ದೇವರ ಮನೆಯಲ್ಲಿ ಖಂಡಿತ ಇಟ್ಟುಕೊಳ್ಳಬೇಕಾದ ವಿಗ್ರಹಗಳು ಫೋಟೋಗಳು! ಇವು ಇದ್ದರೆ ನಿಮ್ಮ ಮನೆ ಪರಮ ಪವಿತ್ರವಾಗುತ್ತದೆ!

ಪ್ರತಿಯೊಬ್ಬರ ಮನೆಯಲ್ಲೂ ದೇವರ ಕೋಣೆ ಇದ್ದೇ ಇರುತ್ತದೆ ಅಂತಹ ದೇವರ-ಕೋಣೆಯಲ್ಲಿ ಕೆಲವು ದೇವರ ಫೋಟೊ ಅಥವಾ ವಿಗ್ರಹಗಳನ್ನು ಇಟ್ಟುಕೊಳ್ಳಲೇಬೇಕು ಹಾಗೂ ದೇವರ ಫೋಟೋ ಅಥವಾ ವಿಗ್ರಹಗಳನ್ನು ಇಟ್ಟುಕೊಳ್ಳಬಾರದು. ಇನ್ನೂ ಆ ಫೋಟೋ ಮತ್ತು ವಿಗ್ರಹಗಳು ಯಾವುವು ಎಂದು ತಿಳಿಯೋಣ ಬನ್ನಿ. ಈ ದೇವರ ಫೋಟೋಗಳನ್ನು ಇಟ್ಟುಕೊಳ್ಳಲೇಬೇಕು ಪಂಚಮುಖಿ ಆಂಜನೇಯ ಸ್ವಾಮಿಯ ಫೋಟೋ ಅಥವಾ ವಿಗ್ರಹವನ್ನು ದೇವರ ಮನೆಯಲ್ಲಿ ಇಟ್ಟುಕೊಳ್ಳಬೇಕು ಇದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ದೂರವಾಗುತ್ತದೆ ಹಾಗೂ ಪ್ರತಿಯೊಂದು ಕೆಲಸ ಕಾರ್ಯದಲ್ಲಿ ವಿಘ್ನವಿಲ್ಲದೆ ಜಯ ಸಾಧಿಸಬಹುದು. ಪಂಚಮುಖಿ ಆಂಜನೇಯ ಸ್ವಾಮಿಗೆ ಪ್ರತಿನಿತ್ಯ ವಿಶೇಷವಾಗಿ ಕೆಂಪು ಹೂಗಳನ್ನು ಅರ್ಪಿಸಿದರೆ ಅದೃಷ್ಟ ನಿಮ್ಮದಾಗುತ್ತದೆ.

ಅರ್ಧನಾರೀಶ್ವರ ಫೋಟೋ ಅರ್ಧ ಶಿವ ಮತ್ತು ಪಾರ್ವತಿ ಇರುವಂತಹ ಫೋಟೋ ವನ್ನು ಮನೆಯ ದೇವರ ಕೋಣೆಯಲ್ಲಿ ಇಟ್ಟುಕೊಳ್ಳಲೇಬೇಕು.ಹೀಗೆ ಶಿವನಿಗೆ ಬಿಳಿ ಪುಷ್ಪಗಳಿಂದ ಮತ್ತು ಪಾರ್ವತಿ ದೇವಿಗೆ ಕೆಂಪು ಪುಷ್ಪಗಳನ್ನು ಅರ್ಪಿಸಬೇಕು ಇದರಿಂದ ಮನೆಯಲ್ಲಿ ಗಂಡ ಹೆಂಡತಿ ನಡುವಿನ ಬಾಂಧವ್ಯ ಗಟ್ಟಿಗೊಳ್ಳುತ್ತದೆ. ಲಕ್ಷ್ಮೀನರಸಿಂಹ ಸ್ವಾಮಿಯ ಫೋಟೋ ಉಗ್ರವಾಗಿರುವ ಲಕ್ಷ್ಮೀನರಸಿಂಹಸ್ವಾಮಿಯ ಫೋಟೋಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು ಆದರೆ ಪ್ರಸನ್ನವಾಗಿರುವ ಶಾಂತಿಯಿಂದ ಕೂಡಿರುವ ಲಕ್ಷ್ಮೀನರಸಿಂಹ ಸ್ವಾಮಿಯ ಫೋಟೋವನ್ನು ದೇವರ ಮನೆಯಲ್ಲಿ ಇಟ್ಟುಕೊಳ್ಳುವುದು ಬಹಳ ಒಳ್ಳೆಯದು ಇದರಿಂದ ಮನೆಯ ಮೇಲಿನ ದೃಷ್ಟಿದೋಷ , ಮಾಟ ಮಂತ್ರದಂತಹ ತೊಂದರೆ , ಶತ್ರು ಭಾದೆಯಿಂದ ಪರಿಹಾರ ಕಂಡುಕೊಳ್ಳಬಹುದು.

2 ಗಜವು ಲಕ್ಷ್ಮೀದೇವಿಗೆ ಅಭಿಷೇಕವನ್ನು ಮಾಡುತ್ತಿರುವ ಕಮಲದ ಮೇಲೆ ಕುಳಿತಿರುವ ಗಜ ಲಕ್ಷ್ಮೀದೇವಿಯ ಫೋಟೊ ಅಥವಾ ವಿಗ್ರಹವನ್ನು ಇಟ್ಟುಕೊಳ್ಳಬೇಕು ಇದರಿಂದ ಮನೆಯಲ್ಲಿನ ಆರ್ಥಿಕ ಸಮಸ್ಯೆ ದೂರಾಗುತ್ತದೆ. ಮನೆಯಲ್ಲಿ ಈ ದೇವರ ಫೋಟೋಗಳನ್ನು ಇಟ್ಟುಕೊಳ್ಳಬಾರದು ನವಗ್ರಹಗಳ ಫೋಟೋಗಳನ್ನು ಮನೆಯಲ್ಲಿ ಯಾವುದೇ ಕಾರಣಕ್ಕೂ ಇಟ್ಟುಕೊಳ್ಳಬಾರದು. ಅದರಲ್ಲೂ ಬಹುಮುಖ್ಯವಾಗಿ ರಾಹು,ಕೇತು ಮತ್ತು ಶನಿಯ ಫೋಟೋಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು. ಸೂರ್ಯದೇವನ ಫೋಟೋವನ್ನು ಸಹ ಮನೆಯ ದೇವರ ಕೋಣೆಯಲ್ಲಿ ಇಟ್ಟುಕೊಳ್ಳಬಾರದು.

ಪ್ರಥಮ ಪೂಜಿತ ನಾಗಿರುವ ಹಾಗೂ ವಿಘ್ನನಿವಾರಕನಾದ ಗಣಪತಿಯ 3 ಫೋಟೋಗಳು ಅಥವಾ ವಿಗ್ರಹಗಳನ್ನು ಮನೆಯಲ್ಲಿ ಇರಬಾರದು. ದೇವರ ಕೋಣೆಯಲ್ಲಿ 2 ಶಿವಲಿಂಗಗಳು ಇರಬಾರದು ಮತ್ತು ಒಂದೇ ಸಾಲಿಗ್ರಾಮ ವಿರಬೇಕು. ಕಾಲಭೈರವನ ಫೋಟೋ ಅಥವಾ ವಿಗ್ರಹವನ್ನು ದೇವರ ಕೋಣೆಯಲ್ಲಿ ಇಡಬಾರದು. ನಟರಾಜನ ವಿಗ್ರಹವನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು. ದೇವರ ಕೋಣೆಯ ಮೇಲೆ ಯಾವುದೇ ಕಾರಣಕ್ಕೂ ಭಾರವಾದ ವಸ್ತುಗಳನ್ನು ಇಡಬಾರದುಇದರಿಂದ ದೋಷಗಳು ಉಂಟಾಗುತ್ತವೆ. ಪೂಜಾ ಕೋಣೆಯಲ್ಲಿ ತಾಮ್ರದ ನಾಣ್ಯಗಳನ್ನು ಇಡುವುದರಿಂದ ದೈವಾನುಗ್ರಹ ಆಗುತ್ತದೆ ಎಂದು ನಂಬಲಾಗಿದೆ. ಧನ್ಯವಾದಗಳು.

ಶಾಸನ ಬದ್ದ ಎಚ್ಚರಿಕೆ.ಜಗತ್ತೇ ನಿಂತಿರುವುದು ನಂಬಿಕೆಗಳ ಆಧಾರದ ಮೇಲೆ.ನಮ್ಮ ಆರ್ಟಿಕಲ್ ಕೇವಲ ಈ ನಂಬಿಕೆಗಳ ಆಧಾರದ ಮೇಲೆ ಮಾತ್ರ ನೆಲೆಯೂರಿ ಇರುವುದರಿಂದ ರಾಶಿ ಭವಿಷ್ಯ ,ಶಾಸ್ತ್ರ ಮತ್ತು ಧರ್ಮ ಇವುಗಳ ಆಸಕ್ತರಿಗೆ ಮಾತ್ರ ಮಾಡಲಾಗಿದೆ.ನಮ್ಮ ಹಿಂದೂ ಧರ್ಮ,ಶಾಸ್ತ್ರಗಳ ಪ್ರಕಾರ ಶಾಸ್ತ್ರ ಹಾಗೂ ರಾಶಿ ಭವಿಷ್ಯ ಯಾವುದೇ ಮೂಡನಂಬಿಕೆ ಅಲ್ಲದೆ ನಂಬಿಕೆ ಆಧಾರದ ಮೇಲೆ ಬಿಂಬಿತವಾಗಿದೆ.ಕರ್ನಾಟಕ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಮೂಡನಂಬಿಕೆ ನಿಷೇಧ ಕಾಯ್ದೆಯನ್ನು ಗೌರವಿಸುತ್ತಾ ನಮ್ಮ ಆರ್ಟಿಕಲ್ಸ್ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳನ್ನು ಒಳಗೊಂಡಿಲ್ಲ.ಈ ಆರ್ಟಿಕಲ್ ಕೇವಲ ಆಸಕ್ತಿ ಹಾಗೂ ನಂಬಿಕೆ ಇದ್ದವರಿಗೆ ಮಾತ್ರ.ಯಾವುದೇ ಹಾನಿ ಮತ್ತು ಅಪಘಾತಗಳಿಗೆ ನಾವು ಹೊಣೆಗಾರರಲ್ಲ.

Leave a Comment