ನಮ್ಮ ಮನೆಯಲ್ಲಿ ಅತೀ ಪ್ರಮಾದಕರವಾದ ವಸ್ತುಗಳನ್ನು ಇಟ್ಟುಕೊಳ್ಳಬಾರದು. ಹಾಗೇ ಇಟ್ಟುಕೊಳ್ಳುವುದರಿಂದ ಮನೆಗೆ ಮತ್ತು ಮನೆಯ ಯಜಮಾನನಿಗೆ, ಕುಟುಂಬದಲ್ಲಿರುವ ಸದಸ್ಯರಿಗೆ ತೊಂದರೆಯಾಗುತ್ತದೆ. ಮನೆಯಲ್ಲಿ ಇಟ್ಟುಕೊಳ್ಳಬಾರದಂತಹ ಒಂದು ವಸ್ತುವಿನ ಬಗ್ಗೆ ತಿಳಿದುಕೊಳ್ಳೋಣ. ಕೆಲವೊಂದು ಮನೆಗಳಲ್ಲಿ ಈ ಒಂದು ವಸ್ತುವು ಸೇರಿಕೊಂಡಿದೆ.
ಸಂಪ್ರದಾಯ ಪಾಲನೆ ಮಾಡುತ್ತಿರುವವರ ಮನೆಯಲ್ಲಿಯೂ ಈ ವಸ್ತುವು ಸೇರಿಕೊಂಡಿದೆ. ನಮಗೆ ಅಷ್ಟಐಶ್ವರ್ಯವನ್ನು ತಂದುಕೊಡುತ್ತದೆ ಎಂದುಕೊಂಡಿರುವ ವಸ್ತುವು ಘೋರ ದರಿದ್ರವನ್ನು ಸೃಷ್ಠಿಮಾಡತ್ತಿದೆ ಮತ್ತು ಮನೆಗಳನ್ನು ಸರ್ವನಾಶ ಮಾಡುತ್ತಿದೆ. ಆ ವಸ್ತುವಿನ ಹೆಸರು ಲಾಫಿಂಗ್ ಬುದ್ಧ. ನಮ್ಮವರು ಚೈನಾಗೆ ಸಂಬಂಧಿಸಿದ ಈ ಲಾಫಿಂಗ್ ಬುದ್ಧನನ್ನು ಮನೆಯಲ್ಲಿ ಇಡುತ್ತಾರೆ.
ಅನಿಷ್ಠ ಪದ್ಧತಿಯ ಅವೈಜ್ಞಾನಿಕ ಈ ಬುದ್ಧನ ಗೊಂಬೆಯನ್ನು ಇಡುತ್ತಾರೆ. ಇದನ್ನು ಇಡುವುದರಿಂದ ಮನೆಯಲ್ಲಿ ತುಂಬಾ ದರಿದ್ರ. ಲಾಫಿಂಗ್ ಬುದ್ಧ ಮನೆಯಲ್ಲಿಡಬಾರದು. ಯಾವ ಮನೆಯಲ್ಲಿ ಈ ಲಾಫಿಂಗ್ ಬುದ್ಧ ಇರುತ್ತಾನೋ ಆ ಮನೆಯಲ್ಲಿ ಐಶ್ವರ್ಯ ಬೆಳೆಯುತ್ತಿರುವ ರೀತಿ ಕಾಣಿಸಿ, ಮನೆಯಲ್ಲಿ ಮನಶಾಂತಿ ಹಾಳಾಗುತ್ತದೆ. ಆದರೇ ನಾವು ಬುದ್ಧ ಮನೆಯಲ್ಲಿರುವುದರಿಂದ ಐಶ್ವರ್ಯ ಬರುತ್ತಿದೆ ಎಂದು ತಿಳಿದುಕೊಳ್ಳುತ್ತೇವೆ.
ಆದರೇ ಮನಶಾಂತಿ ಹೋಗುತ್ತಿರುವುದು ನಿಮ್ಮ ಗಮನಕ್ಕೆ ಬರುವುದಿಲ್ಲ. ನೀವೇ ಗಮನಿಸಿ ಲಾಫಿಂಗ್ ಬುದ್ಧ ಇರುವ ಮನೆಯಲ್ಲಿ ಗಂಡ ಹೆಂಡತಿಯ ನಡುವೆ ಅನ್ಯೋನ್ಯತೆ ಇಲ್ಲದಿರುವುದು, ಮಕ್ಕಳು ಒಳ್ಳೆಯ ಗುಣವನ್ನು ಪಡೆದುಕೊಳ್ಳದೇ ಇರುವುದು ಇಂತಹ ಸಮಸ್ಯೆಗಳು ನಡೆಯುತ್ತಿರುತ್ತದೆ. ಹತ್ತು ಅವತಾರಗಳಲ್ಲಿ ಬುದ್ದನದು ಒಂದು ಅವತಾರ ಎಂದು ಹೇಳುತ್ತಾರೆ.
ಆದರೇ ಲಾಫಿಂಗ್ ಬುದ್ಧನು ಗೌತಮ ಬುದ್ದನು ಒಂದೇ ಅಲ್ಲ. ನಮ್ಮ ದಶಾವತಾರಗಳಲ್ಲಿ ಲಾಫಿಂಗ್ ಬುದ್ದನೇ ಬೇರೆ, ಗೌತಮ ಬುದ್ಧನೇ ಬೇರೆ. ಹಿಂಧೂ ಧರ್ಮದಲ್ಲಿ ವಿಗ್ರಹ ಪೂಜೆಯನ್ನು ಖಂಡಿಸಿದ ಗೌತಮ ಬುದ್ಧನೇ ಬೇರೆ. ನಮ್ಮವರು ತಿಳಿಯದೇ ಆ ಬುದ್ಧನು ಈ ಬುದ್ಧ ಎಂದು ತಿಳಿದುಕೊಳ್ಳುತ್ತಾರೆ. ಚೈನಾದವರ ವಾಸ್ತುವಿಗೆ ಸಂಬಂಧಿಸಿದ್ದು ಈ ಬುದ್ಧ. ಅದನ್ನು ಮನೆಗಳಲ್ಲಿ ಇಡುವಂತೆ ಹೇಳುತ್ತಾನೆ.
ನಾವು ಇರುವುದು ಚೈನಾದಲ್ಲಿ ಅಲ್ಲ, ಭಾರತದಲ್ಲಿ ನಾವು ಹಿಂದೂ ಧರ್ಮವನ್ನು ಅನುಸರಿಸುವುದರಿಂದ ಇಂತಹ ಚೈನಾ ಬುದ್ಧನನ್ನು ಇಟ್ಟುಕೊಳ್ಳುವುದರಿಂದ ನಮ್ಮ ಮನೆ ಒಳಗಡೆ ಯಾವುದೇ ಹಿಂದೂ ದೇವರುಗಳು ಬರುವುದಿಲ್ಲ. ಏಕೆಂದರೆ ಈ ವಿಗ್ರಹ ಬೇರೆ ಧರ್ಮಕ್ಕೆ ಸೇರಿದೆ. ಪ್ರಾರಂಭದಲ್ಲಿ ಒಳ್ಳೆಯದು ಎನಿಸಿದರೂ ಕಾಲಕಳೆದಂತೆ ನೆಮ್ಮದಿ ಕಳೆದು ಹೋಗುತ್ತದೆ.
ದಟ್ಟ ದರಿದ್ರ ಮನೆಗೆ ಆವರಿಸುತ್ತದೆ. ಇಂತಹ ವಿಗ್ರಹಗಳನ್ನು ಇಟ್ಟುಕೊಂಡರೇ ಆಕಸ್ಮಿಕವಾಗಿ ಕಷ್ಟಗಳು ಬರುತ್ತದೆ. ಆದ್ದರಿಂದ ಮನೆಗೆ ದಟ್ಟ ದರಿದ್ರ ಬರುತ್ತದೆ. ನಿಮ್ಮ ಮನೆಯಲ್ಲಿ ಲಾಫಿಂಗ್ ಬುದ್ಧ ಇದ್ದರೇ ತಕ್ಷಣವೇ ತೆಗೆದುಹಾಕಿ. ಅದರ ಬದಲು ಐರಾವತ ಗೊಂಬೆಯನ್ನು ಇಟ್ಟುಕೊಳ್ಳಿ. ನಿಮ್ಮ ಮನೆಯಲ್ಲಿ ಬಿಳಿಬಣ್ಣದ ಐರಾವತನನ್ನು ಇಟ್ಟುಕೊಂಡರೇ ಲಕ್ಷ್ಮಿದೇವಿಯು ಮನೆಗೆ ಬರುತ್ತಾಳೆ.