ಶನಿ ನಿಮಗೆ ಹೀಗಿರೋದೇ ಒಳ್ಳೆದಾ?

ನಾವು ಈ ಲೇಖನದಲ್ಲಿ ಮಿಥುನ ರಾಶಿಯವರ ಶನಿ ಗೋಚಾರ ಫಲ, ಹೇಗಿದೆ , ಎಂಬುದನ್ನು ತಿಳಿದುಕೊಳ್ಳೋಣ. 2023 ರಲ್ಲಿ ಮಿಥುನ ರಾಶಿಯವರಿಗೆ , ಶನಿ ಪರಿವರ್ತನೆಯಾಗಿತ್ತು. ಆದರೆ ಈಗ ಶನಿ ಮಿಥುನ ರಾಶಿಯವರ, ಭಾಗ್ಯ ಸ್ಥಾನದಲ್ಲಿದ್ದಾನೆ. ತಟಸ್ಥವಾಗಿದ್ದಾನೆ, ಶುಭ ಲಾಭವನ್ನು ತಂದು ಕೊಡದೆ ಇದ್ದರೂ, ನಷ್ಟವನ್ನು ಮಾತ್ರ ಮಾಡುವುದಿಲ್ಲ. ಆದರೆ ಮಿಥುನ ರಾಶಿಯವರಿಗೆ 50-50 ಅಂತ ಹೇಳುತ್ತಿರುವ ಶನಿ 2024ರಲ್ಲಿ 80 90ರಷ್ಟು, ಲಾಭದಾಯಕವಾಗಿದ್ದಾನೆ.

ಇದನ್ನು ಕೇಳಿ ನಿಮಗೆ ಆಶ್ಚರ್ಯವಾಗಬಹುದು . ಆದರೆ, ಹೆಚ್ಚಿನ ಜನರ ಜೀವನದಲ್ಲಿ ಇದು ನಿಜವಾಗುತ್ತದೆ. ಅಂದುಕೊಂಡ ಕೆಲಸವಾಗುತ್ತದೆ .ಅದೃಷ್ಟ ಕೈ ಹಿಡಿಯುತ್ತದೆ .ಯಾವಾಗ ಆಗುತ್ತದೆ ,ಹೇಗೆ ಆಗುತ್ತದೆ. ಎಂಬುದನ್ನು ತಿಳಿದುಕೊಳ್ಳೋಣ. ಹೊಸ ವರ್ಷ ಬಂತು ಎಂದರೆ ಹೊಸ ನಿರೀಕ್ಷೆಗಳು ಇರುತ್ತದೆ . ಹೊಸ ಅವಕಾಶ ಸಿಗಬಹುದೇನೋ, ಮಾಡುವ ಕೆಲಸದಲ್ಲಿ ಯಶಸ್ಸು, ಸಿಗಬಹುದೇನೋ ,ಹಿರಿಯರ ಆಶೀರ್ವಾದ ಇರಲಿ ಎಂದೆಲ್ಲಾ , ಬಯಸುತ್ತೇವೆ. ಹೊಸ ವರ್ಷದ ಪ್ರಾರಂಭ ಅಷ್ಟೇನೂ, ಚೆನ್ನಾಗಿರುವುದಿಲ್ಲ .

ಒಟ್ಟಾರೆಯಾಗಿ ಹೇಳುವುದಾದರೆ 2024ರಲ್ಲಿ ಯಾವ ಯಾವ ತಿಂಗಳಿನಲ್ಲಿ ಏನನ್ನು ಗೋಚಾರ ಫಲವಿದೆ .ಎಂಬುದನ್ನು ತಿಳಿದುಕೊಂಡು ,ಶನಿ ಶುಭಫಲ ತರುವುದು ಯಾವಾಗ ಎಂಬುದನ್ನು ತಿಳಿದುಕೊಳ್ಳೋಣ. ನಮ್ಮಲ್ಲಿ ಬಹಳಷ್ಟು ಜನ ಶನಿ ಪರಿವರ್ತನೆಯ ನಂತರ ದೂರದ ಊರಿಗೆ ಪ್ರಯಾಣ, ಮಾಡಿರಬಹುದು , ಮಾಡುತ್ತಿರಬಹುದು , ವಿಮಾನದ ಮೂಲಕ ಬಸ್ಸಿನ ಮೂಲಕ ,ಹಡಗಿನ ಮೂಲಕ , ರೈಲಿನ ಮುಖಾಂತರ ನಿಮ್ಮ ಹುಟ್ಟೂರಿನಿಂದ ಬಂದಿರಬಹುದು. ಹಾಗೇನಾದರೂ ಇದ್ದರೆ ,ಅದರಿಂದ ಲಾಭಗಳಾಗಿರಬಹುದು. ಮುಖ್ಯವಾಗಿ ಕೆಲಸಕ್ಕೋಸ್ಕರವೇ , ಪ್ರಯಾಣ ಮಾಡಿದ್ದರೆ ,

ಆ ಬಹಳಷ್ಟು ರೂಪದಲ್ಲಿ ಅಂದರೆ ಈಗ ಹಣ ಆಗಿರಬಹುದು ,ಗೌರವ ಯಶಸ್ಸು ಸಿಗಬಹುದು. ನಿಮ್ಮ ವ್ಯಕ್ತಿತ್ವವನ್ನು ವೃದ್ಧಿ ಮಾಡಿಕೊಳ್ಳುವಂತಹ, ಅವಕಾಶವಿದೆ. ನಂಬಿಕೆ ಮತ್ತು ವಿಶ್ವಾಸವನ್ನು, ಗಳಿಸುತ್ತೀರಾ. ಇದೆಲ್ಲವೂ ಒಂದು ಮಟ್ಟಿಗೆ ನಿಮ್ಮನ್ನು ಹೆಸರುವಾಸಿಯನ್ನಾಗಿ ಮಾಡುತ್ತದೆ. ಭಾಗ್ಯದಲ್ಲಿರುವ ಶನಿ ಯಾವಾಗಲೂ ಮಿಶ್ರಫಲವನ್ನೇ ಕೊಡುತ್ತಾನೆ .ಲಾಭ ಮಾಡಿದರೆ ಇನ್ನೊಂದು ಕಡೆಯಿಂದ ಉಳಿಸಿಕೊಳ್ಳಲು ಸಾಧ್ಯವಾಗದೇ ಇರಬಹುದು . ಕೆಲವರಿಗೆ ಯಶಸ್ಸಿನ ಹಿಂದೆ ಹೋಗಿ ಆರೋಗ್ಯ ಮತ್ತು ನೆಮ್ಮದಿಯನ್ನು ಕಳೆದುಕೊಳ್ಳುವ, ಸಾಧ್ಯತೆ ಇದೆ. ಪ್ರಯಾಣ ಮಾಡುವುದರಿಂದ ಆಯಾಸವಾಗಿ,

ಆರೋಗ್ಯದಲ್ಲಿ ಏರುಪೇರು ಆಗುವ ಸಾಧ್ಯತೆ ಇದೆ . ಯಾವುದಾದರೂ ಮುಖ್ಯವಾದ ವಸ್ತುಗಳನ್ನು ಕಳೆದುಕೊಳ್ಳುವುದು ,ಕೆಲವರು ಮರೆತು ಆಲಸ್ಯತನದಿಂದ, ಕಳೆದುಕೊಳ್ಳುವ ಸಾಧ್ಯತೆ ಹೆಚ್ಚು. ಹಾಗಾಗಿ ಪ್ರಯಾಣ ಮಾಡುವಾಗ ಹೆಚ್ಚು ಹುಷಾರಾಗಿ ಇರುವುದು ಒಳ್ಳೆಯದು. ಇನ್ನು ಕೆಲವರು ಒಂದು ಕಡೆಯಿಂದ ಇನ್ನೊಂದು ಕಡೆ ಹೋಗಿ ಬಸ್ಸು ಕಾರು ಬದಲಾಯಿಸಲು ಹೋಗಿ, ಹೆಚ್ಚು ಹಣ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚು. ಒಟ್ಟಿನಲ್ಲಿ ಹಣ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚು. ಶನಿ ಭಾಗ್ಯ ಸ್ಥಾನದಲ್ಲಿದ್ದಾಗ, ದೇವರ ಮೇಲೆ ಭಯ , ಭಕ್ತಿ , ಪೂಜೆ , ಪುನಸ್ಕಾರ ಮಾಡುವ ಮನಸ್ಸು, ದಾನ ಮಾಡುವ ಮನಸ್ಸು, ಸಹ ಹೆಚ್ಚಿರುತ್ತದೆ .

ಇದೇ ಕಾರಣಕ್ಕೆ ಈ ವರ್ಷ ಖರ್ಚು ಹೆಚ್ಚಾಗುವ, ಸಾಧ್ಯತೆಯು ಇದೆ .ಉದಾಹರಣೆಗೆ ಪೂಜೆ ಪುನಸ್ಕಾರಗಳನ್ನು ಸಣ್ಣಮಟ್ಟಿಗೆ ಮಾಡುವುದು, ಎಂದು ಹೇಳಿಕೊಂಡು ದೊಡ್ಡ ಮಟ್ಟದಲ್ಲಿ ಮಾಡಿ ಹಣ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚು. ಮತ್ತು ತಂದೆ ಸಮಾನರು ಮತ್ತು ತಂದೆಗೋಸ್ಕರ ಆರೋಗ್ಯದ, ಸಲುವಾಗಿ ಖರ್ಚು ಮಾಡಬೇಕಾಗುತ್ತದೆ . ಖರ್ಚು ಜಾಸ್ತಿಯಾಗುತ್ತದೆ. ಎಂದು ಅವರನ್ನು ನಿರಾಕರಿಸಿ ಹಣ ಉಳಿಸಿಕೊಳ್ಳುವ ಪ್ರಯತ್ನ ಮಾಡಿದರೆ ಸಂಬಂಧದಲ್ಲಿ, ಬಿರುಕು ಉಂಟಾಗುತ್ತದೆ .

ಈ ವರ್ಷದಲ್ಲಿ ಇದರ ಬಗ್ಗೆ ತುಂಬಾ ನಿಗ ವಹಿಸಬೇಕು .ಈ ಫಲಗಳು ಹೆಚ್ಚಾಗಿ ಅನ್ವಯಿಸುವುದು , ಜನವರಿ, ಏಪ್ರಿಲ್ ,ಮೇ ,ಜೂನ್, ಮತ್ತು ನವೆಂಬರ್ ಅರ್ಧ ತಿಂಗಳು ಹಾಗೆ ಡಿಸೆಂಬರ್ ಸಂದರ್ಭದಲ್ಲಿ ಹೆಚ್ಚಾಗಿ ಇದನ್ನು ನೆನಪಿಟ್ಟುಕೊಳ್ಳಬೇಕು. ಈ ತಿಂಗಳುಗಳಲ್ಲಿ ಬಿಟ್ಟುಹೋದ ಮಾಸಗಳು ,ನಿಮಗೆ ಅದೃಷ್ಟ ನೆಮ್ಮದಿ ಯಶಸ್ಸು ಶನಿಯಿಂದ ಯಶಸ್ಸನ್ನು, ತಂದುಕೊಡುತ್ತದೆ. ನಿಮಗೆಲ್ಲ ತಿಳಿದಂತೆ ,ಯಾವ ತಿಂಗಳಿನಲ್ಲಿ ನಿಮಗೆ ನೆಮ್ಮದಿ ಇದೆ. ಕೆಲವೊಂದು ಮಂತ್ರಗಳನ್ನು ಪಠಿಸಿದರೆ ಅದರ ಯಶಸ್ಸು ನಿಮಗೆ ಲಭಿಸುತ್ತದೆ. ಮಂತ್ರಗಳನ್ನು ಬೆಳಗ್ಗೆ ಮತ್ತು ಸಂಜೆಯಲ್ಲಿ ಪ್ರಾರ್ಥಿಸಬೇಕು.

ಈ ವರ್ಷ ಶನಿ ಪರಿವರ್ತನೆ ಇಲ್ಲ . ಆದರೆ, ಹಸ್ತನಾಗುವನಿದ್ದಾನೆ. ಪ್ರಮುಖವಾಗಿ ಎರಡು ಘಟನೆಗಳು ಆಗುವುದಿದೆ. ಶನಿ ಹಸ್ತ ಎಂದರೆ, ಒಂದಿಷ್ಟು ದಿನ ಗೋಚರವಾಗುವುದಿಲ್ಲ. ಆದರೆ ಸೂರ್ಯನಿಗೆ ಹತ್ತಿರವಾಗುತ್ತಾ, ಹೋಗುತ್ತಾನೆ. ಭೂಮಿಗೆ ದೂರವಾಗಿ ಹೋಗುವುದರಿಂದ, ಮಿಥುನ ರಾಶಿಯವರಿಗೆ ನಕರಾತ್ಮಕ ಫಲಗಳು ಕಡಿಮೆಯಾಗುತ್ತಾ ಹೋಗುತ್ತದೆ. ವಕ್ರ ಶನಿ ಎಂದರೆ, ನೇರವಾಗಿ ಚಲಿಸುವ ಶನಿ ಹಿಮ್ಮುಖವಾಗಿ ಚಲಿಸಲು ಶುರು ಮಾಡುತ್ತಾನೆ . ಶನಿ ಹಸ್ತನಾಗುವುದು ,

ಫೆಬ್ರವರಿ 11 ರಿಂದ 2024 ಮಾರ್ಚ್ 18 2024. ರ ತನಕ ಈ ವರ್ಷ 37 ದಿನಗಳವರೆಗೆ ಶನಿ ಗೋಚರವಾಗುವುದಿಲ್ಲ. ಆಗ ನಿಮ್ಮ ಕೆಲಸಕ್ಕೆ ಹೆಚ್ಚಿನ ಉಪಯೋಗವಾಗುವಂತಹ, ಸಾಧ್ಯತೆ ಇದೆ .ಅಂದರೆ ವರ್ಗಾವಣೆ, ಮುಂಗಡ ಹಣ ಮತ್ತು ಮಾಡುವ ಕೆಲಸವನ್ನು ಬೇಗ ಮುಗಿಸಿ ಮೆಚ್ಚಿಸಿಕೊಳ್ಳುವುದು.ಬುದ್ಧಿವಂತಿಕೆಯಿಂದ ಪರಿಸ್ಥಿತಿಯನ್ನು ನಿಭಾಯಿಸಿ ಲಾಭ ಮಾಡಿಕೊಳ್ಳಬಹುದು. ಅಥವಾ ಯಾರಾದರೂ ನಿಮಗೆ ತೊಂದರೆ ಕೊಡಬೇಕೆಂದಿದ್ದರೆ, ಆ ತೊಂದರೆಯನ್ನೇ ನಿಮ್ಮ ಪರವಾಗಿ ಲಾಭ ಮಾಡಿಕೊಳ್ಳುವ ಚಾಣಾಕ್ಷ ಬುದ್ಧಿ ನಿರ್ವಹಿಸಬಹುದು . ಷೇರು ಮಾರುಕಟ್ಟೆಯಲ್ಲಿ ಹಾಕಿದಂತಹ, ಬಂಡವಾಳ ದುಪ್ಪಟ್ಟು ಆಗಬಹುದು.

ನಾವು ಬೆಳೆದಂತಹ ಬೆಳೆಗೆ ಮಾರುಕಟ್ಟೆಯಲ್ಲಿ ಒಳ್ಳೆ ಹಣ ಸಿಗಬಹುದು. ಅಥವಾ ದುಪ್ಪಟ್ಟು .ಅದು ಇಲ್ಲವಾದರೆ ಪಿತ್ರಾರ್ಜಿತ ಆಸ್ತಿ ಜಮೀನು, ಬಂಗಾರ ನಿಮ್ಮ ಕೈ ಸೇರಬಹುದು. ಇನ್ನೊಂದು ಪ್ರಮುಖ ವಿಚಾರವೆಂದರೆ, ಕಷ್ಟಪಟ್ಟು ದುಡಿಯಬೇಕು, ಎಂಬುವವರ ಪರವಾಗಿ ಶನಿದೇವರು ನಿಲ್ಲುತ್ತಾರೆ .ನಿಮಗೆಲ್ಲಾ ಗೊತ್ತಿರುವಂತೆ ಶನಿ ಹಸ್ತನಾದಾಗ, ಹೆಚ್ಚು ಕೆಲಸ ಮಾಡದಿದ್ದರೂ, ನಡೆಯುತ್ತದೆ. ಅದೃಷ್ಟ ನಿಮ್ಮ ಪರವಾಗಿರುತ್ತದೆ . ನೀವು ಅಂದುಕೊಂಡಿದ್ದು, ನಡೆಯುತ್ತದೆ. ಮತ್ತೆ ಶನಿಯು ಹೆಚ್ಚು ದಿನ ಹಸ್ತನಾಗಿರುವುದಿಲ್ಲ .

ಶನಿಯ ಬದಲಾವಣೆ ಕೆಲವರ ಜೀವನದಲ್ಲಿ ನಡೆಯದೇ ಇರಬಹುದು. ಆದರೆ ಜೂನ್ 29 2024 ರಿಂದ ನವಂಬರ್ 15 2024 ಈ ದಿನಗಳ ತನಕ ಯಾಕೆಂದರೆ ಈ ದಿನದಲ್ಲಿ ಶನಿಯು ವಕ್ರನಾಗುತ್ತಿದ್ದಾನೆ. ಈ ಸಮಯದಲ್ಲಿ ನಿಮಗೆ ಹೆಚ್ಚಿನ ಲಾಭವನ್ನು ತಂದು ಕೊಡುತ್ತಾನೆ . ಕೆಲವರಿಗೆ ವೇದಿಕೆಯ ಭಯ ಇರಬಹುದು. ಇನ್ನೂ ಕೆಲವರಿಗೆ ಯಾರು ಏನು, ಅಂದುಕೊಳ್ಳುತ್ತಾರೋ, ಎಂದು ಯೋಚಿಸುತ್ತಿರುತ್ತಾರೆ . ಅಂತವರಿಗೆ ಉತ್ಸಾಹ ವನ್ನು ಶನಿ ಕೊಡುತ್ತಾನೆ. ಇಷ್ಟೇ ಅಲ್ಲದೆ ಹೊಸ ಅವಕಾಶಗಳು ಗೌರವ ಬೆಂಬಲಗಳು ನಿಮಗೆ ದೊರೆಯುತ್ತದೆ .ಇನ್ನೊಂದು ವಿಚಾರವೆಂದರೆ ದೇವರ ಮೇಲೆ ಭಕ್ತಿ ಕಡಿಮೆಯಾಗಿದ್ದರೆ ,ತಲೆಯಲ್ಲಿ ನಕಾರಾತ್ಮಕ ಯೋಚನೆಗಳು ಸುಳಿಯುತ್ತಿದ್ದರೆ, ಇಂತಹವುಗಳೆಲ್ಲವೂ, ದೂರವಾಗುವ ಸಾಧ್ಯತೆ ಇದೆ.

ತೀರ್ಥ ಕ್ಷೇತ್ರಗಳ ದರ್ಶನ ಮಾಡಬಹುದು.ಪ್ರವಾಸ ಮಾಡಬಹುದು . ಕೆಲವರಂತೂ ಅವರ ಒತ್ತಡದ ಜೀವನದಿಂದ ಆಚೆ ಬಂದು ವಿಶ್ರಾಂತಿ ಪಡೆಯಬಹುದು . ಕೆಲವರಂತೂ ವಿದೇಶಿ ಪ್ರವಾಸ ಮಾಡಬಹುದು . ಒಟ್ಟಿನಲ್ಲಿ ಜೀವನದಲ್ಲಿ ಸುಖ ಶಾಂತಿ ನೆಮ್ಮದಿಯನ್ನು ಕಾಣಬಹುದು. ಇನ್ನು ಸಂಸಾರದಲ್ಲಿ ಮಕ್ಕಳ ವಿಚಾರದಲ್ಲಿ ಒಳ್ಳೊಳ್ಳೆಯ ಸಮಾಚಾರಗಳನ್ನು ಕೇಳುತ್ತೀರಾ . ಮತ್ತು ಅಜ್ಜ ಅಜ್ಜಿಯರಲ್ಲಿ ಮತ್ತು ಮಕ್ಕಳಲ್ಲಿ ಒಳ್ಳೆಯ ಬಾಂಧವ್ಯ ಬೆಳೆಯುತ್ತದೆ . ಹಿರಿಯರಿಂದ ಒಳ್ಳೆಯ ಪಾಠವನ್ನು ಮಕ್ಕಳು ಕಲಿಯುತ್ತಾರೆ .

ಮತ್ತು ಬಹಳಷ್ಟು ಜನರು ಮುಂದಾಲೋಚನೆ ಮಾಡಿ ಮಾತನಾಡಬೇಕು. ಎಂಬ ಪಾಠವನ್ನು ಕಲಿಯುತ್ತಾರೆ. ಇನ್ನು ಆರೋಗ್ಯದ ವಿಚಾರಕ್ಕೆ ಬಂದರೆ ವಕ್ರ ಶನಿಯಿಂದ ಆರೋಗ್ಯ ಸಮಸ್ಯೆ ಇರುವುದಿಲ್ಲ. ಬಿಪಿ ಶುಗರ್ ಇರುವವರಿಗು ಸಹ ಆರೋಗ್ಯ ಸಮಸ್ಥಿತಿಯಲ್ಲಿರುತ್ತದೆ ಅಂತಹ ತೊಂದರೆ ಏನು ಇರುವುದಿಲ್ಲ .ಕಾಲು ನೋವು, ತೊಡೆ ನೋವು , ಪಾದದ ನೋವು ಅಥವಾ ಎಲ್ಲಾದರೂ ಬಿದ್ದು ನೋವು ಮಾಡಿಕೊಂಡಿದ್ದರು ಸಹ ಪರಿಹಾರ ಸಿಗುವ ಕಾಲವಿದು. ಇಂತಹ ಸಕಾರಾತ್ಮಕ ಬೆಳವಣಿಗೆಯನ್ನು,

ನೀವು ಜೂನ್ 29ರ ನಂತರ ನಾಲ್ಕು ವರೆ, ತಿಂಗಳುಗಳ ಕಾಲ ಎದುರು ನೋಡಬಹುದು .ನವಂಬರ್ 15ರ ತನಕ ಖುಷಿ ಸಂತೋಷ ನಿಮ್ಮದಾಗಿರುತ್ತದೆ. ಉತ್ತರದಲ್ಲಿ ಶನಿ ನೇರ ಚಲನೆ ಶುರು ಮಾಡಿದ ನಂತರ ಹೇಳಬಹುದು .ಆರಕ್ಕೇರದ ಮೂರಕ್ಕೆ ಇಳಿಯದ ಜೀವನ ಮಿಥುನ ರಾಶಿಯವರದು ಆಗಿರುತ್ತದೆ. ಒಟ್ಟಿನಲ್ಲಿ 2024 ವರ್ಷ ನಿಮ್ಮ ಜೀವನದಲ್ಲಿ ನೆಮ್ಮದಿ ಇರುತ್ತದೆ . ಖುಷಿಯಾಗಿ ನೆಮ್ಮದಿಯಾಗಿರಿ.

Leave a Comment