ಇಂದಿನ ಲೇಖನದಲ್ಲಿ ಮೀನಾರಾಶಿಯವರ ಗುಣಲಕ್ಷಣಗಳನ್ನು ತಿಳಿಸಿಕೊಡುತ್ತೇವೆ. ಮೀನಾರಾಶಿಯವರು ದಯಾಳುಗಳಾಗಿ ಇರುತ್ತಾರೆ. ಕಲಾತ್ಮಕರು, ಸೌಮ್ಯ ಸ್ವಭಾವದವರು, ಬುದ್ಧಿವಂತರು ಮತ್ತು ಮಧುರವಾಗಿ ಮಾತನಾಡುತ್ತಾರೆ. ಇವರ ನೆಗೆಟಿವ್ ಗುಣವೇನೆಂದರೆ ಬೇರೆಯವರನ್ನು ಬಹಳ ಬೇಗ ನಂಬುತ್ತಾರೆ ಮತ್ತು ಇವರಿಗೆ ಭಯ ಮತ್ತು ನೋವು ಬಹಳ ಬೇಗ ಆಗುತ್ತದೆ. ಮೀನಾರಾಶಿಯವರು ಒಂದೊಂದು ಸಲ ಒಂಟಿಯಾಗಿ ಇರಲು ಇಷ್ಟಪಡುತ್ತಾರೆ.
ಇವರು ನಿದ್ರೆಯನ್ನು ಹೆಚ್ಚು ಮಾಡುತ್ತಾರೆ. ಸಂಗೀತ, ರೊಮ್ಯಾನ್ಸ್, ಸ್ವಿಮ್ಮಿಂಗ್, ಮೀಡಿಯಾ ಮತ್ತು ಆಧ್ಯಾತ್ಮಿಕ ವಿಷಯಗಳಲ್ಲಿ ತುಂಬಾ ಆಸಕ್ತಿ ಇರುತ್ತದೆ. ಮೀನಾ ರಾಶಿಯ ವ್ಯಕ್ತಿಗಳಿಗೆ ಬೇರೆಯವರು ನಮಗೆ ಹೆಚ್ಚು ಗೊತ್ತಿದೆ ಎಂದು ತೋರಿಸಿಕೊಳ್ಳಲು ಬಂದರೆ ಇಷ್ಟವಾಗುವುದಿಲ್ಲ. ಬೇರೆಯವರ ಬಗ್ಗೆ ಚಾಡಿ ಹೇಳುವುದು ಇಷ್ಟವಾಗುವುದಿಲ್ಲ. ನಾಟಕೀಯ ಜೀವನವನ್ನು ಇಷ್ಟಪಡುವುದಿಲ್ಲ. ಮೀನಾ ರಾಶಿಯವರು ನಿಸ್ವಾರ್ಥ ಭಾವನೆಯಿಂದ ಬೇರೆಯವರಿಗೆ ಸಹಾಯ ಮಾಡುತ್ತಾರೆ
ಅವರಿಂದ ಏನನ್ನು ಅಪೇಕ್ಷೆ ಪಡುವುದಿಲ್ಲ. ಮೀನಾ ರಾಶಿಯ ರಾಶ್ಯಾಧಿಪತಿ ಗುರುಗ್ರಹವಾಗಿರುತ್ತದೆ. ಗುರು ಗ್ರಹವಾಗಿರುವುದರಿಂದ ಇವರಿಗೆ ಸಂಗೀತದ ಮೇಲೆ ಹೆಚ್ಚು ಆಸಕ್ತಿ ಇರುತ್ತದೆ. ಇವರು ಶ್ರಮಶೀಲರಾಗಿರುತ್ತಾರೆ. ಹನ್ನೆರಡು ರಾಶಿಗಳಲ್ಲಿ ಮೀನಾರಾಶಿಯವರು ತುಂಬಾ ಸಹಿಷ್ಣು ಎಂದು ಹೇಳಬಹುದು. ಮೀನಾ ರಾಶಿಯವರು ಫ್ರೆಂಡ್ಸ್ ವಿಷಯದಲ್ಲಿ ತುಂಬಾ ಕೇರಿಂಗ್ ಆಗಿ ಇರುತ್ತಾರೆ. ಮೀನಾ ರಾಶಿಯವರು ತಮ್ಮ ಅವಶ್ಯಕತೆಗಳಿಗಿಂತ ಸ್ನೇಹಿತರ ಅವಶ್ಯಕತೆಗಳಿಗೆ ಮೊದಲ ಆದ್ಯತೆ ಕೊಡುತ್ತಾರೆ.
ಇವರು ನಿಷ್ಟಾವಂತರು ಮತ್ತು ದಯಾಳುಗಳು ಹಾಗಾಗಿ ತಮ್ಮ ಫ್ರೆಂಡ್ಸ್ ಮತ್ತು ಸ್ನೇಹಿತರಿಗೆ ಏನೇ ಸಮಸ್ಯೆ ಬಂದರೂ ಅದನ್ನು ಪರಿಹಾರ ಮಾಡಲು ಪ್ರಯತ್ನ ಪಡುತ್ತಾರೆ. ಮೀನಾ ರಾಶಿಯವರದ್ದು ತೀಕ್ಷ್ಣ ಬುದ್ಧಿ ಹಾಗಾಗಿ ಇವರ ಜೀವನದಲ್ಲಿ ಏನೇ ತೊಂದರೆಗಳು ಆಗುವ ಮುಂಚೆಯೇ ಸರಿಮಾಡಿಕೊಳ್ಳುವ ಬುದ್ಧಿವಂತಿಕೆ ಇವರಲ್ಲಿದೆ. ಈ ರಾಶಿಯವರು ತಮ್ಮ ಫೀಲಿಂಗ್ ಅನ್ನು ಬೇರೆಯವರ ಜೊತೆ ಹಂಚಿಕೊಳ್ಳಲು ತುಂಬಾ ಇಷ್ಟಪಡುತ್ತಾರೆ. ಜೊತೆಗೆ ಬೇರೆಯವರು ಸಹ ಇವರ ಜೊತೆ ಕ್ಲೋಸ್ ಆಗಿ ಇರಬೇಕೆಂದು ಬಯಸುತ್ತಾರೆ.
ಬೇರೆಯವರಿಗೆ ಸಹಾಯ ಮಾಡುವ ಗುಣ ಇವರಲ್ಲಿದೆ. ಈ ರಾಶಿಯವರು ತುಂಬಾ ಹಾರ್ಡ್ ವರ್ಕರ್ ಮತ್ತು ಸೆನ್ಸಿಟೀವ್ ಆಗಿ ಇರುತ್ತಾರೆ. ಸ್ವಲ್ಪ ಸೋಮಾರಿತನವು ಕಂಡುಬರುತ್ತದೆ. ಇವರು ಯಾರ ಜೊತೆಯೂ ವಾದ ಮಾಡಲು ಇಷ್ಟಪಡುವುದಿಲ್ಲ. ಇವರ ಈ ಗುಣದಿಂದ ಕೆಲವರು ಲಾಭವನ್ನ ಪಡೆದುಕೊಳ್ಳುತ್ತಾರೆ. ಮೀನಾ ರಾಶಿಯವರು ಅವರ ಸ್ಕಿಲ್ಸ್ ಮತ್ತು ಟ್ಯಾಲೆಂಟ್ ಅನ್ನು ಒಳ್ಳೆಯ ರೀತಿಯಲ್ಲಿ ಬಳಸಿಕೊಳ್ಳುತ್ತಾರೆ. ಮೀನಾರಾಶಿಯವರು ಸೈಕಾಲಜಿಸ್ಟ್ ಕೂಡ ಆಗಿರುತ್ತಾರೆಂದರೆ ತಪ್ಪಾಗಲಾರದು.
ಇವರ ವಿಶೇಷ ಗುಣವೇನೆಂದರೆ ಬೇರೆಯವರ ಫೀಲಿಂಗ್ ಅನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ಇವರಿಗೆ ಬೇರೆಯವರು ನೋವು ಮಾಡಿದರೇ ಅಷ್ಟು ಮನಸ್ಸಿಗೆ ಹಚ್ಚಿಕೊಳ್ಳುವುದಿಲ್ಲ ಏಕೆಂದರೆ ಬೇರೆಯವರ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುತ್ತಾರೆ. ಈ ರಾಶಿಯವರು ಬೇರೆಯವರಿಗೆ ತೊಂದರೆ ಕೊಡಲು ಹೋಗುವುದಿಲ್ಲ ಮತ್ತು ಜೀವನದಲ್ಲಿ ಬದಲಾವಣೆಯನ್ನು ಬಯಸುತ್ತಾರೆ. ಈ ರಾಶಿಯವರಿಗೆ ಗುಪ್ತ ಶತೃಗಳು ಇರುತ್ತಾರೆ. ಇವರು ಸ್ವತಂತ್ರವಾಗಿ ಇರಲು ಇಷ್ಟಪಡುತ್ತಾರೆ.
ಮೀನಾ ರಾಶಿಯವರು ತಮ್ಮ ಸಂಗಾತಿಗಳೊಂದಿಗೆ ಉದಾರಿಗಳಾಗಿ ಇರುತ್ತಾರೆ ಮತ್ತು ತಮ್ಮ ಫ್ಯಾಮಿಲಿಯನ್ನು ತುಂಬಾ ಕೇರ್ ಮಾಡುತ್ತಾರೆ. ಮೀನಾ ರಾಶಿಯ ಪುರುಷರಲ್ಲಿ ಸಂವೇದನಾಶೀಲತೆ, ಕರುಣೆ, ದಯೆ ಈ ಗುಣವನ್ನು ನೋಡಬಹುದು, ಇವರು ನಿಷ್ಟಾವಂತರಾಗಿರುತ್ತಾರೆ. ಮೀನಾ ರಾಶಿಯ ಸ್ತ್ರೀಯರಲ್ಲಿ ಕರುಣೆ, ಉದಾರತೆ, ಕಲ್ಪನಾಶೀಲರಾಗಿರುತ್ತಾರೆ. ಇವರು ಆಧ್ಯಾತ್ಮಿಕತೆಗೆ ಹೆಚ್ಚು ಆಸಕ್ತಿಯನ್ನು ತೋರಿಸುತ್ತಾರೆ. ಇವರು ಬೇರೆಯವರಿಂದ ಗೌರವವನ್ನು ಪಡೆಯಲು ಇಷ್ಟಪಡುತ್ತಾರೆ.
ಈ ರಾಶಿಯ ಸ್ತ್ರೀಯರಲ್ಲಿ ತುಂಬಾ ಕ್ಷಮಿಸುವ ಗುಣವಿದೆ ಆದರೇ ಯಾವುದನ್ನು ಮರೆಯುವುದಿಲ್ಲ. ಮೀನಾ ರಾಶಿಯ ವ್ಯಕ್ತಿಗಳಲ್ಲಿ ಪ್ರೀತಿಯಲ್ಲಿ ಮೋಸ ಹೋದ ಅನುಭವವು ಇರುತ್ತದೆ. ಈ ರಾಶಿಯವರು ಬೇರೆಯವರನ್ನು ತುಂಬಾ ನಂಬುವುದರಿಂದ ಬೇಗನೇ ಮೋಸ ಹೋಗುತ್ತಾರೆ. ಇವರ ಕೆರಿಯರ್ ವಿಷಯದ ಬಗ್ಗೆ ನೋಡುವುದಾದರೇ ವ್ಯವಸಾಯ, ನಟನೆ, ವಕೀಲ ವೃತ್ತಿ,ಪಶುವೈದ್ಯ, ಸಂಗೀತ, ಸಾಮಾಜಿಕ ಕಾರ್ಯಕರ್ತ, ಬ್ಯುಜಿನೆಸ್ ಕ್ಷೇತ್ರಗಳು ಚೆನ್ನಾಗಿ ಆಗಿ ಬರುತ್ತದೆ. ಲಿಕ್ವಿಡ್ ಬ್ಯುಜಿನೆಸ್ ಕೂಡ ಆಗಿಬರುತ್ತದೆ.
ನೀರಿನ ಮೂಲಕ ಸಿಗುವ ಉಪ್ಪು, ಮುತ್ತು, ಆಮದು ಮತ್ತು ರಫ್ತು ಮತ್ತು ವಿದೇಶಕ್ಕೆ ಹೋಗಿ ಮಾಡುವಂತಹ ಕೆಲಸ ತುಂಬಾ ಚೆನ್ನಾಗಿ ಆಗಿ ಬರುತ್ತದೆ. ಮೀನಾರಾಶಿಯವರು ಹಣದ ವಿಷಯದಲ್ಲಿ ತುಂಬಾ ಖರ್ಚು ಮಾಡುವವರಾಗಿರುತ್ತಾರೆ ಅಥವಾ ತುಂಬಾ ಜಿಪುಣರಾಗಿರುತ್ತಾರೆ. ಉಳಿತಾಯಕ್ಕೆ ಹೆಚ್ಚು ಗಮನ ಕೊಟ್ಟರೆ ಒಳ್ಳೆಯದು. ಇವರ ಆರೋಗ್ಯದ ವಿಚಾರಕ್ಕೆ ಬಂದರೆ ಶೀತ, ಕಫ, ಹೃದಯ ಮತ್ತು ಹೊಟ್ಟೆಗೆ ಸಂಬಂಧಪಟ್ಟ ಸಮಸ್ಯೆಗಳು ಕಂಡುಬರುತ್ತದೆ. ಒತ್ತಡದಿಂದ ತಲೆಗೆ ಸಂಬಂಧಿಸಿದ ಸಮಸ್ಯೆಗಳು ಕಂಡುಬರುತ್ತದೆ. ಆಗಾಗಿ ಆರೋಗ್ಯದ ವಿಚಾರದಲ್ಲಿ ತುಂಬಾ ಕೇರ್ ತೆಗೆದುಕೊಳ್ಳಿ. ತಂದೆ ತಾಯಿಯ ಸೇವೆ ಮಾಡಿ ಅವರ ಆಶೀರ್ವಾದ ಪಡೆದುಕೊಳ್ಳಿ ಇದರಿಂದ ನಿಮಗೆ ಒಳ್ಳೆಯದು ಆಗುತ್ತದೆ.