ಮೇಷರಾಶಿಯವರ ಗುಣಲಕ್ಷಣಗಳನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ಇವರು ಪ್ರತೀ ಕೆಲಸದಲ್ಲೂ ತಮ್ಮ ಮುಂದಾಳತ್ವವನ್ನು ಬಯಸುತ್ತಾರೆ. ನಾನು, ನನ್ನಿಂದಲೇ ಎಂಬ ಭಾವನೆಯುಳ್ಳವರು. ಇವರದ್ದು ಮುಖವಿನ ಸ್ವಭಾವ. ಪ್ರತಿಯೊಂದು ವಿಷಯದಲ್ಲೂ ತಮ್ಮನ್ನು ತೊಡಗಿಸಿಕೊಳ್ಳಲು ಇಷ್ಟಪಡುತ್ತಾರೆ. ಯಾವುದನ್ನ ಹೆಚ್ಚಿಗೆ ಯೋಚನೆ ಮಾಡಲ್ಲ ಆದರೇ ಅದನ್ನು ಮಾಡಿ ಮುಗಿಸಬೇಕು ಎನ್ನುವುದಷ್ಟೇ ಅವರ ತಲೆಯಲ್ಲಿರುವುದು. ಹಾಗಾಗಿ ಹೊಸ ಹೊಸ ವಿಷಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಇಷ್ಟಪಡುತ್ತಾರೆ.
ಹಾಗಾಗಿ ಯಾವಾಗಲೂ ಬ್ಯುಸಿ ಇರುತ್ತಾರೆ. ಯಾರಾದರೂ ಇವರ ಬಳಿ ಸಹಾಯ ಕೇಳಿದರೇ ಪ್ರಾಮಾಣಿಕವಾಗಿ ಸಹಾಯ ಮಾಡುತ್ತಾರೆ. ಇವರ ಗುರಿ ಯಾವಾಗಲೂ ಮೇಲ್ಪಂಕ್ತಿಯಲ್ಲೇ ಇರುತ್ತದೆ. ಇವರಿಗೆ ತಾಳ್ಮೆ ಬಹಳ ಕಡಿಮೆ ಯಾವುದೇ ವಿಷಯ ಬೇಜಾದರೇ ಅಲ್ಲೇ ಕೈ ಬಿಡುತ್ತಾರೆ. ಇವರು ಯಾವಾಗಲೂ ಸ್ವತಂತ್ರವಾಗಿ ಇರಲು ಇಷ್ಟಪಡುತ್ತಾರೆ. ಇವರ ಕೆಲಸದಲ್ಲಿ ಯಾರಾದರೂ ಮೂಗು ತೂರಿಸಿಕೊಂಡು ಬಂದರೇ ಇವರಿಗೆ ಇಷ್ಟವಾಗುವುದಿಲ್ಲ.
ಮೇಷರಾಶಿಯವರು ಒಂದು ವಿಷಯದಲ್ಲಿ ಲಾಭ ಸಿಗುತ್ತೆ ಎಂದಾದರೇ ಸುಳ್ಳು ಹೇಳುತ್ತಾರೆ, ಆದರೇ ಅಷ್ಟೇ ಬೇಗ ಸಿಕ್ಕಿ ಹಾಕಿಕೊಳ್ಳುತ್ತಾರೆ. ಹಣಕಾಸಿನ ವಿಷಯದಲ್ಲಿ ಹೇಳುವುದಾದರೇ ಇವರು ತುಂಬಾ ಖರ್ಚು ಮಾಡುತ್ತಾರೆ. ಉಳಿತಾಯವನ್ನು ಕಡಿಮೆ ಮಾಡುತ್ತಾರೆ ಆದ್ದರಿಂದ ಉಳಿತಾಯದ ವಿಷಯದಲ್ಲಿ ಸ್ವಲ್ಪ ಗಮನಕೊಡಬೇಕಾಗುತ್ತದೆ. ಇವರು ಸಹಾಯ ಮಾಡಲು ಹಿಂದೆಮುಂದೆ ಯೋಚನೆ ಮಾಡದೇ ಗುಣ ಇವರಲ್ಲಿರುವುದರಿಂದ ಸ್ನೇಹಿತರ ಬಳಗ ಚೆನ್ನಾಗಿರುತ್ತದೆ ಆದರೇ ಕ್ರೆಡಿಟ್ ತೆಗೆದುಕೊಳ್ಳುವುದಕ್ಕೂ ಇಷ್ಟಪಡುತ್ತಾರೆ.
ಮೇಷರಾಶಿಯ ಅಧಿಪತಿ ಮಂಗಳಗ್ರಹವಾಗಿರುತ್ತದೆ. ಇದು ನಿಮ್ಮ ಕೋಪ, ಸಾಮರ್ಥ್ಯವನ್ನು ಸೂಚಿಸುತ್ತದೆ. ಈ ರಾಶಿಯ ಸ್ತ್ರೀಯರು ತನ್ನ ಗಂಡ, ಮಕ್ಕಳು ಮತ್ತು ಕುಟುಂಬವನ್ನು ತುಂಬಾ ಕೇರ್ ಮಾಡುತ್ತಾರೆ. ಮಂಗಳಗ್ರಹ ಸೇನಾಪತಿಯನ್ನು ಸೂಚಿಸುತ್ತದೆ. ಸೂರ್ಯ ರಾಜನನ್ನು ಸೂಚಿಸುತ್ತದೆ. ಹಾಗಾಗಿ ಇವರಲ್ಲಿ ಇಂಡಿಪೆಂಡೆಂಟ್, ಕಮ್ಯಾಂಡಿಂಗ್, ಅಟ್ಯಾಕಿಂಗ್, ಆರ್ಮಿ, ಈ ಎಲ್ಲಾ ಗುಣಲಕ್ಷಣಗಳನ್ನು ನೋಡಬಹುದು. ಸೂರ್ಯ ಮೇಷರಾಶಿಯಲ್ಲಿ ತುಂಬಾ ಪ್ರಭಾವಶಾಲಿಯಾಗಿರುತ್ತಾನೆ.
ಸೂರ್ಯ ಈ ರಾಶಿಯಲ್ಲಿ ಆಳ್ವಿಕೆ ಮಾಡುವುದನ್ನ ನೋಡಬಹುದು. ಹಾಗಾಗಿ ಇವರು ಪ್ರತಿವಿಷಯದಲ್ಲೂ ಇವರೇ ಬಾಸ್ ಆಗಿರಬೇಕೆಂದು ಇಷ್ಟಪಡುತ್ತಾರೆ. ಈ ರಾಶಿಯಲ್ಲಿ ಸೂರ್ಯ ಕಲೆಯನ್ನು ಸೂಚಿಸುತ್ತಾನೆ. ಇವರು ಮ್ಯೂಜಿಕ್, ಆರ್ಟ್ಸ್ ಅನ್ನು ತುಂಬಾ ಇಷ್ಟಪಡುತ್ತಾರೆ ಮತ್ತು ಕಲಿಯಬೇಕೆನ್ನುವ ಆಸಕ್ತಿಯೂ ಇವರಲ್ಲಿ ಇರುತ್ತದೆ. ಈ ರಾಶಿಯವರು ಓಪನ್ ಹಾರ್ಟೆಡ್ ಸ್ವಭಾವದವರು. ಪ್ರಾರಂಭದಲ್ಲಿ ಲವ್ ರಿಲೇಷನ್ ಚೆನ್ನಾಗಿ ಇರುತ್ತದೆ ಮತ್ತು ಮದುವೆಯ ನಂತರವೂ ಚೆನ್ನಾಗಿ ಇರುತ್ತದೆ.
ಆದರೇ ಇವರಿಗೆ ತಾಳ್ಮೆಯು ಕಡಿಮೆ ಇರುವುದರಿಂದ ಬೇಗ ರಿಯಾಕ್ಟ್ ಮಾಡುತ್ತಾರೆ. ಇದರಿಂದ ನಿಮ್ಮ ಮದುವೆಯ ಜೀವನ ಮತ್ತು ಲವ್ ಲೈಫ್ ನಲ್ಲಿ ಸಮಸ್ಯೆ ಬರಬಹುದು. ಆದ್ದರಿಂದ ತಾಳ್ಮೆಯಿಂದ ಇರುವುದು ಒಳ್ಳೆಯದು. ಮೇಷರಾಶಿಯು ತಲೆಯನ್ನು ಸೂಚಿಸುತ್ತದೆ. ಹಾಗಾಗಿ ತಲೆಯ ಸಂಬಂಧಿತ ಕಾಯಿಲೆಗಳು ಅಂದರೆ ಮೈಗ್ರೈನ್, ತಲೆನೋವು, ತಲೆಭಾರ ಈ ಲಕ್ಷಣಗಳು ಕಂಡುಬರುತ್ತದೆ. ನೀವು ಯಾವಾಗಲೂ ಕೆಲಸದಲ್ಲಿ ತೊಡಗಿಸಿಕೊಂಡಿರುವುದರಿಂದ ಹೈಪರ್ ಟೆನ್ಷನ್ ಆಗಿ ತಲೆನೋವು ಕಂಡುಬರುತ್ತದೆ.
ಕಣ್ಣು ಮತ್ತು ಹಲ್ಲಿನ ಬಗ್ಗೆಯೂ ಕೇರ್ ತೆಗೆದುಕೊಳ್ಳಬೇಕಾಗುತ್ತದೆ. ಮಂಗಳ ಗ್ರಹ ಮಾಂಸಖಂಡ ಮತ್ತು ರಕ್ತವನ್ನು ಸೂಚಿಸುತ್ತದೆ. ಹಾಗಾಗಿ ಮಜಲ್ಸ್ ಮತ್ತು ರಕ್ತ ಸಂಬಂಧಿತ ಕಾಯಿಲೆಗಳು ಇದ್ದರೇ ತುಂಬಾ ಕೇರ್ ತೆಗೆದುಕೊಳ್ಳಬೇಕಾಗುತ್ತದೆ. ಪಿತ್ತ ಮತ್ತು ಜೀರ್ಣಕ್ರಿಯೆ ಸಂಬಂಧಿತ ಕಾಯಿಲೆಗಳನ್ನ ಸೂಚಿಸುತ್ತದೆ. ಹಾಗಾಗಿ ಆಹಾರ ಕ್ರಮಗಳ ಬಗ್ಗೆ ಗಮನವಿರಲಿ. ಕರಿಯರ್ ವಿಷಯಕ್ಕೆ ಬಂದರೆ ಆರ್ಮಿ, ಮೆಡಿಕಲ್, ಸರ್ಜರಿ, ರಿಯಲ್ ಎಸ್ಟೇಟ್ ಈ ಕ್ಷೇತ್ರ ಆಗಿಬರುತ್ತದೆ.
ಈ ರಾಶಿಯವರಿಗೆ ಇಂಜಿನಿಯರಿಂಗ್ ಕ್ಷೇತ್ರ ತುಂಬಾ ಆಗಿಬರುತ್ತದೆ. ಇವರು ಹಣಕಾಸಿನ ವಿಷಯದಲ್ಲಿ ತುಂಬಾ ಲಕ್ಕಿ ಆಗಿರುತ್ತಾರೆ. ಆದರೇ ಖರ್ಚು ತುಂಬಾ ಮಾಡುವುದರಿಂದ ಉಳಿತಾಯದ ಮೇಲೆ ಸ್ವಲ್ಪ ಗಮನವಿರಲಿ. ಇವರಲ್ಲಿ ಎನರ್ಜಿಟಿಕ್, ಕ್ರಿಯೇಟಿವ್, ಕೇರಿಂಗ್ ಈ ಎಲ್ಲಾ ಒಳ್ಳೆಯ ಗುಣಗಳಿದ್ದರೂ ಕೋಪವನ್ನು ಕಂಟ್ರೋಲ್ ಮಾಡಿಕೊಳ್ಳಬೇಕಾಗುತ್ತದೆ ಏಕೆಂದರೇ ಕೋಪದಿಂದ ಸಂಬಂಧಗಳು ಹಾಳಾಗುತ್ತವೆ. ಆದ್ದರಿಂದ ತಾಳ್ಮೆಯನ್ನು ಬೆಳೆಸಿಕೊಳ್ಳಿ.