ಮನೆ ದೇವರಿಗೆ ಪೂಜೆಯನ್ನು ಮಾಡುವಾಗ ವಾರಕ್ಕೆ ಒಮ್ಮೆಯಾದರೂ ಹೀಗೆ ಮಾಡಬೇಕು

0

ಮನೆ ದೇವರಿಗೆ ಪೂಜೆಯನ್ನು ಮಾಡುವಾಗ ವಾರಕ್ಕೆ ಒಮ್ಮೆಯಾದರೂ ಹೀಗೆ ಮಾಡಬೇಕು. ಮನೆಯಲ್ಲಿ ಪ್ರತಿನಿತ್ಯವೂ ಕೂಡ ಪೂಜೆ ಪುನಸ್ಕಾರಗಳನ್ನು ಮಾಡುತ್ತೇವೆ. ಶಾಸ್ತ್ರದ ಪ್ರಕಾರ ಮೊದಲು ಮನೆ ದೇವರಿಗೆ ಪೂಜೆ ಸಲ್ಲಿಸಿ ನಂತರ ಬೇರೆ ದೇವರಿಗೆ ಪೂಜೆ ಸಲ್ಲಿಸಿ ನಂತರ ಬೇರೆ ದೇವರಿಗೆ ಪೂಜೆಯನ್ನು ಸಲ್ಲಿಸಬೇಕು ಎಂದು ಹೇಳಲಾಗುತ್ತದೆ ಏಕೆಂದರೆ ಮನೆದೇವರು ಮನೆಯನ್ನು ಕಾಯುವ ದೇವನಾಗಿರುವುದರಿಂದ ನಮ್ಮ ಹಿರಿಯರು ಮಾಡಿಕೊಂಡು ಬಂದಂತಹ ಸಂಪ್ರದಾಯವನ್ನು ಬದಲಿಸಬಾರದು ಹಾಗಾಗಿ ಮನೆಯ ದೇವರಿಗೆ ಹೆಚ್ಚು ಪ್ರಾಮುಖ್ಯತೆಯನ್ನು ಕೊಡಬೇಕು.

ಸಾಮಾನ್ಯವಾಗಿ ನಾವು ಪೂಜೆಯನ್ನು ಮಾಡುವಾಗ ದೀಪವೊಂದು ಬೆಳಗಿಸಿ ಪೂಜೆಯನ್ನು ಮಾಡುತ್ತೇವೆ ಆದರೆ ಮನೆಯಲ್ಲಿ ಮಾಡಿದಂತಹ ಈ ಒಂದು ದೀಪಧಾರತಿಯನ್ನು ಮನೆದೇವರಿಗೆ ಬೆಳಗಿಸುವುದರಿಂದ ಸಾಕಷ್ಟು ಉತ್ತಮವಾದ ಫಲಗಳನ್ನು ಪಡೆಯಬಹುದು ಎಂದು ಹೇಳಲಾಗುತ್ತದೆ. ಹಾಗಾದರೇ ಮನೆಯಲ್ಲಿ ಯಾವ ರೀತಿಯಾಗಿ ದೇವರಿಗೆ ದೀಪರಾಧನೆ ಮಾಡಬೇಕು ಎಂದು ತಿಳಿಸಿಕೊಡುತ್ತೇವೆ. ಮನೆಯಲ್ಲಿ ಶ್ರೀನಿವಾಸನ ಪೂಜೆ ಅಥವಾ ಬೇರೆ ಯಾವುದೇ ಮನೆ ದೇವರ ಪೂಜೆಯನ್ನು ಮಾಡುವಾಗ ಈ ಒಂದು ವಿಶೇಷವಾದ ಆರತಿಯನ್ನು ಬೆಳಗಿಸಬೇಕು.

ಅದೇ ಅಕ್ಕಿ ಹಿಟ್ಟಿನ ದೀಪ, ಇದನ್ನು ನೀವು ಮನೆಯಲ್ಲೇ ತಯಾರಿಸಿಕೊಳ್ಳಬಹುದು. ಅಕ್ಕಿಹಿಟ್ಟಿಗೆ ಹಾಲು ಅಥವಾ ತುಪ್ಪವನ್ನು ಸೇರಿಸಿ ಅದನ್ನು ಹದವಾಗಿ ಕಲಸಿಕೊಂಡು ದೀಪದ ಹಾಗೆ ಮಾಡಿಕೊಳ್ಳಬೇಕು ನಂತರ ಇದಕ್ಕೆ ತುಪ್ಪವನ್ನು ಹಾಕಿ ಬತ್ತಿಯನ್ನು ಹಾಕಿ ಆರತಿಯನ್ನಾಗಿ ಮಾಡಿಕೊಂಡು ದೇವರಿಗೆ ಬೆಳಗಬೇಕು.
ಈ ಒಂದು ಆರತಿಯನ್ನು ನೀವು ನಿಮ್ಮ ಮನೆ ದೇವರ ವಾರ ಅಥವಾ ಅಮಾವಾಸ್ಯೆ ಹುಣ್ಣಿಮೆಯ ದಿನಗಳಲ್ಲಿ ಮಾಡಿಕೊಳ್ಳಬಹುದು.

ಇನ್ನು ದೀಪವು ಸಂಪೂರ್ಣವಾಗಿ ಉರಿದ ನಂತರ ಈ ಒಂದು ಅಕ್ಕಿಹಿಟ್ಟಿನ ದೀಪವನ್ನು ಹಸುಗಳಿಗೆ ನೀಡಬಹುದು. ಒಂದು ವೇಳೆ ಹಸುಗಳು ಇಲ್ಲ ಎಂದರೆ ನೀರಿನಲ್ಲಿ ಕರಗಿಸಿ ಮರದ ಕೆಳಗಡೆ ಹಾಕಬಹುದು. ಈ ರೀತಿಯಾಗಿ ದೇವರಿಗೆ ಸದಾ ನಾವೇ ಅಕ್ಕಿಹಿಟ್ಟಿನಿಂದ ದೀಪವನ್ನು ಮಾಡಿ ಆರತಿಯನ್ನು ಬೆಳಗಿಸುವುದರಿಂದ ನಮ್ಮ ಇಷ್ಟಾರ್ಥಗಳು ಶೀಘ್ರವಾಗಿ ನೆರವೇರುತ್ತವೆ. ಮನೆ ದೇವರ ಅನುಗ್ರಹ ಸಂಪೂರ್ಣವಾಗಿ ನಮ್ಮ ಮೇಲೆ ಇರುತ್ತದೆ ಎಂದು ಹೇಳಲಾಗುತ್ತದೆ.

ಇನ್ನು ಈ ಒಂದು ಅಕ್ಕಿಹಿಟ್ಟಿನ ದೀಪಧಾರತಿಯು ಮಹಾವಿಷ್ಣುವಿಗೆ ಬಹಳ ಪ್ರಿಯವಾಗಿ ಇರುವುದರಿಂದ ಮನೆಯಲ್ಲಿ ಶ್ರೀನಿವಾಸನ ಪೂಜೆಯನ್ನು ಮಾಡುವವರು ತಪ್ಪದೇ ಈ ಒಂದು ಆರತಿಯನ್ನು ಮಾಡಬೇಕು. ಶ್ರಾವಣ ಮಾಸದಲ್ಲಿ ವಿಶೇಷವಾಗಿ ಶ್ರೀನಿವಾಸನಿಗೆ ಈ ಒಂದು ದೀಪದ ಆರತಿಯನ್ನು ಮಾಡುವುದರಿಂದ ಉತ್ತಮವಾದ ಫಲಗಳನ್ನು ಪಡೆಯಬಹುದು.ಇನ್ನು ಮನೆ ದೇವರಿಗೂ ಕೂಡ ಈ ಒಂದು ದೀಪವನ್ನು ಪ್ರತಿವಾರ ಬೆಳಗಿಸಬಹುದು. ಸಾಧ್ಯವಾಗದೇ ಹೋದರೆ ಅಮಾವಾಸ್ಯೆ ಅಥವಾ ಹುಣ್ಣಿಮೆಯ ದಿನಗಳಲ್ಲಿ ಬೆಳಗಿಸಬಹುದು.

Leave A Reply

Your email address will not be published.