ಈ ನಕ್ಷತ್ರದಲ್ಲಿ ನೀವು ಜನಿಸಿದ್ದರೆ ನೀವೇ ಅದೃಷ್ಟವಂತರು, ಬೇಕಿದ್ದರೆ ಪರೀಕ್ಷಿಸಿ ನೋಡಿ. ನಮಸ್ಕಾರ ವೀಕ್ಷಕರೇ, ಎಸ್ಆರ್ ಕನ್ನಡ ಟಿವಿ ಚಾನೆಲ್ ಗೆ ಸ್ವಾಗತ. ನಾವು ನಿಮ್ಮ ಜ್ಯೋತಿಷ್ಯ ರತ್ನಾಕರ ಪಂಡಿತ್ ಗಣಪತಿ ಭಟ್ ಗುರೂಜಿ. ವೀಕ್ಷಕರೇ ಇವತ್ತಿನ ಸಂಚಿಕೆಯಲ್ಲಿ ಅದೃಷ್ಟವಂತ ನಕ್ಷತ್ರಗಳ ಬಗ್ಗೆ ನಾವು ತಿಳಿದುಕೊಳ್ಳೋಣ. ಇಂತಹ ನಕ್ಷತ್ರದಲ್ಲಿ ಜನಿಸಿದರೆ ಅದೃಷ್ಟವಂತರಾಗ್ತಾರೆ, ಕೀರ್ತಿವಂತರಾಗ್ತಾರೆ, ಧನವಂತರಾಗ್ತಾರೆ,
ಸುಖ ದಾಂಪತ್ಯ ಇರ್ತದೆ, ಸುಖ ಶಾಂತಿ ನೆಮ್ಮದಿಯಿಂದ ಜೀವನ ಮಾಡ್ತಾರೆ. ಧನ ಧಾನ್ಯ ಸಮೃದ್ಧಿ ಯೋಗ ಅವರ ಮನೇಲಿರುತ್ತೆ. ಹಾಗಿದ್ರೆ ನಕ್ಷತ್ರಗಳಿಂದ ಅದೃಷ್ಟ ಬದಲಾಗ್ತದಾ? ಅದೃಷ್ಟವಂತ ನಕ್ಷತ್ರಗಳಿದಾವ? ಆ ನಕ್ಷತ್ರಗಳು ಯಾವುವು? ನಿಮ್ಮದು ಕೂಡ ಅದೃಷ್ಟವಂತ ನಕ್ಷತ್ರ ಆಗಿದ್ರೆ ನೀವು ಪರೀಕ್ಷಿಸಿಕೊಳ್ಳಬೇಕಾಗ್ತದೆ ವೀಕ್ಷಕರೇ. ನೋಡಿ 27 ನಕ್ಷತ್ರ ಪುಂಜಗಳಲ್ಲಿ
ಕೆಲವೊಂದು ನಕ್ಷತ್ರಗಳಲ್ಲಿ ಜನಿಸಿದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅತ್ಯಂತ ಶುಭ ಫಲ ಕೊಡ್ತವೆ ಆ ನಕ್ಷತ್ರಗಳು. ಪ್ರತಿಯೊಂದು ಕೆಲಸ ಕಾರ್ಯದಲ್ಲೂ ಅವ್ರನ್ನ ಜಯಶೀಲರನ್ನಾಗಿ ಮಾಡ್ತವೆ ಒಂತರ ರಿಸರ್ವೇಶನ್ ಇದ್ದಂಗೆ. ಅಂತಹ ನಕ್ಷತ್ರಗಳು ಯಾವುವು ಇವತ್ತಿನ ವಿಚಾರದಲ್ಲಿ ತಿಳ್ಕೊಳ್ಳೋಣ. ನೋಡಿ ಅಶ್ವಿನಿ ನಕ್ಷತ್ರದಿಂದ ಪ್ರಾರಂಭವಾಗಿ ರೇವತಿ ನಕ್ಷತ್ರದೊಳಗೆ 27 ನಕ್ಷತ್ರಗಳು ಬರುತ್ತವೆ.
ವಿಶೇಷವಾಗಿ ನಕ್ಷತ್ರಗಳು ಚಂದ್ರನ ಚಿಹ್ನೆಗಳಾಗಿದ್ದು ಆದ್ಯತೆಯ ಪಟ್ಟಿಯಲ್ಲಿ ಚಂದ್ರನಿಗೆ ಆಗ್ರಸ್ಥಾನ ಇರ್ತದೆ ಅಂತ ಹೇಳ್ಬಹುದು. ನೋಡಿ ಈ ಚಂದ್ರನು ಒಂದು ನಕ್ಷತ್ರದಿಂದ ಇನ್ನೊಂದು ನಕ್ಷತ್ರಕ್ಕೆ ಚಲಿಸುತ್ತಾ ಇರುತ್ತಾನೆ. ಅಂದ್ರೆ ಸುತ್ತುತ್ತಾ ಇರುತ್ತಾನೆ. ಒಂದು ನಕ್ಷತ್ರದಿಂದ ಇನ್ನೊಂದು ನಕ್ಷತ್ರಕ್ಕೆ ಸ್ಥಾನಪಲ್ಲಟ ಆಗ್ತಾನೆ ಇರ್ತದೆ ಚಂದ್ರಂದು. ಮನುಷ್ಯ ಹುಟ್ಟಿದ ಅಂದ್ರೆ ವಿಶೇಷವಾಗಿ ಮನುಷ್ಯ ನೀವು,
ನೀವು ಹುಟ್ಟಿದ ಸಮಯದಲ್ಲಿ ಚಂದ್ರನು ಯಾವ ಸ್ಥಾನದಲ್ಲಿ ಅಂದರೆ ಯಾವ ನಕ್ಷತ್ರದಲ್ಲಿ ಇರುತ್ತಾನೋ ಆ ನಕ್ಷತ್ರ ನಿಮ್ಮ ಜನ್ಮ ನಕ್ಷತ್ರ ಎಂದು ಪರಿಗಣಿಸುತ್ತೇವೆ ಶಾಸ್ತ್ರಗಳ ಪ್ರಕಾರ. ಯಾವ ನಕ್ಷತ್ರದಲ್ಲಿ ಜನನ ಆದ ಸಮಯದಲ್ಲಿ ಚಂದ್ರನಿರುತ್ತಾನೋ ಆ ವ್ಯಕ್ತಿಯ ನಕ್ಷತ್ರ ಅದಾಗಿರುತ್ತದೆ ಅಂತ ಅರ್ಥ. ನೋಡಿ ಕೆಲವು ಜನ್ಮ ನಕ್ಷತ್ರಗಳ ಪ್ರಭಾವ ಕಡಿಮೆ ಇರುತ್ತದೆ.
ಲಾಭದಾಯಕವಾಗಿ ಮಧ್ಯಮ ಪ್ರಭಾವದಲ್ಲಿ ಇರುತ್ತವೆ ಕೆಲವು ನಕ್ಷತ್ರಗಳಿಗೆ. ಇನ್ನೂ ಕೆಲವು ನಕ್ಷತ್ರಗಳಲ್ಲಿ ಏನಾದ್ರೂ ಜನನ ಆದ್ರೆ ಶುಭ ಫಲ ಅತ್ಯದ್ಭುತವಾಗಿರುತ್ತದೆ ಅಂತ ನಾವು ಶಾಸ್ತ್ರಗಳ ಪ್ರಕಾರ ಪರಿಗಣನೆ ತಗೊಂತೀವಿ. ಹಾಗಾದ್ರೆ ಯಾವ ನಕ್ಷತ್ರದಲ್ಲಿ ಹುಟ್ಟಿದರೆ ಶುಭ ಅತ್ಯಂತ ಶುಭ ಫಲ, ವಿಶೇಷವಾಗಿ ಅಶ್ವಿನಿ ನಕ್ಷತ್ರ. ನಕ್ಷತ್ರಗಳಲ್ಲಿಯೇ ಪ್ರಥಮ ಅದೃಷ್ಟವಂತ ನಕ್ಷತ್ರ ಅಂತ ಹೇಳಬಹುದು.
ಈ ಅಶ್ವಿನಿ ನಕ್ಷತ್ರದಲ್ಲಿ ಜನಿಸಿದವರು ಶಕ್ತಿ ಮತ್ತು ಒಳ್ಳೆಯ ಘನತೆ, ಗೌರವವನ್ನು ಹೊಂದಿರ್ತಾರೆ ಅಂತ ಹೇಳಬಹುದು. ಕೆಲಸ, ಕಾರ್ಯ, ವ್ಯಾಪಾರ, ವ್ಯವಹಾರಗಳಲ್ಲಿ ಉತ್ತಮ ಆಲೋಚನೆಗಳನ್ನ ಹೊಂದಿರುತ್ತಾರೆ ಈ ಅಶ್ವಿನಿ ನಕ್ಷತ್ರದ ವರು. ಬಹಳ ಕ್ರಿಯೇಟಿವಿಟಿ ಚಟುವಟಿಕೆಗಳಿಂದ ಜೀವನ ಮಾಡ್ತಾ ಇರ್ತಾರೆ. ಒಳ್ಳೆಯ ಮನಶಾಂತಿ, ಇಚ್ಛಾಶಕ್ತಿಯನ್ನು ಹೊಂದಿರುತ್ತಾರೆ, ಅಂದ್ರೆ ಮನೋಬಲ ಚೆನ್ನಾಗಿರುತ್ತದೆ ಅಂತ ಹೇಳಬಹುದು.
ಹಾಗೆಯೇ ಕೇತುವಿನ ಪ್ರಭಾವ ಹೆಚ್ಚಾಗಿರುತ್ತದೆ ಇವರ ಮೇಲೆ. ಕೇತುವಿನ ಪ್ರಭಾವದಿಂದ, ಚೈತನ್ಯದಿಂದ ಯಾವುದೇ ಕೆಲಸ ಕಾರ್ಯಗಳಲ್ಲಿ ಆದ್ರೂ ಕೂಡ ಅಂದ್ರೆ ರಿಸ್ಕ್ ಇರುವಂತದ್ದು, ಬಹಳ ಒಂದು ಒತ್ತಡದ ಪರಿಸ್ಥಿತಿ ಇರುವಂತಹ ಕೆಲಸ ಕಾರ್ಯಗಳನ್ನು ಧೈರ್ಯವಂತರಾಗಿ, ಸಾಹಸವಂತರಾಗಿ, ಕೀರ್ತಿವಂತರಾಗಿ ಆ ಕೆಲಸವನ್ನು ಪೂರ್ಣ ಮಾಡ್ತಾರೆ ಅಂತ ಹೇಳಬಹುದು.
ಅರ್ಧಕ್ಕೆ ಬಿಟ್ಟು ಬರುವಂತಹ ಜಾಯಮಾನದವರಲ್ಲ ಯಾಕಂದ್ರೆ ಕೇತುವಿನ ಪ್ರಭಾವ ಅಶ್ವಿನಿ ನಕ್ಷತ್ರದಲ್ಲಿ ಜನನವಾದಂತ ವ್ಯಕ್ತಿಗಳಿಗೆ ಬಹಳ ಇರುತ್ತದೆ. ಈ ಅಶ್ವಿನಿ ನಕ್ಷತ್ರದಲ್ಲಿ ಬಹಳ ರಾಶಿಗಳು ಬರ್ತವೆ ನಿಮಗೆ ಗೊತ್ತಿರ್ತದಲ್ಲ. ವೀಕ್ಷಕರೆ ಪಾದಗಳ ಮುಖಾಂತರ ರಾಶಿಗಳು, ಚಕ್ರಗಳು ಚೇಂಜ್ ಆಗ್ತದೆ. ಆದ್ರೆ ನಕ್ಷತ್ರ ಮಾತ್ರ ಒಂದೇ ಇದ್ರೆ ಅವರು ಅದೃಷ್ಟವಂತರಾಗಿದ್ದೇ ಇರ್ತಾರೆ ಅಂತ ಅರ್ಥ. ಇನ್ನು ಎರಡನೇದಾಗಿ ಅದೃಷ್ಟವಂತ ನಕ್ಷತ್ರ ಅಂತಂದ್ರೆ ವಿಶೇಷವಾಗಿ ಭರಣಿ ನಕ್ಷತ್ರ.
ಈ ಭರಣಿ ನಕ್ಷತ್ರದಲ್ಲಿ ಜನಿಸಿದವರು ಬಹಳ ಪ್ರಾಮಾಣಿಕ ವ್ಯಕ್ತಿಗಳು. ಬಹಳ ನಿಯತ್ತಿನ ಜನ ಅಂತ ಹೇಳ್ಬಹುದು. ನೋಡಿ ಈ ನಕ್ಷತ್ರದವರು ಯಾವಾಗಲೂ ಒಳ್ಳೆಯದೇ ಬಯಸ್ತಾ ಇರ್ತಾರೆ. ಒಳ್ಳೆಯ ಕೆಲಸ ಕಾರ್ಯಗಳಲ್ಲಿ ತೊಡಗುತ್ತಾರೆ ಮತ್ತೆ ವಿಪರೀತ ಧನವಂತರಾಗ್ತಾರೆ ಅದೃಷ್ಟದಿಂದ ಅಂತ ಹೇಳಬಹುದು. ಕೀರ್ತಿವಂತರಾಗ್ತಾರೆ. ಯಾವಾಗಲೂ ಸಂಪಾದನೆ ಮಾಡುವಂತಹ ಯೋಗ ಇರ್ತದೆ ಈ ಭರಣಿ ನಕ್ಷತ್ರದವರಿಗೆ ಮತ್ತು ಇವರನ್ನ ಜನ ಹೊಗಳ್ತಾನೇ ಇರ್ತಾರೆ
ಇವರು ಮಾಡುವಂತಹ ಕೆಲಸ ಕಾರ್ಯಗಳನ್ನು ನೋಡಿ. ಈ ಭರಣಿ ನಕ್ಷತ್ರವು ವಿಶೇಷವಾಗಿ ಶುಕ್ರನ ಗುಣಗಳನ್ನು ಹೊಂದಿರುತ್ತದೆ. ಈ ನಕ್ಷತ್ರದ ಅಧಿಪತಿ ಕೂಡ ಶುಕ್ರ. ಈ ನಕ್ಷತ್ರವು ಸ್ತ್ರೀಯ ಲಕ್ಷಣಗಳನ್ನು ಪ್ರತಿನಿಧಿಸುವ ನಕ್ಷತ್ರ ಆಗಿರುತ್ತದೆ. ಕಾರಣ ಏನಾದ್ರೂ ಮಾನವನ ಜನ್ಮ ಆಗ್ಬೇಕಂದ್ರೆ ಭರಣಿ ನಕ್ಷತ್ರದಲ್ಲಿ ಜನನ ಆದ್ರೆ ಮಾನವ ಅಂದ್ರೆ ಮನುಷ್ಯ ಮಗು ಏನಾದ್ರೂ ಭರಣಿ ನಕ್ಷತ್ರದಲ್ಲಿ ಹುಟ್ಟಿದ್ರೆ ಬಹಳ ಅತ್ಯಂತ
ಶುಭ ಫಲ ಅಂತ ಹೇಳಬಹುದು. ತಂದೆಗೆ, ತಾಯಿಗೆ, ಕುಟುಂಬದವರಿಗೆ ಅದೃಷ್ಟವಂತರಾಗ್ತಾರೆ. ನಕ್ಷತ್ರಗಳಲ್ಲಿಯೇ ಬಹಳ ಅದೃಷ್ಟವಂತ ನಕ್ಷತ್ರ ನಮ್ಮ ಈ ಭರಣಿ ನಕ್ಷತ್ರ. ನೋಡಿ ತ್ಯಾಗ ಮತ್ತು ಆಸೆ ಆಕಾಂಕ್ಷೆಗಳನ್ನ ಈಡೇರಿಸುವಂತಹ ಗುಣಗಳನ್ನ ಹೊಂದಿರುತ್ತದೆ ಈ ಭರಣಿ ನಕ್ಷತ್ರ. ಒಳ್ಳೆಯ ತ್ಯಾಗಮನೋಭಾವನೆಗಳನ್ನ ಅವರು ಹುಟ್ಟಾಕ್ತಾರೆ.
ಹಾಗೇ ನಿಮ್ಮನ್ನು ಕ್ರಿಯಾಶೀಲ ವ್ಯಕ್ತಿಯರನ್ನಾಗಿ ಮಾಡುತ್ತದೆ ಈ ಭರಣಿ ನಕ್ಷತ್ರ. ಈ ನಕ್ಷತ್ರದಲ್ಲಿ ಜನಿಸಿದವರು ಆತ್ಮವಿಶ್ವಾಸಿಗಳು, ಧೈರ್ಯಶಾಲಿಗಳಾಗಿರ್ತಾರೆ ಯಾವಾಗಲೂ ಕೂಡ. ಮೂರನೇದಾಗಿ ನಕ್ಷತ್ರಗಳಿಗೆ ಬಹಳ ಪ್ರಭಾವಿತ ನಕ್ಷತ್ರ ಈ ಪುಷ್ಯ ನಕ್ಷತ್ರ. ಈ ನಕ್ಷತ್ರವು ರಾಶಿ ಚಕ್ರದ ಎಂಟನೇ ನಕ್ಷತ್ರವಾಗಿರುತ್ತದೆ. ನಕ್ಷತ್ರ ಪುಂಜಗಳಲ್ಲಿ ಪುಷ್ಯ ನಕ್ಷತ್ರವನ್ನು ನಾವು ಪೋಷಕ ನಕ್ಷತ್ರ ಎಂದು ಗುರುತಿಸುತ್ತೇವೆ.
ಈ ನಕ್ಷತ್ರದಲ್ಲಿ ಹುಟ್ಟಿದಂತವರು ಶುದ್ಧ ಮನಸ್ಸಿನವರು, ಪರಿಶುದ್ಧ ಮನಸ್ಸು, ಪ್ರಕಾಶಮಾನವಾದ ಮನಸ್ಸು ಅಂತ ಹೇಳಬಹುದು ಇವರಿಗೆ. ತಾಳ್ಮೆ, ಸಹನೆ, ಕಾಳಜಿ ಮತ್ತೆ ಈ ಒಂದು ಒಳ್ಳೆಯ ವ್ಯಕ್ತಿತ್ವ ಗುಣಗಳನ್ನು ಬೈಬರ್ತ್ ರೂಢಿಸಿಕೊಂಡು ಬಂದಿರುತ್ತದೆ ಈ ನಕ್ಷತ್ರದಲ್ಲಿ ಜನನ ಆದವರು. ದೈವ ಭಕ್ತಿ ಜಾಸ್ತಿ ಇರುತ್ತದೆ. ಆಧ್ಯಾತ್ಮಿಕ ಚಿಂತನೆಗಳು, ಜೀರ್ಣೋದ್ಧಾರ ಕಾರ್ಯಗಳನ್ನ ಅನ್ವೇಷಣೆ ಮಾಡ್ಕೊಂಡು ಅನುಗಣನೆಗೆ ತಕೊಂಡು ಹೋಗ್ತಾ ಇರ್ತಾರೆ.
ಮತ್ತೆ ಸುತ್ತಮುತ್ತಲಿನ ಜನರಿಗೆ, ಬಡವರಿಗೆ, ಬಡಬಗ್ಗರಿಗೆ, ಹಾಗೆ ಈ ಒಂದು ಹಿತೈಷಿಗಳಿಗೆ, ಒಡನಾಡಿಗಳಿಗೆ ಶಕ್ತಿ ತುಂಬ್ತಾ ಇರ್ತಾರೆ ಏನಾದ್ರೂ ನರ್ವಸ್ ಆದ್ರೆ ಉತ್ತೇಜನ ಕೊಡುವಂತದು, ಚೈತನ್ಯ ತುಂಬುವಂತ ವ್ಯಕ್ತಿಗಳಾಗಿರ್ತಾರೆ ಪುಷ್ಯ ನಕ್ಷತ್ರದವರು. ಹಾಗೆಯೇ ಜೀವನದ ಪ್ರತಿಯೊಂದು ಗುರಿ ಸಾಧಿಸುವಲ್ಲೂ ಇವರು ಅದೃಷ್ಟವಂತ ಆಗಿರ್ತಾರೆ. ಇವರ ಹುಡುಕೊಂಡು ಬರುತ್ತದೆ ಎಲ್ಲಾ ಗುರಿ ಇವರು ಸಾಧನೆ ಮಾಡೇ ತೀರ್ಥಾರೆ ಅಂತ ಹೇಳ್ಬಹುದು ಈ ನಕ್ಷತ್ರದವರು.
ಬಹಳ ಅದೃಷ್ಟವಂತರಾಗ್ತಾರೆ ಪುಷ್ಯ ನಕ್ಷತ್ರದಲ್ಲಿ ಹುಟ್ಟಿದವರು ಕೂಡ. ಮತ್ತು ನಾಲ್ಕನೇದಾಗಿ ಅದೃಷ್ಟವಂತ ನಕ್ಷತ್ರಗಳಲ್ಲಿಯೇ ನಾಲ್ಕನೇ ನಕ್ಷತ್ರ ಮಘಾ ನಕ್ಷತ್ರ. ಬಹಳ ಗಟ್ಟಿ ನಕ್ಷತ್ರ ಇದು. ಸಿಂಹ ಬಲ ಇರುವಂತ ನಕ್ಷತ್ರ. ರಾಶಿ ಚಕ್ರದ ಪಟ್ಟಿಯಲ್ಲಿ ಹತ್ತನೇ ನಕ್ಷತ್ರ ಆಗಿರ್ತದೆ ಈ ನಕ್ಷತ್ರ. ಈ ನಕ್ಷತ್ರದ ಅಧಿಪತಿ ಕೂಡ ಅಧಿಪತಿ ಕೂಡ ಕೇತು ಆಗಿರ್ತದೆ. ಬಹಳ ಗೌರವಾನ್ವಿತ, ರಾಜಗಾಂಭೀರ್ಯ ಸ್ವಭಾವದ ಆ ನಕ್ಷತ್ರ ಆಗಿರ್ತದೆ.
ಈ ನಕ್ಷತ್ರದಲ್ಲಿ ಜನನ ಆದವರು ರಾಜಕೀಯ ಕ್ಷೇತ್ರದಲ್ಲಿ ಅಥವಾ ನಾಯಕತ್ವದ ಗುಣಗಳಲ್ಲಿ ಉತ್ತಮ ಲಕ್ಷಣಗಳನ್ನು ಹೊಂದಿರುತ್ತಾರೆ. ಮತ್ತು ಬಹಳ ಪ್ರಾಮಾಣಿಕ ಮನಸ್ಥಿತಿ ವ್ಯಕ್ತಿಗಳಾಗಿರ್ತಾರೆ. ದಾನ ಮಾಡೋದು, ಸಹಾಯ ಮಾಡೋದು, ಬಡಬಗ್ಗರಿಗೆ ಹೆಲ್ಪ್ ಮಾಡೋದು, ಬೇರೆಯವರ ಕಷ್ಟ ಕಾರ್ಪಣ್ಯಗಳಿಗೆ ಹೋಗಿ ಸ್ಪಂದಿಸೋವಂತ ಗುಣ ಇರುತ್ತದೆ.
ಹಿಡಿದ ಕೆಲಸ ಕಾರ್ಯಗಳನ್ನ ಉತ್ತಮ ಸ್ಥಾನಮಾನ ಗೌರವಯುತವಾಗಿ ಇವರು ಸಾಧಿಸುತ್ತಾರೆ. ಕಷ್ಟಕರ ಅಂತ ಹಿಂದೆ ಸರಿವಂತ ವ್ಯಕ್ತಿಗಳಲ್ಲ ಮಘಾ ನಕ್ಷತ್ರದ ವ್ಯಕ್ತಿಗಳು. ಮತ್ತು ಇವರಿಗೆ ದೇವತೆಗಳ ಬದಲಿಗೆ ಪಿತೃಗಳು ಈ ನಕ್ಷತ್ರಾನ ಆಳ್ತಾ ಇರ್ತಾರೆ. ಪಿತೃಗಳು ಅಂತ ಹೇಳಿದ್ರೆ ಇವರ ಪೂರ್ವಜಕರು. ಮಘಾ ನಕ್ಷತ್ರದಲ್ಲಿ ಜನನವಾದಂತ ವ್ಯಕ್ತಿಗಳ ಪೂರ್ವಜಕರು ಈ ಮಘಾ ನಕ್ಷತ್ರವನ್ನು ಆಳ್ತಿ ಇರ್ತಾರೆ.
ಈ ಪೂರ್ವಜರ ಕಾರ್ಯಗಳು ಹಾಗೆ ಈ ಪೂರ್ವಜರ ಆಸ್ತಿ ಆಡಂಬರಗಳು ಇವರಿಗೆ ಬೇಗ ದಕ್ಕತ್ತೆ ಮಘಾ ನಕ್ಷತ್ರದವರಿಗೆ. ಪೂರ್ವಜಕರು ಏನಾದ್ರೂ ಆಸ್ತಿ ಆಡಂಬರ ಮಾಡಿದ್ರೆ, ದುಡ್ಡಿಟ್ಟಿದ್ರೆ, ಏನೋ ಒಂದು ವಿಚಾರ ಮಾಡಿಟ್ಟಿದ್ರೆ ಇವರಿಗೆ ಆ ಲಾಭ ಬೇಗ ಸಿಗುತ್ತೆ ಯಾಕಂದ್ರೆ ಅವರ ಸಂಪರ್ಕಕ್ಕೆ ಹೋಗ್ತಾರೆ ಮಘಾ ನಕ್ಷತ್ರದವರು ಅವರ ಆಶೀರ್ವಾದ ಚೆನ್ನಾಗಿರುತ್ತದೆ.
ರಾಕ್ಷಸರಿಂದ ಆಳಲ್ಪಡುತ್ತದೆ ನಮ್ಮ ಮಘಾ ನಕ್ಷತ್ರ ಅಂತ ಹೇಳಬಹುದು. ಮಘಾ ನಕ್ಷತ್ರದಲ್ಲಿ ಜನನವಾದಂತ ವ್ಯಕ್ತಿಗಳು ಸಾಮಾಜಿಕ ಗೌರವ, ಅಧಿಕೃತ ಸ್ಥಾನಮಾನ ಮತ್ತೆ ಯಾವುದೇ ಒಂದು ವೃತ್ತಿ ಕ್ಷೇತ್ರದಲ್ಲಾದರೂ ಒಳ್ಳೆಯ ರೀತಿಯಲ್ಲಿ ಅಭಿವೃದ್ಧಿ ಆಗುವಂತ ಯೋಗಗಳು ಮತ್ತು ಪ್ರಬಲ ಸಂಪರ್ಕಗಳು ಜನಾಕರ್ಷಣೆ ಜಾಸ್ತಿ. ಜನ, ಧನ, ಮನವಶ ಬೇಗ ಆಗತ್ತೆ ಇವರಿಗೆ ಅಂತ ಹೇಳ್ಬಹುದು.
ಹಾಗೆ ಶತ್ರುಗಳ ಕಾಡಾಟ ಸ್ವಲ್ಪ ಇರುತ್ತದೆ. ಅನುವಂಶಿಕ ಶತ್ರುಗಳು ಕೂಡ ಇವರಿಗೆ ಕಾಡಾಟ ಆಗುವಂತಹ ಲಕ್ಷಣಗಳು ಇರುತ್ತದೆ. ಶತ್ರು ಬಾಧೆಯಿಂದ ಮಾತ್ರ ಈ ಮಘಾ ನಕ್ಷತ್ರದವರು ನರಳ್ತಾರೆ ಅದನ್ನ ಬಿಟ್ರೆ ಇನ್ನೆಲ್ಲ ವಿಚಾರದಲ್ಲಿ ಈ ನಕ್ಷತ್ರದವರು ಅದೃಷ್ಟವಂತರು ಅಂತ ಹೇಳಬಹುದು ವೀಕ್ಷಕರೇ. ನೋಡಿ ಈ 27 ನಕ್ಷತ್ರಗಳಲ್ಲಿ ಕೆಲವೊಂದು ನಕ್ಷತ್ರಗಳು ಮಾತ್ರ ಪ್ರಬಲ ಅದೃಷ್ಟವಂತ ನಕ್ಷತ್ರಗಳಾಗಿರ್ತವೆ.
ಹಾಗಂತ ಬೇರೆ ನಕ್ಷತ್ರಗಳಲ್ಲಿ ಜನನವಾದವರು ಅದೃಷ್ಟವಂತರಂತಲ್ಲ ಅಂತ ನಾನ್ ಹೇಳ್ತಾ ಇಲ್ಲ ವೀಕ್ಷಕರೇ. ಆದ್ರೆ ಪ್ರಬಲವಾಗಿರುವಂತಹ ಅದೃಷ್ಟವಂತ ನಕ್ಷತ್ರಗಳು, ಬೇರೆ ಸರಿ ಸಾಮಾನ್ಯವಾಗಿ ಮಧ್ಯಮ ವರ್ಗದಲ್ಲಿ ಮಧ್ಯಮ ಸ್ಥಾನಮಾನ ಕೊಟ್ಟು ಪ್ರತಿಫಲ ಕೊಟ್ಟು ಅವರ ಶ್ರಮದಿಂದ ಅವರು ಉದ್ಧಾರ ಆಗೇ ಆಗ್ತಾರೆ. ಆದ್ರೆ ಒಂದು ಬೆನಿಫಿಟ್ ಅಥವಾ
ಒಂದು ರಿಸರ್ವೇಶನ್ ಇದ್ದಂಗೆ 27 ನಕ್ಷತ್ರಗಳಲ್ಲಿ ಈ ನಾಲ್ಕು ನಕ್ಷತ್ರಗಳಲ್ಲಿ ಜನನ ಆದವರು ಅದೃಷ್ಟವಂತರಾಗಿರ್ತಾರೆ ಅಂತ ಹೇಳ್ಬಹುದು. ಹಾಗೆ ವಿಶೇಷವಾಗಿ ಎಸ್ ಆರ್ ಕನ್ನಡ ಟಿವಿ ಚಾನೆಲ್ ಗೆ ಸಬ್ಸ್ಕ್ರೈಬ್ ಮಾಡ್ಕೊಳ್ಳಿ. ಒಳ್ಳೊಳ್ಳೆ ವಿಡಿಯೋಸ್ ಗಳನ್ನ ಬಿಡ್ತಾ ಇರ್ತೀವಿ. ಕೆಲಸ, ಕಾರ್ಯ, ಹಣಕಾಸು, ವ್ಯಾಪಾರ, ವ್ಯವಹಾರ, ತಂತ್ರ, ಮಂತ್ರಗಳ ಬಗ್ಗೆ ನೀವು ತಿಳ್ಕೋಬೇಕು ನಿಮ್ಮ ರಾಶಿ ಚಕ್ರದ ಬಗ್ಗೆ ಅಂದ್ರೆ ಸ್ಕ್ರೀನ್ ಮೇಲೆ ನಂಬರ್ ಹೋಗ್ತಾ ಇರ್ತದೆ. ಕಾಲ್ ಮಾಡಿ, ವಿಮರ್ಶೆ ಮಾಡಿ, ಪರಿಹಾರ ಕೊಡ್ತೀವಿ. ನಮಸ್ಕಾರ ವೀಕ್ಷಕರೇ. ಸರ್ವೇ ಜನ ಸುಖಿನೋ ಭವಂತು.