ಮೃತರ ಆತ್ಮ

0

ನಾವು ಈ ಲೇಖನದಲ್ಲಿ ಮೃತರ ಆತ್ಮ 24 ಗಂಟೆಗಳ ನಂತರ ತನ್ನ ಮನೆಗೆ ಮರಳಿ ಏಕೆ ಬರುತ್ತದೆ . ಎಂಬುದರ ಬಗ್ಗೆ ತಿಳಿಯೋಣ . ಹುಟ್ಟು ಎಂದ ಮೇಲೆ ಸಾವು ಇರಲೇಬೇಕು . ಸಾವಿನ ನಂತರ ಆತ್ಮವೂ , ದೇಹವನ್ನು ತೊರೆದಾಗ , ಅದು ಸ್ವಲ್ಪ ಸಮಯದವರೆಗೆ ಸ್ವಪ್ನಾವಸ್ಥೆಯಲ್ಲಿ ಇರುತ್ತದೆ . ಎಂದು ಗರುಡ ಪುರಾಣದಲ್ಲಿ ಉಲ್ಲೇಖಿಸಲಾಗಿದೆ . ಆತ್ಮವೂ ಪ್ರಜ್ಞೆಯನ್ನು ಮರಳಿ ಪಡೆದ ನಂತರ ತನ್ನ ದೇಹವನ್ನು ಕಂಡು ದುಃಖ ಪಡುತ್ತದೆ .

ದುಃಖದಲ್ಲಿ ಇರುವ ತನ್ನ ಕುಟುಂಬದವರನ್ನು ಕಂಡು ಅದು ಕೂಡ ಮರುಕವನ್ನು ವ್ಯಕ್ತಪಡಿಸುತ್ತದೆ . ತನ್ನ ಕುಟುಂಬದೊಂದಿಗೆ ಮಾತನಾಡಲು ಪ್ರಯತ್ನಿಸುತ್ತದೆ . ಮತ್ತು ತನ್ನ ದೇಹವನ್ನು ಮರಳಿಸಿರಲು ಇಚ್ಚಿಸುತ್ತದೆ . ಆತ್ಮ ಪ್ರಜ್ಞೆಯನ್ನು ಪಡೆದಾಕ್ಷಣ ಯಮ ದೂತರು ಬಂದು ಆತ್ಮವನ್ನು ತಮ್ಮೊಂದಿಗೆ ಯಮ ಲೋಕಕ್ಕೆ ಕರೆದುಕೊಂಡು ಹೋಗುತ್ತಾರೆ . ಯಮ ಲೋಕದಲ್ಲಿ ಚಿತ್ರ ಗುಪ್ತರು ಮತ್ತು ಅವನ ಸಹಚರರು ಆತ್ಮವೂ ದೇಹದಲ್ಲಿ ಇದ್ದಾಗ , ಮಾಡಿದ ಎಲ್ಲಾ ಕಾರ್ಯಗಳನ್ನು ಲೆಕ್ಕ ಮಾಡುತ್ತಾರೆ .

ಯಾರಿಗೂ ಕೂಡ ನಾವು ಸತ್ತ ಮೇಲೆ ನಮ್ಮ ಆತ್ಮ ಏನಾಗುತ್ತದೆ ಎನ್ನುವ ಅರಿವಿರುವುದಿಲ್ಲ . ನಮ್ಮೆಲ್ಲರ ಪ್ರಕಾರ ಮರಣದ ನಂತರ ನಾವು ಇನ್ನೊಂದು ಜನ್ಮವನ್ನು ಪಡೆಯುತ್ತೇವೆ ಎಂಬ ನಂಬಿಕೆ ಇದೆ . ನಿಜವಾಗಿಯೂ ನಾವು ಮರಣದ ನಂತರ ಏನಾಗುತ್ತೇವೆ…? ಆತ್ಮಕ್ಕೂ ಯಮ ಲೋಕಕ್ಕೂ ಏನು ಸಂಬಂಧ..?

ಜೀವ ಹೋದ ನಂತರ ಏನಾಗುತ್ತೆ…? ಒಂದು ಸಲ ಮನುಷ್ಯನ ದೇಹದಿಂದ ಜೀವ ಹೋದ ನಂತರ ಏನಾಗುತ್ತದೆ ಎಂಬುದೇ ಬಹಳ ಮುಖ್ಯವಾದ ಅಂಶ . ದೇಹವನ್ನು ಕಳೆದುಕೊಂಡ ಆತ್ಮ ತನ್ನ ಪ್ರಯಾಣ ಆರಂಭಿಸಬೇಕಾಗುತ್ತದೆ . ಈ ಭೂಮಿ ಮೇಲೆ ಬರುವುದಕ್ಕೆ ಕಾರಣವಾದ ಕೆಲಸಗಳನ್ನೆಲ್ಲ ಮುಗಿಸಿದ ತೃಪ್ತಿ ಇರುವ ಆತ್ಮಗಳು ಅವುಗಳ ಪಾಪ ಹಾಗೂ ಪುಣ್ಯಗಳ ಲೆಕ್ಕಾಚಾರದಲ್ಲಿ ಸ್ವರ್ಗ ಮತ್ತು ನರಕವನ್ನು ಸೇರುತ್ತವೆ . ಆತ್ಮಕ್ಕೆ ಯಾವುದೇ ಹಾನಿ ಮಾಡಲು ಆಗಲ್ಲ ಎಂಬ ನಂಬಿಕೆ ಇದ್ದರೂ , ಸ್ವರ್ಗ ನರಕಗಳಲ್ಲಿ ಪಾಪ ಪುಣ್ಯಗಳಿಗೆ ತಕ್ಕಂತೆ ಸುಖ ಮತ್ತು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ .

ಆತ್ಮ ಹಿಂದಿರುಗುತ್ತದೆ :- ಸತ್ತ ವ್ಯಕ್ತಿಯ ಆತ್ಮವೂ 12 ದಿನಗಳ ವರೆಗೆ ತನ್ನ ಕುಟುಂಬದಲ್ಲೇ ಉಳಿಯುತ್ತದೆ . ನಂತರ ಕುಟುಂಬವು ನೀಡಿದ ಪಿಂಡ ದಾನವನ್ನು , ನೀರನ್ನು ಕುಡಿದು , ತನ್ನ ಅಸ್ವಾಭಾವಿಕ ದೇಹವನ್ನು ಬೆರಳಿನ ಆಕಾರದಲ್ಲಿ ಮಾಡುತ್ತದೆ . ಜೀವಂತವಾಗಿ ಇದ್ದಾಗ ಮಾಡಿದ ಎಲ್ಲ ಕರ್ಮವನ್ನು ಪಾವತಿಸಬೇಕಾಗುತ್ತದೆ . ಅನಾಚಾರದ ದೇಹವನ್ನು ಯಮದೂತರು 12ನೇ ದಿನದಿಂದ ಕಟ್ಟಿ ಯಮ ಮಾರ್ಗಕ್ಕೆ ಕರೆದೊಯ್ಯಲಾಗುತ್ತದೆ . ಯಮ ಮಾರ್ಗಕ್ಕೆ ಪ್ರಯಾಣವು ಅತ್ಯಂತ ಕಷ್ಟ ಎಂದು ಗರುಡ ಪುರಾಣದಲ್ಲಿ ಉಲ್ಲೇಖಿಸಲಾಗಿದೆ .

2 . ಆತ್ಮಕ್ಕೆ 12 ದಿನಗಳು ಇರುತ್ತದೆ :- ಸಾವಿನ ನಂತರ ಪ್ರತಿಯೊಬ್ಬ ವ್ಯಕ್ತಿಯೂ 12 ದಿನಗಳ ಕಾಲ ಪ್ರತ್ಯೇಕವಾಗಿ ಅಲೆದಾಡಬೇಕಾಗುತ್ತದೆ , ಎಂದು ಗರುಡ ಪುರಾಣದಲ್ಲಿ ಹೇಳಲಾಗಿದೆ . ಮರಣ ಹೊಂದಿದ ನಂತರ ವ್ಯಕ್ತಿಯ ಆತ್ಮಕ್ಕೆ ಅಭೌತಿಕ ದೇಹವನ್ನು ಪಡೆಯಲು 12 ದಿನಗಳು ಬೇಕಾಗುತ್ತದೆ . ಅಭೌತಿಕ ದೇಹವು ಸ್ವರ್ಗದ ಪ್ರಭಾವದಿಂದಾಗಿ ಮತ್ತು ಸದ್ಗುಣದಿಂದಾಗಿ ಪಾಪಕ್ಕೆ ಅನುಗುಣವಾಗಿ ನರಕ ಯಾತನೆಯನ್ನು ಅನುಭವಿಸಬೇಕಾಗುತ್ತದೆ . ಆತ್ಮವೂ ಕರ್ಮದ ಫಲವನ್ನು ಅನುಭವಿಸಿದ ನಂತರ ಮತ್ತೆ ಹೊಸ ದೇಹವನ್ನು ಸೇರುತ್ತದೆ . ಸ್ವರ್ಗವನ್ನು ಸೇರಿದ ಆತ್ಮವೂ ಸದ್ಗುಣ ಶೀಲನಾಗಿ ಶ್ರೀಮಂತ ಮತ್ತು ಸಂತೋಷದ ಕುಟುಂಬದಲ್ಲಿ ಜನಿಸುತ್ತಾರೆ .

3 . ಸಾವಿನ ನಂತರ ಆತ್ಮದ ಪ್ರಯಾಣ : – ಮರಣದ ನಂತರ ಜೀವನವನ್ನು ವಿವರಿಸುವ ಗರುಡ ಪುರಾಣವೂ , ಧರ್ಮ ನಿಷ್ಠವಾದ ಆತ್ಮ ಮಾತ್ರ ವಿಷ್ಣುವಿನ ಲೋಕಕ್ಕೆ ವಿಷ್ಣು ದೂತರೊಂದಿಗೆ ಹೋಗಬೇಕೆಂದಿಲ್ಲ . ಸಾವಿನ ನಂತರ ಒಂದು ವೇಳೆ ಆತ್ಮವನ್ನು ಯಮ ಲೋಕಕ್ಕೆ ಕರೆದುಕೊಂಡು ಹೋದಾಗ ಯಮನ ಸಂದೇಶವಾಹಕರು ಅಭೌತಿಕ ದೇಹವನ್ನು ಅಥವಾ ಅತೃಪ್ತ ಆತ್ಮವನ್ನು ಒಂದೇ ದಿನದಲ್ಲಿ 1600 ಕಿಲೋಮೀಟರ್ ದೂರ ಓಡಿಸುತ್ತಾರೆ . ಆತ್ಮವು ದೇಹವನ್ನು ತೊರೆದ ದಿನ ಮಾತ್ರ , ಅದಕ್ಕೆ ವಿಶ್ರಾಂತಿಯನ್ನು ನೀಡಲಾಗುತ್ತದೆ .

4 . ಮರಣದ ನಂತರ ಶ್ರಾದ್ಧ ತರ್ಪಣ ನೀಡಲು ಕಾರಣ :- ವ್ಯಕ್ತಿಯ ಮರಣದ ನಂತರ ಸಾವಿನ ದಿನಾಂಕದಿಂದ ಒಂದು ವರ್ಷದವರೆಗೆ ಆಹಾರ ಧಾನ್ಯಗಳನ್ನು ದಾನ ಮಾಡಬೇಕೆಂದು , ಗರುಡ ಪುರಾಣದಲ್ಲಿ ಉಲ್ಲೇಖಿಸಲಾಗಿದೆ . ಈ ಅವಧಿಯಲ್ಲಿ ಬ್ರಾಹ್ಮಣರಿಗೆ , ಪ್ರಾಣಿ ಪಕ್ಷಿಗಳಿಗೆ , ದಾನ ಮಾಡಿದ ಆಹಾರವು , ಸತ್ತ ವ್ಯಕ್ತಿಯ ಆತ್ಮವನ್ನು ಮತ್ತಷ್ಟು ಬಲಪಡಿಸುತ್ತದೆ . ಯಾವ ಕುಟುಂಬದಲ್ಲಿ ಮರಣ ಹೊಂದಿದ ವ್ಯಕ್ತಿಗಳ ಹೆಸರಿನಲ್ಲಿ ದಾನ , ಶ್ರಾದ್ಧ , ತರ್ಪಣವನ್ನು ಮಾಡಲಾಗುವುದಿಲ್ಲವೋ, ಆ ಆತ್ಮವು ಯಮ ಮಾರ್ಗದಲ್ಲಿ ನೋವನ್ನು ಬಳಲುವಿಕೆಯನ್ನು ಅನುಭವಿಸುತ್ತದೆ . ಆತ್ಮವೂ ಅತೃಪ್ತ ಆತ್ಮವಾಗಿ ಇರುತ್ತದೆ .

Leave A Reply

Your email address will not be published.