ಕಟಕ ರಾಶಿಗಿದೆ ಇವಿಷ್ಟು!

0

ನಾವು ಈ ಲೇಖನದಲ್ಲಿ 2024ರಲ್ಲಿ ಕಟಕ ರಾಶಿಯ ಶನಿ ಫಲ ಹೇಗೆ ಇರುತ್ತದೆ. ಎಂದು ತಿಳಿದು ಕೊಳ್ಳೋಣ . ಶನಿ ಅಂದ ತಕ್ಷಣ ಬಹಳಷ್ಟು ಜನರಿಗೆ ಹೆದರಿಕೆ ಉಂಟಾಗಿರುತ್ತದೆ . ಯಾಕೆಂದರೆ ಅಷ್ಟಮ ಶನಿ ಕಾಟ . ಅಂದು ಕೊಂಡಿರುವುದು ಉಲ್ಟಾ ಆಗುತ್ತಿರುತ್ತದೆ. ಒಂದೂ ಕೆಲಸ ಆಗುತ್ತಿರುವುದಿಲ್ಲ . ಆಯುಷ್ಯ ಸ್ಥಾನದಲ್ಲಿ ಕೂತಿರುವ ಶನಿಯಿಂದ ಬಹಳಷ್ಟು ರೀತಿಯ ಸಮಸ್ಯೆ ಎದುರಿಸುವ ಸಾಧ್ಯತೆ ಕೂಡ ಇದೆ. ಆದರೆ 2024ರ ವರ್ಷ ಅದೃಷ್ಟ , ಧನ ಲಾಭ ತಂದು ಕೊಡುವುದು ಅಲ್ಲದೇ ನಿಮ್ಮಲ್ಲಿ ಇರುವ ಭಯ , ಅನುಮಾನವನ್ನು ತೆಗೆದು ಹಾಕುತ್ತದೆ.

ಇಂತಹ ಒಂದು ದೊಡ್ಡ ಬದಲಾವಣೆ ಆಗೋದಿದೆ. ಕೆಸರಲ್ಲಿ ಅರಳಿರುವ ಕಮಲದ ರೀತಿ ಹಲವಾರು ನಕಾರಾತ್ಮಕ ವಿಚಾರದ ಮಧ್ಯೆ ಶನಿ ನಿಮಗೆ ತುಂಬಾ ಧನಾತ್ಮಕ ಫಲಗಳನ್ನು ಕೊಡುತ್ತಾನೆ. 2023 ರ ಜನವರಿ 17 ರಿಂದ ಶನಿ 8ನೇ ಮನೆ ಆಗಿರುವ ಕುಂಭ ರಾಶಿಯಲ್ಲೇ ಇದ್ದಾನೆ. ಆದರೆ ಈ 8 ನೇ ಮನೆ ನೀವು ಮಾಡುವ ಕೆಲಸವನ್ನು ನಿಧಾನ ಮಾಡುತ್ತದೆ. ಹಾಗೆಯೇ ಎಲ್ಲಾ ಕೆಲಸಕ್ಕೂ ಅಡೆ – ತಡೆ ತಂದಿಡುತ್ತದೆ. ಕೆಲಸದಲ್ಲಿ ಅಸಡ್ಡೆ ಮಾಡುವ ಸಾಧ್ಯತೆ ಇದೆ. ಕೆಲಸದಲ್ಲಿ ಹಲವಾರು ರೀತಿಯ ತಡೆಗಳು ಆಗುವ ಸಾಧ್ಯತೆ ಇದೆ.

ಪಿತ್ರಾರ್ಜಿತ ಆಸ್ತಿಗಳು ಇದ್ದರೆ, ವರ್ಗಾವಣೆ ಆಗೋದಕ್ಕೆ ತುಂಬಾ ಸಮಯ ತೆಗೆದುಕೊಳ್ಳುತ್ತದೆ . ಒಂದಲ್ಲಾ ಒಂದು ಸಮಸ್ಯೆಗಳು ಇದ್ದೇ ಇರುತ್ತದೆ . ಒಂದು ಕೋರ್ಟ್ ಕೇಸ್ ಮುಗಿಯುವ ಹೊತ್ತಿಗೆ ಮತ್ತೊಂದು ಮನಸ್ತಾಪಗಳು ಶುರುವಾಗಿರುತ್ತದೆ . ಹೀಗೆ ರಗಳೆಗಳಲ್ಲಿ ದಿನಗಳನ್ನು ಕಳೆದಿರುತ್ತಾರೆ . 2023ರ ರಿಂದ ಇವತ್ತಿನ ತನಕ ನಿಮ್ಮ ಜೀವನವನ್ನು ಒಂದು ಸಲ ತಿರುಗಿ ನೋಡಿದರೆ , ಯಾವ ರೀತಿಯಾದ ಸಮಸ್ಯೆಗಳು ಇತ್ತು ಎಂಬುದು ತಿಳಿಯುತ್ತದೆ . ಇದೇ ರೀತಿಯ ಸಮಸ್ಯೆಗಳು 2024ರಲ್ಲೂ ಸ್ವಲ್ಪ ದಿನಗಳ ಕಾಲ ನಡೆಯುತ್ತದೆ .

ಈ ವರ್ಷ ನೀವು ಸಾಧ್ಯವಾದಷ್ಟು ಬೆಂಕಿ ಮತ್ತು ವಿದ್ಯುತ್ ಈ ವಿಷಯದಲ್ಲಿ ಎಚ್ಚರ ವಹಿಸಬೇಕು . ಎಡವಟ್ಟುಗಳಿಂದ ಕೆಲವರಿಗೆ ದೊಡ್ಡ ಅಪಾಯ ಆಗುವ ಸಾಧ್ಯತೆ ಇದೆ . ವಾಹನಗಳನ್ನು ಚಾಲನೆ ಮಾಡುವಾಗ ಗಡಿಬಿಡಿಯಿಂದ ವೇಗವಾಗಿ ಪ್ರಯಾಣ ಮಾಡಬೇಡಿ . ಎಚ್ಚರಿಕೆಯಿಂದ ವಾಹನಗಳನ್ನು ಚಲಾಯಿಸಬೇಕು . ಹಾಗೆಯೇ ಗಂಡ ಹೆಂಡತಿ ಸಂಬಂಧದಲ್ಲೂ ಸ್ವಲ್ಪ ಭಿನ್ನಾಭಿಪ್ರಾಯಗಳು ಕಾಡುವ ಸಾಧ್ಯತೆ ಇದೆ. ಕೆಲವರು ಉದ್ವೇಗದಿಂದ ಬಳಲುವ ಸಾಧ್ಯತೆ ಇದೆ .

ಇನ್ನು ಕೆಲವರಿಗೆ ಒತ್ತಡ ಹೆಚ್ಚಾಗುವ ಸಾಧ್ಯತೆ ಇದೆ . ಯೋಚನೆ ಮಾಡದೆ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಮತ್ತು ಮಾತುಗಳನ್ನು ಕೊಡುವುದು ಮಾಡಬೇಡಿ . ನಕಾರಾತ್ಮಕತೆಯ ಕಡೆ ವಾಲುವ ಮನಸ್ಸನ್ನು ನೀವು ನಿಯಂತ್ರಣದಲ್ಲಿ ಇಡಬೇಕಾಗುತ್ತದೆ . ಇದಕ್ಕೆ ಪರಿಹಾರ ಶನಿಯ ಜಪ ಮಾಡುವುದು . ಶನಿಗೆ ಸಂಬಂಧಪಟ್ಟ ಮಂತ್ರವನ್ನು ಪಠನೆ ಮಾಡುವುದು . ಇಂತಹ ಹಲವಾರು ನಕಾರಾತ್ಮಕ ವಿಚಾರದ ಮಧ್ಯೆ ಶನಿ ನಿಮಗೆ ಒಳ್ಳೆಯ ಧನಾತ್ಮಕ ಫಲಗಳನ್ನು ಕೊಡುತ್ತಾನೆ .

ಖಾಲಿ ಕೈಗೆ ಧನಾಗಮನ ಆಗುವ ಸಾಧ್ಯತೆ ಇದೆ . ಕಟಕ ರಾಶಿಯವರಿಗೆ ಈ ವರ್ಷ ಶನಿ ಪರಿವರ್ತನೆ ಆಗುವುದಿಲ್ಲ . ಆದರೆ ಶನಿ ಹಸ್ತನಾಗುತ್ತಾನೆ . ಶನಿ ಹಿಮ್ಮುಖ ಚಲನೆ ಕೂಡ ಶುರು ಮಾಡುತ್ತಾನೆ . ಇದು ನಿಮ್ಮ ಮಟ್ಟಿಗೆ ತುಂಬಾ ಪ್ರಮುಖವಾಗುತ್ತದೆ. ಮೊದಲನೆಯದಾಗಿ ಈ ವರ್ಷದ ಫೆಬ್ರವರಿ 11 ಕ್ಕೆ ಶನಿ ಹಸ್ತನಾಗುತ್ತಾನೆ. ಶನಿ ಹಸ್ತ ಎಂದರೆ ಸೂರ್ಯನಿಗೆ ಹತ್ತಿರ ಆಗುತ್ತವೆ. ಭೂಮಿಯಿಂದ ದೂರ ಹೋಗುತ್ತಾನೆ. ಒಂದಷ್ಟು ದಿನ ಶನಿ ನಮಗೆ ಗೋಚರ ಆಗುವುದಿಲ್ಲ .

ಹಾಗಾಗಿ ನಕಾರಾತ್ಮಕ ಪ್ರಭಾವ ಕಡಿಮೆಯಾಗಲು ಶುರುವಾಗುತ್ತದೆ. ನಮಗೆ ತೊಂದರೆ ಕೊಡುವವರು ದೂರ ಹೋಗುತ್ತಾರೆ ಎಂದಾಗ ನಮಗೆ ಕಿರಿಕಿರಿ ತಪ್ಪುತ್ತದೆ . ಶನಿಯ ವಿಚಾರದಲ್ಲೂ ಹಾಗೆ ನಡೆಯುತ್ತದೆ. ಆದರೆ ಬಹಳಷ್ಟು ವಿಚಾರದಲ್ಲಿ ಒಳ್ಳೆಯ ಫಲಿತಾಂಶ ಸಿಗಲಿದೆ. ಗಂಡ – ಹೆಂಡತಿಯರ ಮನಸ್ತಾಪಗಳು ಸ್ವಲ್ಪ ಮಟ್ಟಿಗೆ ದೂರವಾಗುತ್ತದೆ. ಜಗಳ ಸರಿ ಹೋಗುವ ಸಾಧ್ಯತೆ ಇದೆ. ನೀವು ಕೆಲಸ ಮಾಡುವ ಜಾಗದಲ್ಲಿ ಹೊಗಳಿಕೆಯನ್ನು ಗಳಿಸಬಹುದು . ಈ ಸಂದರ್ಭದಲ್ಲಿ ಕೂಡ ಸದೃಢತೆ ಬರುತ್ತದೆ .

ಪದೇ ಪದೇ ನೀವು ನಿರ್ಧಾರಗಳನ್ನು ಬದಲಾಯಿಸುವುದಿಲ್ಲ . ಅನಿರೀಕ್ಷಿತವಾಗಿ ದೊಡ್ಡಮಟ್ಟದ ಆದಾಯ ಗಳಿಸುವ ಸಾಧ್ಯತೆ ಇದೆ . ಯಾವುದೋ ವಿಚಾರದಲ್ಲಿ ಸಾಧನೆಯನ್ನು ಮಾಡಿ ಕೀರ್ತಿ ಗಳಿಸಬಹುದು . ಸೋಲು ಕಾಣುತ್ತಿದ್ದವರಿಗೆ ಗೆಲುವು ಕಾಣುವ ಸಾಧ್ಯತೆ ಇದೆ . ಇವರು ನಿರ್ಧಾರವನ್ನು ತೆಗೆದುಕೊಳ್ಳುವಾಗ ಅದು ಯಾವಾಗಲೂ ದೃಢವಾಗಿರುತ್ತದೆ . ಎಲ್ಲೂ ಎಡವದೇ ಸರಿಯಾದ ದಾರಿಯಲ್ಲಿ ಹೋಗುತ್ತಾರೆ . ವರ್ಗಾವಣೆ ಬೇಕು ಎಂದು ಪ್ರಯತ್ನ ಮಾಡುತ್ತಿದ್ದರು ಫೆಬ್ರವರಿ 11ರ ನಂತರ ನಡೆಯುತ್ತದೆ .

ಸಣ್ಣ ಪುಟ್ಟ ಒತ್ತಡಗಳು ಬರುತ್ತವೆ . ಏಕೆಂದರೆ ನಿರ್ಧಾರಗಳನ್ನು ಬದಲಾಯಿಸಲು ಹೋಗಬೇಡಿ . ಶನಿ ಹಸ್ತನಾಗುವುದು ಕಡಿಮೆ ಅವಧಿಯಲ್ಲಿ ಆಗಿರುವುದರಿಂದ ನಿರ್ಧಾರ ಬದಲಾಯಿಸುವುದು ಒಳ್ಳೆಯದಲ್ಲ,
ಮಾರ್ಚ್ 18ಕ್ಕೆ ಮತ್ತೆ ಶನಿ ಉದಯ ಆಗುತ್ತದೆ . ಹಾಗಾಗಿ ಕೆಲವರ ಮನಸ್ಸು ನಕಾರಾತ್ಮಕತೆಯ ಕಡೆ ವಾಲುತ್ತದೆ . ಮತ್ತೆ ಅಷ್ಟಮ ಶನಿ ಪ್ರಭಾವ ಮುಂದುವರಿಯುತ್ತದೆ . ಜೂನ್ ಕೊನೆಯ ತನಕ ಇರುತ್ತದೆ . ಜೂನ್ ಕೊನೆಯಿಂದ ಪರಿಹಾರ ಸಿಗುವ ಸಾಧ್ಯತೆ ಇದೆ . ಜೂನ್ 29ಕ್ಕೆ ನೇರ ಚಲನೆಯಿಂದ ಶನಿ ಹಿಮ್ಮುಖ ಚಲನೆಯನ್ನು ಶುರು ಮಾಡುತ್ತಾನೆ . ಇದಕ್ಕೆ ವಕ್ರ ಶನಿ ಎಂದು ಕೂಡ ಕರೆಯುತ್ತಾರೆ .

ವಕ್ರ ಶನಿಯಿಂದ ಏನು ಆಗುತ್ತದೆ ಎಂದರೆ , ಅಷ್ಟಮ ಶನಿಯಲ್ಲಿ ಇದ್ದ ಫಲಗಳು ಮಿಶ್ರ ಫಲಗಳು ಆಗುವ ಸಾಧ್ಯತೆ ಇದೆ . ಸ್ವಲ್ಪ ಸಮಾಧಾನ ಸಿಗುವ ಸಮಯ ಆಗುತ್ತದೆ . ಒಂದು ಮಟ್ಟಕ್ಕೆ ಹಣ ಓಡಾಡಲು ಶುರುವಾಗುತ್ತದೆ . ಆದಾಯದಲ್ಲಿ ನಷ್ಟ ಆಗುವುದಿಲ್ಲ .ಆದರೆ ಬರುವ ಲಾಭ ಸಾಧಾರಣವಾಗಿ ಇರುತ್ತದೆ . ಕುಟುಂಬದಲ್ಲಿ ಅನುಕೂಲಕರವಾದ ವಾತಾವರಣ ನಿರ್ಮಾಣವಾಗುತ್ತದೆ . ಸಾಂತ್ವನ ತೋರಿಸುವುದರಲ್ಲಿ ಕುಟುಂಬದವರು ನಿಮ್ಮ ಜೊತೆಗೆ ಇರುತ್ತಾರೆ . ನಿಮ್ಮ ಆರೋಗ್ಯದಲ್ಲಿ ವ್ಯತ್ಯಾಸ ಆದಾಗ ನಿಮ್ಮ ಹಾರೈಕೆಗೆ ನಿಮ್ಮ ಕುಟುಂಬದವರು ಜೊತೆಯಲ್ಲೇ ಇರುತ್ತಾರೆ .

ಒಟ್ಟಾರೆಯಾಗಿ ನಿಮ್ಮನ್ನು ಪ್ರೋತ್ಸಾಹ ಮಾಡುವುದಕ್ಕೆ ನಿಮ್ಮ ಕುಟುಂಬ ಯಾವಾಗಲೂ ನಿಮ್ಮ ಜೊತೆ ಇರುತ್ತದೆ. ವಕ್ರ ಶನಿಯ ಪ್ರಭಾವದಿಂದ ಕುಟುಂಬದ ಸಹಾಯ ಚೆನ್ನಾಗಿರುತ್ತದೆ. ನೀವು ಆರೋಗ್ಯದ ವಿಚಾರದಲ್ಲಿ ಹೆಚ್ಚಿನ ಎಚ್ಚರಿಕೆ ತೆಗೆದುಕೊಳ್ಳುವುದು ಒಳ್ಳೆಯದು . ಹೆಚ್ಚಿನ ಒತ್ತಡ ತೆಗೆದುಕೊಂಡು ಕೆಲಸ ಮಾಡುವ ಪರಿಸ್ಥಿತಿ ಬರಬಹುದು . ನವೆಂಬರ್ 15 ರಿಂದ ಶನಿ ನೇರ ಚಲನೆ ಶುರು ಮಾಡುವುದರಿಂದ ಅಷ್ಟಮ ಶನಿ ಪ್ರಭಾವ ಹೆಚ್ಚಾಗುತ್ತದೆ . ಒಟ್ಟಾರೆಯಾಗಿ ಹೇಳುವುದಾದರೆ , 2024 ನಿಮ್ಮ ಪಾಲಿಗೆ ಒಂದು 60 ರಿಂದ 65% ಶುಭ ತರುತ್ತದೆ ಎಂದು ಹೇಳಬಹುದು .

ಒಂದಷ್ಟು ಫಲಗಳು ನಿಮ್ಮ ಜಾತಕದ ಮೇಲೆ ನಿಂತಿರುತ್ತದೆ . ಇವುಗಳು ಗೋಚರ ಫಲಗಳು ಆಗಿರುತ್ತವೆ . ಕೊನೆಯದಾಗಿ ಯಾವ ಯಾವ ತಿಂಗಳು ನೀವು ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಸಲಾಗುತ್ತದೆ . ಶನಿ ಹಸ್ತನಾಗಿರುವ ಅವಧಿ ಫೆಬ್ರವರಿ 11 ರಿಂದ ಮಾರ್ಚ್ 18 ರ ವರೆಗೆ ಒಳ್ಳೆಯ ಸಮಯ ನಿಮ್ಮದಾಗಿರುತ್ತದೆ. ಹಾಗೆಯೇ ವಕ್ರ ಶನಿಯ ಪ್ರಭಾವ ಜೂನ್ 29 ರಿಂದ ನವೆಂಬರ್ 15 ರ ತನಕ ಸುಮಾರಾಗಿ ಇರುತ್ತದೆ. ಇದಿಷ್ಟು ಸಮಯ ಬಿಟ್ಟು ಉಳಿದ ದಿನಗಳಲ್ಲಿ ನೀವು ತುಂಬಾ ಜಾಗರೂಕರಾಗಿ ಇರಬೇಕು.

Leave A Reply

Your email address will not be published.