ಇದನ್ನ ಸಾಮಾನ್ಯವಾದ ಕಟ್ಟಿಗೆ ಅಂತ ತಿಳಿಯಬೇಡಿ ಶತ್ರುಗಳ ಹೆಸರು ಇರದ ಹಾಗೆ ಮಾಡುತ್ತದೆ

0

ನಾವು ಈ ಲೇಖನದಲ್ಲಿ ಇದನ್ನು ಸಾಮಾನ್ಯವಾದ ಕಟ್ಟಿಗೆ ಅಂತ ತಿಳಿಯಬೇಡಿ . ಶತ್ರುಗಳ ಹೆಸರು ಇರದ ಹಾಗೆ ಹೇಗೆ ಮಾಡುತ್ತದೆ . ಎಂಬುದನ್ನು ತಿಳಿಯೋಣ . ಶತ್ರುಗಳು ಇರುವುದು ಯಾವ ರೀತಿಯ ರೋಗ ಆಗಿದೆ ಎಂದರೆ , ಇದು ಜೀವನವನ್ನು ಪೂರ್ತಿಯಾಗಿ ನಾಶ ಮಾಡಿ ಬಿಡುತ್ತದೆ . ಈಗ ತುಂಬಾ ಜನರು ಶತ್ರುಗಳ ಕಾರಣದಿಂದ ತಮ್ಮ ಜೀವನದಲ್ಲಿ ತುಂಬಾ ಚಿಂತೆಯಿಂದ ಇರುತ್ತಾರೆ. ಬದಲಿಗೆ ಕೆಲವು ಶತ್ರುಗಳು ಈ ರೀತಿ ಕೂಡ ಇರುತ್ತಾರೆ . ಯಾವಾಗ ಅವರು ನಿಮ್ಮೊಡನೆ ಶತ್ರುತ್ವ ಬೆಳೆಸಿ ಕೊಳ್ಳುತ್ತಾರೋ ,

ಅದಕ್ಕಾಗಿ ಅವರು ತಂತ್ರ ಮಂತ್ರದ ಸಹಾಯವನ್ನು ಪಡೆದುಕೊಳ್ಳುತ್ತಾರೆ . ಮಾಟ ಮಂತ್ರಗಳನ್ನು ಸಹ ಮಾಡಿಸುತ್ತಾರೆ . ಇಲ್ಲಿ ಇದರ ಪರಿಣಾಮ ಏನಾಗುತ್ತದೆ ಎಂದರೆ, ಯಾರು ಈ ರೀತಿಯಾದ ಕಾರ್ಯಗಳನ್ನು ಮಾಡುತ್ತಾರೆ ಅವರಿಗೆ ಅನಿಷ್ಟ ಅಂತೂ ಆಗುತ್ತದೆ. ಆದರೆ ಶತ್ರುತ್ವದಲ್ಲಿ ತಮಗೆ ಆಗುವ ನಷ್ಟವನ್ನು ಸಹ ನೋಡುವುದಿಲ್ಲ . ಒಂದು ವೇಳೆ ಯಾವುದಾದರೂ ವ್ಯಕ್ತಿಯೊಡನೆ ಶತ್ರುತ್ವ ಬೆಳೆದರೆ ಸಾಕು , ಅವರಿಗೆ ಯಾವ ರೀತಿ ತೊಂದರೆ ಕೊಡುವುದು ಮತ್ತು ಯಾವ ರೀತಿ ಹಿಂಸೆ ಮಾಡುವುದು ಎಂಬುವುದರ ಬಗ್ಗೆ ಯೋಚನೆ ಮಾಡುತ್ತಿರುತ್ತಾರೆ .

ಯಾವುದಾದರೂ ಒಬ್ಬ ವ್ಯಕ್ತಿಯ ಮನಸ್ಸಿನಲ್ಲಿ ಶತ್ರುತ್ವದ ಭಾವನೆ ಹುಟ್ಟಿ ಕೊಂಡರೆ , ಅವರ ಬುದ್ಧಿ ನಾಶವಾಗುವುದು ಖಚಿತವಾಗಿ ಇರುತ್ತದೆ . ಒಂದು ವೇಳೆ ಮನುಷ್ಯನ ಮನಸ್ಸಿನಲ್ಲಿ ಶತ್ರುತ್ವದ ಬೀಜ ಹುಟ್ಟಿ ಕೊಂಡರೆ , ಆ ವ್ಯಕ್ತಿ ನೆಮ್ಮದಿಯಿಂದ ಮಲಗಲು ಸಾಧ್ಯವಾಗುವುದಿಲ್ಲ . ಮುಂದೆ ಇರುವ ವ್ಯಕ್ತಿ ಕೂಡ ಸರಿಯಾಗಿ ನಿದ್ರೆ ಮಾಡಲು ಸಾಧ್ಯವಾಗುವುದಿಲ್ಲ . ಶತ್ರುತ್ವವು ಎರಡು ಕಡೆಯಿಂದ ನಷ್ಟವನ್ನು ಉಂಟು ಮಾಡುತ್ತದೆ . ಯಾವಾಗ ನೀವು ಒಬ್ಬ ವ್ಯಕ್ತಿಯನ್ನು ವಿರೋಧಿಸುತ್ತೀರೋ ,

ಆ ಸಿಟ್ಟು ಮೊದಲು ನಿಮ್ಮ ಹೃದಯದಲ್ಲಿಯೇ ಹುಟ್ಟಿಕೊಂಡಿರುತ್ತದೆ . ಇದರ ಪರಿಣಾಮ ಏನಾಗುತ್ತದೆ ಎಂದರೆ, ಇಲ್ಲಿ ಮೊದಲಿಗೆ ನಿಮ್ಮ ನೆಮ್ಮದಿ ಕಳೆದುಕೊಳ್ಳಬೇಕಾಗುತ್ತದೆ . ಮನಸ್ಸಿನಲ್ಲಿ ಸಿಟ್ಟಿನ ಭಾವನೆ ಕೂಡ ಇರುತ್ತದೆ . ಹಾಗಾಗಿ ಈ ಒಂದು ಮಾತನ್ನು ನೆನಪಿನಲ್ಲಿ ಇಟ್ಟುಕೊಳ್ಳಿ .ಯಾವತ್ತಿಗೂ ಯಾರನ್ನು ಸಹ ವಿರೋಧಿಸಬೇಡಿ .ಯಾವತ್ತು ನಿಮ್ಮ ಮನಸ್ಸಿನಲ್ಲಿ ಶತ್ರುವಿನ ಭಾವನೆಯನ್ನು ತರಬೇಡಿ . ಒಂದು ವೇಳೆ ಯಾವುದಾದರೂ ವ್ಯಕ್ತಿ ನಿಮಗೆ ಹೆಚ್ಚು ತೊಂದರೆಯನ್ನು ಕೊಡುತ್ತಿದ್ದರೆ , ಇಂತಹ ಸ್ಥಿತಿಯನ್ನು ನೀವು ಯಾವುದಾದರೂ ಹೊಸದಾಗಿ ಇರುವ ವಿಶೇಷವಾದ ಉಪಾಯವನ್ನು ಮಾಡಬಹುದು .

ಈ ಉಪಾಯಗಳನ್ನು ಮಾಡಿದರೆ , ಮುಂದಿರುವ ವ್ಯಕ್ತಿಯ ಮನಸ್ಸಿನಲ್ಲಿರುವ ಶತ್ರುತ್ವ ಕಾಣದಂತೆ ಮಾಯವಾಗಿ ಬಿಡುತ್ತದೆ . ನಂತರ ಯಾವುದೇ ಕಾರಣಕ್ಕೂ ಅವರು ನಿಮಗೆ ತೊಂದರೆ ಕೊಡುವುದಿಲ್ಲ . ಇಲ್ಲಿ ಅದೆಷ್ಟೇ ದೊಡ್ಡದಾದ ಶತ್ರುಗಳು ಇರಲಿ , ಕೆಲವು ಶತ್ರುಗಳು ಯಾವ ರೀತಿ ಇರುತ್ತಾರೆ ಎಂದರೆ , ತಾವು ಕೂಡ ನೆಮ್ಮದಿಯಾಗಿ ಇರುವುದಿಲ್ಲ . ಮತ್ತು ಬೇರೆಯವರನ್ನು ಕೂಡ ನೆಮ್ಮದಿಯಾಗಿ ಇರಲು ಬಿಡುವುದಿಲ್ಲ . ಹಾಗಾಗಿ ಇಂತಹ ಜನರಿಂದ ಉಳಿದುಕೊಳ್ಳಲು , ಅಥವಾ ದೂರ ಇರಲು ,

ತುಂಬಾ ವಿಶೇಷವಾದ ಉಪಾಯಗಳನ್ನು ತಿಳಿಸಿ ಕೊಡಲಾಗುತ್ತದೆ . ನೀವು ನಿಮ್ಮ ಜೀವನದಲ್ಲಿ ಶತ್ರುಗಳಿಂದ ತುಂಬಾ ತೊಂದರೆ ಅನುಭವಿಸುತ್ತಿದ್ದರೆ , ಇಂತಹ ಯಾವುದಾದರೂ ವ್ಯಕ್ತಿಯನ್ನು ಭೇಟಿಯಾಗಿ ಇದ್ದರೆ , ಅವರು ನಿಮ್ಮನ್ನು ನೆಮ್ಮದಿಯಾಗಿ ಇರಲು ಬಿಡುವುದಿಲ್ಲ . ಕೇವಲ ನಿಮಗೆ ಕೆಟ್ಟದ್ದು ಆಗಲಿ ಎಂದು ಬಯಸುತ್ತಿರುತ್ತಾರೆ . ಇಂತಹ ಸ್ಥಿತಿಯಲ್ಲಿ ಆ ಶತ್ರುವಿನಿಂದ ಮುಕ್ತಿ ಪಡೆಯಲು ಈ ಪ್ರಯೋಗಗಳನ್ನು ಮಾಡಬಹುದು . ಭಗವಂತನಾದ ಶಿವನ ಆಶೀರ್ವಾದವನ್ನು ಪಡೆದುಕೊಳ್ಳಲು ತುಂಬಾ ಪ್ರಾಮುಖ್ಯತೆ ಇದೆ .

ಏಕೆಂದರೆ ಈಗ ನೀವು ಪಡೆದುಕೊಳ್ಳುತ್ತಿರುವ ಮಾಹಿತಿಯ ಮೂಲಕ ನಿಮಗೆ ಕಲ್ಯಾಣ ಕಾರ್ಯಗಳು ಆಗುತ್ತದೆ ಎಂದು ಹೇಳಲಾಗಿದೆ .ಕೆಲವರು ಯಾವ ರೀತಿಯ ಸ್ವಭಾವವನ್ನು ಹೊಂದಿರುವ ಜನರು ಇರುತ್ತಾರೆ ಎಂದರೆ , ಅವರಿಗೆ ಎಷ್ಟೇ ಒಳ್ಳೆಯದನ್ನು ಹೇಳಿದರೂ , ನೀವು ಎಷ್ಟೇ ಬಹುಮಾನಗಳನ್ನು ಕೊಟ್ಟರೂ , ನಿಮ್ಮನ್ನು ಅವರು ಮೂರ್ಖರು ಎಂದೇ ಹೇಳುತ್ತಾರೆ . ಕೆಟ್ಟದಾದ ಭಾವನೆ ಅವರ ಮನಸ್ಸಿನಲ್ಲಿ ಇದ್ದೇ ಇರುತ್ತದೆ . ಇಂತಹ ಜನರ ಮನಸ್ಸಿನಲ್ಲಿ ಶತ್ರುತ್ವ ಮತ್ತು ಸ್ವಾರ್ಥದ ಭಾವನೆ ಹೆಚ್ಚಾಗಿರುತ್ತದೆ .

ಇಂತಹ ಜನರಿಂದ ಎಷ್ಟು ದೂರ ಇರುತ್ತೀರೋ , ಅಷ್ಟು ಒಳ್ಳೆಯದು ಆಗಿರುತ್ತದೆ . ಏಕೆಂದರೆ ಇಂತಹ ಜನರು ಅವರ ಜೀವನವನ್ನು ಹಾಳು ಮಾಡಿಕೊಳ್ಳುತ್ತಾರೆ .ಮತ್ತು ಬೇರೆಯವರ ಜನರ ಜೀವನವನ್ನು ಕೂಡ ಹಾಳು ಮಾಡುತ್ತಾರೆ .ಈ ಒಂದು ಕಾರಣದಿಂದಾಗಿ ಭಗವಂತನಾದ ಶ್ರೀ ಕೃಷ್ಣನು ಭಗವದ್ಗೀತೆಯಲ್ಲಿ ಈ ರೀತಿಯಾಗಿ ಹೇಳಿದ್ದಾರೆ . ಇಲ್ಲಿ ಕ್ರೋದವು ವ್ಯಕ್ತಿಯನ್ನು ಕುರುಡನನ್ನಾಗಿಸುತ್ತದೆ .ಇಲ್ಲಿ ಇದರ ಪರಿಣಾಮ ಏನಾಗುತ್ತೆ ಎಂದರೆ , ಒಂದು ವೇಳೆ ಆ ವ್ಯಕ್ತಿಯು ಶಕ್ತಿ ಶಾಲಿಯಾಗಿದ್ದರೂ ಸರಿ , ತಮ್ಮ ಮನಸ್ಸಿನಲ್ಲಿ ವಿರೋಧ ,

ಕೆಟ್ಟ ಭಾವನೆಗಳನ್ನು ಇಟ್ಟುಕೊಂಡರೆ , ಭಿನ್ನ-ಭಿನ್ನವಾದ ಷಡ್ಯಂತ್ರಗಳನ್ನು ಯೋಚನೆ ಮಾಡುತ್ತಿದ್ದರೆ , ಇಂತಹ ಸ್ಥಿತಿಯಲ್ಲಿ ಈ ವ್ಯಕ್ತಿಗಳು ಎಷ್ಟೇ ಶಕ್ತಿ ಶಾಲಿಯಾಗಿದ್ದರು , ಖಂಡಿತವಾಗಿ ಇವರ ಬುದ್ಧಿ ನಾಶವಾಗುತ್ತದೆ . ಉದಾ : – ರಾವಣನು ತುಂಬಾ ಶಕ್ತಿಶಾಲಿ ಮತ್ತು ತುಂಬಾ ದೊಡ್ಡ ಜ್ಞಾನಿ ಆಗಿದ್ದರು . ಇವರು ಒಬ್ಬ ಒಳ್ಳೆಯ ಬ್ರಾಹ್ಮಣನಾಗಿದ್ದ , ಇವರ ಬಳಿ ನೂರಾರು ಸಿದ್ದಿಗಳು ಇದ್ದವು . ಇವರು ಕ್ಷಣಮಾತ್ರದಲ್ಲಿ ಏನು ಬೇಕಾದರೂ ಮಾಡಬಹುದು ಆಗಿತ್ತು. ಆದರೆ ಯಾವಾಗ ಇವರ ಮನಸ್ಸಿನಲ್ಲಿ ದ್ವೇಷ ,

ಸ್ವಾರ್ಥ ಆಗಲಿ , ಅಹಂಕಾರದ ಭಾವನೆ ಬಂತು . ಬೇರೆಯವರಿಗೆ ಇವರು ನಷ್ಟವನ್ನು ಉಂಟುಮಾಡಿದಾಗ , ಆಗ ಇವರ ಕುಲವೇ ನಾಶವಾಗಿ ಹೋಗುತ್ತದೆ .ಇವರಿಗೂ ಸಹ ತಮ್ಮ ಕುಲವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ .ಇಲ್ಲಿ ವ್ಯಕ್ತಿಗೆ ಅದೆಷ್ಟೇ ಜ್ಞಾನವಿರಲಿ , ದ್ವೇಷ ಸ್ವಾರ್ಥ ಅಹಂಕಾರ ಇಂಥ ಗುಣಗಳು ವ್ಯಕ್ತಿಯನ್ನು ನಾಶ ಮಾಡುತ್ತವೆ . ಒಂದು ವೇಳೆ ನೀವು ಶತ್ರುಗಳಿಂದ ಬಳಲುತ್ತಿದ್ದರೆ , ಅವರಿಂದ ಉಳಿಸಿಕೊಳ್ಳಲು ಕೆಲವು ಸರಳವಾದ ಉಪಾಯಗಳನ್ನು ಮಾಡಬಹುದು .

ಇಲ್ಲಿ ಇದರ ಪ್ರಭಾವ ಏನಾಗುತ್ತದೆ ಎಂದರೆ , ಯಾವುದಾದರೂ ಶತ್ರುಗಳು ನಿಮಗೆ ತೊಂದರೆ ಕೊಡುತ್ತಿದ್ದರೆ , ಅವರ ಮನಸ್ಸಿನಲ್ಲಿ ನಿಮ್ಮ ಮೇಲೆ ಪ್ರೀತಿಯ ಭಾವನೆ ಗೌರವದ ಭಾವನೆ ಹುಟ್ಟುತ್ತದೆ . ನಿಮಗೂ ಸಹ ತೊಂದರೆ ಕೊಡುವುದನ್ನು ನಿಲ್ಲಿಸುತ್ತಾರೆ . ತಾವು ಕೂಡ ಖುಷಿಯಾಗಿ ಇರುತ್ತಾರೆ .ಈ ಉಪಾಯದಿಂದ ಇಬ್ಬರಿಗೂ ಸಹ ಒಳ್ಳೆಯದಾಗುತ್ತದೆ .ಬದಲಿಗೆ ಈ ದಿನದಲ್ಲಿ ಗಂಡ ಹೆಂಡತಿ ಯಾವ ರೀತಿ ಇರುತ್ತಾರೆ ಎಂದರೆ , ಒಬ್ಬರಿಗೊಬ್ಬರು ಶತ್ರುಗಳ ರೀತಿ ಇರುತ್ತಾರೆ . ತಮ್ಮ ಮನೆಗೆ ತಾವೇ ಬೆಂಕಿ ಹಚ್ಚಿಕೊಳ್ಳುವ ವಿಷಯ ಅವರಿಗೆ ಗೊತ್ತಿರುವುದಿಲ್ಲ .
ಈ ರೀತಿಯ ಎಲ್ಲಾ ಸಮಸ್ಯೆಗಳನ್ನು ತಿಳಿದುಕೊಳ್ಳಲು ಈ ಲೇಖನದಲ್ಲಿ ತಿಳಿಸಲಾಗಿದೆ.

ಶತ್ರುಗಳಿಂದ ನಿಮ್ಮನ್ನ ಕಾಪಾಡಿಕೊಳ್ಳಲು , ಒಣಗಿದ ಬಿದಿರಿನ ಕಟ್ಟನ್ನು ತೆಗೆದುಕೊಂಡು ಬರಬೇಕು .ಇಲ್ಲಿ ನಿಮ್ಮ ಅಂಗೈ ಉದ್ಧದಷ್ಟು ಕಟ್ಟಿಗೆಯನ್ನು ತೆಗೆದುಕೊಳ್ಳಬೇಕು .ಇದಾದ ನಂತರ ಆ ಕಟ್ಟಿಗೆಯ ಮೇಲೆ ನಿಮ್ಮ ಶತ್ರುವಿನ ಹೆಸರನ್ನು ಬರೆಯಬೇಕು . ನಂತರ ಸಾಯಂಕಾಲ ಕೈಕಾಲು ಮುಖ ತೊಳೆದು ಊಟ ಮಾಡಿದ ನಂತರ , ನೀವು ಯಾವ ಸ್ಥಳದಲ್ಲಿ ಇರಲು ಇಷ್ಟಪಡುತ್ತೀರೋ ಆ ಸ್ಥಳವನ್ನು ಚೆನ್ನಾಗಿ ಸ್ವಚ್ಛಗೊಳಿಸಿ , ಅಲ್ಲಿ ಕುಳಿತುಕೊಳ್ಳಬೇಕು . ನಂತರ ಈ ಮಂತ್ರವನ್ನು ಮನಸ್ಸಿನಲ್ಲಿ ಉಚ್ಚಾರಣೆ ಮಾಡಬೇಕು .

” ಓಂ ಕ್ರೈಂ ಕಾಳಿಕಾಯ ನಮಃ ” ಇದು ತಾಯಿ ಮಹಾಕಾಳಿಯ ಮೂಲ ಮಂತ್ರವಾಗಿದೆ . ಈ ಮಂತ್ರಕ್ಕೆ ತುಂಬಾ ಹೆಚ್ಚಿನ ಶಕ್ತಿ ಇರುತ್ತದೆ . ಈ ಮಂತ್ರದಲ್ಲಿ ಎಷ್ಟು ಶಕ್ತಿ ಇರುತ್ತದೆ ಎಂದರೆ , ಕೇವಲ ಒಂದು ಬಾರಿಯಾದರೂ ನಿಮ್ಮ ಮೇಲೆ ಇದರ ಪ್ರಭಾವ ಬಿದ್ದರೆ , ಈ ಮಂತ್ರದ ಮೂಲಕ ನಿಮ್ಮ ಜೀವನದಲ್ಲಿ ಏನು ಬೇಕಾದರೂ ಪಡೆಯಬಹುದು . ಈ ಮಂತ್ರದ ಅರ್ಥ ಏನು ಎಂದರೆ , ಯಾವಾಗ ನೀವು ಈ ಮಂತ್ರದ ಜಪವನ್ನು ಯಾವುದಾದರೂ ವ್ಯಕ್ತಿಗೋಸ್ಕರ ಶುರು ಮಾಡುತ್ತೀರಾ, ನಿಶ್ಚಿತವಾಗಿ ನಿಮ್ಮ ಜೀವನದಲ್ಲಿ ಬದಲಾವಣೆಗಳು ಆಗುತ್ತದೆ . ಇಲ್ಲಿ ನಾವು ತಿಳಿಸಿದ ಹಾಗೆ ಬಿದಿರಿನ ಕಟ್ಟಿಗೆಯ ಮೇಲೆ ನಿಮ್ಮ ಶತ್ರುವಿನ ಹೆಸರನ್ನು ಬರೆದು ,

ನಿಮ್ಮ ಕೋಣೆಯಲ್ಲಿ ಶಾಂತವಾಗಿ ಆ ಕಟ್ಟಿಗೆಯ ಮುಂದೆ ಕುಳಿತು , ತಾಯಿ ಕಾಳಿ ಮಾತೆಯ ಈ ಮೂಲ ಮಂತ್ರವನ್ನು ಕಡಿಮೆ ಅಂದರೂ 15 ನಿಮಿಷ ಜಪ ಮಾಡಬೇಕು .ಜಪ ಮಾಡುವ ಮುನ್ನ ತಾಯಿ ಕಾಳಿ ಮಾತೆಯ ಮುಂದೆ ಈ ರೀತಿಯಾಗಿ ಸಂಕಲ್ಪವನ್ನು ಮಾಡಿಕೊಳ್ಳಬೇಕು .ಶತ್ರುಗಳ ಹೆಸರನ್ನು ತೆಗೆದುಕೊಂಡು ತಾಯಿಯ ಮುಂದೆ ಈ ರೀತಿಯಾಗಿ ಪ್ರಾರ್ಥನೆ ಮಾಡಬೇಕು . ” ಹೇ ಮಹಾಕಾಳಿ ನನ್ನ ಶತ್ರುವಿಗೆ ಸ್ವಲ್ಪ ಬುದ್ಧಿಯನ್ನು ನೀಡು ” ಒಂದು ವೇಳೆ ಬೇರೆಯವರಿಗೂ ಸಹ ಈ ರೀತಿಯಾಗಿ ಬೇಡಿಕೊಂಡರೆ ,

ಮಹಾಕಾಳಿ ಅತಿಯಾಗಿ ಪ್ರಸನ್ನಳಾಗುತ್ತಾಳೆ .ಇದರಿಂದ ನಿಮಗೆ ಮೋಕ್ಷದ ಪ್ರಾಪ್ತಿಯು ಆಗುತ್ತದೆ .ಯಾಕೆಂದರೆ ನೀವು ಯಾವಾಗ ನಿಮ್ಮ ಶತ್ರುಗಳಿಗೆ ಒಳ್ಳೆಯದಾಗಲಿ ಎಂಬ ಬಯಕೆಯನ್ನು ತಾಯಿಯ ಮುಂದೆ ಬೇಡಿಕೊಂಡಾಗ , ಇಂತಹ ಸ್ಥಿತಿಯಲ್ಲಿ ತಾಯಿಯಿಂದ ನಿಮಗೆ ಎರಡು ರೀತಿಯ ಲಾಭಗಳು ದೊರೆಯುತ್ತದೆ .ಹಾಗಾಗಿ ಈ ಮಂತ್ರವನ್ನು ನಿಮ್ಮ ಮನಸ್ಸಿನಲ್ಲಿ 15 ನಿಮಿಷಗಳ ಕಾಲ ಜಪ ಮಾಡಬೇಕು . ಜಪ ಮಾಡುವ ಮುನ್ನ ಯಾವ ಕಟ್ಟಿಗೆಯ ಮೇಲೆ ಹೆಸರನ್ನ ಬರೆದಿರುತ್ತೀರಾ ಆ ಕಟ್ಟಿಗೆಯನ್ನು ನೀವು ಉರಿಸುತ್ತ ಇಡಬೇಕು .

ಆ ಕಟ್ಟಿಗೆಯನ್ನು ಬೆಂಕಿಯಿಂದ ಹಚ್ಚಬೇಕು . 15 ನಿಮಿಷ ಆದ ನಂತರ ಈ ಕಟ್ಟಿಗೆಯನ್ನು ಹಾರಿಸಬೇಕು .ಅಲ್ಲಿ ಉಳಿದಿರುವ ಬೂದಿಯನ್ನು ನೀವು ಸ್ಪರ್ಶ ಮಾಡದೆ , ಅಡುಗೆ ಮನೆ ಅಥವಾ ಬಾತ್ರೂಮಿನ ಸಿಂಕಿನಲ್ಲಿ ಹರಿಯ ಬಿಡಬೇಕು . ಹೀಗೆ ಪ್ರತಿದಿನ ನೀವು ಈ ಪ್ರಯೋಗವನ್ನು ಮಾಡುತ್ತಾ ಹೋದರೆ , ನಿಧಾನವಾಗಿ ಆ ಕಟ್ಟಿಗೆ ಪೂರ್ತಿ ಸುಟ್ಟಿ ಖಾಲಿ ಆಗುತ್ತದೆ .ಕಟ್ಟೆಗೆ ಖಾಲಿಯಾದ ನಂತರ ಎಲ್ಲಾ ಸಮಸ್ಯೆಗಳು ದೂರವಾಗುತ್ತದೆ .ನಿಮ್ಮ ಶತ್ರುಗಳ ಮನಸ್ಸಿನಲ್ಲಿ ಒಳ್ಳೆಯ ಪರಿವರ್ತನೆ ಬರುತ್ತದೆ.

ಮತ್ತೆ ಅವರು ಕೆಟ್ಟದ್ದನ್ನು ಆಲೋಚನೆ ಮಾಡಿದರು ಕೂಡ ಅವರ ಎಲ್ಲಾ ಕಾರ್ಯಗಳು ವಿಫಲವಾಗಿ ಹೋಗುತ್ತದೆ .ಯಾಕೆಂದರೆ ಇಲ್ಲಿ ನೀವು ಮಹಾ ಕಾಳಿಯ ಮೂಲ ಮಂತ್ರವನ್ನು ಜಪ ಮಾಡಿರುತ್ತೀರಾ . ಈ ಪ್ರಯೋಗವನ್ನು ಮಾಡುವ ಸಂದರ್ಭದಲ್ಲಿ ಒಂದು ಮಾತನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು .ಈ ಕಟ್ಟಿಗೆ ಸುಟ್ಟು ಪೂರ್ತಿಯಾಗಿ ಬೂದಿಯಾಗುವುದಿಲ್ಲವೋ , ಅಷ್ಟು ದಿನಗಳ ತನಕ ಈ ಪ್ರಯೋಗವನ್ನು ನಿರಂತರವಾಗಿ ಮಾಡಬೇಕು . ಒಂದು ವೇಳೆ ಪ್ರತಿ ದಿನ ಈ ರೀತಿ ಜಪ ಮಾಡುತ್ತಿದ್ದರೆ ,

ಕೇವಲ 15 ನಿಮಿಷಗಳು ಮಾತ್ರ ಜಪವನ್ನು ಮಾಡಬೇಕು . ಆದರೆ ಈ ಕಟ್ಟಿಗೆ ಒಂದು ಗಂಟೆ ಉರಿಯಲು ಬಿಡಬೇಕು .ಒಂದು ಗಂಟೆಯ ನಂತರ ಕಟ್ಟಿಗೆಯನ್ನು ಆರಿಸಿ ಅಲ್ಲಿ ಉಳಿದಿರುವ ಬೂದಿಯನ್ನ ನಿಮ್ಮ ಕೈಗಳಿಂದ ಸ್ಪರ್ಶ ಮಾಡದೆ , ಸಿಂಕಿನಲ್ಲಿ ಹಾಕಿ .ಪ್ರತಿದಿನ ಈ ರೀತಿ ಮಾಡುತ್ತಿದ್ದರೆ , ಆ ಕಟ್ಟಿಗೆ ಹತ್ತು ಅಥವಾ 12 ದಿನಗಳಲ್ಲಿ ಪೂರ್ತಿಯಾಗಿ ಸುಟ್ಟು ಹೋಗುತ್ತದೆ . ಒಂದು ವೇಳೆ ಆಗದಿದ್ದರೆ ಕರ್ಪೂರದ ಸಹಾಯದಿಂದ ಕಟ್ಟಿಗೆಯನ್ನು ಪೂರ್ತಿಯಾಗಿ ಸುಟ್ಟುಹಾಕಿ .

ಆ ಬೂದಿಯನ್ನು ವಿಸರ್ಜನೆ ಮಾಡಬೇಕು .ಇಲ್ಲವಾದರೆ ಹೊರಗಡೆ ಆ ಬೂದಿಯನ್ನು ಎಸೆಯಬಹುದು .ಈ ಬೂದಿಯನ್ನು ಕೈಯಿಂದ ಮುಟ್ಟದೆ ಯಾವುದಾದರೂ ಹಾಳೆಯ ಸಹಾಯದಿಂದ ತೆಗೆದು ನದಿಯಲ್ಲಿ ವಿಸರ್ಜನೆ ಮಾಡಬಹುದು . ಏನಾದರೂ ಕೈಗಳಿಗೆ ಬೂದಿ ಸ್ಪರ್ಶವಾದರೆ , ನಿಮ್ಮ ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳಿ .ಈ ಪ್ರಯೋಗವನ್ನು ಮಾಡುವುದರಿಂದ , ನಿಮ್ಮ ಶತ್ರುಗಳು ದೂರವಾಗುವುದು ಖಚಿತ ಎಂದು ಹೇಳಲಾಗಿದೆ.

Leave A Reply

Your email address will not be published.