ಮರಣಹೊಂದಿದವರ ಫೋಟೋ ಈ ದಿಕ್ಕಿಗೆ ಹಾಕಿದರೆ ಕಷ್ಟ ಬೆನ್ನಟ್ಟುತ್ತವೆ

0

ಮರಣ ಹೊಂದಿರುವವರ ಫೋಟೋಗಳನ್ನು ಮನೆಯಲ್ಲಿ ಈ ದಿಕ್ಕಿನಲ್ಲಿ ಹಾಕಿದರೇ ಕಷ್ಟಗಳು ಬರುತ್ತದೆ. ಎಂಬುದರ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ಪ್ರಪಂಚದಲ್ಲಿ ಸಾವಿಲ್ಲದ ಮನೆ ಎಲ್ಲಿಯೂ ಇಲ್ಲ. ಹುಟ್ಟಿದವರೂ ಒಂದಲ್ಲ ಒಂದು ದಿನ ಸಾಯಲೇಬೇಕು. ಮರಣ ಹೊಂದಿರುವವರ ಫೋಟೋಗಳನ್ನು ಹಾಕುವುದಕ್ಕೆ ಮನೆಯಲ್ಲಿ ಯಾವ ಜಾಗಗಳು ಸೂಕ್ತ,

ಯಾವ ದಿಕ್ಕಿಗೆ ಹಾಕಬೇಕು ಮತ್ತು ಹಾಗೇ ಹಾಕಿದ ಫೋಟೋ ಕುಟುಂಬದ ಇತರೇ ಸದಸ್ಯರ ಜೀವನದ ಮೇಲೆ ಯಾವ ರೀತಿಯ ಪ್ರಭಾವ ಬೀರುತ್ತದೆ ಎಂಬುದೆಲ್ಲಾ ಈ ಲೇಖನದಲ್ಲಿದೆ. ಎಷ್ಟೋ ಜನರ ಕನಸ್ಸಿನಲ್ಲಿ ಅವರ ಕುಟುಂಬದ ಮೃತ ವ್ಯಕ್ತಿಗಳು ಬಂದು ಏನೇನೋ ಹೇಳಿದ ಹಾಗೇ ಭಾಸವಾಗುತ್ತದೆ. ಈ ರೀತಿ ಕನಸು ಕಂಡ ವ್ಯಕ್ತಿಗಳು ಭಯಭೀತಿಗೆ ಒಳಗಾಗುತ್ತಾರೆ. ಕೆಲವೊಮ್ಮೆ ಪೂರ್ವಜರ ಫೋಟೋಗಳನ್ನು ಸರಿಯಾದ ದಿಕ್ಕಿನಲ್ಲಿ ಹಾಕದೇ ಇದ್ದರೂ ಕೂಡ

ಈ ಸೂಚನೆ ದೊರೆಯುತ್ತದೆ. ಪೂರ್ವಜರ ಪೋಟೋಗಳನ್ನು ಮನೆಯ ಗೋಡೆಯ ಮೇಲೆ ಹಾಕುವುದಕ್ಕೆ ವಾಸ್ತುಶಾಸ್ತ್ರದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಸಾಮಾನ್ಯವಾಗಿ ವ್ಯಕ್ತಿಗಳು ತೀರಿಕೊಂಡ ನಂತರ ಅವರ ಕುಟುಂಬದ ಸದಸ್ಯರುಗಳು ಅವರ ಫೋಟೋಗಳನ್ನು ಹಾಕಿ, ಅದಕ್ಕೆ ಹೂವಿನ ಹಾರವನ್ನು ಹಾಕುತ್ತಾರೆ. ದೇವರ ಮತ್ತು ದೇವಿ ಚಿತ್ರಗಳ ಜೊತೆಗೆ ಮೃತ

ವ್ಯಕ್ತಿಗಳ ಚಿತ್ರಗಳನ್ನು ಹಾಕಲೇಬಾರದು ಇದರಿಂದ ಮನೆಗೆ ದೊಡ್ಡ ಕಷ್ಟಗಳು ಬರುತ್ತದೆ. ಹೀಗೆ ಮಾಡುವುದರಿಂದ ಪಿತೃಗಳ ಸಕಾರಾತ್ಮಕ ಆಶೀರ್ವಾದ ನಿಮಗೆ ದೊರೆಯುವುದಿಲ್ಲ. ಮನೆಯಲ್ಲಿ ಸಿಕ್ಕ ಕಡೆಯಲ್ಲೆಲ್ಲಾ ಪೂರ್ವಜರ ಫೋಟೋಗಳನ್ನು ಹಾಕುವುದರಿಂದ ಉದ್ವಿಗ್ನ ವಾತಾವರಣ ಆವರಿಸಿರುತ್ತದೆ. ಒಬ್ಬರೇ ಪೂರ್ವಿಕರ ಫೋಟೋಗಳನ್ನು ಹೆಚ್ಚು ಹಾಕಬಾರದು.

ಒಂದು ತಲೆಮಾರಿನ ಫೋಟೋಗಳನ್ನು ಮಾತ್ರ ಹಾಕಬೇಕು. ನಿಮ್ಮ ಪೂರ್ವಜರಲ್ಲಿ ಅತೀ ಪ್ರಭಾವಿ ವ್ಯಕ್ತಿಗಳು ತೀರಿಕೊಂಡಿದ್ದರೇ ಅವರ ಫೋಟೋಗಳನ್ನು ಹಾಕುವುದರಿಂದ ಮುಂದಿನ ಪೀಳಿಗೆಗೆ ಪ್ರೇರಣೆ ದೊರೆಯುತ್ತದೆ ಎಂಬ ಕಾರಣಕ್ಕೆ ಅಂತಹವರ ಫೋಟೋಗಳನ್ನು ಹಾಕಿದರೇ ತಪ್ಪಿಲ್ಲ. ಪೂರ್ವಿಕರ ಫೋಟೋಗಳ ಜೊತೆಗೆ ಜೀವಂತ ವ್ಯಕ್ತಿಗಳ ಫೋಟೋಗಳನ್ನು ಹಾಕಬೇಡಿ.

ವಾಸ್ತುಶಾಸ್ತ್ರದ ಪ್ರಕಾರ ಇದು ದೊಡ್ಡ ತಪ್ಪಾಗುತ್ತದೆ. ಹೀಗೆ ಮಾಡಿದರೇ ಜೀವಂತ ವ್ಯಕ್ತಿಗಳ ಆಯಸ್ಸು ಕಡಿಮೆಯಾಗುತ್ತದೆ ಮತ್ತು ಅವರ ಜೀವನದಲ್ಲಿ ಸಂಕಟಗಳು ಬರುವ ಆತಂಕಗಳು ಇರುತ್ತದೆ. ಪೂರ್ವಜರ ಫೋಟೋಗಳನ್ನು ಪೂರ್ವದ ಮಧ್ಯದಲ್ಲಿ ಹಾಕಬಾರದು. ಪಶ್ಚಿಮ ಮತ್ತು ದಕ್ಷಿಣ ದಿಕ್ಕಿನಲ್ಲೂ ಹಾಕಬಾರದು ಇದರಿಂದ ಧನ ಹಾನಿ ಉಂಟಾಗುತ್ತದೆ.

ಅಡುಗೆ ಮನೆ, ಹಾಲ್, ಬೆಡ್ ರೂಂನಲ್ಲಿಯೂ ಕೂಡ ಫೋಟೋಗಳನ್ನು ಹಾಕಬೇಡಿ. ಹೀಗೆ ಮಾಡುವುದರಿಂದ ಪರಿವಾರ ಸದಸ್ಯರ ಆರೋಗ್ಯಕ್ಕೆ ಹಾನಿ ಉಂಟಾಗುತ್ತದೆ. ಮನೆಯ ಒಳಗಡೆ ಓಡಾಡುವಾಗ ಪಿತೃಗಳ ಫೋಟೋಗಳನ್ನ ನೋಡಬಾರದು. ಅಂತಹ ಜಾಗದಲ್ಲಿಯೂ ಫೋಟೋಗಳನ್ನು ಹಾಕಬಾರದು. ಇದರಿಂದ ಕೆಲಸ ಕಾರ್ಯಗಳಿಗೆ ವಿಘ್ನಗಳು ಉಂಟಾಗುತ್ತದೆ.

ಅಡುಗೆ ಮನೆಯಲ್ಲಿ ಫೋಟೋಗಳನ್ನು ಹಾಕಿದರೇ ಅವರಿಗೆ ಅವಮಾನ ಮಾಡಿದಂತೆ ಎಂದು ನಂಬಲಾಗಿದೆ. ಫೋಟೋಗಳನ್ನು ನೇತಾಡುವಂತೆ ಅಥವಾ ಅಲುಗಾಡುವಂತೆ ಹಾಕಬಾರದು. ಇದು ಅವರಿಗೆ ಅಪಮಾನ ಮಾಡಿದಂತೆ, ಕಟ್ಟಿಗೆಯ ಸ್ಟ್ಯಾಂಡ್ ಗಳ ಮೇಲೆಯೇ ಫೋಟೋಗಳನ್ನು ಇಡಬೇಕು. ಮನುಷ್ಯ ತನ್ನ ಕರ್ಮಗಳ ಅನುಸಾರವಾಗಿ ಹುಟ್ಟು ಸಾವುಗಳನ್ನು ಪಡೆಯುತ್ತಾನೆ.

ಅವನ ಪಾಪ ಪುಣ್ಯಕಾರ್ಯಗಳು ಅವನನ್ನು ಹಿಂಬಾಲಿಸಿಕೊಂಡು ಹೋಗುತ್ತಿರುತ್ತದೆ. ಹಿಂಧೂ ಧರ್ಮದ ಪ್ರಕಾರ ಮನುಷ್ಯನು ಮೂರು ರೀತಿಯ ಋಣಗಳನ್ನು ತೀರಿಸಬೇಕು. ದೇವ ಋಣು, ಋಷಿ ಋಣ ಮತ್ತು ಪಿತೃಋಣ. ಇನ್ನು ಕೆಲವು ಗ್ರಂಥಗಳಲ್ಲಿ ಬ್ರಹ್ಮ ಋಣವೂ ಆಗಿದೆ. ಆದ್ದರಿಂದ ನಾವು ಈ ನಾಲ್ಕು ಋಣಗಳನ್ನು ತೀರಿಸಲೇಬೇಕು. ಇದು ನಮ್ಮ ಧರ್ಮವೂ ಕೂಡ ಆಗಿರುತ್ತದೆ.

ಆದ್ದರಿಂದ ಪಿತೃಗಳಿಗೆ ಅವಮಾನವಾಗದಂತೆ ನಾವು ನೋಡಿಕೊಳ್ಳಬೇಕು. ದೇಶದ ಸಂಸ್ಕೃತಿಯಂತೆ ಕುಲದ ಪರಂಪರೆಯನ್ನು ಪಾಲಿಸುವುದು, ಪಿತೃಪಕ್ಷದಲ್ಲಿ ತರ್ಪಣ ಬಿಡಬೇಕು, ಶ್ರಾದ್ಧಕಾರ್ಯಗಳನ್ನು ಮಾಡಬೇಕು, ತಮ್ಮ ಸಂತಾನಗಳಿಗೆ ಧಾರ್ಮಿಕ ಸಂಸ್ಕಾರಗಳನ್ನು ನೀಡಬೇಕು, ಪ್ರತಿದಿನ ಹನುಮಾನ್ ಚಾಲೀಸಾ ಓದಬೇಕು, ಹಣೆಯ ಮೇಲೆ ಕುಂಕುಮವನ್ನು ಇಡಬೇಕು,

ಅಮಾವಾಸ್ಯೆಗಳಲ್ಲಿ ಪೂಜೆಗಳನ್ನು ನೆರವೇರಿಸಬೇಕು, ಮನೆಯ ವಾಸ್ತುದೋಷಗಳನ್ನು ಸರಿಪಡಿಸಬೇಕು. ದೇಹವನ್ನು ಪ್ರತಿದಿನ ಶುದ್ಧವಾಗಿಟ್ಟುಕೊಳ್ಳಬೇಕು. ಹೀಗೆ ಇವುಗಳನ್ನು ಪಾಲಿಸುವುದರಿಂದ ಋಣಗಳಿಂದ ಮುಕ್ತಿಯನ್ನು ಪಡೆಯಬಹುದು. ವಾಸ್ತುಶಾಸ್ತ್ರಗಳ ಪ್ರಕಾರ ಪೂಜಾ ಕೋಣೆಯು ಈಶಾನ್ಯದಲ್ಲಿದ್ದರೇ ಅಥವಾ ಉತ್ತರ ಪೂರ್ವದಲ್ಲಿದ್ದರೇ ಆಗ ಪೂರ್ವಜರ ಫೋಟೋಗಳನ್ನ ಪೂರ್ವದಿಕ್ಕಿನಲ್ಲಿ ಹಾಕಬಹುದು.

ಪೂರ್ವದಿಕ್ಕನ್ನು ನೀವು ಪೂಜೆ ಮಾಡುವ ದಿಕ್ಕಾಗಿ ಮಾಡಿಕೊಂಡಿದ್ದರೇ ಆಗ ಈಶಾನ್ಯದಲ್ಲಿ ಹಾಕಬಹುದು. ಉತ್ತರ ದಿಕ್ಕಿನಲ್ಲಿ ಪಿತೃಗಳ ಪೋಟೋಗಳನ್ನು ಹಾಕಬಹುದು. ಇದರಿಂದ ಅವರ ಮುಖಗಳು ದಕ್ಷಿಣದ ಕಡೆಗೆ ಇರುತ್ತದೆ. ದಕ್ಷಿಣ ದಿಕ್ಕು ಫೋಟೋಗಳನ್ನು ಇಡಲು ಆಗದೇ ಇದ್ದರೇ ಪಶ್ಚಿಮದಲ್ಲಿ ಹಾಕಬಹುದು. ಪೂರ್ವಜರ ಫೋಟೋಗಳ ಮುಖಗಳು ಪೂರ್ವ ಅಥವಾ ಉತ್ತರಕ್ಕೆ ಇರಬಹುದು.

Leave A Reply

Your email address will not be published.