ಮೇಷ ರಾಶಿ ಡಿಸೆಂಬರ್ ಮಾಸ ಭವಿಷ್ಯ

0

ಡಿಸೆಂಬರ್ ತಿಂಗಳ ಮಾಸ ಭವಿಷ್ಯವನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ. ಶತೃ ಭಯವಿಲ್ಲ ಇದ್ದರೂ ಸಹ ದೂರವಾಗುತ್ತದೆ ಅಂತಹ ಫಲವನ್ನು ಹೊಂದಿರುವ ರಾಶಿ ಮೇಷರಾಶಿ. ಸಂಬಂಧವಿಲ್ಲದೇ ಘಟನೆಗಳಿಗೆ ನಾವು ತಲೆ ಕೆಡಿಸಿಕೊಳ್ಳುವಂತಹ ಪರಿಸ್ಥಿತಿಗಳು ಇರುತ್ತವೆ. ವೈಯಕ್ತಿಕವಾಗಿ ಲಾಭಗಳಿಲ್ಲದಿದ್ದರೂ ನೀವು ಸಿಕ್ಕಿ ಹಾಕಿಕೊಳ್ಳುವ ಪರಿಸ್ಥಿತಿ ಎದುರಾಗುತ್ತದೆ.

ಈ ಡಿಸೆಂಬರ್ ತಿಂಗಳಿನಲ್ಲಿ ನೆಗೆಟಿವ್ ಬರುವ ಸೂಚನೆ ಇದೆ. ಆದರೇ ಎಲ್ಲವೂ ಕೆಟ್ಟದಾಗೇನೂ ಇರುವುದಿಲ್ಲ. ನಿಮ್ಮ ಕುಟುಂಬದ ಸದಸ್ಯರ ಮೇಲೆ ಸಣ್ಣ ಪುಟ್ಟ ಕಲಹಗಳು ಬರಬಹುದು ಮತ್ತು ಪದೇ ಪದೇ ಕಿರಿಕಿರಿ ಘಟನೆಗಳು ನಡೆಯಬಹುದು. ನೀವು ಎಲ್ಲಿಗೇ ಹೋಗಬೇಕಾದರೂ ಅವರು ನಿಮ್ಮನ್ನು ಭೇಟಿ ಮಾಡಲು ಸಿದ್ಧರಾಗಿದ್ದಾರ ಅಥವಾ ನಿಮಗೆ ಅವರು ಸಿಗುತ್ತಾರ ಎಂದು ತಿಳಿದುಕೊಂಡು ಹೊರಟರೇ ಉತ್ತಮ.

ಇಂತಹ ಸಣ್ಣ ಪುಟ್ಟ ವಿಷಯಗಳೇ ನಿಮಗೆ ಕಿರಿಕಿರಿಯನ್ನು ಉಂಟುಮಾಡಬಹುದು. ಕೇಳದೇ ಹೊರಟರೇ ನಿಮ್ಮ ಸಮಯ ವ್ಯರ್ಥವಾಗಬಹುದು. ಆದ್ದರಿಂದ ನೀವು ಎಲ್ಲಿಗಾದರೂ ಹೋಗುವಾಗ, ಯಾವ ವ್ಯಕ್ತಿಯನ್ನು ಭೇಟಿ ಮಾಡಬೇಕಾದರೇ ಆ ವ್ಯಕ್ತಿ ಸಿಗುತ್ತಾನೋ ಇಲ್ಲವೋ ಎಂದು ತಿಳಿದುಕೊಂಡು ಹೊರಡುವುದು ಉತ್ತಮ. ಮನೆಯವರ ಜೊತೆ ಸ್ವಲ್ಪ ಮಟ್ಟಿಗೆ ಕಿರಿಕಿರಿ ಇರುತ್ತದೆ.

ಪಾರ್ಟನರ್ ಶಿಪ್ ವ್ಯವಹಾರದಲ್ಲೂ ಸಣ್ಣ ಪುಟ್ಟ ತಲೆಬಿಸಿ ಇರುತ್ತದೆ. ಇಂತಹ ವ್ಯವಹಾರ ಮಾಡುತ್ತಿರುವವರಿಗೆ ಡಿಸೆಂಬರ್ ತಿಂಗಳಿನಲ್ಲಿ ಸಮಸ್ಯೆಗಳು ತಲೆದೋರಬಹುದು. ನಿಮ್ಮ ದಾಂಪತ್ಯ ಜೀವನದಲ್ಲಿ ಇರುವ ಸಮಸ್ಯೆಗಳು ದೂರವಾಗುವ ಸಮಯ ಇದಾಗಿದೆ. ಜೀವನ ಸಂಗಾತಿ ಮತ್ತು ಬ್ಯುಜಿನೆಸ್ ಪಾರ್ಟನರ್ ನಡುವೆ ಹೆಚ್ಚಿನ ಅಪೇಕ್ಷೆಗಳನ್ನು ಇಟ್ಟುಕೊಳ್ಳಬಾರದು.

ಅವರಿಗೆ ಸ್ವಲ್ಪ ಮಟ್ಟಿಗೆ ಸೋಲೆ ಆಗುತ್ತದೆ. ಕೆಲವೊಂದು ವಿಷಯಗಳನ್ನು ಮುಚ್ಚಿಡಬಹುದು ಅಥವಾ ನಿಮಗೆ ಮುಚ್ಚಿಟ್ಟಿದ್ದಾರೆನಿಸಬಹುದು. ಈ ತರಹದ ತಪ್ಪು ಗ್ರಹಿಕೆಗಳು ಹೆಚ್ಚಾಗುವ ಸಂಭವವಿರುತ್ತದೆ. ಆದ್ದರಿಂದ ಸ್ವಲ್ಪ ಸಮಾಧಾನವನ್ನು ತಂದುಕೊಂಡು ಅವರ ಜೊತೆ ಕೂತು ಮಾತನಾಡಿಕೊಂಡು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದಕ್ಕೆ ಪ್ರಯತ್ನ ಪಟ್ಟರೇ ಒಳ್ಳೆಯದು.

16ನೇ ತಾರೀಖೀನ ನಂತರ ಕೆಲವು ಸಮಸ್ಯೆಗಳು ದೂರವಾಗುತ್ತದೆ. ಈ ತಿಂಗಳ ಕೊನೆಯಲ್ಲಿ ಮನೆಯವರು ಮತ್ತು ಕೆಲಸದ ಪಾರ್ಟನರ್ ಗಳಿಂದ ಹೊಂದಾಣಿಕೆ ಏರ್ಪಡುತ್ತದೆ. ಹೊಂದಾಣಿಕೆ ಮಾಡಿಕೊಳ್ಳುವ ಮನಸ್ಥಿತಿ ಇರುವುದರಿಂದ ಕೆಲಸದ ಕಡೆ ಹೆಚ್ಚು ಆಸಕ್ತಿಯನ್ನು ಕೊಡುತ್ತೀರಿ. ವಿದ್ಯಾರ್ಥಿಗಳಿಗೆ ಮಾನಸಿಕ ನೆಮ್ಮದಿಯು ಕಡಿಮೆ ಇರುತ್ತದೆ.

ಎಷ್ಟೋ ಕಷ್ಟಪಟ್ಟು ಓದಿದರೂ ಹೆಚ್ಚು ಅಂಕವನ್ನು ಪಡೆಯದೇ ಆಗದೇ ಇರಬಹುದು. ಉದ್ಯೋಗಿಗಳಿಗೆ ಮತ್ತು ವ್ಯಾಪಾರ ಮಾಡುವವರಿಗೆ ಖರ್ಚು ಹೆಚ್ಚಾಗುತ್ತದೆ. ಏನೇ ವಸ್ತುಗಳನ್ನು ನೋಡಿದರೂ ಕೊಂಡುಕೊಳ್ಳುವ ಗುಣವನ್ನು ಹೊಂದಿರುವಂತಹವರು. ಹಾಗಾಗಿ ಆ ವಸ್ತು ನಿಮಗೆ ಅವಶ್ಯಕತೆ ಇದೆಯಾ ಎಂದು ಯೋಚನೆ ಮಾಡಿ ಕೊಂಡುಕೊಳ್ಳುವುದು ಉತ್ತಮ. ಹಣದ ಜೊತೆ ಸಮಯ ಮತ್ತು ಶಕ್ತಿ ಕೂಡ ಖರ್ಚಾಗುತ್ತದೆ.

ರಾಶಿಯಲ್ಲಿರುವ ಗುರುವು ಇನ್ನು ಎರಡು ಮೂರು ತಿಂಗಳು ನಿಮ್ಮನ್ನು ಆತ್ಮ ವಿಮರ್ಶೆ ಮಾಡಿಕೊಳ್ಳುವ ರೀತಿ ಮಾಡುತ್ತಾನೆ. ಸರಿ ತಪ್ಪುಗಳ ವಿಚಾರಗಳು ನಿಮ್ಮ ತಲೆಯಲ್ಲಿ ಪದೇ ಪದೇ ಬರುತ್ತಿರುತ್ತವೆ. ಮಾನಸಿಕ ಗೊಂದಲಗಳು ಇದ್ದರೂ ಅಂತಹ ಗಂಭೀರ ಸಮಸ್ಯೆಗಳು ಮೇಷ ರಾಶಿಗೆ ಈ ಡಿಸೆಂಬರ್ ತಿಂಗಳಿನಲ್ಲಿ ಕಂಡುಬರುವುದಿಲ್ಲ.

ಗುರು ಮತ್ತು ಕೇತು ಗ್ರಹಗಳು ಎಲ್ಲಾ ಕಷ್ಟಗಳನ್ನು ಸಮತೋಲನದಲ್ಲಿರುವಂತೆ ಮಾಡುತ್ತವೆ. ಷಷ್ಠಮದಲ್ಲಿರುವ ಕೇತು ಶತೃನಾಶಗಳನ್ನ ಮಾಡುತ್ತಾನೆ, ಶತೃ ಭಯವಿಲ್ಲ, ಇದ್ದರೂ ಸಹ ದೂರವಾಗುತ್ತದೆ. ಬಹಳ ಪಾಸಿಟಿವ್ ಕಡೆಗೆ ಮೇಷರಾಶಿ ವ್ಯಕ್ತಿಗಳು ಸಾಗುತ್ತಿದ್ದೀರಿ. ನಿಮ್ಮನ್ನು ಶನಿ ಮತ್ತು ಕೇತು ಗ್ರಹಗಳು ಕಾಪಾಡುತ್ತವೆ.

Leave A Reply

Your email address will not be published.