ನೀವು ಇವುಗಳನ್ನು ನೋಡಲೇಬಾರದು

ನಮಸ್ಕಾರ ಸ್ನೇಹಿತರೆ ನೀವು ಇವುಗಳನ್ನು ನೋಡಲೇಬಾರದು ಎನ್ನುವ ಶೀರ್ಷಿಕೆಡಿ ಇವತ್ತಿನ ಈ ಸಂಚಿಕೆಯನ್ನು ಪ್ರಕಟಿಸುತ್ತಾ ಇದ್ದೇವೆ ಹಾಗಾದ್ರೆ ಯಾವುದನ್ನು ನೋಡಬಾರದು ಅಂತ ನೋಡೋಣ ಬನ್ನಿ # ಇತರ ಮೊಬೈಲ್ ಸ್ಕ್ರೀನನ್ನು ಅವರು ಬಳಕೆ ಮಾಡುವಾಗ ನೋಡಬಾರದು ಅದು ಅವರ ವೈಯಕ್ತಿಕ ವಿಷಯ # ಕಿಟಕಿಯಿಂದ ಇಣುಕಿ ಪಕ್ಕದ ಮನೆಯೊಳಗೆ ಏನು ನಡಿತಿದೆ ಅಂತ ನೋಡಬಾರದು ಏಕೆಂದರೆ ಬೇರೆಯವರ ಮನೆ ವಿಷಯ ನಮಗೆ ಯಾಕೆ ಅದು ಅವರ ವೈಯಕ್ತಿಕ

ವಿಷಯ ಇದರಿಂದ ನಮಗೆ ಯಾವುದೇ ಲಾಭವಿಲ್ಲ ಇತರರನ್ನು ಕೀಳಾಗಿ ನೋಡಬಾರದು ಅಥವಾ ಕಾಣಬಾರದು ಏಕೆಂದರೆ ಕುಡಿಯಲು ಯೋಗ್ಯವಿಲ್ಲದ ನೀರು ಸಹ ಬೆಂಕಿಯನ್ನು ಆರಿಸುತ್ತದೆ ನೆನಪಿರಲಿ ಇಲ್ಲಿ ಯಾರೂ ಕೂಡ ಶ್ರೇಷ್ಠರಲ್ಲ ಕನಿಷ್ಠರು ಅಲ್ಲ ಪ್ರತಿಯೊಬ್ಬರಿಗೂ ಅವರದ್ದೇ ಆದ ವೈಶಿಷ್ಟ್ಯಗಳಿವೆ ಯಾರನ್ನು ಯಾರಿಗೂ ಹೋಲಿಸದೆ ಎಲ್ಲರನ್ನೂ ಗೌರವಿಸಿ ಒಂದು ಕೆಲಸವನ್ನು ಮಾಡಬೇಕು ಅಂತ ಅಂದುಕೊಂಡ ತಕ್ಷಣ ನಾವು ಅಷ್ಟು ಸುಲಭವಾಗಿ ಆ ಕೆಲಸವನ್ನು ಶುರು ಮಾಡುವುದಿಲ್ಲ ಮಾಡಬೇಕು ಅಂತ ಅಂದುಕೊಳ್ಳುತ್ತೇವೆ

ಆದರೆ ಯಾರು ಮಾಡುತ್ತಾರೆ ನಾಳೆ ಮಾಡೋಣ ಎಂದು ಹಿಂದಿರುಗಿ ನೋಡಬಾರದು ನೀವು ಮಾಡುವ ಪ್ರತಿಯೊಂದು ಕೆಲಸದಲ್ಲಿ ಆಸಕ್ತಿ ಇರಲಿ # ರಾಜಕೀಯ ಭಾಷಣಗಳನ್ನು ನೋಡಬಾರದು ಇದರಿಂದ ನಿಮ್ಮ ವೈಯಕ್ತಿಕ ಬೆಳವಣಿಗೆಗೆ ಯಾವುದೇ ರೀತಿಯ ಉಪಯೋಗವಿಲ್ಲ # ದಾರಿಯಲ್ಲಿ ಹೋಗುವಾಗ ಹುಡುಗಿಯರನ್ನು ಅಥವಾ ಹುಡುಗರನ್ನು ನೋಡಬಾರದು ಅಥವಾ ಕೆಟ್ಟ ದೃಷ್ಟಿಯಿಂದ ನೋಡಬಾರದು ಏಕೆಂದರೆ ಅವರು ಯಾರದೋ ಗಂಡ ಹೆಂಡತಿ

ತಮ್ಮ ತಂಗಿ ಅಕ್ಕ ಅಣ್ಣ ಆಗಿರಬಹುದು ನಿಮ್ಮ ದೃಷ್ಟಿ ಸ್ವಚ್ಚವಾಗಿರಲಿ # ಯಾರೋ ಜಗಳ ಮಾಡುತ್ತಿದ್ದಾರೆ ಅಂದರೆ ಅದನ್ನು ಹಾಗೆ ಸುಮ್ಮನೆ ನಿಂತು ನೋಡಬಾರದು ಅಥವಾ ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿಯಬಾರದು ಸಾಧ್ಯವಾದರೆ ಜಗಳ ಬಗೆಹರಿಸಲು ಪ್ರಯತ್ನ ಮಾಡಿ # ಅಶ್ಲೀಲ ಫೋಟೋಗಳು ಮತ್ತು ವಿಡಿಯೋಗಳನ್ನು ನೋಡಬಾರದು # ಸ್ನೇಹಿತರೆ ಈ ಮಾಹಿತಿ ಇಷ್ಟ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಶೇರ್ ಮಾಡಿ ಧನ್ಯವಾದಗಳು

Leave a Comment