ನಾವು ಈ ಲೇಖನದಲ್ಲಿ ನಿಮ್ಮ ಅಂಗೈಯಲ್ಲಿ ಈ ರೀತಿ ರೇಖೆಗಳು ಇದ್ದರೆ, ಮದುವೆ ಯಾವ ರೀತಿ ನಿರ್ಧಾರ ಆಗುತ್ತದೆ ಎಂದು ತಿಳಿಯೋಣ . ನಿಮ್ಮ ಬುಧ ಪರ್ವತದ ಮೇಲೆ ಮೂಡುವಂತಹ ಏಕಮುಖಿ , ದ್ವಿಮುಖಿ ಮತ್ತು ತ್ರಿಮುಖಿ ರೇಖೆಗಳ ಬಗ್ಗೆ ತಿಳಿದುಕೊಳ್ಳೋಣ . ಒಂದು ಅಥವಾ ಹೆಚ್ಚಿನ ರೇಖೆಗಳು ಇದ್ದರೆ, ನಿಮ್ಮ ಜೀವನದಲ್ಲಿ ಯಾವ ರೀತಿಯ ಪ್ರಭಾವ ಬೀರುತ್ತದೆ. ಎಂದು ತಿಳಿದುಕೊಳ್ಳೋಣ. ಹುಡುಗಿಯರು ಆಗಿದ್ದರೆ, ನಿಮ್ಮ ಎಡಗೈಯನ್ನು ನೋಡಿಕೊಳ್ಳಬೇಕು. ಹುಡುಗರು ಆಗಿದ್ದರೆ. ಬಲಗೆೈಯನ್ನು ನೋಡಿಕೊಳ್ಳಬೇಕು.
ಮೊದಲು ಏಕ ಮುಖಿ ರೇಖೆಯ ಬಗ್ಗೆ ತಿಳಿದುಕೊಳ್ಳೋಣ. ನಿಮ್ಮ ಬುಧ ಪರ್ವತದ ಮೇಲೆ ಒಂದು ರೇಖೆ ಮೂಡಿದ್ದರೆ, ಬುಧ ಪರ್ವದ ಸ್ವಲ್ಪ ಕೆಳ ಭಾಗದಲ್ಲಿ ಇದ್ದರೆ, ಅಥವಾ ಎತ್ತರದಲ್ಲಿ ಇದ್ದರೆ, ಇದರಿಂದ ದೊಡ್ಡದಾದ ವ್ಯತ್ಯಾಸ ಕಾಣುತ್ತದೆ. ಎಲ್ಲಕ್ಕಿಂತ ಮೊದಲು ನಿಮ್ಮ ಚಿಕ್ಕ ಕಿರು ಬೆರಳಿನ ಕೆಳಗಿನ ರೇಖೆ ಮತ್ತು ಹೃದಯ ರೇಖೆಯನ್ನು ಜೋಡಿಸಿ ನೋಡಿದಾಗ ಇದರ ಮಧ್ಯೆ ಇರುವ ಜಾಗದಲ್ಲಿ ಒಂದು ರೇಖೆ ಆಗುತ್ತದೆ. ಇದು ನಿಮ್ಮ ಚಿಕ್ಕ ಕಿರು ಬೆರಳಿನ ಹತ್ತಿರದಲ್ಲಿ ಇರುತ್ತದೆ.
ಇಂತಹ ಸ್ಥಿತಿಯಲ್ಲಿ ವಿವಾಹ ಸ್ವಲ್ಪ ತಡವಾಗುತ್ತದೆ. ಇಲ್ಲಿ ಸಂಬಂಧಗಳನ್ನು ಹುಡುಕುತ್ತಾ ಪ್ರಯತ್ನ ನಡೆಯುತ್ತಿರುತ್ತದೆ. ಮದುವೆ ಮಾತುಗಳು ಬಂದರೂ ಕೂಡ ಅದು ಪೂರ್ತಿಯಾಗುವುದಿಲ್ಲ. ಕೆಲವು ಸಮಸ್ಯೆಗಳು ಬರುತ್ತವೆ. ಇಲ್ಲಿ ಯೋಚನೆ ಮಾಡಿ ಮುಂದೆ ಸಾಗುವುದು ಒಳ್ಳೆಯದು. ಒಂದು ವೇಳೆ ಕೆಳ ಭಾಗದಲ್ಲಿ ಹೃದಯ ರೇಖೆಗೆ ಹತ್ತಿರದಲ್ಲಿ ಇದ್ದರೆ, ಈ ಪರಿಸ್ಥಿತಿಯಲ್ಲಿ ಮದುವೆ ಬೇಗ ಆಗುತ್ತದೆ. ನಿಮ್ಮ ವೃತ್ತಿ ಪ್ರಾರಂಭ ಆಗಿದ್ದರೆ. ಅದೇ ಸಂದರ್ಭದಲ್ಲಿ ವಿವಾಹ ಕೂಡ ಆಗಬಹುದು. 25 ನೇ ವಯಸ್ಸಿಗೂ ಮುನ್ನ ಮದುವೆ ಆಗುವ ಸೂಚನೆ ಕಾಣುತ್ತದೆ. ಅಥವಾ 25 ನೇ ವಯಸ್ಸಿಗೆ ಮದುವೆ ಆಗಬಹುದು .
ಇನ್ನು ದ್ವಿಮುಖಿ ರೇಖೆ ಎರಡು ರೇಖೆಗಳ ಬಗ್ಗೆ ನೋಡುವುದಾದರೆ, ನಿಮ್ಮ ಬುಧ ಪರ್ವತದ ಮೇಲೆ ಎರಡು ರೇಖೆಗಳು ಬರುತ್ತದೆಯೋ ಆಗ ಎರಡು ಮದುವೆ ಆಗುತ್ತದೆ. ಎಂದು ಹೇಳುತ್ತಾರೆ. ಆದರೆ ಈ ಮಾತು ಪೂರ್ತಿಯಾಗಿ ತಪ್ಪು . ಎರಡು ರೇಖೆಗಳು ಇರುವ ಸಂದರ್ಭದಲ್ಲಿ ಮದುವೆಯಾಗಲು ಅಡಚಣೆಗಳು ಬರುತ್ತವೆ. ಮದುವೆ ಮುಂದೆ ಹೋಗುವ ಸಾಧ್ಯತೆ ಇರುತ್ತದೆ . ಬುಧ ಪರ್ವತದ ಮೇಲೆ ಉದ್ದವಾದ ರೇಖೆಯು ಮುನ್ನ ಚಿಕ್ಕದಾಗಿರುವ ರೇಖೆಗಳು ಇದ್ದರೆ , ಎಷ್ಟು ಚಿಕ್ಕ ಚಿಕ್ಕ ರೇಖೆಗಳು ಇರುತ್ತದೆಯೋ ,
ಅಷ್ಟೇ ಅಡಚಣೆಗಳು ಇರುತ್ತದೆ .ದೊಡ್ಡ ರೇಖೆಯಲ್ಲಿ ಹಲವಾರು ಸಮಸ್ಯೆಗಳು ಬರುತ್ತಿರುತ್ತದೆ .ಇದರ ಪ್ರಭಾವ ಕಡಿಮೆ ಆಗುತ್ತಾ ಹೋಗುತ್ತದೆ. ಇದರಿಂದ ನಿಮ್ಮ ವಿವಾಹದಲ್ಲಿ ವಿಳಂಬ ಆಗಬಹುದು . ಒಂದು ವೇಳೆ ಉದ್ದವಾದ ರೇಖೆ ಮೊದಲಿಗೆ ಇದ್ದು ನಂತರ ಚಿಕ್ಕ ಚಿಕ್ಕ ರೇಖೆಗಳು ಇದ್ದರೆ ,ಈ ಪರಿಸ್ಥಿತಿಯಲ್ಲಿ ಮದುವೆ ತುಂಬಾ ಬೇಗ ಆಗುತ್ತದೆ . ಮದುವೆಯಾದ ನಂತರ ಅಡಚಣೆಗಳು ಉಂಟಾಗುತ್ತದೆ . ಅಂದರೆ ಜೀವನ ಸಂಗಾತಿಯ ಜೊತೆಗೆ ಜಗಳ ಆಗುವ ಸಾಧ್ಯತೆ ಇರುತ್ತದೆ .ಒಂದು ಕಡೆಯಿಂದ ಸಮಸ್ಯೆಗಳು ಹೆಚ್ಚಾಗುತ್ತಾ ಹೋಗುತ್ತದೆ .
ಚಿಂತೆಗಳು ಸಹ ಹೆಚ್ಚಾಗುತ್ತದೆ . ಈ ಸ್ಥಿತಿಯಲ್ಲಿ ಸಾಧ್ಯವಾದಷ್ಟು ನಿಮ್ಮ ಮನಸ್ಸನ್ನು ಶಾಂತವಾಗಿ ಇಟ್ಟುಕೊಳ್ಳಿ . ಮುಂದೆ ಒಂದು ದಿನ ನಿಮ್ಮಿಂದಲೇ ತಪ್ಪು, ಸಾಬೀತಾಗಬಹುದು . ಎಲ್ಲಾ ತಪ್ಪಿನ ಹೊಣೆ ನಿಮ್ಮ ಮೇಲೆ ಬರಬಹುದು . ಬುಧ ಪರ್ವತದ ಮೇಲೆ ಒಂದು ಉದ್ದವಾದ ರೇಖೆ ಮಧ್ಯದಲ್ಲಿ ಇದ್ದರೆ,
ಮುಂದೆ ಸಾಗಿ ಅದು ಎರಡು ಭಾಗಗಳಾಗಿ ವಿಭಜನೆಯಾಗಿದ್ದರೆ ,
ಅಂದರೆ ಇಂಗ್ಲಿಷ್ ನಲ್ಲಿ ಇರುವ ವೈ ಅಕ್ಷರದಂತೆ ಆಗಿರುತ್ತದೆ . ಇಂತಹ ಸ್ಥಿತಿಯಲ್ಲಿ ಎರಡು ಮದುವೆಯ ಯೋಗ ಬರಬಹುದು . ಒಂದು ವೇಳೆ ನಿಮ್ಮ ಸಂಗಾತಿಯ ಜೊತೆ ನೀವು ಚೆನ್ನಾಗಿ ಇದ್ದರೆ , ಮದುವೆ ಯೋಗವನ್ನು ತಪ್ಪಿಸಬಹುದು .
ಒಂದು ವೇಳೆ ನಿಮ್ಮ ಬುಧ ಪರ್ವತದ ಮೇಲೆ ಹೆಚ್ಚಿನ ರೇಖೆಗಳು ಇದ್ದರೆ , ಇವರ ಇಚ್ಚೆಗಳು ಆಸೆಗಳು ತುಂಬಾ ಇರುತ್ತವೆ .ಮೊದಲನೇ ಆಸೆ ಪೂರ್ತಿಯಾಗುತ್ತದೆ. ಇವರ ಮನಸ್ಸು ಶಾಂತವಾಗಿ ಇರುವುದಿಲ್ಲ . ಬೇರೆ ಆಸೆಗಳು ಸಹ ಇವರ ಮನಸ್ಸಿನಲ್ಲಿ ಹುಟ್ಟಬಹುದು. .ಇವರ ಆಸೆ ಹೆಚ್ಚಾಗುತ್ತಾ ಹೋಗುತ್ತದೆ , ತಮ್ಮ ಆಸೆಗಳನ್ನು ಪೂರ್ತಿಗೊಳಿಸಲು ತಪ್ಪಾದ ದಾರಿಗಳನ್ನು ಹಿಡಿಯಬಹುದು . ಅಥವಾ ತಪ್ಪಾದ ಸ್ಥಳದಲ್ಲಿ ಹಣವನ್ನು ಹೂಡಿಕೆ ಮಾಡಬಹುದು .
ಇಂಥಹ ಸ್ಥಿತಿಯಲ್ಲಿ ನೀವು ತಾಳ್ಮೆಯಿಂದ ಇರುವುದು ಒಳ್ಳೆಯದು .ಸಾಧ್ಯವಾದಷ್ಟು ಮನಸ್ಸನ್ನು ಶಾಂತವಾಗಿ ಇಟ್ಟುಕೊಳ್ಳಿ . ಇಲ್ಲವಾದರೆ ಇಚ್ಚೆಗಳು ಒಳ್ಳೆಯದಾಗಿರುತ್ತದೆ . ಯಾವುದೇ ಕಾರ್ಯಗಳನ್ನು ಗಡಿಬಿಡಿ ಯಲ್ಲಿ ಮಾಡಬಾರದು . ತಪ್ಪಾದ ಸಮಯದಲ್ಲಿ ಕೂಡ ಮಾಡಬಾರದು . ಒಂದು ವೇಳೆ ಹಣವನ್ನು ಹೂಡಿಕೆ ಮಾಡಿದರೆ ಅದು ನಿಮ್ಮ ವಿರುದ್ಧವಾಗಿ ನಡೆಯಬಹುದು . ಮೂರಕ್ಕಿಂತ ಹೆಚ್ಚು ರೇಖೆಗಳು ಇದ್ದರೆ, ಸಮಸ್ಯೆಗಳು ಎದುರಾಗುವ ಸಾಧ್ಯತೆ ಇರುತ್ತದೆ .
ಮನಸ್ಸು ಕೂಡ ಚಂಚಲವಾಗಿ ಇರುತ್ತದೆ . ಲವ್ ಮ್ಯಾರೇಜ್ ಮತ್ತು ಅರೆಂಜ್ ಮ್ಯಾರೇಜ್ ಎರಡರಲ್ಲೂ ದ್ವಂದ್ವ ಇರುತ್ತದೆ . ಈ ರೀತಿಯ ಚಿಂತೆ ಗೊಂದಲದಲ್ಲಿ ತೊಡಗಿರುತ್ತಾರೆ . ಹೇಗೆ ರೇಖೆಗಳು ಹೆಚ್ಚಾಗುತ್ತವೆಯೋ ಹಾಗೆ ಚಿಂತೆಗಳು ಹೆಚ್ಚಾಗಿ ಕಾಡುತ್ತವೆ . ಇದರಿಂದ ವಿವಾಹ ತಡೆಯಾಗುತ್ತಾ ಹೋಗುತ್ತದೆ . ಒಂದು ವೇಳೆ ನಿಮ್ಮ ಬುಧ ಪರ್ವತದ ಆಕಾರದಲ್ಲಿ ವಿ ರೇಖೆಗಳು ಕಂಡುಬಂದರೆ ,
ಎರಡು ಭಾಗಗಳಲ್ಲಿ ದ್ವಿಮುಖಿಯಾಗಿ ಇರುತ್ತದೆ . ಇವರು ಮದುವೆಯಾದ ನಂತರ ಮತ್ತು ಮದುವೆಗೂ ಮುಂಚೆ ಬಹು ಪಾಲುದಾರರು ಆಗಿರುತ್ತಾರೆ . ನೋಡಲು ತುಂಬಾ ಚೆನ್ನಾಗಿ ಇರುತ್ತಾರೆ . ಸ್ನೇಹಿತರು ಕೂಡ ಹೆಚ್ಚಾಗಿ ಇರುತ್ತಾರೆ .ಸ್ವಭಾವ ಕೂಡ ಒಳ್ಳೆಯದಾಗಿರುತ್ತದೆ . ಆದರೆ ಇದೊಂದು ನಕಾರಾತ್ಮಕ ಅಂಶ ಇವರಲ್ಲಿ ಇರುತ್ತದೆ . ಮುಂದೆ ಇದರಿಂದ ತೊಂದರೆ ಕೂಡ ಆಗಬಹುದು . ಯಾರ ಅಂಗೈಯಲ್ಲಿ ಈ ರೀತಿಯ ರೇಖೆಗಳು ಇರುತ್ತದೆ , ಅವರು ಎಚ್ಚರದಿಂದ ಮುಂದೆ ಸಾಗಬೇಕು .