ನಾವು ಈ ಲೇಖನದಲ್ಲಿ ಸದಾ ಯೌವನವಾಗಿ ಇರಲು ಕೆಲವೊಂದು ಸಲಹೆಗಳು ಯಾವುದು ಎಂದು ತಿಳಿಯೋಣ . 1) ಪ್ರತಿದಿನ ನಿಮ್ಮ ಚರ್ಮವನ್ನು ಸೂರ್ಯನ ಸುಡು ಬಿಸಿಲಿನಿಂದ ರಕ್ಷಿಸಿ . 2) ಹೈಡ್ರೇಟ್ ಆಗಿರಿ ಅಂದರೆ, ಪ್ರತಿದಿನ ಆರರಿಂದ ಎಂಟು ಗ್ಲಾಸ್ ನೀರು ಕುಡಿಯಿರಿ . ಇದರಿಂದ ನೀವು ಹೈಡ್ರೇಟ್ ಆಗಿ ಇರುತ್ತೀರಾ. ಈ ರೀತಿ ಮಾಡುವುದರಿಂದ ನಿಮ್ಮ ಚರ್ಮ ಕಾಂತಿಯುತವಾಗಿ ಇರುತ್ತದೆ.
3) ನೀವು ಸೇವಿಸುವ ಆಹಾರದಲ್ಲಿ ವಿಟಮಿನ್ ಸಿ ಆದಷ್ಟು ಬಳಿಸಿ, ಇದು ನಿಮ್ಮ ತ್ವಚೆಯನ್ನು ರಕ್ಷಿಸಲು ಬಹಳ ಪ್ರಮುಖವಾಗಿದೆ . 4) ಒಂದೇ ಕಡೆ ಕುಳಿತಲ್ಲೇ ಕುಳಿತುಕೊಳ್ಳಬೇಡಿ. ಪ್ರತಿದಿನ 10 ನಿಮಿಷವಾದರೂ ವಾಕಿಂಗ್ ಮಾಡುವುದು ತುಂಬಾ ಅಗತ್ಯ.
5) ಆರೋಗ್ಯಕರ ಸಮತೋಲನ ಆಹಾರವನ್ನು ಸೇವಿಸಿ. ಆಹಾರದಲ್ಲಿ ಹೆಚ್ಚು ಹಸಿರು ತರಕಾರಿ ಇರಬೇಕು. ಮತ್ತು ಪ್ರೋಟೀನ್ ಭರಿತಾ ಆಹಾರ ಸೇವಿಸುವುದು ಒಳ್ಳೆಯದು . 6) ನೀವು ಧೂಮಪಾನ ಅಥವಾ ಮಧ್ಯಪಾನ ಮಾಡುತ್ತಿದ್ದರೆ ನಿಲ್ಲಿಸಿ .
7) ಸ್ನಾನ ಮಾಡುವಾಗ ಹೆಚ್ಚು ಹೊತ್ತು ನಿಮ್ಮ ತ್ವಚೆಯನ್ನು ಉಜ್ಜಬೇಡಿ . ಇದರಿಂದ ನಿಮ್ಮ ತ್ವಚೆಯ ನೇಚುರಲ್ ಗ್ಲೋ ಕಡಿಮೆ ಆಗುತ್ತದೆ . 8) ದಿನಕ್ಕೆ ಎರಡು ಬಾರಿ ಮತ್ತು ಹೆಚ್ಚು ಬೆವರು ಬಂದರೆ ನಿಮ್ಮ ಮುಖವನ್ನು ತೊಳೆಯಿರಿ .9) ನಿದ್ರೆಗೆ ಪ್ರಮುಖ ಆದ್ಯತೆ ನೀಡಿ. ನಿಮ್ಮ ಸೌಂದರ್ಯವನ್ನು ಕಾಪಾಡಲು ಪ್ರಮುಖ ಅಂಶವೆಂದರೆ ಸರಿಯಾದ ನಿದ್ರೆ ದಿನಕ್ಕೆ ಎಂಟು ಗಂಟೆ ನಿದ್ರೆ ಅತ್ಯವಶ್ಯಕ .
10) ಪ್ರತಿದಿನ ಮುಖಕ್ಕೆ ಮಾಯಿಶ್ಚರೈಸರ್ ಹಚ್ಚಿ . ನೀವು ರೋಜ್ ವಾಟರ್ ಹಚ್ಚಬಹುದು. 11) ಬಾದಾಮಿ ಎಣ್ಣೆಯಿಂದ ಮಸಾಜ್ ಮಾಡುವುದರಿಂದ ಚರ್ಮ ಟೈಟ್ ಆಗುತ್ತದೆ. ಹೊಳಪು ಬರುತ್ತದೆ . ಕಲೆಗಳು ಮಾಯವಾಗುತ್ತದೆ .
12) ಸದಾ ಖುಷಿಯಾಗಿರಿ , ಒತ್ತಡವನ್ನು ಕಡಿಮೆ ಮಾಡಲು ಯಾವುದಾದರೂ ಕಾಮಿಡಿ ವಿಡಿಯೋ ನೋಡಿ ಸೌಂದರ್ಯದ ಮತ್ತೊಂದು ಗುಟ್ಟೇನೆಂದರೆ ಅದು ನಗುಮುಖ ಮುಖದ ಬಣ್ಣ ಯಾವುದೇ ಇರಲಿ ನಗುಮುಖವೇ ಒಂದು ಅದ್ಭುತ ಸೌಂದರ್ಯ .