ಮಕರ ರಾಶಿ: 5 ವರ್ಷದ ಗುರು ಫಲ

0

ನಾವು ಈ ಲೇಖನದಲ್ಲಿ ಮಕರ ರಾಶಿಯವರಿಗೆ ಗುರುವಿನ ಪರಿವರ್ತನೆಯಿಂದ ಯಾವೆಲ್ಲಾ ಫಲಗಳು ಸಿಗುತ್ತವೆ ಎಂಬುದನ್ನು ನೋಡೋಣ . ಗುರು ಪರಮ ಅನುಗ್ರಹ ಕೊಡುವ ಗ್ರಹ ಆಗಿರುತ್ತದೆ .ಬೇರೆ ಏನೇ ದೋಷಗಳು ಇದ್ದರೂ ಅದನ್ನು ಸರಿಪಡಿಸಿ ಮುಂದುವರಿಸಿ ನಡೆಯುವ ತಾಕತ್ತು ಗುರುವಿಗೆ ಇರುತ್ತದೆ. ಏನೇ ಸಮಸ್ಯೆಗಳು ಬಂದರೂ ಅದಕ್ಕೆ ಪರಿಹಾರ ಕೊಡುವ ಗುಣ ಗುರುವಿಗೆ ಇರುತ್ತದೆ . ಈ ಪರಮ ಪವಿತ್ರ ಗ್ರಹದಿಂದ ಮಕರ ರಾಶಿಯವರಿಗೆ ಅವರ ಜೀವನದಲ್ಲಿ ಪರಿವರ್ತನೆಯ ಪರ್ವ ಶುರುವಾಗಲಿದೆ .

ಏನು ಒಳ್ಳೆಯದು ಆಗುತ್ತದೆ ಎಂಬುದನ್ನು ನೋಡೋಣ . ಮಕರ ರಾಶಿಯವರ ವ್ಯಕ್ತಿತ್ವ ಹೇಗಿರುತ್ತದೆ ಎಂಬುವುದನ್ನು ತಿಳಿಯೋಣ . ಈ ರಾಶಿ ಅವರಿಗೆ ಶುಭ ಯಾವಾಗ ಅಂದರೆ ಮೇ ಒಂದು 2024 ರಿಂದ ಮೇ 14 2025ರ ವರೆಗೆ ಗುರು ವೃಷಭ ರಾಶಿಯಲ್ಲಿ ಕೂತಿರುವ ದಿನಗಳು . ಹಾಗೆ ಸಾಡೇ ಸಾತಿಯ ಕೊನೆಯ ಹಂತ . ಶನಿ ಇವರಿಂದ ದೂರ ಹೋಗುತ್ತಾನೆ . ಸಾಡೆ ಸಾತಿ ಮುಗಿಯುವ ಸಮಯ ಇದಾಗಿರುತ್ತದೆ .ಗುರು ಕೈ ಎತ್ತಿ ಕೊಡುವುದರಿಂದ ನಿಮಗೆ ಡಬಲ್ ಧಮಾಕಾ ಆಗಿರುತ್ತದೆ .

ಒಂದು ವರ್ಷಗಳ ಕಾಲ ಅತ್ಯದ್ಭುತವಾದ ಘಟನೆ ನಿಮ್ಮ ಜೀವನದಲ್ಲಿ ನಡೆಯುತ್ತದೆ . ಗುರು ದೇವತೆಗಳ ಕೋಶಾಧ್ಯಕ್ಷ .ಒಳ್ಳೆಯ ಹಣಕಾಸಿನ ಸ್ಥಿತಿ, ಆಸ್ತಿ, ಅಂತಸ್ತು , ಐಶ್ವರ್ಯ , ಹೆಚ್ಚಿನ ಲಾಭ ಕೊಡುವವನು ಗುರು ಆಗಿರುತ್ತದೆ . ಹಣಕಾಸಿನ ಅನುಗ್ರಹ ಜೋರಾಗಿಯೇ ಇರುತ್ತದೆ .ಆದಷ್ಟು ಹೂಡಿಕೆಗಳನ್ನು ಮಾಡುವುದರಿಂದ ಒಳ್ಳೆಯ ಫಲಿತಾಂಶ ದೊರೆಯುತ್ತದೆ .ಆಸ್ತಿ , ವಾಹನ , ಸೈಟ್ ಖರೀದಿಗೆ ಹೆಚ್ಚಿನವರು ಮನಸ್ಸು ಬದಲಿಸುವ ಸಾಧ್ಯತೆ ಇರುತ್ತದೆ .ಇದೊಂದು ವರ್ಷದಲ್ಲಿ ಆದಷ್ಟು ಒಳ್ಳೆಯ ಕೆಲಸವನ್ನು ಮಾಡಬೇಕು .

ಗುರುವಿನ ದೃಷ್ಟಿ ಚೆನ್ನಾಗಿ ಇರುವುದರಿಂದ ಹೆಚ್ಚಿನ ಲಾಭವಾಗುತ್ತದೆ .ಐಷಾರಾಮಿ ವಸ್ತುಗಳನ್ನ ನೀವು ಖರೀದಿ ಮಾಡುತ್ತೀರಾ ಮತ್ತು ಬಹುಮಾನಗಳು ಸಿಗುವ ಸಾಧ್ಯತೆ ಇರುತ್ತದೆ . ವ್ಯಾಪಾರ ವ್ಯವಹಾರದಲ್ಲಿ ದಿನೇ ದಿನೇ ಹೆಚ್ಚಾಗುತ್ತಾ ಹೋಗುತ್ತದೆ .ಇದರಲ್ಲಿ ಗುರು ದಾರಿ ತೋರಿಸುವ ಲಕ್ಷಣಗಳು ಕಾಣಿಸುತ್ತದೆ .ಇಲ್ಲಿ ಗುರು ಪುತ್ರ ಕಾರಕನು ಕೂಡ ಆಗಿರುತ್ತಾನೆ .ಬಹಳ ವರ್ಷಗಳಿಂದ ಮಗುವಿನ ನಿರೀಕ್ಷೆ ಇರುವವರಿಗೆ ಶುಭ ಸುದ್ದಿ ಕೇಳುವ ಅವಕಾಶ ಇರುತ್ತದೆ .

ರೈತರಿಗೆ ಹಾನಿ ಇಲ್ಲದೆ ಹೆಚ್ಚಿನ ಬೆಳೆ ಸಿಗುವ ಅವಕಾಶ ಇರುತ್ತದೆ .ಬೆಳೆಗಳಿಗೆ ಒಳ್ಳೆಯ ಬೆಲೆ ಕೂಡ ಸಿಗುತ್ತದೆ .ಕೃಷಿ ಉಪಕರಣಗಳ ಖರೀದಿ ಮಾರಾಟ ಹೀಗೆ ಎಲ್ಲಾ ರೀತಿಯ ಲಾಭಗಳು ದೊರೆಯುತ್ತದೆ . ಒಟ್ಟಿನಲ್ಲಿ ಅಭಿವೃದ್ಧಿ ಸಮೃದ್ಧಿಯನ್ನು ಕಾಣುವ ಸಮಯವಾಗಿರುತ್ತದೆ .ಬೇರೆಯವರಿಗೆ ತೊಂದರೆ ಕೊಟ್ಟು ಖುಷಿ ಪಡುವವರು ಕೆಲವರು ಇರುತ್ತಾರೆ .

ಅಂತಹ ಗುಣಗಳು ಇದ್ದರೆ ಈ ಸಮಯದಲ್ಲಿ ದೂರವಾಗುತ್ತದೆ .ಬೇರೆಯವರ ವಿಚಾರಕ್ಕೆ ತಲೆ ಹಾಕುವುದಿಲ್ಲ .ತಾನು ತನ್ನ ಕುಟುಂಬ , ದೇವರು, ಧರ್ಮ ತಮ್ಮ ಪಾಡಿಗೆ ಇರುವವರು ಜಾಸ್ತಿ . ಹಿರಿಯರು ಸಾಧು -ಸಂತರ ಆಶೀರ್ವಾದ ನಿಮ್ಮ ಮೇಲೆ ಇರುತ್ತದೆ . ಮನೆಯಲ್ಲಿ ಕಿರಿಕಿರಿ ಮನಸ್ತಾಪ ಕಡಿಮೆಯಾಗಿ ಮನೆಯಲ್ಲಿ ನೆಮ್ಮದಿ ಸಂತೋಷದ ಜೀವನ ಸಿಗುತ್ತದೆ . ಒಳ್ಳೆಯ ಜನರ ಸಹವಾಸ ಕೂಡ ಆಗುತ್ತದೆ . ಇದರಿಂದ ನಿಮ್ಮ ನಡವಳಿಕೆ ಉತ್ತಮವಾಗುತ್ತದೆ . ಪ್ರೀತಿ ವಿಶ್ವಾಸವನ್ನು ಗಳಿಸಿ ಕೊಳ್ಳುತ್ತೀರಿ .

ಮದುವೆಯಾಗದೆ ಇರುವ ಕೆಲವರಿಗೆ ಇಂತಹ ಯೋಗ ಕೂಡ ಕೂಡಿ ಬರುತ್ತದೆ . ಹೀಗೆ ಶುಭ ಕಾರ್ಯಗಳಲ್ಲಿ ಗುರುವಿನ ಪಾತ್ರ ತುಂಬಾ ದೊಡ್ಡದಾಗಿರುತ್ತದೆ . ಯಾವುದಕ್ಕೂ ಹೆದರದೆ ಮುನ್ನುಗ್ಗುವ ಧೈರ್ಯ ಗುರುವಿನಿಂದ ಬಂದಿರುತ್ತದೆ . ಯಾವುದೇ ಕಷ್ಟದ ಸಮಯದಲ್ಲೂ ಸಹಾಯ ಮಾಡುವ ಗುಣ ನಿಮ್ಮದು ಆಗಿರುತ್ತದೆ . ಸಹಾಯ ಮಾಡುವುದರಿಂದ ನಿಮಗೆ ಒಳ್ಳೆಯ ಪ್ರತಿಫಲವಾಗಿ ಸಿಗುವ ಸಾಧ್ಯತೆ ಇರುತ್ತದೆ .ಹೆಸರು ಮಾಡಬೇಕು ಅಂತ ಬಯಸುವವರಿಗೆ ಈ ಸಮಯ ಉತ್ತಮವಾಗಿರುತ್ತದೆ .

ಈ ರಾಶಿಯವರಿಗೆ ಹೆಚ್ಚಿನ ಅದೃಷ್ಟ ಖುಲಾಯಿಸುತ್ತದೆ ಎಂದು ಹೇಳಬಹುದು . ಕಾಲಚಕ್ರ ತಿರುಗಿದಂತೆ ಒಂದು ಸಲ ಮೇಲಿದ್ದವರು ಕೆಳಗೆ ಬರುತ್ತಾರೆ ಕೆಳಗೆ ಇದ್ದವರು ಮೇಲೆ ಹೋಗುತ್ತಾರೆ .ಇದೆಲ್ಲಾ ಜೀವನದಲ್ಲಿ ನಡೆಯುತ್ತಲೇ ಇರುತ್ತದೆ .ಸ್ವಲ್ಪ ಕಷ್ಟದ ದಿನಗಳು ಕೂಡ ಎದುರಿಸಬೇಕಾಗುತ್ತದೆ . ಏಪ್ರಿಲ್ 22 2022ರಿಂದ ಮೇ 22 2024ರ ತನಕ ಸ್ವಲ್ಪ ಮಿಶ್ರ ಫಲಗಳು ನಡೆಯುತ್ತವೆ .ನಾಯಿ , ಹಸು ,

ಗೂಳಿ ಇಂತಹ ಸಾಕು ಪ್ರಾಣಿಗಳಿಂದ ತೊಂದರೆಗಳು ಆಗಬಹುದು .ಇನ್ನು ಕೆಲವರಿಗೆ ದಾಂಪತ್ಯ ಜೀವನದಲ್ಲಿ ಸ್ವಲ್ಪ ಮನಸ್ತಾಪಗಳು ಬರುವ ಸಾಧ್ಯತೆ ಇದೆ . ಮನೆಯವರ ಮಧ್ಯೆ ಸ್ವಲ್ಪ ಭಿನ್ನಾಭಿಪ್ರಾಯ , ಸ್ವಲ್ಪ ಕಿರಿಕಿರಿ ಶುರುವಾಗಿ ತಲೆನೋವು ಬರಬಹುದು .ಜೀವನದಲ್ಲಿ ಸವಾಲುಗಳು ಎದುರಾಗಬಹುದು .ಸ್ನೇಹಿತರ ಮಧ್ಯೆ ಸಣ್ಣ ಪುಟ್ಟ ಜಗಳಗಳು ಮಾತು ಬಿಡುವುದು ಆಗಬಹುದು .

ಹೀಗೆಲ್ಲಾ ಆಗುವ ಸಾಧ್ಯತೆಗಳು ಹೆಚ್ಚಾಗಿದೆ .ಕೆಲವರಿಗೆ ಹಣಕಾಸಿನ ಸಮಸ್ಯೆ ಕಾಡಬಹುದು .ಈ ಕಿರಿ ಕಿರಿಗಳು ಗುರುವಿನ ಅನುಗ್ರಹ ಸ್ವಲ್ಪಮಟ್ಟಿಗೆ ಇರುವುದರಿಂದ ಚಿಂತಿಸುವುದು ಬೇಡ .ಗುರು 6ನೇ ಮನೆ ಮಿಥುನ ರಾಶಿಗೆ ಬಂದಿರುವ ಅವಧಿಯಲ್ಲಿ ಸ್ವಲ್ಪ ಮಂದ ಆಗುತ್ತದೆ. 2025 ಮೇ ಇಂದ 2026 ಜೂನ್ ಎರಡರ ವರೆಗಿನ ಅವಧಿ . ಈ ಅವಧಿಯಲ್ಲಿ ಸ್ವಲ್ಪ ತೊಂದರೆಗಳು ಹೆಚ್ಚಾಗುತ್ತವೆ .ವೃಷಭದಲ್ಲಿ ಗಳಿಸಿರುವ ಫಲವನ್ನು ಸ್ವಲ್ಪ ಕಳೆದುಕೊಳ್ಳುವ ಸಮಯ ಇದಾಗಿರುತ್ತದೆ .

ಯಶಸ್ಸು ಕೈ ಹಿಡಿಯುವುದು ಸ್ವಲ್ಪ ಕಷ್ಟ ಎಂದು ಹೇಳಲಾಗುತ್ತದೆ .ಕೈಯಲ್ಲಿರುವ ಹಣವನ್ನು ನೀವು ಕಳೆದುಕೊಳ್ಳಬಹುದು .ಆದರೂ ಅಲ್ಲೊಂದು ಇನ್ನೊಂದು ಲಾಭ ಆಗುವ ಘಟನೆಗಳು ಕೂಡ ನಡೆಯಬಹುದು .ಆರೋಗ್ಯದ ಬಗ್ಗೆ ಎಚ್ಚರವಾಗಿರಬೇಕು .ಶತ್ರುಗಳು ಸಮಯ ನೋಡಿಕೊಂಡು ಬರಬಹುದು . ಇದರ ಬಗ್ಗೆ ಕೂಡ ಎಚ್ಚರ ವಹಿಸಬೇಕು . ಗುರು ದುರ್ಬಲ ಆಗಿರುವುದರಿಂದ ನೀವು ಎಚ್ಚರಿಕೆಯಿಂದ ಇರಬೇಕು .ಖರ್ಚು ವೆಚ್ಚಗಳನ್ನು ಕಡಿಮೆ ಮಾಡುವುದನ್ನು ಕಲಿಯಬೇಕು .

ಈ ಎಚ್ಚರಿಕೆಗಳನ್ನು ಸೂಚನೆಗಳಾಗಿ ಬಳಸುವುದರಿಂದ ಸ್ವಲ್ಪ ತೊಂದರೆಗಳನ್ನು ನಿಭಾಯಿಸಬಹುದು .ಗುರುವಿನ ಜೊತೆಗೆ ಒಳ್ಳೆಯ ಗ್ರಹಗಳು ಇದ್ದರೆ ಪೂರ್ತಿ ಸಮಸ್ಯೆ ಆಗುವವರಿಗೂ ಒಂದು ಸಹಾಯದ ನಿರೀಕ್ಷೆ ಸಿಗುತ್ತದೆ .ಗ್ರಹಗಳ ಬಲಾಬಲ ಮುಖ್ಯವಾಗಿರುತ್ತದೆ .2026ರ ಜೂನ್ 2 ರಿಂದ ನಂತರದ ಒಂದು ವರ್ಷದ ಅವಧಿಯಲ್ಲಿ ಗುರು 7ನೇ ಮನೆ ಕಟಕ ರಾಶಿಯಲ್ಲಿ ಇದ್ದಾಗ ಅವಕಾಶಗಳ ಸುರಿಮಳೆ ಆಗುತ್ತದೆ. ಸಾಲಗಳಿಂದ ಮುಕ್ತಿ . ಒಳ್ಳೆಯ ಉದ್ಯೋಗ ಅವಕಾಶ ಕೆಲಸ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗಿ ಹೊಸ ಜೀವನದ ಕಡೆಗೆ ಹೋಗುತ್ತೀರಾ .

ಕೆಲಸ ಮಾಡುವ ಜಾಗದಲ್ಲಿ ಪ್ರೋತ್ಸಾಹ ಸಿಗುವುದರ ಜೊತೆಗೆ ಗೌರವ ಕೂಡ ದೊರೆಯುತ್ತದೆ . ಮೇಲಾಧಿಕಾರಿಗಳಿಂದ ಪ್ರಶಂಸೆ ಕೂಡ ದೊರೆಯುತ್ತದೆ .ದೇವರಲ್ಲಿ ಭಕ್ತಿ ದುಪ್ಪಟ್ಟು ಆಗುತ್ತದೆ .ಧಾರ್ಮಿಕ ಕಾರ್ಯಗಳನ್ನು ಮಾಡುವುದರಲ್ಲಿ ಮನಸ್ಸಾಗುತ್ತದೆ .ಹೆಚ್ಚಿನವರಿಗೆ ಆಧ್ಯಾತ್ಮಿಕ ವಿಚಾರಗಳಲ್ಲಿ ಆಸಕ್ತಿ ಹೆಚ್ಚಾಗಿ ದಾನ ಧರ್ಮಗಳನ್ನು ಕೂಡ ಮಾಡುತ್ತಾರೆ .ನಿಮ್ಮ ಮಕ್ಕಳು ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡುವ ಸಾಧ್ಯತೆ ಹೆಚ್ಚಾಗಿರುತ್ತದೆ .

ಆರೋಗ್ಯದಲ್ಲೂ ಕೂಡ ಚೇತರಿಕೆಯನ್ನು ಕಾಣಬಹುದು. ನೀವು ಉತ್ತಮವಾದ ಜೀವನ ನಡೆಸುತ್ತೀರಿ ಎಂದು ಹೇಳಬಹುದು . ಎಲ್ಲಾ ಕ್ಷೇತ್ರದಲ್ಲೂ ನಿಮ್ಮನ್ನ ನೀವು ತೊಡಗಿಸುವ ಕಲೆ ಇರುತ್ತದೆ .ನಡವಳಿಕೆ ಮತ್ತು ಮಾತಿನಿಂದ ಗೆಲ್ಲುವ ಚಾಣಾಕ್ಷತೆ ನಿಮ್ಮದು ಆಗಿರುತ್ತದೆ . ಹೀಗೆ ಒಂದಲ್ಲ ಒಂದು ಒಳ್ಳೆಯ ವಿಷಯಗಳು ನಿಮ್ಮ ಜೀವನದಲ್ಲಿ ನಡೆಯುತ್ತಲೇ ಇರುತ್ತದೆ .2027 ರಲ್ಲಿ ನಿಮ್ಮ ಜೀವನದಲ್ಲಿ ಗುರು ಮಹಾ ಭಾಗ್ಯವನ್ನೇ ತರುತ್ತಾನೆ . ನೀವು ಜೀವನದಲ್ಲಿ ಕುಗ್ಗದೆ ಮುಂದುವರೆಯದನ್ನ ಅಭ್ಯಾಸ ಮಾಡಿಕೊಳ್ಳಿ .

ಸದಾ ಗುರು ನಿಮ್ಮ ಮೇಲೆ ಒಳ್ಳೆಯ ದೃಷ್ಟಿಯನ್ನು ಇಟ್ಟಿರುತ್ತಾನೆ ಎಂದು ಹೇಳಲಾಗಿದೆ .ಈ ರೀತಿಯಾಗಿ ಪ್ರಾರ್ಥನೆಯನ್ನು ಮಾಡಿ ‘ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರಹ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ” ..ಎಂದು ಪ್ರಾರ್ಥಿಸಬೇಕು .ಗುರುವಿನ ಪ್ರಾರ್ಥನೆಯನ್ನು ಮಾಡಿದಾಗ ನೆಮ್ಮದಿ ಸಿಗುವುದು ಖಂಡಿತ . ಅದರಿಂದ ಈ ಪ್ರಾರ್ಥನೆಯನ್ನು ಮಾಡಿ ಎಂದು ಹೇಳಲಾಗಿದೆ. ನಮಗೆ ವಿದ್ಯೆ ಕಲಿಸಿದ ಗುರುಗಳ ಆಶೀರ್ವಾದ ಕೂಡ ತುಂಬಾ ಮುಖ್ಯ ಆಗುತ್ತದೆ ಎಂದು ಹೇಳಲಾಗಿದೆ.

Leave A Reply

Your email address will not be published.