ಕುಂಭ ರಾಶಿಗೆ ಒಂದಾದ್ರೆ ಇನ್ನೊಂದು!

ನಾವು ಈ ಲೇಖನದಲ್ಲಿ ಕುಂಭ ರಾಶಿಯವರ ಗುರು ಪರಿವರ್ತನೆಯ ಬಗ್ಗೆ ತಿಳಿದುಕೊಳ್ಳೋಣ. ಕುಂಭ ರಾಶಿಯವರಿಗೆ ಜನ್ಮ ಶನಿ ನಡೆಯುತ್ತಿರುವುದರಿಂದ ಒಂದಾದ ಮೇಲೆ ಒಂದೊಂದು ತೊಂದರೆಗಳು ಬರುತ್ತಿರುತ್ತವೆ. ಇದರಿಂದ ನಿಮ್ಮಲ್ಲಿ ನಂಬಿಕೆಯನ್ನು ಬಹಳಷ್ಟು ಜನ ಕಳೆದುಕೊಂಡಿರುತ್ತೀರಾ. ಈ ಪರಿಸ್ಥಿತಿಯಲ್ಲಿರುವವರಿಗೆ ಒಂದು ಶುಭ ಸುದ್ದಿಯು ಕಾಯುತ್ತಿದೆ. ಮುಳುಗುವವನಿಗೆ ಹುಲ್ಲುಕಡ್ಡಿ ಆಸರೆಯಾದಂತೆ ನಿಮ್ಮ ಜೀವನದಲ್ಲಿ ಗುರುವು ನಿಮ್ಮನ್ನು ಕೈಹಿಡಿದು ನಡೆಸಲು ಬರುತ್ತಿದ್ದಾನೆ.

ಗುರು ಪರಿವರ್ತನೆಯಿಂದ ಅದ್ಭುತ ಬದಲಾವಣೆಯನ್ನು ಕಾಣುತ್ತೀರ. ಜೀವನದಲ್ಲಿ ಉತ್ಸಾಹ ಜೀವಂತಿಕೆ ನೆಮ್ಮದಿ ಕಾಣುತ್ತೀರಾ. ಗುರುವಿನ ಅನುಗ್ರಹವು ನಿಮಗೆ ಎಷ್ಟು ದಿನ ಇರುತ್ತದೆ ಎಂಬುದರ ಬಗ್ಗೆ ತಿಳಿದುಕೊಳ್ಳೋಣ. ಮೇ ಒಂದು ಎರಡು ಸಾವಿರದ ಇಪ್ಪತ್ನಾಲ್ಕಕ್ಕೆ ವೃಷಭ ರಾಶಿಯಲ್ಲಿ ಗುರು ಪರಿವರ್ತನೆ ಉಂಟಾಗುತ್ತದೆ. ಕುಂಭ ರಾಶಿಯವರಿಗೆ ಚತುರ್ಥ ಸ್ಥಾನ ವಾಗುತ್ತದೆ .ಅಂದರೆ ಇದು ಸುಖ ಸ್ಥಾನ ಎಂದು ಕರೆಯುತ್ತೇವೆ. ಗುರು ಇಲ್ಲಿ ಪಾದರ್ಪಣೆ ಮಾಡಿದಾಗ

ನಿಮಗೆ ಬಹಳಷ್ಟು ವಿಚಾರದಲ್ಲಿ ಸುಖ ಸಂತೋಷ ಆನಂದ ನೆಮ್ಮದಿ ಸಿಗುತ್ತದೆ. ಬಹಳಷ್ಟು ಜನ ಆಲಸಿತನವನ್ನು ಹೊಂದಿರುತ್ತಾರೆ. ಇಂತಹ ಆಲಸಿತನದ ಪ್ರವೃತ್ತಿಯಿಂದ ನೀವು ಹೊರಗೆ ಬರಲಿದ್ದೀರಾ. ಸಂಬಂಧಗಳ ಬಗ್ಗೆ ನಕಾರಾತ್ಮಕ ಚಿಂತನೆಗಳು ಇದ್ದರೆ ಮನೆಯವರ ಬಗ್ಗೆ ಕಾಳಜಿ ಇಲ್ಲದಿದ್ದರೆ ಇಂತಹ ಗುಣವನ್ನು ಗುರುವು ಬದಲಾಯಿಸಲಿದ್ದಾನೆ. ಗುರು ಪರಿವರ್ತನೆಯ ನಂತರ ನಿಮ್ಮ ಜೀವನದಲ್ಲಿ ಒಂದು ಹೊಸ ಹುರುಪು ಅಥವಾ ಹುಮ್ಮಸ್ಸು ಬರಲಿದೆ.

ಯಶಸ್ಸಿನ ಮೆಟ್ಟಿಲೇರಲು ಗುರುವು ನಿಮಗೆ ಶಕ್ತಿಯನ್ನು ಕೊಡುತ್ತಾನೆ. ಆಸ್ತಿ ಪಾಸ್ತಿಗಳ ವಿಚಾರದಲ್ಲಿ ತಕರಾರು ಇದ್ದರೆ ಅದು ಸಂಧಾನದ ಮೂಲಕ ಪರಿಹಾರವಾಗಬಹುದು. ಮನೆಯ ವಾತಾವರಣದಲ್ಲಿ ಶಾಂತಿ ನೆಮ್ಮದಿ ನೆಲೆಸಲು ಶುರುವಾಗುತ್ತದೆ. ಕೈ ಹಾಕಿದ ಕೆಲಸದಲ್ಲಿ ಹಂತವಾಗಿ ಹಂತವಾಗಿ ಗೆಲುವು ನಿಮ್ಮದಾಗುತ್ತದೆ. ಸುಖ ಸ್ಥಾನದಲ್ಲಿ ಗುರುವು ಇದ್ದಾಗ ದೇವರು ಪೂಜೆ ಪುನಸ್ಕಾರ ಮತ್ತು ಭಕ್ತಿಯ ಆಚರಣೆಗೆ ಸಂಬಂಧಿಸಿದಂತೆ ನಿಮ್ಮಲ್ಲಿ ನಂಬಿಕೆ ಬೆಳೆಯುತ್ತದೆ. ದೇವರನ್ನು ನಂಬದೇ ಇದ್ದವರು ಸಹ ಆಸ್ತಿಕರಾಗವ ಸಾಧ್ಯತೆ ಇದೆ.

ಬಹಳಷ್ಟು ಜನರಿಗೆ ಸುತ್ತಾಡುವ ದೊಡ್ಡ ದೊಡ್ಡ ವ್ಯಕ್ತಿಗಳನ್ನು ಭೇಟಿ ಮಾಡುವ ಆಸೆ ಇದ್ದರೆ ಅಥವಾ ಒಡವೆ ತೆಗೆದುಕೊಳ್ಳುವ ವಾಹನ ಖರೀದಿಸುವ ಆಸೆ ಇದ್ದರೆ ಗೃಹ ಉಪಯೋಗಿ ವಸ್ತುಗಳನ್ನು ತೆಗೆದುಕೊಳ್ಳುವ ಇಚ್ಛೆ ಇದ್ದಲ್ಲಿ ಅದನ್ನು ಈಡೇರಿಸಿಕೊಳ್ಳುತ್ತಾರೆ. ತಾಯಿಯ ವಿಚಾರದಲ್ಲಿ ಬಹಳಷ್ಟು ಜನ ಶುಭ ಸಮಾಚಾರಗಳನ್ನು ಕೇಳುತ್ತಾರೆ . ಯಾಕೆಂದರೆ ಗುರುವು ನಾಲ್ಕನೇ ಮನೆಯಲ್ಲಿರುವಾಗ ತಾಯಿಗೆ ಸಂಬಂಧಿಸಿದಂತೆ ಇರುತ್ತದೆ. ಬಹಳಷ್ಟು ಜನ ತಾಯಿಗೆ ಇಷ್ಟವಾಗುವ ರೀತಿಯಲ್ಲಿ ನಡೆದುಕೊಳ್ಳುವವರಿದ್ದೀರಾ.

ತಾಯಿಯ ಆಸೆಯನ್ನು ಈಡೇರಿಸುವುದರಲ್ಲಿ, ಮತ್ತು ಅವರ ಬಗ್ಗೆ ಗಮನ ಕೊಡಲಿದ್ದೀರಾ. ಇಷ್ಟೆಲ್ಲ ಶುಭವಾಗುವ ಸೂಚನೆಯಿದ್ದರೂ ಕೆಲವೊಂದು ಎಚ್ಚರಿಕೆಗಳನ್ನು ನೀವು ಪಾಲಿಸಬೇಕಾಗುತ್ತದೆ. ಯಾಕೆಂದರೆ ಗುರುಬಲವು ಸಂಪೂರ್ಣವಾಗಿ ನಿಮಗೆ ಸಿಕ್ಕಿಲ್ಲ. ಗುರು ನಾಲ್ಕನೇ ಮನೆಯಲ್ಲಿದ್ದಾಗ ಗುರುವು ತಟಸ್ಥನಾಗಿರುತ್ತಾನೆ. ಶುಭ ವಿಚಾರಗಳಲ್ಲೂ ಕೆಲವು ಸಾರಿ ಬದಲಾವಣೆಯಾಗಬಹುದು. ಕೆಲವು ಬಾರಿ ಯೋಚನೆ ಮಾಡದೆ ನೀವು ಹೆಜ್ಜೆ ಇಟ್ಟರೆ ನಿಮಗೆ ಅದು ನಷ್ಟವಾಗಬಹುದು. ಹಣಕಾಸನ್ನು ಬಹಳ ಮಿತವಾಗಿ ಖರ್ಚು ಮಾಡಬೇಕಾಗುತ್ತದೆ. ಸಾಲ ಮಾಡಿ ಸೌಕರ್ಯಗಳನ್ನು ಮಾಡಿಕೊಳ್ಳಲು ಹೋಗಬೇಡಿ.

ಅವಶ್ಯಕತೆ ಇದ್ದಷ್ಟೇ ಕಾಲು ಚಾಚಿ. ಆದಷ್ಟು ಗುರು ಹಿರಿಯರ ಮಾತುಗಳನ್ನು ಪಾಲಿಸಿ. ತಾಳ್ಮೆಯಿಂದ ವರ್ತಿಸಿ. ನಿಮಗೆ ಯೋಚನೆ ಮಾಡುವ ಬುದ್ಧಿಯು ಕಮ್ಮಿ ಆಗಿರುತ್ತದೆ. ನಿಮ್ಮ ಕೈಯಾರೆ ನೀವೇ ನಿಮ್ಮ ನೆಮ್ಮದಿಯನ್ನು ಹಾಳು ಮಾಡಿಕೊಳ್ಳಲು ಹೋಗಬೇಡಿ. ಮತ್ತು ನೆಂಟಸ್ತಿಕೆ ಮದ್ಯ ಮುಜುಗರವಾಗಬಹುದು. ಇಂತಹ ಮುಜುಗರಗಳು ನೀವು ಅವಸರದಲ್ಲಿ ಮಾಡಿಕೊಳ್ಳುವ ತಪ್ಪುಗಳಿಂದ ಉಂಟಾಗುತ್ತದೆ. ಮನೆಯಿಂದ ದೂರವಿರುವ ಮನಸ್ಸನ್ನು ಸಹ ನೀವು ಮಾಡಬಹುದು.

ಒಟ್ಟಿನಲ್ಲಿ ಒಬ್ಬಂಟಿಯಾಗಿ ಕಾಲ ಕಳೆಯುವ ಸಾಧ್ಯತೆ ಹೆಚ್ಚಿರುತ್ತದೆ. ಮನಸ್ಸಿಗೆ ಹತ್ತಿರವಾಗಿರುವವರ ಜೊತೆ ಮಾತಿಗೆ ಮಾತು ಬೆಳೆಯುತ್ತಿದೆ ಎಂದು ತಿಳಿದ ತಕ್ಷಣ‌ ನೀವೇ ತಟಸ್ಥರಾಗಿ ಬಿಡುವುದು ಒಳ್ಳೆಯದು. ಈ ಎಲ್ಲಾ ತೊಂದರೆಗಳು ಹೆಚ್ಚು ದಿನ ಇರುವುದಿಲ್ಲ. ನಿಮಗೆ ಒಳ್ಳೆಯ ದಿನಗಳು ಹತ್ತಿರದಲ್ಲೇ ಇವೆ ನಿರೀಕ್ಷೆಯಲ್ಲಿರಿ. ನಿಮಗೆ ಪೂರ್ಣ ಗುರು ಬಲವು ದೊರಕುವುದು ಮೇ 14 , 2025 ಗುರು ಮಿಥುನ ರಾಶಿಗೆ ಹೋದಾಗ ಅಲ್ಲಿಯವರೆಗೆ ನಿಮಗೆ ಗುರುವಿನ ಅನುಗ್ರಹವು 55 ರಿಂದ 65 ರಷ್ಟು ಇರುತ್ತದೆ.

Leave a Comment