ಯಮರಾಜರು ಹೇಳಿದರು ಯಾಕೆ ಒಳ್ಳೆಯ ಜನರು ದುಃಖ ಮತ್ತು ಪಾಪಿ ಜನ ಸುಖವಾಗಿರುತ್ತಾರೆ

ನಾವು ಈ ಲೇಖನದಲ್ಲಿ ಯಮ ರಾಜರು ಹೇಳಿದರು ಯಾಕೆ ಒಳ್ಳೆಯ ಜನರು ದುಃಖ ಮತ್ತು ಪಾಪಿ ಜನ ಸುಖವಾಗಿ ಯಾಕೆ ಇರುತ್ತಾರೆ….? ಎಂದು ಈ ಲೇಖನದಲ್ಲಿ ನೋಡೋಣ . ಒಳ್ಳೆಯ ಜನರು ಯಾಕೆ ದುಃಖದಲ್ಲಿ ಇರುತ್ತಾರೆ. ಮತ್ತು ಪಾಪಿ ವ್ಯಕ್ತಿಗಳು ಮೋಜು ಮಸ್ತಿ ಮಾಡುತ್ತಾರೆ. ಈ ಒಂದು ಮಾತಿನಲ್ಲಿ ಯಾವುದೇ ಸಂಶಯ ಇಲ್ಲ. ಆದರೆ ಇದಕ್ಕೆ ಎರಡು ಕಾರಣಗಳು ಇದೆ. ಇದರ ಬಗ್ಗೆ ವಿಸ್ತಾರವಾಗಿ ಹೇಳಲಾಗಿದೆ. ಒಳ್ಳೆಯ ಜನರಿಗೆ ಭಗವಂತ ಯಾಕೆ ದುಃಖ ಕೊಡುತ್ತಾರೆ. ಎಂದು ತಿಳಿದು ಕೊಳ್ಳೊಣ . ಈ ಧಾರ್ಮಿಕ ಕತೆಯ ಮೂಲಕ ತಿಳಿದುಕೊಳ್ಳೋಣ .

ಒಂದು ಊರಿನಲ್ಲಿ ತನ್ನ ಮೂರು ಹೆಣ್ಣು ಮಕ್ಕಳ ಜೊತೆ ಒಬ್ಬ ವಿಧವೆ ಸ್ತ್ರೀ ಇದ್ದಳು. ಸಣ್ಣ ವಯಸ್ಸಿನಲ್ಲಿಯೇ ಈಕೆಯ ಪತಿ ತೀರಿ ಹೋಗಿದ್ದರು. ಇಲ್ಲಿ ಮೂರು ಹೆಣ್ಣು ಮಕ್ಕಳನ್ನು ಸಾಕುವ ಜವಾಬ್ದಾರಿ ಈ ಹಬಲೆಯ ನಾರಿಯ ಮೇಲೆ ಇತ್ತು. ಮಕ್ಕಳನ್ನು ಬಿಟ್ಟು ಯಾವ ಕೆಲಸ ಕಾರ್ಯಗಳನ್ನು ಮಾಡಲು ಸಹ ಆಕೆಗೆ ಆಗುತ್ತಿರಲಿಲ್ಲ . ಮೇಲಿನಿಂದ ಸಮಾಜದ ಕೆಟ್ಟ ಮಾತುಗಳನ್ನು ಕೇಳುವ ಸ್ಥಿತಿ ಕೂಡ ಬಂದಿತ್ತು. ಈಕೆಗೆ ಯಾರು ಕೂಡ ಸಹಾಯ ಮಾಡುವಂತವರು ಇರಲಿಲ್ಲ .

ತನ್ನ ಗಂಡನನ್ನು ನೆನೆಯುತ್ತಾ , ತನಗೆ ತಿಳಿದ ಹಾಗೆ ಆಕೆ ಮಕ್ಕಳನ್ನು ಸಾಕುತ್ತಿದ್ದಳು. ಒಂದು ದಿನ ಆಕೆ ಅತ್ಯಧಿಕವಾಗಿ ಚಿಂತೆ ಮಾಡಿದ ಕಾರಣದಿಂದ ಅನಾರೋಗ್ಯಕ್ಕೆ ಒಳಗಾಗುತ್ತಾಳೆ. ಇನ್ನೊಂದೆಡೆ ಆ ಮಕ್ಕಳ ಮೇಲೆ ಚಿಂತೆ ಕೂಡ ಇತ್ತು. ಆಕೆಗೆ ಮಕ್ಕಳನ್ನು ಹೇಗೆ ಬೆಳೆಸುವುದು ಅನ್ನುವ ಚಿಂತೆ ಇತ್ತು. ಆಕೆಯ ಆರೋಗ್ಯ ಕೂಡ ಹದಗೆಡುತ್ತದೆ. ಆಕೆಯ ಅಂತ್ಯ ಕೂಡ ಹತ್ತಿರಕ್ಕೆ ಬಂತು. ಮೃತ್ಯುವಿನ ಸಮಯದಲ್ಲಿ ಯಮ ರಾಜನ ಒಬ್ಬ ದೂತರು ಈ ವಿಧವೆಯ ಬಳಿ ಆಕೆಯ ಪ್ರಾಣ ಪಡೆಯಲು ಬಂದರು. ಆದರೆ ಅಲ್ಲಿ ಇರುವ ದೃಶ್ಯವನ್ನು ಕಂಡು, ಆತ ಚಿಂತೆ ಮಾಡಲು ಶುರು ಮಾಡಿದ.

ಆ ವಿಧವೆಯು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದಳು. ಮತ್ತು ಮೂರು ಹೆಣ್ಣು ಮಕ್ಕಳು ಆಕೆಯ ಬಳಿ ಕುಳಿತು ಕಣ್ಣೀರು ಹಾಕುತ್ತಿದ್ದವು. ಈ ದೃಶ್ಯವನ್ನು ಕಂಡು ಆ ಯಮ ಧೂತನಿಗೆ ಕರುಣೆ ಬರುತ್ತದೆ. ಆತನಿಗೆ ಆ ಚಿಕ್ಕ ಹೆಣ್ಣು ಮಕ್ಕಳ ದೃಶ್ಯ ನೋಡಲು ಸಾಧ್ಯವಾಗಲಿಲ್ಲ . ಆ ಯಮ ಧೂತ ಈ ರೀತಿಯಾಗಿ ಯೋಚನೆ ಮಾಡುತ್ತಾನೆ. ಒಂದು ವೇಳೆ ನಾನು ಈ ಮಹಿಳೆಯ ಪ್ರಾಣವನ್ನು ತೆಗೆದುಕೊಂಡು ಯಮಪುರಿಗೆ ಹೋದರೆ, ಈ ಹೆಣ್ಣು ಮಕ್ಕಳು ಅನಾಥರಾಗುತ್ತಾರೆ. ಇವರಿಗೆ ಯಾರು ಸಹಾಯ ಮತ್ತು ಪಾಲನೆ ಪೋಷಣೆಯನ್ನು ಮಾಡುತ್ತಾರೆ. ಸ್ವಲ್ಪ ಸಮಯ ಯೋಚನೆ ಮಾಡಿದ ನಂತರ ,

ಯಮನ ದೂತನು ಆ ವಿಧವೆ ಸ್ತ್ರೀಯ ಪ್ರಾಣವನ್ನು ತೆಗೆದುಕೊಳ್ಳಲಿಲ್ಲ. ಮರಳಿ ಆತ ಯಮ ಲೋಕಕ್ಕೆ ಹೋಗುತ್ತಾನೆ. ಯಮ ಲೋಕಕ್ಕೆ ತಲುಪಿದ ನಂತರ ಯಮ ರಾಜರು ಆತನಿಗೆ ಈ ಪ್ರಶ್ನೆಯನ್ನು ಮಾಡುತ್ತಾರೆ. ನೀನು ಬರಿಗೈಯಲ್ಲಿ ಏಕೆ ಬಂದಿದ್ದೀಯಾ . ನೀನು ಆ ವಿಧವೆ ಸ್ತ್ರೀಯ ಪ್ರಾಣವನ್ನು ತರಲು ಹೋಗಿದ್ದೆ. ಆಗ ಯಮ ದೂತನು ಹೇಳುತ್ತಾನೆ. ಹೇ ಸ್ವಾಮಿ ನನ್ನ ತಪ್ಪನ್ನು ಕ್ಷಮಿಸಿ . ಬೇಕು ಅಂದರೂ ಆ ಸ್ತ್ರೀಯ ಪ್ರಾಣವನ್ನು ತೆಗೆದುಕೊಳ್ಳಲು ನನ್ನಿಂದ ಸಾಧ್ಯವಾಗಲಿಲ್ಲ .

ನನ್ನ ಸ್ಥಾನದಲ್ಲಿ ನೀವೂ ಇದ್ದರೂ, ಕೂಡ ಆ ಸ್ತ್ರೀಗೆ ಜೀವದಾನ ಮಾಡುತ್ತಿದ್ದಿರಿ . ನನ್ನಿಂದ ಆ ವಿಧವೆ ಸ್ತ್ರೀಯ ಮುಗ್ಧ ಹೆಣ್ಣು ಮಕ್ಕಳ ದುಃಖವನ್ನು ನೋಡಲು ಸಾಧ್ಯವಾಗಲಿಲ್ಲ. ಯಾವಾಗ ನಾನು ಪ್ರಾಣ ತೆಗೆದುಕೊಳ್ಳಲು ಹೋದೆನು, ಅಲ್ಲಿ ಆ ವಿಧವೆಗೆ ಚಿಕ್ಕ ಚಿಕ್ಕ ಮೂರು ಹೆಣ್ಣು ಮಕ್ಕಳು ಇರುವುದು ಕಂಡುಬಂತು. ಅವರೆಲ್ಲಾ ಆ ತಾಯಿಯನ್ನು ಹಿಡಿದುಕೊಂಡು ಕಣ್ಣೀರು ಹಾಕುತ್ತಿದ್ದರು. ಒಂದು ವೇಳೆ ಆ ಸ್ತ್ರೀಯ ಪ್ರಾಣವನ್ನು ತೆಗೆದುಕೊಂಡು ಬಂದಿದ್ದರೆ, ಆ ಮಕ್ಕಳನ್ನು ಯಾರು ನೋಡಿಕೊಳ್ಳುತ್ತಿದ್ದರು.

ಅವರಿಗೆ ಯಾರು ಊಟವನ್ನು ನೀಡುತ್ತಿದ್ದರು. ಮೃತ್ಯು ಲೋಕದಲ್ಲಿ ಇರುವ ಮನುಷ್ಯರು ತುಂಬಾ ಸ್ವಾರ್ಥಿಗಳು ಮತ್ತು ಕರುಣೆ ಇಲ್ಲದವರು ಆಗಿದ್ದಾರೆ. ಯಾರು ಸಹ ಆ ಮಕ್ಕಳಿಗೆ ಸಹಾಯವನ್ನು ಮಾಡುವುದಿಲ್ಲ. ಯಮ ದೂತ ಈ ರೀತಿ ಹೇಳುತ್ತಾನೆ. ಹೇ ಧರ್ಮರಾಜರೇ ನಿಮ್ಮಲ್ಲಿ ನನ್ನದೊಂದು ವಿನಂತಿ ಇದೆ. ನೀವು ಆ ವಿಧವೆ ಸ್ತ್ರೀಗೆ ಕೆಲವು ದಿನಗಳ ತನಕ ಜೀವದಾನ ನೀಡಿ .

ಇದರಿಂದ ಆ ಮಕ್ಕಳನ್ನು ಸಾಕಿ , ಸಲುಹಿ ದೊಡ್ಡವರನ್ನಾಗಿ ಮಾಡಬಹುದು . ಯಮ ಧೂತರ ಈ ಮಾತನ್ನು ಕೇಳಿದ ಯಮ ರಾಜರು ಈ ರೀತಿಯಾಗಿ ಹೇಳುತ್ತಾರೆ. ಹೇ ದೂತ ಈ ಜಗತ್ತಿನಲ್ಲಿ ನಿಶ್ಚಯ ಮಾಡಿದ ಸಮಯದಲ್ಲಿ ಎಲ್ಲಾ ಪ್ರಾಣಿಗಳ ಅಂತ್ಯ ಆಗುತ್ತದೆ. ಇಲ್ಲಿ ಯಾವ ವ್ಯಕ್ತಿಯ ಆಯಸ್ಸನ್ನು ಕಡಿಮೆ ಮಾಡಲು ಸಾಧ್ಯವಿಲ್ಲ. ಹೆಚ್ಚಿಗೆ ಮಾಡಲು ಸಹ ಸಾಧ್ಯವಿಲ್ಲ . ಇಲ್ಲಿ ಯಾರಿಗೂ ಜೀವನ ಕೊಡಲು ಸಾಧ್ಯವಿಲ್ಲ. . ಸಮಯಕ್ಕೂ ಮುನ್ನ ಜೀವ ತೆಗೆದುಕೊಳ್ಳುವುದಕ್ಕೂ ಸಾಧ್ಯವಿಲ್ಲ .

ಯಾರ ಭಾಗ್ಯದಲ್ಲಿ ಏನೂ ಬರೆದಿರುತ್ತದೆಯೋ , ಅದು ಸರಿಯಾಗಿಯೇ ನಡೆಯುತ್ತದೆ. ನಿನ್ನಿಂದ ಯಾವ ವ್ಯಕ್ತಿಯ ಭಾಗ್ಯವನ್ನು ಬದಲಾಯಿಸಲು ಸಾಧ್ಯವಿಲ್ಲ . ನೀನು ಇಂದು ಸೃಷ್ಟಿಯ ನಿಯಮವನ್ನು ಉಲ್ಲಂಘಿಸಿದ್ದೀಯಾ . ನೀನು ತುಂಬಾ ದೊಡ್ಡ ಅಪರಾಧವನ್ನು ಮಾಡಿದ್ದೀಯಾ. ಹಾಗಾಗಿ ಖಂಡಿತವಾಗಿ ನಿನಗೆ ಇದರ ಶಿಕ್ಷೆ ಆಗುತ್ತದೆ. ಈಗ ನೀನು ಭೂಮಿಯ ಮೇಲೆ ಹೋಗಿ ಮನುಷ್ಯನಾಗಿ ಹುಟ್ಟು . ನಿನ್ನ ಮೂಲಕ ಮಾಡಿದ ಅಪರಾಧದ ಶಿಕ್ಷೆಯನ್ನು ಅನುಭವಿಸು . ನಂತರ ಯಮ ದೂತ ಹೇಳುತ್ತಾನೆ .

ಹೇ ಪ್ರಭು ಭೂ ಲೋಕದಲ್ಲಿ ನನ್ನ ಉದ್ದಾರ ಹೇಗೆ ಆಗುತ್ತದೆ. ಮತ್ತು ಯಾವಾಗ ಆಗುತ್ತದೆ. ಆಗ ಧರ್ಮ ರಾಜರು ಈ ರೀತಿ ಹೇಳುತ್ತಾರೆ. ಹೇ ಧೂತ ಯಾವಾಗ ನೀನು ಭೂ ಲೋಕಕ್ಕೆ ಹೋಗಿ ಮೂರು ಭಾರಿ ನಿನ್ನ ಮೂರ್ಖತನದ ಮೇಲೆ ನಗುತ್ತೀಯೋ , ಆಗ ನಿನ್ನ ಉದ್ಧಾರ ಆಗುತ್ತದೆ. ಧರ್ಮ ರಾಜರು ಆ ದೂತನನ್ನು ಭೂ ಲೋಕಕ್ಕೆ ನೂಕುತ್ತಾರೆ. ಈತ ಭೂ ಲೋಕಕ್ಕೆ ಮನುಷ್ಯನ ಶರೀರದಲ್ಲಿ ಬಂದಿದ್ದ. ಆತನ ಶರೀರದ ಮೇಲೆ ವಸ್ತ್ರ ಇರಲಿಲ್ಲ, ಮೃತ್ಯು ಲೋಕದ ಒಂದು ನಿಯಮ ಇದೆ. ಯಾವಾಗ ಯಾವುದಾದರು ಮನುಷ್ಯ ಜನ್ಮ ಹೆತ್ತುತ್ತಾನೆ. ಆ ಸಮಯದಲ್ಲಿ ಆತ ನಗ್ನವಾಗಿ ಇರುತ್ತಾನೆ. ಹಾಗಾಗಿ ಈತ ನಿರ್ವಸ್ತ್ರವಾಗಿ ಒಂದು ದಾರಿಯ ಪಕ್ಕದಲ್ಲಿ ಬಿದ್ದಿದ್ದ .

ಆ ದಾರಿಯಲ್ಲಿ ಒಬ್ಬ ಚಮ್ಮಾರ ಹೋಗುತ್ತಿದ್ದ. ಚಳಿಯಿಂದ ಕಾಪಾಡಿಕೊಳ್ಳುಲು ತನ್ನ ಮಕ್ಕಳಿಗೆ ಬಟ್ಟೆಯನ್ನು ತರಲು ಆ ಚಮ್ಮಾರ ಹೋಗುತ್ತಿದ್ದ. ದಾರಿಯಲ್ಲಿ ಒಬ್ಬ ನಗ್ನ ವ್ಯಕ್ತಿಯನ್ನು ಕಂಡು ಆತನ ಮೇಲೆ ಅವನಿಗೆ ದಯೆ ಬರುತ್ತದೆ. ತನ್ನ ಮಕ್ಕಳಿಗಂತೂ ಬಟ್ಟೆಯನ್ನು ತೆಗೆದುಕೊಳ್ಳಲಿಲ್ಲ . ಆದರೆ ಈ ಯಮ ದೂತನಿಗೆ ಬಟ್ಟೆ ಮತ್ತು ಕಂಬಳಿಯನ್ನು ಖರೀದಿ ಮಾಡಿಕೊಟ್ಟ . ನಂತರ ಆ ಯಮ ದೂತ ಈ ರೀತಿ ಹೇಳುತ್ತಾನೆ. ಹೇ ಅಣ್ಣ ನೀವು ನನಗೆ ಬಟ್ಟೆ ಮತ್ತು ಕಂಬಳಿಯನ್ನು ಕೊಟ್ಟು ,

ದೊಡ್ಡ ಉಪಕಾರವನ್ನು ಮಾಡಿದ್ದೀರಾ . ಆದರೆ ನನಗೆ ಯಾವ ಕುಟುಂಬ ಇಲ್ಲ . ನನ್ನ ಬಳಿ ಮನೆ ಇಲ್ಲ . ಆಹಾರಕ್ಕೂ ಯಾವ ವ್ಯವಸ್ಥೆಯು ಇಲ್ಲ . ಆಗ ಚಮ್ಮಾರ ಈ ರೀತಿ ಹೇಳುತ್ತಾನೆ . ಹೇ ಅಣ್ಣ ನೀನು ನನ್ನ ಜೊತೆ ಬಾ . ನಾನು ನಿನಗೆ ಕೆಲಸವನ್ನು ಕೊಡಿಸುತ್ತೇನೆ , ಮತ್ತು ಊಟದ ವ್ಯವಸ್ಥೆಯನ್ನು ಮಾಡುತ್ತೇನೆ . ನಂತರ ಆ ಚಮ್ಮಾರನು ಯಮ ದೂತನನ್ನು ಕರೆದುಕೊಂಡು ತನ್ನ ಮನೆಗೆ ಹೋಗುತ್ತೇನೆ .ಅಲ್ಲಿ ಆ ಚಮ್ಮಾರನ ಹೆಂಡತಿ ನೋಡುತ್ತಾಳೆ . ಈಕೆಯ ಗಂಡ ತನ್ನ ಮಕ್ಕಳಿಗೆ ಬಟ್ಟೆಯನ್ನು ತರಲು ಹೋಗಿರುತ್ತಾನೆ . ಆದರೆ ಏನನ್ನು ತರಲಿಲ್ಲ . ಮರಳಿ ಒಬ್ಬ ವ್ಯಕ್ತಿಯನ್ನು ತನ್ನ ಮನೆಗೆ ಕರೆದುಕೊಂಡು ಬಂದಿದ್ದ .

ಇದನ್ನು ಕಂಡು ಆ ಚಮ್ಮಾರನ ಹೆಂಡತಿಗೆ ತುಂಬಾ ಸಿಟ್ಟು ಬರುತ್ತದೆ .ತನ್ನ ಗಂಡನ ಜೊತೆ ಜಗಳವಾಡಲು ಶುರು ಮಾಡುತ್ತಾಳೆ . ಇದನ್ನು ಕಂಡು ಆ ಯಮ ದೂತ ತುಂಬಾ ನಗುತ್ತಾನೆ . ಆಗ ಚಮ್ಮಾರ ಆತನಿಗೆ ಪ್ರಶ್ನೆ ಮಾಡುತ್ತಾನೆ . ಹೇ ಅಣ್ಣ ನೀನು ಯಾಕೆ ನಗುತ್ತಿದ್ದೀಯಾ . ಅಂತದ್ದು ನೀವು ಏನನ್ನು ಕಂಡಿದ್ದೀರಾ . ಆಗ ಯಮ ದೂತ ಹೇಳುತ್ತಾನೆ .ನನ್ನ ನಗುವಿನ ರಹಸ್ಯವನ್ನು ನಾನು ಈಗ ಹೇಳಲು ಸಾಧ್ಯವಿಲ್ಲ . ಸಮಯ ಬಂದಾಗ ನಾನು ನಿಮಗೆ ಹೇಳುತ್ತೇನೆ . ನಂತರ ಆ ಯಮ ದೂತ ಚಮ್ಮಾರನ ಮನೆಯಲ್ಲಿ ವಾಸ ಮಾಡಲು ಶುರು ಮಾಡುತ್ತಾರೆ .

ಚಮ್ಮರನ ಎಲ್ಲಾ ಕೆಲಸವನ್ನು ಇವರು ಕಲಿಯುತ್ತಾರೆ. ಆ ಯಮ ದೂತ ಆ ಚಮ್ಮಾರನ ಮನೆಯಲ್ಲಿ ಕೆಲಸ ಮಾಡಲು ಶುರು ಮಾಡುತ್ತಾರೆ . ತುಂಬಾ ಸುಂದರವಾದ ಚಪ್ಪಲಿಯನ್ನು ತಯಾರಿಸಲು ಕಲಿತುಕೊಂಡರು . ಆಗಿನಿಂದ ಆ ಚಮ್ಮಾರನ ಚಪ್ಪಲಿಯ ವ್ಯಾಪಾರ ಹೆಚ್ಚಿಗೆ ಆಯಿತು .ಇಡೀ ರಾಜ್ಯದಲ್ಲಿ ಆ ಚಮ್ಮಾರನ ಚಪ್ಪಲಿಯ ಪ್ರಸಿದ್ಧಿ ಹೆಚ್ಚಾಯಿತು . ಆ ಚಮ್ಮಾರನು ಕೂಡ ಇದರಿಂದ ತುಂಬಾ ಶ್ರೀಮಂತನು ಆದನು . ಇಲ್ಲಿಯ ತನಕ ದೊಡ್ಡ ರಾಜ ಮಹಾರಾಜರು ಕೂಡ ಆ ಚಮ್ಮಾರನ ಮನೆಯಿಂದ ಚಪ್ಪಲಿಗಳನ್ನು ತೆಗೆದುಕೊಂಡು ಹೋಗುತ್ತಿದ್ದರು . ಯಾವ ದಿನದಿಂದ ಆ ಯಮದೂತ ಚಮ್ಮಾರನ ಮನೆಗೆ

ಬಂದರೋ, ಆಗಿನಿಂದ ಆ ಚಮ್ಮಾರನ ಅದೃಷ್ಟವೇ ಬದಲಾಯಿತು . ಆತನ ಮನೆಯಲ್ಲಿ ಯಾವುದೇ ರೀತಿಯ ಧನ ಸಂಪತ್ತಿನ ಕೊರತೆ ಇರಲಿಲ್ಲ .ಒಂದು ದಿನ ಅಚಾನಕ್ಕಾಗಿ ರಾಜನ ಸೈನಿಕರು ಚರ್ಮವನ್ನು ತೆಗೆದುಕೊಂಡು ಆ ಚಮ್ಮಾರನ ಮನೆಗೆ ಬರುತ್ತಾರೆ .ನಂತರ ಈ ರೀತಿ ಹೇಳುತ್ತಾನೆ . ನಮ್ಮ ಮಹಾರಾಜರು ಇದೇ ಚರ್ಮದಿಂದ ತಯಾರಿಸಿದ ಚಪ್ಪಲಿಗಳನ್ನು ಧರಿಸಲು ಇಷ್ಟಪಡುತ್ತಾರೆ . ಈ ಚರ್ಮವು ತುಂಬಾ ದುಬಾರಿಯಾಗಿದ್ದು , ಸರಿಯಾಗಿ ಇದರಿಂದ ಒಂದು ಜೊತೆ ಚಪ್ಪಲಿಗಳನ್ನು ತಯಾರಿಸಿ ಕೊಡು . ಈ ಚರ್ಮ ಯಾವುದೇ ಕಾರಣಕ್ಕೂ ಹಾಳಾಗಬಾರದು . ಈ ಚರ್ಮದಿಂದ ತುಂಬಾ ಚೆನ್ನಾಗಿರುವ ಚಪ್ಪಲಿಗಳನ್ನು ತಯಾರಿಸು .

ರಾಜನ ಸೈನಿಕನು ಆ ಚರ್ಮವನ್ನು ಚಮ್ಮಾರನಿಗೆ ಕೊಟ್ಟು , ಮರಳಿ ಅಲ್ಲಿಂದ ರಾಜ್ಯಕ್ಕೆ ಹೋಗುತ್ತಾನೆ . ಇಲ್ಲಿ ಚಮ್ಮಾರನು ಕೂಡ ಯಮ ದೂತನಿಗೆ ಈ ರೀತಿಯಾಗಿ ಹೇಳುತ್ತಾನೆ . ನೋಡು ಇವು ಮಹಾರಾಜರ ಚಪ್ಪಲಿಗಳು ಆಗಿವೆ .ಇಲ್ಲಿ ನೀನು ಯಾವುದೇ ರೀತಿಯ ತಪ್ಪನ್ನು ಮಾಡಬೇಡ . ಈ ಚರ್ಮವು ತುಂಬಾ ದುಬಾರಿಯಾಗಿದೆ . ಹಾಗಾಗಿ ಇದನ್ನು ಹಾಳು ಮಾಡಬೇಡ . ರಾಜರಿಗೆ ಚಪ್ಪಲಿಗಳು ಬೇಕಾಗಿದೆ . ಹಾಗಾಗಿ ಈ ಚರ್ಮದಿಂದ ತಯಾರಿಸು . ಒಂದು ವೇಳೆ ಇದರಲ್ಲಿ ಏನಾದರೂ ತಪ್ಪು ನಡೆದರೆ ,

ಮಹಾರಾಜರು ಸಿಟ್ಟು ಮಾಡಿಕೊಳ್ಳುತ್ತಾರೆ . ನಂತರ ನಮಗೆ ಕಠಿಣವಾದ ಶಿಕ್ಷೆಯನ್ನು ಕೊಡುತ್ತಾರೆ . ಚಮ್ಮಾರ ನು ಇಷ್ಟೆಲ್ಲಾ ತಿಳಿ ಹೇಳಿದ ನಂತರವೂ , ಆ ಯಮ ದೂತನ ಬೇಕು ಅಂತ ಆ ಚರ್ಮದಿಂದ ಸಾಧಾರಣವಾದ ಚಪ್ಪಲಿಗಳನ್ನು ಮಾಡುತ್ತಾನೆ . ಯಾವಾಗ ಆ ಚಮ್ಮಾರ ಚಪ್ಪಲಿಗಳನ್ನು ನೋಡುತ್ತಾ ನೋ , ಆತನಿಗೆ ಉಸಿರು ಕಟ್ಟಿದಂತೆ ಆಗುತ್ತದೆ . ಆ ಯಮ ದೂತನಿಗೆ ಚಮ್ಮಾರ ಕೆಟ್ಟದಾಗಿ ಬೈಯಲು ಶುರು ಮಾಡುತ್ತಾನೆ . ಕಟ್ಟಿಗೆಯನ್ನು ತೆಗೆದುಕೊಂಡು ಆತನಿಗೆ ಒಡೆಯಲು ಮುಂದಾಗುತ್ತಾನೆ . ಆಗ ಈ ರೀತಿಯಾಗಿ ಹೇಳುತ್ತಾನೆ . ಹೇ ಮೂರ್ಖ ನೀನು ಏನನ್ನು ಮಾಡಿದ್ದೀಯಾ . ನಿನಗೆ ಪದೇಪದೇ ಹೇಳಿದ್ದೆ .

ಇದು ತುಂಬಾ ದುಬಾರಿಯಾದ ಚರ್ಮ ಹಾಗಿತ್ತು . ಇದರಿಂದ ಒಳ್ಳೆಯ ಚಪ್ಪಲಿಗಳನ್ನು ತಯಾರಿಸಬೇಕಾಗಿತ್ತು . ಆದರೆ ನೀನು ಈಗ ಯಾಕೆ ಈ ರೀತಿ ಮಾಡಿದ್ದೀಯಾ .ಈಗ ರಾಜರು ನಮ್ಮನ್ನು ಬಿಡುವುದಿಲ್ಲ .ನೀನು ಸಾಯುತ್ತೀಯಾ, ಜೊತೆಗೆ ನಿನ್ನ ಜೊತೆ ನಾನು ಸಾಯುತ್ತೇನೆ . ಅವರು ನನ್ನ ಇಡೀ ಕುಟುಂಬವನ್ನು ಬಂಧಿಸುತ್ತಾರೆ . ಈ ಚಮ್ಮಾರನು ದುಃಖದಲ್ಲಿ ಇರುವುದನ್ನು ಕಂಡು , ಯಮ ದೂತನು ತುಂಬಾ ನಗುತ್ತಾನೆ .ಯಮ ದೂತನು ನಗುವುದನ್ನು ಕಂಡು ಈ ರೀತಿಯಾಗಿ ಪ್ರಶ್ನೆ ಮಾಡುತ್ತಾನೆ . ಎಲಾ ಮೂರ್ಖನೇ ಕೆಲಸವನ್ನು ಹಾಳು ಮಾಡಿದಷ್ಟೇ ಅಲ್ಲದೆ ಈಗ ನಗುತ್ತಿದ್ದೀಯಾ , ಆಗ ಯಮ ದೂತ ಹೇಳುತ್ತಾನೆ .

ರಾಜನ ಚಪ್ಪಲಿಗಳನ್ನು ತೆಗೆದುಕೊಂಡು ಹೋಗಲು ಆ ಸೈನಿಕ ಬರುತ್ತಿದ್ದಾನೆ . ಆ ಸೈನಿಕನನ್ನು ಕಂಡು ಚಮ್ಮಾರನ ಕೈಕಾಲು ನಡುಗಲು ಶುರುವಾಗುತ್ತದೆ . ಒಂದು ವೇಳೆ ಆತ ಚಪ್ಪಲಿಗಳನ್ನು ಕೇಳಿದರೆ ನಾನು ಎಲ್ಲಿಂದ ಕೊಡುವುದು . ಅಷ್ಟರಲ್ಲಿ ಆ ಸೈನಿಕ ಹತ್ತಿರಕ್ಕೆ ಬಂದು ಈ ರೀತಿಯಾಗಿ ಹೇಳುತ್ತಾನೆ . ಹೇ ಚಮ್ಮಾರನೇ ನಿನಗೆ ನಾನು ನಿನ್ನೆ ಕೊಟ್ಟಿರುವ ಚರ್ಮದಿಂದ ಪಾದುಕೆಗಳನ್ನು ಮಾಡಬೇಡ . ಬದಲಿಗೆ ಚಪ್ಪಲಿಗಳನ್ನು ಮಾಡು . ಏಕೆಂದರೆ ರಾಜರ ಅಂತ್ಯ ಆಗಿದೆ . ಇಲ್ಲಿರುವ ಪದ್ಧತಿ ಏನಿದೆ ಎಂದರೆ , ಮೃತ ಹೊಂದಿದ ವ್ಯಕ್ತಿಗಳಿಗೆ ಚರ್ಮದ ಚಪ್ಪಲಿಗಳನ್ನು ಧರಿಸಿ , ಅಂತಿಮ ಕ್ರಿಯೆಯನ್ನು ಮಾಡಲಾಗುತ್ತದೆ .

ಸೈನಿಕನ ಮಾತನ್ನು ಕೇಳಿದ ಚಮ್ಮಾರನಿಗೆ ಈ ರೀತಿಯಾಗಿ ಅನಿಸುತ್ತದೆ . ಮೃತ ಹೊಂದಿದ ಶರೀರದಲ್ಲಿ ಮರಳಿ ಪ್ರಾಣ ಬಂದಂತೆ ಆಗುತ್ತದೆ . ಆತನ ಕೈಯಲ್ಲಿದ್ದ ಕೋಲು ಜಾರಿ ಕೆಳಗಡೆ ಬೀಳುತ್ತದೆ . ಆತ ಯಮ ದೂತನ ಕಾಲುಗಳನ್ನು ಹಿಡಿದುಕೊಳ್ಳುತ್ತಾನೆ . ಆತನ ಬಳಿ ಕ್ಷಮೆಯನ್ನು ಕೇಳುತ್ತಾನೆ . ಯಮ ದೂತನು ಚಮ್ಮಾರನ ಆ ಸ್ಥಿತಿಯನ್ನು ನೋಡಿ ತುಂಬಾ ಜೋರಾಗಿ ನಗುತ್ತಿದ್ದ . ಆಗ ಚಮ್ಮಾರನು ಈ ರೀತಿಯಾಗಿ ಕೇಳುತ್ತಾನೆ . ಹೇ ಅಣ್ಣ ಯಾಕೆ ನೀನು ನಗುತ್ತಿದ್ದೀಯಾ .

ಆಗ ಯಮ ದೂತನು ಈ ರೀತಿಯಾಗಿ ಹೇಳುತ್ತಾನೆ . ನಾನು ಸಮಯ ಬಂದಾಗ ಇದಕ್ಕೆ ಇರುವ ಕಾರಣವನ್ನು ತಿಳಿಸುತ್ತೇನೆ . ನಂತರ ಒಂದು ದಿನ ಆದಮೇಲೆ ಆ ಚಮ್ಮಾರ ನ ಅಂಗಡಿಗೆ ಮೂರು ಕನ್ಯೆಯರು ಒಬ್ಬ ವೃದ್ಧ ಮಹಿಳೆಯೊಂದಿಗೆ ಬಂದಿದ್ದರು. ಆ ಮೂರು ಹೆಣ್ಣು ಮಕ್ಕಳು ಮದುವೆಯ ವಯಸ್ಸಿಗೆ ಬಂದಿದ್ದರು. ಅವರು ತಮ್ಮ ಪಾದುಕೆಗಳಿಗೆ ಅಳತೆಯನ್ನು ಕೊಡಲು ಬಂದಿದ್ದರು . ಆ ಮೂರು ಹೆಣ್ಣು ಮಕ್ಕಳನ್ನು ನೋಡಿ ಯಮ ದೂತ ಅವರನ್ನು ಕಂಡು ಹಿಡಿಯುತ್ತಾನೆ .

ಇವರು ಅದೇ ಮೂರು ಹೆಣ್ಣು ಮಕ್ಕಳು ಆಗಿದ್ದಾರೆ . ಇವರ ತಾಯಿಯನ್ನು ಕರೆದುಕೊಂಡು ಹೋಗದೆ ಇರುವ ಕಾರಣದಿಂದಾಗಿ , ಇಂದು ನಾನು ಮಾಡಿದ ತಪ್ಪಿಗೆ ಶಿಕ್ಷೆಯನ್ನು ಅನುಭವಿಸುತ್ತಿದ್ದೇನೆ . ಆದರೆ ಈ ಮೂರು ಹೆಣ್ಣು ಮಕ್ಕಳು ತುಂಬಾ ದೊಡ್ಡವರು ಆಗಿದ್ದಾರೆ . ತುಂಬಾ ಸುಂದರವಾಗಿಯೂ ಇದ್ದಾರೆ . ಯಾವುದೋ ಒಳ್ಳೆಯ ಮನೆಯಲ್ಲಿ ಬೆಳೆದಿರುವ ಹಾಗೆ ಕಾಣುತ್ತಿದ್ದಾರೆ . ಆಗ ಯಮ ದೂತ ಆ ವೃದ್ಧ ಮಹಿಳೆಗೆ ಪ್ರಶ್ನೆ ಮಾಡುತ್ತಾನೆ . ಹೇ ತಾಯಿ ಈ ಮೂರು ಕನ್ಯೆಯರು ಯಾರು ? ಆ ವೃದ್ದೆ ಹೇಳುತ್ತಾಳೆ. ಬಾಲ್ಯದಲ್ಲಿ ಇವರ ತಾಯಿ ಇವರನ್ನು ಬಿಟ್ಟು ತೀರಿ ಹೋದರು . ಇವರಿಗೆ ಯಾರೂ ಸಹಾಯ ಮಾಡುವಂತವರು ಇರಲಿಲ್ಲ .

ನಾನು ಇವರನ್ನು ನನ್ನ ಬಳಿ ಇಟ್ಟುಕೊಂಡೆ . ನನ್ನ ಬಳಿ ಕೋಟಿ ಸಂಪತ್ತು ಇದೆ . ಆದರೆ ದುರ್ಭಾಗ್ಯದಿಂದ ನನ್ನವರು ಯಾರು ಇರಲಿಲ್ಲ . ಆಗ ಇವರನ್ನು ನನ್ನ ಬಳಿ ಇರಿಸಿಕೊಂಡು ಬೆಳೆಸಿದೆ . ಈಗ ಇವರನ್ನು ತುಂಬಾ ಒಳ್ಳೆಯ ಮನೆಗೆ ಮದುವೆ ಮಾಡಿಕೊಡಲು ಹೊರಟಿದ್ದೇನೆ . ಆ ಹೆಣ್ಣು ಮಕ್ಕಳ ಅದೃಷ್ಟವನ್ನು ನೋಡಿ ಯಮ ದೂತ ಈ ರೀತಿಯಾಗಿ ಯೋಚನೆ ಮಾಡುತ್ತಾನೆ . ಪರಮಾತ್ಮ ಏನೇ ಮಾಡಿದರು ಒಳ್ಳೆಯದಕ್ಕಾಗಿ ಮಾಡುತ್ತಾನೆ . ಒಂದು ವೇಳೆ ಆ ಸಮಯದಲ್ಲಿ ಇವರ ತಾಯಿ ಸತ್ತು ಹೋಗಲಿಲ್ಲ ಅಂದಿದ್ದರೆ ,

ಈ ಮೂರು ಹೆಣ್ಣು ಮಕ್ಕಳು ತುಂಬಾ ಭಯಂಕರವಾದ ಬಡತನ ಹಸಿವಿನಿಂದ ಇರುತ್ತಿದ್ದರು . ಇವರ ತಾಯಿ ತೀರಿ ಹೋದ ಕಾರಣದಿಂದಲೇ ಈ ಮೂರು ಹೆಣ್ಣು ಮಕ್ಕಳು ತುಂಬಾ ಒಳ್ಳೆ ಮನೆಯಲ್ಲಿ ಬೆಳೆದು , ಒಳ್ಳೆಯ ಮನೆತನಕ್ಕೆ ಮದುವೆಯಾಗಲು ಹೊರಟಿದ್ದಾರೆ . ಈ ವೃದ್ಧ ಮಹಿಳೆಯ ಕೋಟ್ಯಂತರ ಹಣದ ಸಂಪತ್ತಿಗೆ ಮಾಲಿಕರು ಆಗಿದ್ದಾರೆ. ಈ ರೀತಿ ಯೋಚನೆ ಮಾಡಿ ತನ್ನ ಮೊದಲನೆಯ ಮೂರ್ಖತನವನ್ನು ಯೋಚನೆ ಮಾಡುತ್ತಾ , ಆ ಯಮ ದೂತ ತುಂಬಾ ಜೋರಾಗಿ ನಗಲು ಶುರು ಮಾಡುತ್ತಾನೆ .

ಈಗ ಆತ ಮೂರು ಬಾರಿ ನಕ್ಕು ಬಿಟ್ಟಿದ್ದ . ಯಮ ದೂತ ನಗುತ್ತಿರುವುದನ್ನು ಕಂಡು ಆ ಚಮ್ಮಾರನು ಪ್ರಶ್ನೆ ಮಾಡುತ್ತಾನೆ . ಹೇ ಅಣ್ಣಾ ನೀನು ಯಾಕೆ ನಗುತ್ತಿದ್ದೀಯ ನಿನ್ನ ನಗುವಿನ ರಹಸ್ಯವನ್ನು ದಯಮಾಡಿ ನನಗೆ ತಿಳಿಸು . ಆಗ ಯಮ ದೂತ ಹೇಳುತ್ತಾನೆ .ನಾನು ಮೂರು ಬಾರಿ ನಕ್ಕಿದ್ದೇನೆ .ನಿನಗೆ ನನ್ನ ನಗುವಿನ ರಹಸ್ಯವನ್ನು ಹೇಳುತ್ತೇನೆ ಕೇಳು . ನಾನು ಒಬ್ಬ ಯಮ ದೂತ ಆಗಿದ್ದೇನೆ . ಈಗ ಚಪ್ಪಲಿಗಾಗಿ ಅಳತೆ ಕೊಡಲು ಬಂದಿರುವ ಈ ಮೂರು ಹೆಣ್ಣು ಮಕ್ಕಳು ಯಾವಾಗ ಚಿಕ್ಕವರಾಗಿದ್ದರು , ಆಗ ಇವರ ತಾಯಿಯು ತೀರಿ ಹೋಗಿದ್ದರು . ಈ ಮೂರು ಜನ ಹೆಣ್ಣು ಮಕ್ಕಳನ್ನು ನೋಡಿ ನಾನು ಇವರ ತಾಯಿಯ ಪ್ರಾಣವನ್ನು ತೆಗೆದುಕೊಂಡು ಹೋಗಲಿಲ್ಲ .

ಅದೇ ಕಾರಣದಿಂದಾಗಿ ಧರ್ಮ ರಾಜರು ನಮಗೆ ಶಾಪವನ್ನು ಕೊಟ್ಟು , ಭೂಮಿಯ ಮೇಲೆ ಕಳುಹಿಸಿದರು . ನಾನು ನಿರ್ವಸ್ತ್ರವಾಗಿ ಒಂದು ದಾರಿಯ ಪಕ್ಕದಲ್ಲಿ ಬಿದ್ದಿದೆ . ಆಗ ನೀನು ನನ್ನನ್ನು ಮನೆಗೆ ಕರೆದೆ .ಮನೆಗೆ ಬಂದಾಗ ನಿನ್ನ ಜೊತೆ ನಿನ್ನ ಹೆಂಡತಿ ತುಂಬಾ ಜಗಳ ಮಾಡಿದಳು . ಯಾಕೆಂದರೆ ನೀನು ನಿನ್ನ ಮಕ್ಕಳಿಗೆ ಬಟ್ಟೆಯನ್ನು ಕೊಡಿಸದೆ ನನಗೆ ಕಂಬಳಿ ಮತ್ತು ಬಟ್ಟೆಯನ್ನು ಕೊಡಿಸಿದೆ . ಆಗ ನಾನು ಮೊದಲ ಬಾರಿಗೆ ನಿನ್ನ ಹೆಂಡತಿಯನ್ನು ಕಂಡು ತುಂಬಾ ನಕ್ಕಿದ್ದೆ . ನಿ

ನ್ನ ಹೆಂಡತಿ ಆ ಹಣವನ್ನು ನೋಡಿ ದುಃಖಕ್ಕೆ ಒಳಗಾಗಿದ್ದಳು . ನೀನು ಹಣವನ್ನು ನನ್ನ ಮೇಲೆ ಖರ್ಚು ಮಾಡಿದ್ದೆ . ಆದರೆ ನಿನ್ನ ಹೆಂಡತಿಗೆ ಆ ಲಾಭ ಕಾಣುತ್ತಿರಲಿಲ್ಲ . ನಾನು ನಿನ್ನ ಮನೆಗೆ ಬಂದ ಮೇಲೆ ನಿನ್ನ ಮನೆ ಉದ್ದಾರ ಆಯಿತು . ಎರಡನೇ ಬಾರಿ ನಿನ್ನ ಮೂರ್ಖತನವನ್ನು ನೋಡಿ ನನಗೆ ನಗು ಬಂತು . ಆ ಸಮಯದಲ್ಲಿ ರಾಜನಿಗೋಸ್ಕರ ಚಪ್ಪಲಿಯನ್ನು ತಯಾರಿಸಿದ್ದಕ್ಕೆ ನನಗೆ ಬೈಯುತ್ತಿದ್ದೆ .ನೀನು ಕೇವಲ ರಾಜನ ಪಾದುಕೆಗಳ ಬಗ್ಗೆ ಯೋಚನೆ ಮಾಡುತ್ತಿದ್ದೆ .

ಆದರೆ ರಾಜನೊಂದಿಗೆ ಏನು ನಡೆದಿದೆ ಎಂಬ ವಿಷಯ ನಿನಗೆ ಗೊತ್ತಿರಲಿಲ್ಲ . ಇಡೀ ಊರಿಗೆ ಗೊತ್ತಾಗಿತ್ತು ರಾಜನ ಮೃತ್ಯು ಆಗಿದೆ ಎಂದು . ಆದರೆ ನಿನ್ನ ಗಮನ ರಾಜನ ಪಾದುಕೆಗಳ ಮೇಲೆ ಇತ್ತು . ನಾವು ಏನನ್ನ ಕಾಣುತ್ತೇವೆ ಅದನ್ನು ಕಂಡು ಖುಷಿ ಪಡುತ್ತೇವೆ .ಆದರೆ ನಮಗೆ ಯಾವುದು ಕಾಣುವುದಿಲ್ಲ ಅದನ್ನು ನಾವು ನೋಡುವುದಿಲ್ಲ . ಆದರೆ ನಡೆಯಬೇಕಾಗಿರುವುದೇ ನಡೆದು ಹೋಗುತ್ತದೆ . ಹಲವಾರು ಬಾರಿ ನಮ್ಮ ಒಳ್ಳೆಯದಕ್ಕೋಸ್ಕರ ಪರಮಾತ್ಮನು ನಮ್ಮ ಒಡನೆ ಕೆಟ್ಟದಾಗಿ ನಡೆಸುತ್ತಾರೆ .

ಆದರೆ ನಾವು ಅದೇ ಕೆಟ್ಟದ್ದನ್ನು ನೋಡಿ ಪರಮಾತ್ಮನಿಗೆ ಬೈಯುತ್ತೇವೆ . ಭವಿಷ್ಯದಲ್ಲಿ ನಡೆಯುವ ಒಳ್ಳೆಯ ಕಾರ್ಯಗಳನ್ನು ನಮ್ಮಿಂದ ನೋಡಲು ಸಾಧ್ಯವಾಗುವುದಿಲ್ಲ . ಹಲವಾರು ಬಾರಿ ನಮ್ಮೊಡನೆ ಒಳ್ಳೆಯದು ನಡೆಯುತ್ತದೆ . ಆದರೆ ಭವಿಷ್ಯದಲ್ಲಿ ನಮ್ಮೊಡನೆ ಕೆಟ್ಟದ್ದು ಕೂಡ ನಡೆಯುತ್ತದೆ . ಆ ಸಂಘಟನೆಯನ್ನು ನಾವು ನೋಡಲು ಸಾಧ್ಯವಾಗುವುದಿಲ್ಲ . ಯಾವುದೇ ಘಟನೆ ಹಿಂದೆ ಒಳ್ಳೆಯದು ಮತ್ತು ಕೆಟ್ಟ ಪರಿಣಾಮ ಎರಡು ಇರುತ್ತದೆ . ನಾವು ಎಲ್ಲಾ ಘಟನೆಗಳನ್ನು ಸಮಯಕ್ಕೆ ಅನುಸಾರವಾಗಿ ನೋಡಿಕೊಂಡು ಹೋಗಬೇಕು . ಒಳ್ಳೆಯ ಜನರು ಯಾಕೆ ದುಃಖದಲ್ಲಿ ಇರುತ್ತಾರೆ ಎಂದು ತಿಳಿಸಲಾಗಿದೆ .

ಇದಕ್ಕೆ ಎರಡು ಕಾರಣಗಳು ಏನು ಎಂದರೆ , ಇಲ್ಲಿ ಒಳ್ಳೆಯ ಜನರೊಂದಿಗೆ ಕೆಟ್ಟ ಘಟನೆಗಳು ಏಕೆ ನಡೆಯುತ್ತವೆ ಎಂದರೆ, ಅವರೊಂದಿಗೆ ತುಂಬಾ ಒಳ್ಳೆಯ ಘಟನೆಗಳು ನಡೆಯುತ್ತವೆ . ಎರಡನೇ ಕಾರಣ ಯಾವ ಮನುಷ್ಯ ನನಗೆ ಕೆಟ್ಟ ಘಟನೆ ನಡೆಯುತ್ತದೆಯೋ ಆತ ಈಶ್ವರನ ಬಳಿ ಹೋಗುತ್ತಾನೆ . ಈಶ್ವರನ ನಾಮ ಸ್ಮರಣೆಯನ್ನು ಮಾಡುತ್ತಾರೆ . ಇದರಿಂದ ಎಲ್ಲಾ ಪಾಪ ದೋಷಗಳು ನಾಶವಾಗುತ್ತದೆ . ಈಶ್ವರನ ಭಕ್ತಿಯೇ ಮುಕ್ತಿಯ ಒಳ್ಳೆಯ ಮಾರ್ಗ ಆಗಿದೆ . ಒಳ್ಳೆಯ ಜನರಿಗೆ ಮಾತ್ರ ಈಶ್ವರನಿಗೆ ಭಕ್ತಿ ತೋರಿಸುವ ಅವಕಾಶ ಪದೇಪದೇ ಸಿಗುತ್ತದೆ .

Leave a Comment