ಬದುಕಿನ 9 ಸೂತ್ರಗಳು ಪ್ರತಿಯೊಬ್ಬರು ತಿಳಿಯಲೇಬೇಕು. ಉತ್ತಮ ಆರೋಗ್ಯ ನೀವು ಸಂಪೂರ್ಣವಾಗಿ ಆರೋಗ್ಯವಿಲ್ಲದಿದ್ದರೆ ನೀವು ಎಂದಿಗೂ ಸಂತೋಷವಾಗಿರಲು ಸಾಧ್ಯವಿಲ್ಲ ಅನಾರೋಗ್ಯವು ಚಿಕ್ಕದಿರಲಿ ಅಥವಾ ದೊಡ್ಡದಾಗಿರಲಿ ಅದು ನಿಮ್ಮ ಸಂತೋಷವನ್ನು ಕಸಿದುಕೊಳ್ಳುತ್ತದೆ ಅದರಿಂದ ನಿಮ್ಮ ಆರೋಗ್ಯದ ಕಡೆಗೆ ಪ್ರಥಮ ಪ್ರಾಮುಖ್ಯತೆಯನ್ನು ನೀಡಿ.
ಉತ್ತಮ ಬ್ಯಾಂಕ್ ಬ್ಯಾಲೆನ್ಸ್ ಉತ್ತಮ ಜೀವನವನ್ನು ನಡೆಸಲು ತುಂಬಾ ಶ್ರೀಮಂತರಾಗಿರುವ ಅವಶ್ಯಕತೆ ಇಲ್ಲ ಆದರೆ ನೀವು ಹಣ ಖರ್ಚು ಮಾಡುವಾಗ ಹಿಂದೆ ಮಂದೆ ನೋಡದೆ ನಿಮ್ಮ ಆಸೆ ಆಕಾಂಕ್ಷೆಗಳನ್ನು ಈಡೇರಿಸುವಷ್ಟು ತೃಪ್ತಿ ಕೊಡುವಷ್ಟು ಹಣ ಇದ್ದರೆ ಸಾಕು. ಜೊತೆಗೆ ಸಾಲದಲ್ಲಿ ಬದುಕುವುದು ಕೂಡ ಮನುಷ್ಯನ ಸ್ವಾಭಿಮಾನಕ್ಕೆ ಧಕ್ಕೆ ತರುತ್ತದೆ.
ಸ್ವಂತ ಮನೆ ಮನೆ ಚಿಕ್ಕದಿರಲಿ ದೊಡ್ಡದಿರಲಿ ಅದು ಬೇರೆ ಮಾತು ಆದರೆ ಅದು ನಿಮ್ಮದೇ ಆಗಿರಬೇಕು ಮತ್ತು ಆ ಮನೆಯಲ್ಲಿ ಎಲ್ಲರೂ ನಗುನಗುತ್ತಾ ನೆಮ್ಮದಿಯಿಂದ ಇದ್ದರೆ ಇನ್ನೂ ಉತ್ತಮ.
ಸ್ವಂತ ಉದ್ಯೋಗ ಸ್ವಂತ ಉದ್ಯೋಗ ಇದ್ದರೆ ಸ್ವತಂತ್ರವಾಗಿ ಬದುಕಬಹುದು ಅವರಿವರ ಹತ್ತಿರ ಹಣ ಕೇಳಿ ಸಾಲ ಮಾಡುವುದರ ಬದಲು ಕಷ್ಟಪಟ್ಟು ಸ್ವಾಭಿಮಾನದಿಂದ ದುಡಿದು ನಿಮಗೆ ನೀವೇ ಆಸರೆಯಾಗಬೇಕು ಅದೆ ನಿಜವಾದ ಸಂತೃಪ್ತಿ.
ಬುದ್ಧವಂತ ಜೀವನ ಸಂಗಾತಿ ಜೀವನದಲ್ಲಿ ತಾಳ್ಮೆಯನ್ನು ಹೊಂದಿರುವ ಜೀವನ ಸಂಗಾತಿ ಇರಬೇಕು ಒಬ್ಬರನ್ನೊಬ್ಬರು ಸರಿಯಾಗಿ ಅರ್ಥಮಾಡಿಕೊಳ್ಳುವವರ ಜೀವನವು ತುಂಬಾ ಸಂತೋಷದಿಂದ ಕೂಡಿರುತ್ತದೆ ಇಲ್ಲದಿದ್ದರೆ ಜೀವನದಲ್ಲಿ ನೆಮ್ಮದಿ ಶಾಂತಿ ಇರುವುದಿಲ್ಲ ಅದರಿಂದ ಸರಿಯಾದ ಜೀವನ ಸಂಗಾತಿ ಆಯ್ಕೆ ಮಾಡುವುದು ತುಂಬ ಮುಖ್ಯವಾಗಿದೆ.
ನಿಮ್ಮ ಸ್ವಂತ ಮಾರ್ಗಳನ್ನು ಹುಡುಕಿ ಇತರರ ಸಾಧನೆಗಳನ್ನು ನೋಡಿ ನಿರಾಶರಾಗಬೇಡಿ ಯಾರಾದರೂ ನಿಮಗಿಂತ ಮುಂದೆ ಹೋದರೆ ಅಥವಾ ಯಾರಾದರೂ ನಿಮಗಿಂತ ಹೆಚ್ಚು ಹಣವನ್ನು ಗಳಿಸುತ್ತಿದ್ದರೆ ಆಗ ಅಸೂಯೆ ಪಡಬೇಡಿ ಸಮಯ ಒಂದೇ ತರಹ ಇರುವುದಿಲ್ಲ ಯಾರಿಗೆ ಗೊತ್ತು ನೀವು ನಾಳೆ ಅವರಿಗಿಂತ ಮುಂದೆ ಹೋಗಬಹುದು. ನಿಮ್ಮ ಮೇಲೆ ನಿಮಗೆ ನಂಬಿಕೆ ಆತ್ಮವಿಶ್ವಾಸ ಇರಲಿ ಅವರ ಬಗ್ಗೆ ತಲೆ ಕೆಡಿಸಿಕೊಳ್ಳದೆ ನಿಮ್ಮ ಗುರಿ ಮೇಲೆ ಫೋಕಸ್ ಮಾಡುತ್ತಾ ಮುನ್ನಡೆಯಿರಿ.
ಒಳ್ಳೆಯ ಅಭ್ಯಾಸ ಪ್ರತಿ ದಿನ ನಿಮ್ಮನ್ನು ಸುಧಾರಿಸಿಕೊಳ್ಳಲು ಸಾಧ್ಯವಾಗುತ್ತದೆ.
ನಿಮ್ಮ ಕೋಪವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಿ. ನಿಮ್ಮ ಕೋಪವನ್ನು ಎಂದಿಗೂ ವ್ಯಕ್ತಪಡಿಸಬೇಡಿ ಕೋಪದ ಸಂದರ್ಭದಲ್ಲಿ ನಿಮಗೆ ಗೊತ್ತಿರುವುದಿಲ್ಲ ನೀವು ಏನು ಮಾತನಾಡುತ್ತಿದ್ದೀರ ಅಂತ ಅಂತಹ ಸಂದರ್ಭದಲ್ಲಿ ಮೌನವಾಗಿರುವುದು ಉತ್ತಮ.
ಕೊನೆಯದಾಗಿ ನಿಮ್ಮನ್ನು ನೀವೇ ಪ್ರೀತಿಸುವುದನ್ನು ಕಲಿಯಿರಿ ಇದು ನಿಮ್ಮ ಬದುಕು ಬೇರೆಯವರ ಬಗ್ಗೆ ಕಾಳಜಿ ಮಾಡುವುದರಲ್ಲಿ ತಪ್ಪೇನಿಲ್ಲ ಆದರೇ ಅಗತ್ಯಕ್ಕಿಂತ ಹೆಚ್ಚಾಗಿದ್ದರೆ ಅಮೃತವೂ ವಿಷ ಇದ್ದಂತೆ ಎಲ್ಲದಕ್ಕೂ ಒಂದು ಮಿತಿ ಇರಬೇಕು. ಅಗತ್ಯಕ್ಕಿಂತ ಹೆಚ್ಚು ಪ್ರೀತಿ ಕಾಳಜಿ ತೋರಿದರೆ ಅವರ ದೃಷ್ಟಿಯಲ್ಲಿ ನಿಮ್ಮ ಬೆಲೆ ಕಡಿಮೆ ಆಗುತ್ತದೆ. ನೀವು ಅದಷ್ಟು ಬ್ಯುಸಿಯಾಗಿರಲು ಪ್ರಯತ್ನಿಸಿ ನಿಮಗಾಗಿ ಪ್ರಥಮ ಪ್ರಾಮುಖ್ಯತೆಯನ್ನು ನೀಡಿ.