗ ಮತ್ತು ಶುಭ ಕಾರ್ಯಗಳನ್ನು ಮಾಡುವಾಗ ಈ ಪೂಜೆಯನ್ನು ನೀವು ಮಾಡಿಕೊಳ್ಳಬಹುದು. ಮನೆಯಲ್ಲಿ ಪೂಜೆ ಮಾಡಲು ಸಾಧ್ಯವಾಗದೇ ಇರುವವರು ನಿಮ್ಮ ಹೆಸರಿನಲ್ಲಿ ಒಂದು ಪೂಜೆಯನ್ನು ಮಾಡಿಸಿ ಪ್ರಸಾದವನ್ನು ತೆಗೆದುಕೊಂಡು ಬರಬಹುದು .

ನಂತರ ವಿದ್ಯಾಪನೆಯನ್ನು ಮಾಡಿಕೊಳ್ಳಬಹುದು. ವರ್ಷಕ್ಕೊಮ್ಮೆ ಆದರೂ ಸತ್ಯನಾರಾಯಣ ಸ್ವಾಮಿಯ ಪೂಜೆಯನ್ನು ಮಾಡಿಸುವುದರಿಂದ ನಮ್ಮ ಮನೆಯಲ್ಲಿ ಸುಖ ಶಾಂತಿ ಸಮೃದ್ಧಿ ಯಶಸ್ಸು ನೆಲೆಸಿರುತ್ತದೆ. ಸರಳವಾಗಿ ಮಾಡುವುದಾದರೆ ತಿಂಗಳಿಗೊಮ್ಮೆ ಮಾಡಿಕೊಳ್ಳಬಹುದು . ಅಥವಾ ವರ್ಷಕ್ಕೊಮ್ಮೆ ಮಾಡುವುದಾದರೆ ಅರ್ಚಕರನ್ನು ಕರೆಸಿ ಪೂಜೆ ಮಾಡಿಸಿಕೊಳ್ಳಬಹುದು. ವರ್ಷಕ್ಕೊಮ್ಮೆ ಅರ್ಚಕರನ್ನು ಕರೆದು ಪೂಜೆ ಮಾಡಿಸಿದ ನಂತರ 48 ದಿನಗಳು ನೀವು ಮಾಂಸಹಾರವನ್ನು ಸೇವನೆ ಮಾಡಬಾರದು. ಮನೆಯಲ್ಲೂ ಸಹ ಮಾಡಬಾರದು. ಹೊರಗಡೆಯೂ ಕೂಡ ಸೇವಿಸಬಾರದು . 48 ದಿನಗಳ ನಂತರ ಯಥಾ ಪ್ರಕಾರ ನಿಮ್ಮ ಜೀವನಶೈಲಿಯನ್ನು ಮಾಡಿಕೊಳ್ಳಬಹುದು.

Leave a Comment