ಯಾವ ಯಾವ ಹಣ್ಣನ್ನು ಯಾವಾಗ ತಿನ್ನಬೇಕು

ಯಾವ ಯಾವ ಹಣ್ಣನ್ನು ಯಾವಾಗ ತಿನ್ನಬೇಕು ಆರೆಂಜ್ ಹಣ್ಣನ್ನು ಬೆಳಿಗ್ಗೆ ಬರಿ ಹೊಟ್ಟೆಯಲ್ಲಿ ಹಾಗೂ ರಾತ್ರಿ ಮಲಗುವ ಮುಂಚೆ ತಿನ್ನಬಾರದು. ಸೇಬು ಹಣ್ಣನ್ನು ಬೆಳಿಗ್ಗೆ ಬರಿ ಹೊಟ್ಟೆಯಲ್ಲಿ ತಿನ್ನಬೇಕು.

ದ್ರಾಕ್ಷಿ ಶರೀರದಲ್ಲಿ ನೀರಿನ ಅಂಶವನ್ನು ಹೆಚ್ಚಿಗೆ ಮಾಡುತ್ತದೆ. ದ್ರಾಕ್ಷಿಯನ್ನು ಯಾವಾಗ ಬೇಕಾದರೂ ತಿನ್ನಬಹುದು. ಮುಖ್ಯವಾಗಿ ಬಿಸಿಲಿಗೆ ಹೋಗುವ ಮುಂಚೆ ಇದನ್ನು ತಿಂದರೆ ಉತ್ತಮ.

ಮಾವಿನ ಹಣ್ಣನ್ನು ಯಾವ ಸಮಯದಲ್ಲಿ ಬೇಕಾದರೂ ತಿನ್ನಬಹುದು. ಮೋಸಂಬಿಯನ್ನು ಸಾಯಂಕಾಲ ತಿನ್ನಬಹುದು. ಬಾಳೆಹಣ್ಣನ್ನು ಊಟ ಆದ ನಂತರ ತಿನ್ನಬಹುದು.ಪಪ್ಪಾಯ ಹಣ್ಣನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುವುದು ಉತ್ತಮ. ಬೇರೆ ಸಮಯದಲ್ಲಿ ಕೂಡ ತಿನ್ನಬಹುದು.

Leave a Comment