ಕಟಕ ರಾಶಿ ವರ್ಷ ಭವಿಷ್ಯ 2024 

ನಾವು ಈ ಲೇಖನದಲ್ಲಿ 2024 ರ ಕಟಕ ರಾಶಿಯ ವರ್ಷ ಭವಿಷ್ಯ ಹೇಗೆ ಇರುತ್ತದೆ. ಎಂದು ತಿಳಿಯೋಣ .
ಮನಸ್ಸಿನಲ್ಲಿ ಒಂದು ಕೊರತೆ ಇದ್ದೇ ಇರುತ್ತದೆ . ಹೆಚ್ಚಿನ ಜನರಿಗೆ ಬೇಕಾಗಿರುವುದು ಈಗಿನ ಕಾಲದಲ್ಲಿ ಕೆಲಸ . ಕೆಲವರು ಉದ್ಯೋಗ ಇಲ್ಲ ಎಂದು ಪರದಾಡುತ್ತಿರುತ್ತಾರೆ . ಇನ್ನು ಕೆಲವರಿಗೆ ಉದ್ಯೋಗ ಇರುತ್ತದೆ . ಮನಸ್ಸಿಗೆ ನೆಮ್ಮದಿ ಇರುವುದಿಲ್ಲ .

ವಿಶೇಷವಾಗಿ ಸಂಬಳ ಸಾಕಾಗುವಷ್ಟು ಇರುವುದಿಲ್ಲ . ಖರ್ಚು ವೆಚ್ಚಗಳು ಹೆಚ್ಚಾಗುತ್ತಿರುತ್ತದೆ .ಇದನ್ನು ತೂಗಿಸುವ ಮಟ್ಟಕ್ಕೆ ಸಂಬಳ ಇರುವುದಿಲ್ಲ . ಬರುವ ಕಷ್ಟಗಳು ತುಂಬಾ ತೀವ್ರತೆಯನ್ನು ಪಡೆದುಕೊಳ್ಳುತ್ತವೆ . ಮತ್ತೆ ಆರೋಗ್ಯದ ಸಮಸ್ಯೆ . ಇದೆಲ್ಲಾ ಪರಿಹಾರವಾಗುವ ಸಮಯ ಯಾವಾಗ ಎಂದರೆ , ಒಂದು ಒಳ್ಳೆಯ ಪ್ರಕಾಶ ಮೂಡುವ ಸಾಧ್ಯತೆ ಇದೆ .

ಅತ್ಯಂತ ಧನಾತ್ಮಕವಾದ ಗ್ರಹ ನಿಮಗೆ ಸತತವಾಗಿ ಒಳ್ಳೆಯದನ್ನು ಮಾಡುತ್ತಾ ಹೋಗುತ್ತದೆ . 2024ರಲ್ಲಿ ಒಂದು ಮಟ್ಟಕ್ಕೆ ಸಮತೋಲನವಾಗುವ ವರ್ಷ ಆಗುತ್ತದೆ . ರೋಗ ರುಜಿನ ಈ ತರಹದ ವಿಚಾರಗಳಿಗೆ ಪರದಾಡುತ್ತಿರುವ ವ್ಯಕ್ತಿಯ ಜೀವನದಲ್ಲಿ ಒಂದು ರೀತಿಯ ಆಶಾಕಿರಣ ಹುಟ್ಟುತ್ತದೆ . ಈ ಪರಿಹಾರ ಅನ್ನುವುದು ನಿಮ್ಮಿಂದಲೇ ಹುಟ್ಟಬೇಕು .

ಸಮಸ್ಯೆಗಳನ್ನು ಅಂತಿಮವಾಗಿ ಬಗೆಹರಿಸಿ ಕೊಳ್ಳುವವರು ನೀವೇ ಆಗಿರ ಬೇಕಾಗುತ್ತದೆ . ಆದರೆ ಒಂದು ದೈವಿಕ ಶಕ್ತಿ ಬೇಕಾಗುತ್ತದೆ . ಅದು ಕೂಡ ನಿಮಗೆ ಸಹಾಯ ಮಾಡಬೇಕಾಗುತ್ತದೆ . ನಿಮ್ಮ ಮನಸ್ಸಿನಲ್ಲಿ ಒಂದು ರೀತಿಯ ಪ್ರೇರಣೆ ಬರಬೇಕು . ಅಷ್ಟಮ ಶನಿ ಬಹಳಷ್ಟು ತೀಕ್ಷ್ಣತೆಯನ್ನು ಪಡೆದು ಕೊಂಡಿರುತ್ತದೆ . ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ಕೊಂಡಿರುವವರು ಕೂಡ ಕಟಕ ರಾಶಿಯವರು ಇರಬಹುದು . ಆ ತೀವ್ರತೆಯನ್ನು ಕಡಿಮೆ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ತಿಳಿಯೋಣ .

ಹಲವಾರು ಮೂಲಗಳಿಂದ ನಷ್ಟ ಹಾಗುತ್ತಿರಬಹುದು . ಸಣ್ಣಪುಟ್ಟ ಯಶಸ್ಸು ಗಳು ದೊರೆತರೂ , ಖರ್ಚುಗಳು ಹೆಚ್ಚಾಗುತ್ತಾ ಹೋಗುತ್ತಿರುತ್ತವೆ . ಇದನ್ನು ರೂಪಿಸುವುದಕ್ಕೆ ಸಿಗುವ ಯಶಸ್ಸು ಸಾಕಾಗದೆ ಇರಬಹುದು . ದುರಾಸೆಯಿಂದ ಜೀವನದಲ್ಲಿ ಲವಲವಿಕೆಯನ್ನು ಕಳೆದುಕೊಳ್ಳಬಹುದು . ನಿಮ್ಮ ಜೀವನದಲ್ಲಿ ಇರುವ ಮಹತ್ವವಾದ ವ್ಯಕ್ತಿಗಳಿಗೆ ತೊಂದರೆ ಆದರೆ ಸಹಿಸಲು ಸಾಧ್ಯವಾಗುವುದಿಲ್ಲ . ತೃತೀಯ ಭಾವದಲ್ಲಿ ಕೇತು ಗ್ರಹ ಇದೆ . ಈ ಗ್ರಹಗಳಿಂದ ಬಹಳಷ್ಟು ಶುಭವನ್ನು ನಿರೀಕ್ಷೆ ಮಾಡಬಹುದು .

ವಿಶೇಷವಾಗಿ ವಿಕ್ರಮ ಸ್ಥಾನ ತೃತೀಯ ಭಾವ . ವಿಕ್ರಮ ಸ್ಥಾನದಲ್ಲಿ ಸ್ಥಿರತೆ ಕಡೆ ಹೋಗುವ ಹಾಗೆ ಮಾಡುತ್ತಾರೆ . ವಿಶೇಷವಾಗಿ ಮಾನಸಿಕ ಸ್ಥಿರತೆ ಬರುವ ಪರಿಸ್ಥಿತಿಗಳನ್ನು ಎದುರಿಸುವಂತಹ ಚಾಕಚಕ್ಯತೆ ಅಥವಾ ಧೈರ್ಯ. ಸಾಲುಗಳನ್ನು ನೋಡಿ ಓಡಿ ಹೋಗುವವರು ನೀವು ಆಗಿರುವುದಿಲ್ಲ . ಸವಾಲುಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ನಿಮಗೆ ಇರುತ್ತದೆ. ತಾಳ್ಮೆಯಿಂದ ಸಮಸ್ಯೆಗಳನ್ನು ಬಗೆಹರಿಸಿ ತೀರ್ಮಾನಗಳನ್ನು ತೆಗೆದುಕೊಳ್ಳುವ ಗುಣ ಇರುತ್ತದೆ .ಇದಕ್ಕೆ ಪರಿಹಾರಗಳನ್ನು ಬೇಗ ಕಂಡು ಹಿಡಿಯುವ ಸಾಮರ್ಥ್ಯ

ಈ ರಾಶಿಯವರಿಗೆ ಇರುತ್ತದೆ . 2024ರಲ್ಲಿ ಬರುವ ಸಮಸ್ಯೆಗಳನ್ನು ನಿಭಾಯಿಸುವ ಸಾಮರ್ಥ್ಯ ಇರುತ್ತದೆ . ಕೇತುವಿನಿಂದ ಈ ಸಮಸ್ಯೆಗಳಿಗೆ ಪರಿಹಾರ ಗಟ್ಟಿಯಾಗುತ್ತಾ ಹೋಗುತ್ತದೆ . ಆತ್ಮವಿಶ್ವಾಸ ಹೆಚ್ಚಾಗುತ್ತದೆ . ನಿಮ್ಮಲ್ಲಿ ಸ್ವಯಂ ಪ್ರೇರಣೆ ಹೆಚ್ಚಾಗುತ್ತಾ ಹೋಗುತ್ತದೆ . ನಿಮ್ಮ ಸುತ್ತಮುತ್ತಲ ಜನರಿಂದ ನೀವು ಸಮತೋಲನವನ್ನು ನಿರೀಕ್ಷೆ ಮಾಡಲು ಸಾಧ್ಯವಾಗುವುದಿಲ್ಲ . ಅಂದರೆ ಕೆಲವೊಂದು ವ್ಯಕ್ತಿಗಳು ದೂರವಾಗುತ್ತಾರೆ . ಆಗ ನಿಮಗೆ ನಿರಾಶೆಯಾಗುವ ಸಾಧ್ಯತೆ ಇರುತ್ತದೆ .

ಮಕ್ಕಳಿಂದ ನಿಮಗೆ ಕಿರಿಕಿರಿ ಹೆಚ್ಚಾಗಿ ಉಂಟಾಗಲು ಶುರುವಾಗುತ್ತದೆ . ಮತ್ತು ಮಕ್ಕಳು ನಿಮ್ಮಿಂದ ದೂರ ಹೋಗುವ ಸಾಧ್ಯತೆ ಇರುತ್ತದೆ . ಸಂಪತ್ತು ಒಂದು ಕಡೆ ಹೋಗುತ್ತಿದ್ದರೆ ಮತ್ತೊಂದು ಕಡೆಯಿಂದ ಬರುತ್ತಿರುತ್ತದೆ ಈ ರಾಶಿಯವರಿಗೆ ಅಷ್ಟೇನೂ ತೊಂದರೆ ಎಂದು ಅನಿಸುವುದಿಲ್ಲ . ಅಂದರೆ ನಿಮ್ಮ ಜೀವನದಲ್ಲಿ ಹೊಸತನ ಉಂಟಾಗುತ್ತದೆ .ಅಂದರೆ ಹೊಸ ವ್ಯಕ್ತಿಗಳ ಜೊತೆ ಒಡನಾಟ ನಡೆಸುವುದು . ತೃತೀಯದಲ್ಲಿ ಇರುವ ಕೇತು ಕೊಡುವ ಧೈರ್ಯ ಬಹಳ ನಿರ್ಣಾಯಕವಾಗಿ ಇರುತ್ತದೆ .

ಮೇ 1 2024 ಗುರು ಗ್ರಹ ನಿಮ್ಮ ಏಕಾದಶ ಭಾವಕ್ಕೆ ಬರುತ್ತದೆ . ವೃಷಭ ರಾಶಿಗೆ ಗುರು ಗ್ರಹ ಬಂದಾಗ , ಬಹಳಷ್ಟು ರೀತಿಯ ಪರಿವರ್ತನೆಗಳು ಆಗುತ್ತದೆ . ಅದರಲ್ಲೂ ಗುರುವಿನಂತಹ ದೊಡ್ಡ ಗ್ರಹ ಲಾಭದ ಸ್ಥಾನಕ್ಕೆ ಬಂದಾಗ , ಲಾಭಗಳನ್ನು ಜಾಸ್ತಿ ಮಾಡೇ ಮಾಡುತ್ತದೆ . ಆಗ ನಿಮ್ಮ ಒಳಗಿರುವ ಗುರುವನ್ನು ಜಾಗೃತ ಗೊಳಿಸುತ್ತದೆ . ಅಂದರೆ ನಿಮ್ಮ ವಿಷಯದಲ್ಲಿ ನೀವು ಪ್ರಭುತ್ವವನ್ನು ಸಾಧಿಸುವುದು , ಮಾನಸಿಕವಾಗಿ ಪ್ರೇರಣೆಯನ್ನು ಒಂದು ಮಟ್ಟಕ್ಕೆ ಏರಿಸುವಂತದ್ದು .

ನಿಮ್ಮಲ್ಲಿ ಒಂದು ರೀತಿಯ ಸಂಚಲನ ಉಂಟಾಗುತ್ತದೆ . ಅದು ಬಹಳಷ್ಟು ಒಳ್ಳೆಯ ಫಲವನ್ನು ತಂದುಕೊಡುತ್ತದೆ . ಏಕೆಂದರೆ ಒಂದು ಪ್ರೇರಣೆಯನ್ನು ಪಡೆದು ಕೊಂಡಂತಹ ವ್ಯಕ್ತಿಯ ಮಾತು ಪ್ರಶಂಸೆಗಳು ಪ್ರಭಾವ ಮಾಡುವ ರೀತಿ ಬೇರೆ ಇರುತ್ತದೆ .ಈ ಒಂದು ರೀತಿಯ ಪರಿವರ್ತನೆಯನ್ನು ನಮ್ಮಲ್ಲಿ ನಾವೇ ನಿರೀಕ್ಷೆ ಮಾಡಬಹುದು . ಈ ರಾಶಿಯವರು ಬೇರೆ ವ್ಯಕ್ತಿಗಳ ಮೇಲೆ ಪ್ರಭಾವ ಬೀರುವುದರಿಂದ , ಸಾಕಷ್ಟು ರೀತಿಯ ಲಾಭವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ .

ಗುರುವಿನ ಆಶೀರ್ವಾದದಿಂದ ಒಳ್ಳೆಯ ಮಕ್ಕಳ ಹುಟ್ಟಿಗೆ ಕಾರಣವಾಗುತ್ತದೆ . ಅಥವಾ ಇರುವ ಮಕ್ಕಳಿಗೆ ಅವರ ಸ್ವಭಾವ ವಿದ್ಯಾಭ್ಯಾಸ ಇದರ ಮೇಲೆ ಒಳ್ಳೆಯ ಪರಿಣಾಮ ಬೀರುತ್ತದೆ . ಕ್ರಮೇಣ ಇದರಿಂದ ಖುಷಿ ಸಿಗುತ್ತಾ ಹೋಗುತ್ತದೆ . ಹಾಗೆಯೇ ಗೌರವ ಹೆಚ್ಚಾಗುವ ಸಾಧ್ಯತೆ ಕೂಡ ಇದೆ . ಕೆಲಸ ಕಾರ್ಯಗಳು ಮತ್ತು ವ್ಯಾಪಾರ ವ್ಯವಹಾರಗಳಲ್ಲಿ ನಿಮ್ಮ ವರ್ಚಸ್ಸು ತುಂಬಾ ಹೆಚ್ಚಾಗುತ್ತದೆ . ಒಳ್ಳೆಯದನ್ನು ಹಾಗೆ ಇಟ್ಟು ಕೊಳ್ಳುವುದಕ್ಕೆ ಮತ್ತು ಕೆಟ್ಟದ್ದನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ಒಂದಿಷ್ಟು ಸೂಚನೆಗಳನ್ನು ನೀಡಲಾಗುತ್ತದೆ .

ಈ ವರ್ಷದಲ್ಲಿ ನೀವು ಪ್ರೇರಣೆಯನ್ನು ಇಟ್ಟುಕೊಂಡೆ ಮುಂದೆ ಸಾಗಬೇಕು . ಗ್ರಹಗಳು ತಮ್ಮ ಪ್ರಭಾವವನ್ನು ಬೀರುತ್ತವೆ ಆದರೆ ನಾವು ಗಟ್ಟಿಯಾಗಿ ಇರಬೇಕು. ಉದ್ವೇಗ ಆಗುವ ವಿಚಾರಗಳಿಂದ ನೀವು ದೂರ ಇರಬೇಕು . ಕೆಲಸದಲ್ಲಿ ಬರುವ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬೇಕು. ಕೆಲಸದ ಜೊತೆ ನಿಮ್ಮ ಬಾಂಧವ್ಯ ಕಡಿಮೆಯಾಗಬೇಕು . ನಿಮ್ಮ ಮೇಲೆ ನೀವು ಉದ್ವೇಗ ಕಡಿಮೆ ಮಾಡಿಕೊಳ್ಳಲು ಬೇರೆಯ ವ್ಯಕ್ತಿ ಮೇಲೆ ಅವಲಂಬಿತ ಆಗಬೇಕಾಗುತ್ತದೆ .

ಉದ್ಯೋಗದಲ್ಲಿರುವ ವ್ಯಕ್ತಿಗಳು ಆದರೆ ಅವರು ಶಿಸ್ತಿನಿಂದ ಇರಲು ಒಂದು ವಾತಾವರಣವನ್ನು ನಿರ್ಮಾಣ ಮಾಡಿಕೊಳ್ಳಲು ಶ್ರಮ ಪಡಬೇಕಾಗುತ್ತದೆ . ಮನೆಯಲ್ಲಿ ಇರುವಾಗ ಕಚೇರಿಯ ವಿಚಾರವನ್ನು ಸೇರಿಸಬಾರದು ಮುಕ್ತವಾಗಿ ಇರಬೇಕು . ಇಂಥಹ ಪರಿಸ್ಥಿತಿ ಏನು ನಿಭಾಯಿಸುವುದಕ್ಕೆ ತಯಾರಾಗಬೇಕು . ನಿಮ್ಮ ಕರ್ತವ್ಯ ಏನು ಇರುತ್ತದೆ ಅದನ್ನು ನಿಭಾಯಿಸಿಕೊಂಡು ಹೋಗಿ .

ಬಾಂಧವ್ಯ ಹೆಚ್ಚಿಗೆ ಮಾಡಿಕೊಳ್ಳಬೇಡಿ . ವಿಶ್ರಾಂತಿ ತೆಗೆದುಕೊಳ್ಳುವಾಗ ಬೇರೆ ಕಡೆ ಗಮನ ಹೋಗಬಾರದು . ಕೆಲಸದ ವಿಚಾರಗಳು ನಿಮ್ಮ ತಲೆಯಲ್ಲಿ ಬರಬಾರದು . ಗುರು ಮತ್ತು ಶನಿಯಿಂದ ಆರೋಗ್ಯಕ್ಕೆ ಸಮಸ್ಯೆಗಳು ಉಂಟು ಮಾಡುವ ಸಾಧ್ಯತೆ ಇರುತ್ತದೆ . ನಿಮ್ಮ ಜೀವನದ ಶೈಲಿಗಳನ್ನು ನೀವು ಬದಲಾಯಿಸಿಕೊಳ್ಳಬೇಕು . ಎಲ್ಲಾ ಕ್ರಮಗಳ ಮೂಲಕ ಆರೋಗ್ಯ ಮಾನಸಿಕ ಆರೋಗ್ಯ ಪ್ರೇರಣೆ ಇಟ್ಟುಕೊಳ್ಳುವುದರಿಂದ ನಿಮಗೆ ಒಳ್ಳೆಯ ಫಲ ದೊರೆಯುತ್ತದೆ .

Leave a Comment