ಬದುಕಿದ್ದಾಗ ಗರುಡಪುರಾಣ ಓದಿದರೆ ಏನಾಗುತ್ತದೆ ? 

ನಾವು ಈ ಲೇಖನದಲ್ಲಿ ಶ್ರೀ ಮಹಾವಿಷ್ಣು ಮತ್ತು ಆತನ ವಾಹನವಾದ ಗರುಡನ ನಡುವೆ ನಡೆಯುವಂತಹ ಸಂಭಾಷಣೆಯಾದ ಗರುಡ ಪುರಾಣದ ಬಗ್ಗೆ ತಿಳಿದುಕೊಳ್ಳೋಣ. ಈ ಭೂಮಿಯ ಮೇಲೆ ಜೀವಿಸುವಂತಹ ಯಾವ ಜೀವಿಯು ಕೂಡ ಗರುಡ ಪುರಾಣವನ್ನು ಓದಬಾರದೆಂದು ಮನುಷ್ಯರಲ್ಲಿ ಆ ಭಯಂಕರ ಭಯವನ್ನು ಕಲ್ಪಿಸಿದ್ದಾರೆ. ಈ ಭೂಮಿಯ ಮೇಲೆ ಜೀವಿಸುವಂತಹ ವ್ಯಕ್ತಿಯು ಗರುಡ ಪುರಾಣವನ್ನು ಓದಿದರು ಗ್ರಂಥವನ್ನು ಇಟ್ಟುಕೊಂಡರೂ ಸಹ ಅವರ ಜೀವನದಲ್ಲಿ

ಕಷ್ಟ ಮತ್ತು ತೊಂದರೆಗಳು ಅಶುಭಗಳು ನಡೆಯುತ್ತವೆ. ಎಂಬುದು ಅವರ ಭಾವನೆಯಾಗಿದೆ. ಆದರೆ ಈ ಒಂದು ರಹಸ್ಯವನ್ನು ತಿಳಿದುಕೊಳ್ಳೋಣ . ಈ ರಹಸ್ಯವನ್ನು ತಿಳಿದ ನಂತರ ಭಯದಿಂದ ವಿಮುಕ್ತಿ ಪಡೆಯುತ್ತೀರಾ . ಈ ಭೂಮಿಯ ಮೇಲೆ ಜೀವಿಸುವಂತಹ ವ್ಯಕ್ತಿಗಳು ಗರುಡ ಪುರಾಣವನ್ನು ಓದಬಹುದಾ ಅಥವಾ ಇಲ್ಲವಾ ಎನ್ನುವ ವಿಷಯವನ್ನು ವಿವರವಾಗಿ ತಿಳಿದುಕೊಳ್ಳೋಣ. ಗರುಡ ಪುರಾಣವನ್ನು ಮನುಷ್ಯರ ಮರಣದ ನಂತರವಾಗಲಿ ಅಥವಾ ಮರಣಕ್ಕೆ ಮೊದಲು ಓದಿಸುತ್ತಾರೆ. ಯಾರಾದರೂ ಅದನ್ನು ಓದಬೇಕು ಎಂದುಕೊಂಡರೆ , ಭಯವಿಲ್ಲದೆ ಓದಬಹುದು. ಆದರೆ ಪರಿಶುದ್ಧ ಮನಸ್ಸಿನಿಂದ ಮಾತ್ರ ಓದಬೇಕು.

ಈ ಗರುಡ ಪುರಾಣದಲ್ಲಿ ಸ್ವರ್ಗ ನರಕ ಮತ್ತು ಪಾಪ, ಪುಣ್ಯ ಇಂತಹ ಅನೇಕ ವಿಷಯಗಳನ್ನು ಹೇಳಲಾಗಿದೆ. ಹಾಗೆಯೇ ಇದರಲ್ಲಿ ಜ್ಞಾನ ವಿಜ್ಞಾನ ನೀತಿ ನಿಯಮಗಳು ಮತ್ತು ಧರ್ಮಕ್ಕೆ ಸಂಬಂಧಿಸಿದ ಕೆಲವು ವಿವರಗಳನ್ನು ವಿವರವಾಗಿ ತಿಳಿಸಲಾಗಿದೆ. ಈ ಗರುಡ ಪುರಾಣವೂ 18 ಹಿಂದೂ ಮಹಾಪುರಾಣಗಳಲ್ಲಿ ಒಂದು ಎಂದು ಹೇಳಲಾಗುತ್ತದೆ. ಗರುಡ ಪುರಾಣದ ಸೃಷ್ಟಿಕರ್ತ ಶ್ರೀ ಮಹಾವಿಷ್ಣು ಈ ಗರುಡ ಪುರಾಣದಲ್ಲಿ 18000 ಶ್ಲೋಕಗಳು ಮತ್ತು 281 ಅಧ್ಯಾಯಗಳಿವೆ.

ಗರುಡ ಪುರಾಣದಲ್ಲಿ ಒಂದು ಕಡೆ ಮರಣಕ್ಕೆ ಸಂಬಂಧಿಸಿದ ವಿಷಯಗಳನ್ನು ಮತ್ತೊಂದೆಡೆ ಜೀವನಕ್ಕೆ ಸಂಬಂಧಿಸಿದ ವಿಷಯಗಳನ್ನು ರಚಿಸಲಾಗಿದೆ. ಗರುಡ ಪುರಾಣದ ಮೂಲಕ ಅನೇಕ ರೀತಿಯ ನಮಗೆ ತಿಳಿಯದೆ ಇರುವ ವಿಷಯಗಳನ್ನು ತಿಳಿಯಬಹುದು. ಗರುಡ ಪುರಾಣದಲ್ಲಿ ಮರಣಕ್ಕೂ ಮೊದಲು ಮರಣದ ನಂತರವೂ ಪೂರ್ತಿಯಾಗಿ ವರ್ಣಿಸಲಾಗಿದೆ. ಶ್ರೀ ಮಹಾ ವಿಷ್ಣುವಿನ ವಾಹನವಾದ ಗರುಡನ ಜೊತೆಗಿನ ಸಂಭಾಷಣೆ ಈ ಗರುಡ ಪುರಾಣ. ಯಾರ ಮನೆಯಲ್ಲಿ ಮರಣ ಸಮೀಪಿಸಿದರೂ ಅಥವಾ ಯಾರಾದರೂ ಮರಣಕ್ಕೆ ಸಮೀಪಿಸಿದರೂ, ಸಮೀಪದಲ್ಲಿದ್ದಾಗ ಸಹ ಗರುಡ ಪುರಾಣವನ್ನು ಓದಿಸುತ್ತಾರೆ

ಇದನ್ನು ಕೇಳಿದಾಗ ಬಹಳ ಮಂದಿಯ ಮನಸ್ಸುಗಳಲ್ಲಿ ಭಯವಿರುತ್ತದೆ . ಈ ಭೂಮಿಯ ಮೇಲೆ ಜೀವಿಸುವ ಮನುಷ್ಯರು ಈ ಗರುಡ ಪುರಾಣವನ್ನು ಓದಬಾರದೆಂದು , ಮತ್ತು ಅವರ ಬಳಿ ಇಟ್ಟುಕೊಳ್ಳಬಾರದೆಂದು ಬಹಳ ಮಂದಿ ಭಾವಿಸುತ್ತಾರೆ. ಗರುಡ ಪುರಾಣದ ಮೊದಲ ಅಧ್ಯಾಯದಲ್ಲಿ ಇದಕ್ಕೆ ಸಂಬಂಧಿಸಿದ ವಿವರಗಳನ್ನು ಹೇಳಲಾಗಿದೆ. ಗರುಡ ಪುರಾಣವನ್ನು ಭೂಮಿಯ ಮೇಲೆ ಜೀವಿಸಿದ ಯಾವ ಮನುಷ್ಯರು ಓದುತ್ತಾರೋ ಅವರಿಗೆ ವಿದ್ಯಾ ಬುದ್ಧಿ ಆಯುಷ್ಯ ಸೌಂದರ್ಯ ಧನ ವಿಜಯ ಮತ್ತು ಆರೋಗ್ಯದ ಬಗ್ಗೆ ಜ್ಞಾನ ಲಭಿಸುತ್ತದೆ .

ಯಾರಾದರೂ ಗರುಡ ಪುರಾಣವನ್ನು ಶ್ರದ್ಧೆ ಭಕ್ತಿಗಳಿಂದ ನಿಯಮವನ್ನು ಪಾಲಿಸಿ ಓದುತ್ತಾರೋ ಅಥವಾ ಬೇರೆಯವರಿಗೆ ಕೇಳಿಸುತ್ತಾರೋ ಅವರು ಬಹಳಷ್ಟು ಪುಣ್ಯಾತ್ಮರಾಗುತ್ತಾರೆ. ಅವರಿಗೆ ಪುಣ್ಯ ಲಭಿಸುತ್ತದೆ .ಗರುಡ ಪುರಾಣದ ಪ್ರಕಾರ ಅವರ ತಂದೆ ತಾಯಿಗಳನ್ನು ದುಃಖ ಪಡಿಸುತ್ತಾರೋ ಹಾಗೆ ಅವರ ಸಂತಾನ ಅವರು ಪುನರ್ಜನ್ಮದಲ್ಲಿ ಈ ಭೂಮಿಯ ಮೇಲೆ ಜನಿಸಲಾರರು . ಅವರು ಗರ್ಭದಲ್ಲಿರುವಾಗಲೇ ಸಾವನ್ನಪ್ಪುತ್ತಾರೆ . ಸ್ತ್ರೀಯರನ್ನು ಹಿಂಸಿಸುವವರು ಅವರ ಪುನರ್ಜನ್ಮದಲ್ಲಿ ಅವರು ಅನಾರೋಗ್ಯವನ್ನು ಹೊಂದಿರುತ್ತಾರೆ. ಅಷ್ಟೇ ಅಲ್ಲದೆ ಅನಾರೋಗ್ಯದಿಂದಲೇ ಜೀವನ ಸಾಗಿಸುತ್ತಾರೆ.

ಯಾರ ಬಳಿ ಈ ಗರುಡ ಪುರಾಣ ಇರುತ್ತದೋ ಅವರ ಬಳಿ ಧನ ಧಾನ್ಯಗಳಿಗೆ ಕೊರತೆ ಇರುವುದಿಲ್ಲ . ಈ ಪುರಾಣವನ್ನು ಓದುತ್ತಾರೋ ಅಥವಾ ಕೇಳುತ್ತಾರೋ ಅವರು ಸುಖ ಭೋಗಗಳನ್ನು ಅನುಭವಿಸುತ್ತಾರೆ .ಹಾಗೆಯೇ ಮೋಕ್ಷವನ್ನು ಸಹ ಪಡೆಯುತ್ತಾರೆ. ಈ ಮಹಾ ಗರುಡ ಪುರಾಣ ಓದುವುದರಿಂದ ಮನುಷ್ಯನಿಗೆ ಧರ್ಮ ಮತ್ತು ಮೋಕ್ಷ ಬಗೆಗಿನ ವಿಷಯಗಳ ಮೇಲೆ ಜ್ಞಾನವ ಲಭಿಸುತ್ತದೆ. ಈ ಮಹಾ ಗರುಡ ಪುರಾಣವನ್ನು ಓದಿದವರಲ್ಲಿ ಯಾರಿಗಾದರೂ ಪುತ್ರ ಸಂತಾನ ಬೇಕೆಂಬ ಕೋರಿಕೆ ಇದ್ದರೆ ಅವರ ಬಯಕೆ ಈಡೇರುತ್ತದೆ.

ಅವರು ಪ್ರತಿ ವಿಷಯಗಳಲ್ಲಿಯೂ ಸಹ ಅಭಿವೃದ್ಧಿ ಪಡೆಯುತ್ತಾರೆ. ಸ್ತ್ರೀಯರಿಗೆ ಸಂತಾನ ವಿವಾಹವಾಗದವರಿಗೆ ವಿವಾಹ ಭಾಗ್ಯ ಲಭಿಸಿ ಅವರಿಗೆ ಒಳ್ಳೆಯ ಗಂಡ ಅಥವಾ ಹೆಂಡತಿ ದೊರಕುತ್ತಾರೆ . ಹಾಗೆಯೇ ವಿದ್ಯಾರ್ಥಿಗಳಿಗೆ ಒಳ್ಳೆಯ ವಿದ್ಯಾಭ್ಯಾಸ ಲಭಿಸುತ್ತದೆ . ತಮ್ಮ ತಮ್ಮ ಕೆಲಸ ಕಾರ್ಯಗಳಲ್ಲಿ ವಿಜಯ ಪಡೆಯಬೇಕೆಂದುಕೊಳ್ಳುವವರಿಗೆ ವಿಜಯ ಲಭಿಸುತ್ತದೆ . ಚಿಕ್ಕ ಚಿಕ್ಕ ತಪ್ಪುಗಳನ್ನು ಮಾಡಿದವರಿಗೆ ಆ ತಪ್ಪುಗಳಿಂದ ವಿಮುಕ್ತಿ ದೊರೆಯುತ್ತದೆ. ಹಾಗೆಯೇ ಜ್ಞಾನ ಪಡೆಯಬೇಕೆಂದುಕೊಳ್ಳುವವರಿಗೆ ಸಂಪೂರ್ಣ ಲೋಕಜ್ಞಾನ ಲಭಿಸುತ್ತದೆ.

ಶ್ರೇಷ್ಠ ಗರುಡ ಪಕ್ಷಿಯ ಮೂಲಕ ಹೇಳಲಾದ ಈ ಗರುಡ ಪುರಾಣವು ಬಹಳಷ್ಟು ಶ್ರೇಷ್ಠವಾದದು ಇದು ಲೋಕ ಕಲ್ಯಾಣ ನಿಮಿತ್ತ ಬರೆಯಲಾಗಿದೆ . ಯಾರಾದರೂ ಸರಿ ಈ ಮಹಾಪುರಾಣದಲ್ಲಿನ ಒಂದು ಶ್ಲೋಕವನ್ನು ಓದಿದರು ಸಹ ಅವರಿಗೆ ಅಕಾಲಿಕ ಮರಣ ಸಂಭವಿಸುವುದಿಲ್ಲ. ಹಾಗೆಯೇ ಶತ್ರುಗಳಿಂದ ತಪ್ಪಿಸಿಕೊಳ್ಳುತ್ತಾರೆ. ಆದ್ದರಿಂದ ಗರುಡ ಪುರಾಣವು ಬಹಳಷ್ಟು ಪ್ರಾಮುಖ್ಯತೆ ಎಂದು ಹೇಳಲಾಗುತ್ತದೆ . ಶ್ರೀ ಮಹಾ ಪುರಾಣಗಳಲ್ಲಿ ಗರುಡ ಪುರಾಣಕ್ಕೆ ಮೀರಿದ ಪುರಾಣವಿಲ್ಲ ಎಲ್ಲಾ ದೇವರುಗಳಲ್ಲಿ ಜನಾರ್ದನನ್ನು

ಹೇಗೆ ಶ್ರೇಷ್ಠರು ಅದೇ ರೀತಿಯಾಗಿ ಎಲ್ಲಾ ಶ್ರೇಷ್ಠವಾದ ಪುರಾಣಗಳಲ್ಲಿಯೂ ಒಂದು ಗರುಡ ಪುರಾಣವು ಶ್ರೀ ಹರಿಯನ್ನು ನಿರೂಪಿಸುವುದರಲ್ಲಿ ಪ್ರಮುಖವಾದದು . ಈ ಗರುಡ ಪುರಾಣವು ಪವಿತ್ರವಾದದ್ದು ಮತ್ತು ಪುಣ್ಯವಾದದ್ದು. ಈ ಗರುಡ ಪುರಾಣವನ್ನು ಯಾರಾದರೂ ಕೇಳುತ್ತಾರೋ ಅವರು ಕೈಗೊಳ್ಳುವ ಪ್ರತಿ ಕೆಲಸಗಳಲ್ಲಿಯೂ ಸಹ ವಿಜಯ ಸಾಧಿಸುತ್ತಾರೆ. ಆದ್ದರಿಂದಲೇ ಗರುಡ ಪುರಾಣವನ್ನು ಕೇಳಬೇಕು ಯಾವ ಮನುಷ್ಯರಾದರೂ ತನ್ನ ಜೀವನದಲ್ಲಿ

ಈ ಗರುಡ ಪುರಾಣವನ್ನು ಓದುತ್ತಾರೋ ಅವರು ಮರಣದ ನಂತರ ಪಾಪ ವಿಮುಕ್ತಿ ಹೊಂದಿ ಯಮ ಧರ್ಮರಾಜನ ಶಿಕ್ಷೆಗಳಿಂದ ತಪ್ಪಿಸಿಕೊಂಡು ಸ್ವರ್ಗಕ್ಕೆ ಸೇರುತ್ತಾರೆ. ವಾಸ್ತವವಾಗಿ ಹೇಳಬೇಕೆಂದರೆ ಗರುಡ ಪುರಾಣದಲ್ಲಿ ಮನುಷ್ಯರು ಮರಣದ ನಂತರ ಏನಾಗುತ್ತಾರೆ ಎಂಬ ವಿಷಯಗಳನ್ನು ಹೇಳಲಾಗಿದೆ. ನಮ್ಮ ಅನೇಕ ಮಂದಿ ಯಾರಾದರೂ ಮರಣ ಹೊಂದಿದಾಗ ಅಥವಾ ಮರಣದ ಸಮಯದಲ್ಲಿ ಮಾತ್ರವೇ ಈ ಗರುಡ ಪುರಾಣವನ್ನು ಓದಿಸುವುದು ನಡೆಯುತ್ತದೆ. ಆದ್ದರಿಂದಲೇ ಜನರಲ್ಲಿ ಭಯವು ಮನೆ ಮಾಡಿಕೊಂಡಿದೆ ಆದರೆ ಆ ರೀತಿಯಾಗಿ ಯಾವುದೋ ಇಲ್ಲ ಯಾರಾದರೂ ಸರಿ

ಈ ಗರುಡ ಪುರಾಣವನ್ನು ಯಾವಾಗ ಬೇಕಾದರೂ ಓದಬಹುದು . ಆದ್ದರಿಂದ ನೀವು ಸಹ ನಿಮಗೆ ಅನುಕೂಲವಿದ್ದಾಗ ಶ್ರದ್ದಾ ಭಕ್ತಿಯಿಂದ ಓದಿ. ಜ್ಞಾನವನ್ನು ಇನ್ನಷ್ಟು ಹೆಚ್ಚಾಗಿ ಪಡೆದು ನಿಮ್ಮ ಜೀವನವನ್ನು ಸುಖಮಯವಾಗಿಸಿಕೊಳ್ಳಿ. ಶ್ರೀ ಗರುಡ ಮಹಾಪುರಾಣವನ್ನು ಓದುವುದರಿಂದ ನಿಮ್ಮ ಮರಣದ ನಂತರ ನಡೆಯಬಹುದಾದ ರಹಸ್ಯ ಸಂಗತಿಗಳನ್ನು ಸುಲಭವಾಗಿ ಗ್ರಹಿಸಬಹುದು .ಈ ಗರುಡ ಪುರಾಣದಲ್ಲಿ ಯಾವ ಕಾರ್ಯಗಳು ಒಳ್ಳೆಯವು ಮತ್ತು ಯಾವ ಕಾರ್ಯಗಳು ಕೆಟ್ಟವು ಎಂಬುದರ ಬಗ್ಗೆ ಸಂಪೂರ್ಣವಾಗಿ ತಿಳಿಸಲಾಗಿದೆ. ಈ ಪುರಾಣದಲ್ಲಿ ಮೃತ್ಯುವಿನ ನಂತರದ ಶಿಕ್ಷೆಗಳನ್ನು ವಿವರಿಸಲಾಗಿದೆ.

ಈ ಪುರಾಣವನ್ನು ಓದಿ ಗ್ರಹಿಸಿ ಅದೇ ಪ್ರಕಾರವಾಗಿ ಜೀವನ ನಡೆಸಿದರೆ ಒಂದು ಒಳ್ಳೆಯ ಸಮಾಜವನ್ನು ನಿರ್ಮಿಸಬಹುದು. ಅಷ್ಟೇ ಅಲ್ಲದೆ ಈ ಗರುಡ ಪುರಾಣವನ್ನು ಓದುವುದರಿಂದ ಪಿತೃದೇವತೆಯರು ಕೂಡ ಅದೃಷ್ಟದಲ್ಲಿ ಬಂದು ಕೇಳುತ್ತಾರೆ. ಹಾಗೆ ಗರುಡ ಪುರಾಣದಲ್ಲಿ ನಮ್ಮ ಜೀವನದಲ್ಲಿ ಬೆಳಕು ಮತ್ತು ಅನೇಕ ಅದ್ಭುತ ವಿಷಯಗಳಿವೆ. ಹಿಂದೂ ಸಂಪ್ರದಾಯದಲ್ಲಿ ಈ ಗರುಡ ಪುರಾಣಕ್ಕೆ ಪ್ರಮುಖ ಸ್ಥಾನವಿದೆ. ಹಾಗೆಯೇ ಗರುಡ ಪುರಾಣದಲ್ಲಿ ನಾವು ಯಾರ ಬಳಿ ಕಠಿಣವಾಗಿ ಪ್ರವರ್ತಿಸಬೇಕು.

ಯಾರ ಬಳಿ ಜಗಳವಾಡಬಾರದು ಮತ್ತು ಯಾರ ಬಳಿ ಹೇಗೆ ನಡೆದುಕೊಳ್ಳಬೇಕೆಂಬ ಅಂಶಗಳನ್ನು ವಿವರವಾಗಿ ವಿವರಿಸಿದ್ದಾರೆ. ಪ್ರತಿ ಕೆಲಸವನ್ನು ಸಮಯಕ್ಕೆ ಸರಿಯಾಗಿ ಜಾಗೃತೆಯಿಂದ ಇರುವವರ ಮೇಲೆ ದಯೆ ತೋರಬಾರದೆಂದು ಅವರ ಬಳಿ ಕಠಿಣವಾಗಿ ಪ್ರವರ್ತಿಸಬೇಕು ಒಳ್ಳೆಯದು ಎಂದು ಗರುಡ ಪುರಾಣ ಹೇಳುತ್ತದೆ ಹಾಗೆಯೇ ನಮ್ಮ ಜೀವನದಲ್ಲಿ ಅನಾವಶ್ಯಕವಾಗಿ ನಮ್ಮ ಮೇಲೆ ಕೋಪವನ್ನು ಪ್ರದರ್ಶಿಸುವವರ ಮೇಲೆ ಕಠಿಣವಾಗಿ ಪ್ರವರ್ತಿಸುವುದರಲ್ಲಿ

ಯಾವುದೇ ರೀತಿಯ ತಪ್ಪಿಲ್ಲ ಎಂದು ಸಹ ಹೇಳಲಾಗಿದೆ. ನೀವು ಅಂಥವರಿಗೆ ಭಯ ಬಿದ್ದರೆ ನೀವು ಬಲಹೀನರಾಗಬಹುದು. ಅಂದರೆ ಒಳ್ಳೆಯತನವನ್ನು ಕೈಲಾಗದವರು ಎಂಬಂತೆ ಭಾವಿಸುವ ಅವಕಾಶವಿರುತ್ತದೆ . ಆದರೆ ಆದಷ್ಟು ಅವರನ್ನು ತಿದ್ದುವ ಪ್ರಯತ್ನ ಮಾಡಿ ಆದರೆ ಅದು ಸಾಧ್ಯವಾಗದಿದ್ದಾಗ ಕಠಿಣವಾಗಿ ವರ್ತಿಸುವುದು ಹಾಗೆಯೇ ಅಕ್ಕ ಪಕ್ಕದವರ ಜೊತೆ ಒಳ್ಳೆಯ ಸಂಬಂಧ ಹೊಂದಿರಬೇಕು. ಏಕೆಂದರೆ ನಾವು ಕಷ್ಟದಲ್ಲಿದ್ದಾಗ ಅವರ ಒಳ್ಳೆಯ ಮಾತುಗಳು ಧೈರ್ಯ ಮತ್ತು ಪ್ರೇಮ ನಮ್ಮ ಜೀವನಕ್ಕೆ ಎಷ್ಟೋ ಬಲವನ್ನು ನೀಡುತ್ತದೆ. ಗರುಡ ಪುರಾಣದ ಪ್ರಕಾರ ಕೊಳೆಯಾದ ಬಟ್ಟೆಯನ್ನು ಧರಿಸಬಾರದು.

ಏಕೆಂದರೆ ತಾಯಿ ಲಕ್ಷ್ಮೀದೇವಿಯು ಕೋಪಿಸಿಕೊಳ್ಳುತ್ತಾಳೆ. ಪರವಾಗಿರುವ ಕಡೆ ಲಕ್ಷ್ಮಿದೇವಿ ನೆಲೆಸಿರುತ್ತಾಳೆ ಆದ್ದರಿಂದ ನೀವು ಮುಂಜಾನೆ ಸ್ನಾನ ಮಾಡಿದ ನಂತರ ಶುಭ್ರವಾದ ಬಟ್ಟೆಗಳನ್ನು ಧರಿಸಬೇಕು ಆಗ ಮಾತ್ರವೇ ತಾಯಿ ಲಕ್ಷ್ಮಿ ದೇವಿಯು ಪ್ರಸನ್ನಳಾಗುತ್ತಾಳೆ . ಮತ್ತು ಒಲಿಯುತ್ತಾಳೆ. ಆದ್ದರಿಂದ ಮುಂಜಾನೆ ಸ್ನಾನ ಮಾಡಿದ ನಂತರ ಶುಭ್ರವಾದ ಬಟ್ಟೆಗಳನ್ನು ಧರಿಸಬೇಕು. ಮನೆಯನ್ನು ಶುಭ್ರವಾಗಿಟ್ಟುಕೊಳ್ಳಬೇಕು. ಆಗ ಮಾತ್ರವೇ ತಾಯಿ ಲಕ್ಷ್ಮಿ ದೇವಿ ಅನುಗ್ರಹಿಸುತ್ತಾಳೆ ಎಂದು ಗರುಡ ಪುರಾಣದಲ್ಲಿ ಹೇಳಲಾಗಿದೆ . ಇದೇ ತರಹ ಗರುಡ ಪುರಾಣದಲ್ಲಿ ಅನೇಕ ವಿಷಯಗಳನ್ನು ಬರೆಯಲಾಗಿದೆ.

Leave a Comment