ಈ ಐದು ಪೂಜಾ ಸಾಮಾಗ್ರಿಗಳು ಕೈ ಜಾರಿ ಬಿದ್ದರೆ ಎದುರಾಗುವುದಂತೆ ಭಾರೀ ಅಶುಭ ಫಲ

ಈ ಐದು ಪೂಜಾ ಸಾಮಾಗ್ರಿಗಳು ಕೈ ಜಾರಿ ಬಿದ್ದರೆ ಎದುರಾಗುವುದಂತೆ ಭಾರೀ ಅಶುಭ ಫಲ.
ಸನಾತನ ಧರ್ಮದಲ್ಲಿ ಪೂಜೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ಹಾಗೇ ಹೆಚ್ಚಿನ ನಿಯಮಗಳನ್ನು ಕೂಡ ಸನಾತನ ಧರ್ಮದ ಪೂಜೆ ವಿಧಿ ವಿಧಾನಗಳನ್ನು ಒಳಗೊಂಡಿವೆ. ಪೂಜೆಯ ಸಮಯದಲ್ಲಿ ಯಾವ ವಸ್ತುಗಳು ಕೈಯಿಂದ ಕೆಳಗೆ ಬಿದ್ದರೆ ಅಶುಭವೆಂದು ಪರಿಗಣಿಸಲಾಗುತ್ತದೆ? ಈ ವಸ್ತುಗಳು ನಮ್ಮ ಕೈಯಿಂದ ಬೀಳದಂತೆ ಎಚ್ಚರವಹಿಸಿ.

ಭಯ-ಭಕ್ತಿಯಿಂದ ಒಳ್ಳೆಯದನ್ನು ಬಯಸಿ ಪೂಜೆ ಮಾಡುತ್ತಿರುತ್ತೇವೆ. ಆದರೇ ಈ ಸಂದರ್ಭದಲ್ಲಿ ಕೈನಲ್ಲಿದ್ದ ಪೂಜೆ ವಸ್ತು ಕೆಳಗೆ ಬೀಳುತ್ತದೆ. ಯಾವತ್ತೂ ಆಗದೇ ಇರೋದು ಇಂದೇಕೆ ಹೀಗೆ ಆಯ್ತು ಎನ್ನುವ ಚಿಂತೆ ನಮ್ಮನ್ನು ಕಾಡುತ್ತದೆ. ಅದಕ್ಕೆ ಉತ್ತರ ತಿಳಿದುಕೊಳ್ಳೋಣ. ಅದೃಷ್ಟದ ಸಂಕೇತ ಎಂದೇ ಹೇಳಲಾಗುತ್ತದೆ. ವ್ಯಕ್ತಿಯ ಕೈಯಿಂದ ಕುಂಕುಮ ಬಿದ್ದರೆ ಏನಾಗುತ್ತದೆಂದರೆ

ಕುಂಕುಮ ಅಂದರೆ ಮಂಗಳಕರ ಮತ್ತು ಅದೃಷ್ಟದ ಸಂಕೇತ ಎಂದೇ ಹೇಳಲಾಗುತ್ತದೆ. ವ್ಯಕ್ತಿಯ ಕೈಯಿಂದ ಕುಂಕುಮ ಬಿದ್ದರೆ, ಕುಟುಂಬ ಅಥವಾ ಗಂಡನ ಮೇಲೆ ಕೆಲವು ರೀತಿಯ ತೊಂದರೆಗಳು ಎದುರಾಗಲಿವೆ ಎಂದರ್ಥ. ಹೀಗಾದಾಗ ನೆಲಕ್ಕೆ ಬಿದ್ದ ಕುಂಕಮವನ್ನು ಕಾಲಿನಿಂದ ಸ್ವಚ್ಛಗೊಳಿಸಬಾರದು ಅಥವಾ ಪೊರಕೆ ಬಳಸಬಾರದು. ಸ್ವಚ್ಛವಾದ ಬಟ್ಟೆಯಿಂದ ಎತ್ತಿಕೊಂಡು ನೀರಿನಲ್ಲಿ ಹರಿಯಲು ಬಿಡಬೇಕು. ಕೆಳಗೆ ಬಿದ್ದಂತಹ ಅರಿಶಿನ-ಕುಂಕುಮವನ್ನು ಪುನಃ ಬಳಸಬಾರದು.

ನೀರು ತುಂಬಿದ ಕಳಶ: ಪೂಜೆಗಾಗಿ ಕಳಶದಲ್ಲಿ ನೀರು ಹೊತ್ತೊಯ್ಯುವಾಗ ಕೈಯಿಂದ ಬಿದ್ದರೆ ಅಶುಭವೆಂದು ನಂಬಲಾಗಿದೆ. ಕಳಶದ ನೀರು ಕೆಳಗೆ ಬೀಳುತ್ತಿದೆ ಎಂದರೆ ಪೂರ್ವಜರು ಕೋಪಗೊಂಡಿದ್ದಾರೆ ಎಂದರ್ಥ. ಹೀಗಾದಾಗ ಕುಟುಂಬದಲ್ಲಿ ಸಮಸ್ಯೆ ಉಂಟಾಗುತ್ತದೆ. ದೇವರ ವಿಗ್ರಹ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ದೇವರ ವಿಗ್ರಹವನ್ನು ಶುಚಿಗೊಳಿಸುವಾಗ ಅಥವಾ ಎತ್ತುವಾಗ ಬಹಳ ಎಚ್ಚರಿಕೆಯಿಂದ ಇರಬೇಕು. ಕೈಯಿಂದ ಬಿದ್ದು ದೇವರ ವಿಗ್ರಹವನ್ನು ಒಡೆಯುವುದು ಅಶುಭವೆಂದು ಪರಿಗಣಿಸಲಾಗಿದೆ. ಇದರಿಂದಾಗಿ ಕುಟುಂಬದ ಹಿರಿಯ ಸದಸ್ಯರ ಮೇಲೆ ಬಿಕ್ಕಟ್ಟು ಉಂಟಾಗಲಿದೆ.

ಪೂಜೆಯ ದೀಪ: ಒಬ್ಬ ವ್ಯಕ್ತಿಯ ಒಳ್ಳೆಯ ಅಥವಾ ಕೆಟ್ಟ ಸಮಯದ ಮೊದಲು ದೇವರು ಕೆಲವು ಸೂಚನೆಗಳನ್ನು ನೀಡುತ್ತಾನೆ ಎಂದು ನಂಬಲಾಗಿದೆ. ಇವುಗಳನ್ನು ಸಮಯೋಚಿತವಾಗಿ ಅರ್ಥಮಾಡಿಕೊಂಡರೆ, ಬಹಳಷ್ಟು ಮಟ್ಟಿಗೆ ಬರಬಹುದಾದ ಸಮಸ್ಯೆಗಳನ್ನು ತಪ್ಪಿಸಬಹುದು. ಪೂಜೆಯ ದೀಪವು ಕೈಯಿಂದ ಬೀಳುವುದು ಎದುರಾಗಬಹುದಾದ ಸಂಕಟದ ಸಂಕೇತ. ಒಂದು ವೇಳೆ ಈ ತಪ್ಪು ಅಥವಾ ಅಶುಭ ಘಟನೆ ನಡೆದು ಹೋದರೆ ಚಿಂತಿಸದೇ ತಕ್ಷಣ ದೇವರಿಗೆ ಕೈಮುಗಿದು ಕ್ಷಮೆಯನ್ನು ಕೇಳಿ ದೀಪವನ್ನು ಎತ್ತಿ ಮತ್ತೆ ಪ್ರತಿಷ್ಠಾಪಿಸಿ.

ಇದು ನಿಮ್ಮ ಜೀವನದಲ್ಲಿ ನಡೆಯಬಹುದಾದ ಅಶುಭ ಘಟನೆಗಳನ್ನು ತಡೆಯಲು ಸಹಕರಿಸುತ್ತದೆ.
ಪ್ರಸಾದ: ಪ್ರಸಾದ ನೆಲಕ್ಕೆ ಬಿದ್ದರೆ ಅದನ್ನು ಅಶುಭ ಎಂದೇ ಕರೆಯಲಾಗುತ್ತದೆ. ಪ್ರಸಾದ ನೆಲಕ್ಕೆ ಬಿದ್ದರೆ ತಕ್ಷಣ ಅದನ್ನು ಎತ್ತಿಕೊಂಡು ಹಣೆಗೆ ಒತ್ತಿಕೊಳ್ಳಬೇಕು. ಅದನ್ನು ತಿನ್ನದಿದ್ದರೆ, ನೀರಿನಲ್ಲಿ ಎಸೆಯಬೇಕು ಅಥವಾ ಪಾತ್ರೆಯಲ್ಲಿ ಹಾಕಬೇಕು. ಈ ಮೇಲಿನ ಐದು ವಸ್ತುಗಳು ಕೈ ತಪ್ಪಿ ಬಿದ್ದಾಗ ಏನು ಮಾಡಬೇಕು ಎಂಬುದನ್ನು ಕೂಡ ಹೇಳಲಾಗಿದೆ. ಇವುಗಳನ್ನು ನೀವು ಕೂಡ ಅನುಸರಿಸಬಹುದು.

Leave a Comment