ಸಿಂಹ ರಾಶಿ ವರ್ಷ ಭವಿಷ್ಯ 2024

0

ನಾವು ಈ ಲೇಖನದಲ್ಲಿ 2024ರ ಸಿಂಹ ರಾಶಿಯ ವರ್ಷ ಭವಿಷ್ಯ ಹೇಗೆ ಇರುತ್ತದೆ ಎಂಬುದನ್ನು ತಿಳಿದುಕೊಳ್ಳೋಣ . ಈ ವರ್ಷದಲ್ಲಿ ನಿಮಗೆ ಬಹಳಷ್ಟು ಗೊಂದಲಗಳು ಕಿರಿ ಕಿರಿ ಗಳು ನಿಮ್ಮ ಸುತ್ತಮುತ್ತಲಿನ ವ್ಯಕ್ತಿಗಳಿಂದ ಬಹಳಷ್ಟು ರೀತಿಯ ಅಡ್ಡಿ ಆತಂಕಗಳು ಮತ್ತು ವಿಜ್ಞಗಳು ಇರುತ್ತವೆ. ಸಪ್ತಮದಲ್ಲಿ ಶನಿ ಗ್ರಹ ಇರುತ್ತದೆ. ಶನಿಯಿಂದ ತೊಂದರೆ ತೊಡಕುಗಳು , ಅಡ್ಡಿ ಆತಂಕಗಳು , ಅಡಚಣೆಗಳು , ಮಾನಸಿಕ ಒತ್ತಡ ಇಂತಹ ಒಂದು ಬೆಳವಣಿಗೆಗಳು ನಡೆಯುತ್ತವೆ .

ವಿಶೇಷವಾಗಿ ಬರುವಂತಹ ಆರೋಗ್ಯದ ತೊಂದರೆ . ಮಾನಸಿಕ ಅಥವಾ ದೈಹಿಕ ಆರೋಗ್ಯ . ಒಟ್ಟಾರೆಯಾಗಿ ಜೀವನದ ದೈನಂದಿನ ಆಗು ಹೋಗುಗಳನ್ನು ಅಸ್ಥಿರಗೊಳಿಸುವ ಮಟ್ಟಿಗೆ ಸಂಚಲನವನ್ನು ಶನಿ ಉಂಟು ಮಾಡುತ್ತಾನೆ . ಈ ತರಹದ ಬೆಳವಣಿಗೆಗಳು ನಿಮ್ಮ ಪತಿ ಅಥವಾ ಪತ್ನಿಯ ಜೀವನದಲ್ಲಿ ನಡೆಯುತ್ತವೆ . ಇಂಥಹ ಬಿಸಿ ನಿಮಗೂ ಕೂಡ ತಟ್ಟುತ್ತದೆ . ಕೆಲಸ ಕಾರ್ಯಗಳಲ್ಲಿ ಅಥವಾ ವ್ಯಾಪಾರ ವ್ಯವಹಾರಗಳಲ್ಲಿ ನೀವು ಅಂದುಕೊಳ್ಳುವ ಮಟ್ಟಿಗೆ ನಿಮಗೆ ತೃಪ್ತಿ ದೊರೆಯುವುದಿಲ್ಲ .

ಯಶಸ್ಸು ಕೂಡ ಸ್ವಲ್ಪ ಕಡಿಮೆಯಾಗುತ್ತಾ ಹೋಗುತ್ತದೆ . ಇಂತಹ ಬೆಳವಣಿಗೆಗಳು ಬದಲಾಗುವ ಸಾಧ್ಯತೆ ಇರುತ್ತದೆ . ವಿಶೇಷವಾಗಿ ತುಂಬಾ ದುಸ್ಥರವಾದ ಮತ್ತು ಪ್ರಯಾಸಕರವಾದ ಪ್ರಯಾಣಗಳು ಆಗುವ ಸಾಧ್ಯತೆ ಇರುತ್ತದೆ . ಮೃತ್ಯು ನೆನಪು ಮಾಡಿ ಕೊಡುವ ಘಟನೆಗಳು ನಡೆಯುತ್ತದೆ . ನಾವು ಜೀವನದಲ್ಲಿ ಏನಾದರೂ ಕಳೆದುಕೊಂಡಾಗ ಅದರ ಅರಿವು ಬರುತ್ತವೆ . ಈ ತರ ನಕಾರಾತ್ಮಕ ಪರಿವರ್ತನೆಗಳು ನಿಮ್ಮ ಜೀವನದಲ್ಲಿ ಆಗುತ್ತಿರುತ್ತವೆ . ನಿಮ್ಮ ನೆಮ್ಮದಿಯನ್ನು ಕೆಡಿಸುವ ದೊಡ್ಡ ತೊಂದರೆ ಆಗುವುದಿಲ್ಲ .

ಈ ಒಂದು ವರ್ಷದ ಭವಿಷ್ಯ 50 ಭಾಗ ಒಳ್ಳೆಯದು 50 ಭಾಗ ಕೆಟ್ಟದಾಗಿ ಇರುತ್ತದೆ . ಎರಡು ಗ್ರಹಗಳು ಕೇಂದ್ರದಲ್ಲಿ ಇರುವುದರಿಂದ , ಕೆಲಸದಲ್ಲಿ ಪ್ರಗತಿ ಉಂಟಾಗುತ್ತದೆ . ಮತ್ತು ಹಣ ಪಡೆಯುವ ಸಾಧ್ಯತೆ ಕೂಡ ಹೆಚ್ಚಾಗಿರುತ್ತದೆ . ಗುರು ದಶಮದಲ್ಲಿ ಶನಿ ಸಪ್ತಮದಲ್ಲಿ ಇರುವುದರಿಂದ , ಎರಡು ಗ್ರಹಗಳು ಸೇರಿಕೊಂಡು , ತೀಕ್ಷ್ಣತೆಯನ್ನು ಕೊಡುತ್ತವೆ . ಒಂದು ಮಟ್ಟದ ವಿಚಿತ್ರವಾದ ಸಮತೋಲನ ಕೂಡ ಸೃಷ್ಟಿಯಾಗುತ್ತದೆ , ಎರಡು ದೀರ್ಘ ಮಟ್ಟದ ಗ್ರಹಗಳು ನಿರ್ಧಾರವನ್ನು ತೆಗೆದು ಕೊಳ್ಳುವಂತಹ ಸಾಧ್ಯತೆ ಇದೆ .

ಒಂದು ವಿಷಯದ ಬಗ್ಗೆ ಗೌರವವನ್ನು ಕೊಡುವ ಆಲೋಚನೆ ನಿಮ್ಮಲ್ಲಿ ಬರುತ್ತದೆ . ಗುರು ಮತ್ತು ಶನಿ ಪರಸ್ಪರ ಕೇಂದ್ರದಲ್ಲಿ ಇರುವಾಗ ಧಾರ್ಮಿಕ ವಿಚಾರಗಳು ಜಾಗೃತವಾಗುತ್ತದೆ . ಪರಿಸರ ಮತ್ತು ಪ್ರಕೃತಿಯ ಬಗ್ಗೆ ಒಲವು ಮತ್ತು ಗೌರವ ಇರುತ್ತದೆ . ಜೀವನದಲ್ಲಿ ಬರುವ ಪರಿಸ್ಥಿತಿಗಳಿಗೆ ನಿಮ್ಮ ನಕಾರಾತ್ಮಕ ಶಕ್ತಿ ಜಾಸ್ತಿ ಆಗುವ ಸಾಧ್ಯತೆ ಇರುತ್ತದೆ . ವ್ಯಾಪಾರಸ್ಥರಿಗೆ ಹಣ ದೊರೆಯುತ್ತದೆ . ಆದರೆ ಉಸಿರು ಕಟ್ಟುವ ವಾತಾವರಣ ಸೃಷ್ಟಿಯಾಗುತ್ತದೆ . ನಿಮ್ಮ ಜೀವನದಲ್ಲಿ ಬಿಡುವಿಲ್ಲದ ಕೆಲಸ ಮಾಡಬೇಕಾಗುತ್ತದೆ .

ಅದಕ್ಕಾಗಿ ನೀವು ತುಂಬಾ ಹೋರಾಟ ನಡೆಸಬೇಕು . ನಿಮಗೆ ವ್ಯಾಪಾರ ವ್ಯವಹಾರದಲ್ಲಿ ಅನುಭವ ಹೆಚ್ಚಾಗಿರುತ್ತದೆ . ಮುಂಬರುವ ಸವಾಲುಗಳನ್ನು ಕೂಡ ಎದುರಿಸಬೇಕಾಗುತ್ತದೆ . ಅನುಭವ ಇಲ್ಲದ ವ್ಯಕ್ತಿಗಳು ತುಂಬಾ ಸವಾಲುಗಳನ್ನು ಎದುರಿಸಬೇಕಾಗುತ್ತದೆ . ಕೆಲಸ ಹೋಗುವ ಆತಂಕ ಕೂಡ ಹೆಚ್ಚಾಗಬಹುದು . ಕೆಲಸ ಕಳೆದುಕೊಂಡರೂ ಕೂಡ ಮುಂದೆ ಬರುವ ಸಮಯದಿಂದ ಒಳ್ಳೆಯ ಕೆಲಸ ದೊರೆಯುವ ಸಾಧ್ಯತೆ ಇರುತ್ತದೆ . ಹಣ ಬರುವುದರ ಜೊತೆಗೆ ಅಷ್ಟೇ ಬೇಗ ನಷ್ಟವಾಗುವ ಸಾಧ್ಯತೆ ಕೂಡ ಇದೆ .

ಎಚ್ಚರಿಕೆಯಿಂದ ಇರಬೇಕಾಗುತ್ತದೆ . ಎಚ್ಚರಿಕೆಯಿಂದ ಕೆಲಸ ಮಾಡಬೇಕಾಗುತ್ತದೆ . ವ್ಯಕ್ತಿಗಳನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ವಿಫಲವಾಗುವ ಸಾಧ್ಯತೆ ಇರುತ್ತದೆ . 2024ರಲ್ಲಿ ಬಹಳ ಪ್ರಗತಿಯನ್ನು ಕಾಣುವ ವರ್ಷವಾಗಿ
ಮಾರ್ಪಡಿಸುವ ಒಂದು ಪರಿವರ್ತನೆ ಆಗುತ್ತದೆ. ಒಂದು ಬೆಳಕಿನ ಕಿರಣ ನಿಮ್ಮ ಮೇಲೆ ಬೀಳುವ ಸಾಧ್ಯತೆ ಇದೆ . ಆ ಕಿರಣ ಕೊಡುವ ಒಳ್ಳೆಯ ಸಂದೇಶಕ್ಕೋಸ್ಕರ ನಿಮ್ಮ ನಿರೀಕ್ಷೆ ಯಾವಾಗಲೂ ಇರುತ್ತದೆ . ಇದು ನಿಮಗೆ ತುಂಬಾ ಪ್ರಾಮುಖ್ಯವಾಗಿ ಇರುತ್ತದೆ . ನಿಮ್ಮ ಜೀವನದ ಅದೃಷ್ಟ ,

ಒಳ್ಳೆಯತನ , ತೆಗೆದುಕೊಳ್ಳುವ ಒಳ್ಳೆಯ ತೀರ್ಮಾನಗಳು , ಜನಪರವಾಗಿ ನೀವು ಮಾಡುವ ಎಲ್ಲಾ ಕೆಲಸಗಳು , ಇವೆಲ್ಲ ಅವಲಂಬಿತವಾಗಿ ಇರುವುದು . ಆ ಒಂದು ಪರಿವರ್ತನೆಯ ಮೇಲೆ ನಿಮ್ಮ ನಿರ್ಧಾರ ಇಲ್ಲದಿದ್ದರೆ , ನಿಮ್ಮ ಜೀವನ ದುಸ್ತರವಾಗುತ್ತದೆ . ನಿಮ್ಮ ಜೀವನದಲ್ಲಿ ಗುರು ಕೊಡುತ್ತಾ , ಹೋಗುತ್ತಾನೆ . ಆದರೆ ಶನಿ ದೇವರ ಆಟ ನಡೆಯುತ್ತಿರುತ್ತದೆ . ಅಂದರೆ ನಿಮಗೆ ಮೇ ತಿಂಗಳಲ್ಲಿ ಹೆಚ್ಚಿನ ಲಾಭ ಆಗುವ ಸಾಧ್ಯತೆ ಇರುತ್ತದೆ . ಉದ್ಯೋಗದಲ್ಲಿ ಇರುವವರಿಗೆ ಬಹಳ ಗೌರವ ಘನತೆ ಹೆಚ್ಚಾಗುತ್ತದೆ .

ಗೌರವವಾದ ಹುದ್ದೆಗೆ ಹೋಗುವ ಸಾಧ್ಯತೆ ಇರುತ್ತದೆ . ನಿಮ್ಮ ಅನುಭವದ ದೃಷ್ಟಿಕೋನದಿಂದ ನಿಮಗೆ ಒಳ್ಳೆಯ ಹುದ್ದೆ ದೊರೆಯುವ ಸಾಧ್ಯತೆ ಇರುತ್ತದೆ . ಈ ಒಂದು ಸಂದರ್ಭದಲ್ಲಿ ನಿಮ್ಮ ಆರೋಗ್ಯದ ಬಗ್ಗೆ ಎಚ್ಚರಿಕೆಯಿಂದ ಇರಬೇಕು . ಆಲಸ್ಯಕ್ಕೆ ಅವಕಾಶ ಮಾಡಿಕೊಡಬಾರದು . ಭೌತಿಕ ಕಾರ್ಯದಲ್ಲಿ ಇರುವ ವ್ಯಕ್ತಿಗಳಿಗೆ ಮನಸ್ಸು ತುಂಬಾ ಸಕ್ರಿಯವಾಗಿ ಇರುತ್ತದೆ .ಚಿಂತನೆಗಳು , ಆಲೋಚನೆಗಳು , ತುಂಬಾ ವೇಗವಾಗಿ ಹೋಗುತ್ತಿರುತ್ತವೆ . ನಿಮ್ಮ ಪರಿಸ್ಥಿತಿಗೆ ಈ ತರಹದ ಅವಶ್ಯಕತೆ ಇರುತ್ತದೆ .

ನಿಮ್ಮ ಹೃದಯಕ್ಕೆ ನೀವು ಹೆಚ್ಚಿನ ವ್ಯಾಯಾಮ ನೀಡಬೇಕು . ಆದರೆ ನೀವು ಮೆದುಳಿಗೆ ತುಂಬಾ ಕೆಲಸ ಕೊಡುತ್ತಾ ಹೋಗುತ್ತೀರಾ . ಇದರಿಂದ ಏನು ಪ್ರಯೋಜನ ಆಗುವುದಿಲ್ಲ . ಕೆಲವೊಂದು ಚಟುವಟಿಕೆಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು . ಮಾನಸಿಕವಾಗಿ ಇನ್ನಷ್ಟು ವಾತಾವರಣ ಸೃಷ್ಟಿಯಾಗುವ ಸಾಧ್ಯತೆ ಇರುತ್ತದೆ . ಒಂದಷ್ಟು ಒಳ್ಳೆಯ ಅಭ್ಯಾಸಗಳನ್ನು ಬೆಳೆಸಿಕೊಳ್ಳುವ ಅನಿವಾರ್ಯತೆ ಇರುತ್ತದೆ . ರಾಹು ಕೇತು ಗ್ರಹಗಳು ಆರೋಗ್ಯಕ್ಕೆ ಸಾಕಷ್ಟು ರೀತಿಯ ತೊಂದರೆಗಳನ್ನು ಕೊಡುತ್ತಾರೆ .

ಮುಂದೆ ಅಷ್ಟಮ ಶನಿ ಬರುವುದರಿಂದ , ಇದಕ್ಕೆ ನೀವು ತಯಾರಾಗಿರಬೇಕು . ಕೊಟ್ಟ ಮಾತನ್ನು ಉಳಿಸಿಕೊಳ್ಳಲು ನೀವು ತುಂಬಾ ಪ್ರಯತ್ನ ಮಾಡಬೇಕಾಗುತ್ತದೆ .ಯಾವುದೇ ವಿಷಯ , ಯಾವುದೇ ವ್ಯಕ್ತಿ ಇಂತಹ ಯಾವುದೇ ಪ್ರಸ್ತಾಪ ಅಥವಾ ವಿಚಾರಗಳು ಬಂದರೂ ಕೂಡ , ಅದಕ್ಕೆ ಆತುರ ಬೀಳುವುದು ಬೇಡ .ಇದು ನಿಮ್ಮ ಜೀವನದಲ್ಲಿ ತುಂಬಾ ಪ್ರಮುಖವಾದ ನಿರ್ಧಾರ ಆಗಿರುತ್ತದೆ . ದ್ವಿತೀಯದಲ್ಲಿ ಕೇತು ಇರುವಾಗ ಮಾತಿನ ವಿಚಾರದಲ್ಲಿ ಸಾಕಷ್ಟು ರೀತಿಯ ತೊಂದರೆಗಳು ಉಂಟಾಗುವ ಸಾಧ್ಯತೆ ಇದೆ .

ಈ ವಿಚಾರದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ . ಮೇ ತಿಂಗಳ ನಂತರ ಮಕ್ಕಳಿಂದ ಬಹಳಷ್ಟು ರೀತಿಯ ಖುಷಿ ಸಿಗುತ್ತದೆ .ಮಕ್ಕಳು ಇಲ್ಲದವರಿಗೆ ಶುಭ ವಿಚಾರ ಬರುವ ಸಾಧ್ಯತೆ ಇದೆ . ಧರ್ಮ ಮತ್ತು ಕರ್ಮಗಳಲ್ಲಿ ಎರಡರಲ್ಲೂ ಯಶಸ್ಸು ದೊರೆಯುತ್ತದೆ .ವಿಚಾರಗಳು ಮತ್ತು ಕೆಲಸಗಳಲ್ಲಿ ಹೆಚ್ಚಿನ ಫಲ ದೊರೆಯುವ ಸಾಧ್ಯತೆ ಇದೆ . ಹಣ ಮತ್ತು ಸುಖ ಎರಡೂ ಕೂಡ ಸಮತೋಲನವಾಗಿ ದೊರೆಯುವ ಸಾಧ್ಯತೆ ಇದೆ .ಇಷ್ಟೆಲ್ಲಾ ಸಕಾರಾತ್ಮಕ ವಿಚಾರಗಳು ನಿಮ್ಮ ಜೀವನದಲ್ಲಿ ಬರಲಿದೆ ಎಂದು ಹೇಳಬಹುದು .

Leave A Reply

Your email address will not be published.