ರಾತ್ರಿ ಉಳಿದ ಅನ್ನದಿಂದ ನೀವು ಈ ಚಿಕ್ಕ ಕೆಲಸಗಳನ್ನು ನಿಮ್ಮ ಮನೆಗಳಲ್ಲಿ ಮಾಡುತ್ತಾ ಬಂದರೆ, ಸಾಕ್ಷಾತ್ ಮಹಾಲಕ್ಷ್ಮಿ ಇಂದ ನಿಮ್ಮ ಎಲ್ಲಾ ಸಂಕಷ್ಟಗಳು ದೂರವಾಗುತ್ತದೆ. ಲಕ್ಷ್ಮೀದೇವಿ ಮನೆಯಲ್ಲಿ ಸ್ಥಿರವಾಗಿ ನೆಲೆಸುತ್ತಾಳೆ. ಅನ್ನಕ್ಕೆ ಯಾವುದೇ ಕೊರತೆ ಉಂಟಾಗುವುದಿಲ್ಲ. ದುಡ್ಡಿನ ಸಮಸ್ಯೆಗಳು ಕಡಿಮೆಯಾಗುತ್ತಾ ಬರುತ್ತದೆ. ರಾತ್ರಿ ಊಟವಾದ ನಂತರಒಂದು ತುತ್ತು ಅನ್ನವನ್ನಾದರೂ ಎತ್ತಿಡಬೇಕು.
ಸಂಪೂರ್ಣವಾಗಿ ಖಾಲಿಯಾಗದಂತೆ ನೋಡಿಕೊಳ್ಳಬೇಕು. ಏಕೆಂದರೆ ಆಗಿನ ಕಾಲದಲ್ಲೂ ಒಂದು ನಂಬಿಕೆ ಏನೆಂದರೆ, ನಾವು ರಾತ್ರಿ ಮಲಗಿದ ನಂತರ ನಮ್ಮ ಪೂರ್ವಿಕರು ಅಡುಗೆ ಕೋಣೆಗೆ ಬಂದು ನೋಡುತ್ತಾರೆ ಎಂಬ ನಂಬಿಕೆ ಇದೆ. ಅವರು ಬಂದು ನೋಡಿದ ಸಂದರ್ಭದಲ್ಲಿ ಅಡಿಗೆ ಮನೆಯಲ್ಲಿ ಮಾಡಿದ ಆಹಾರ ಖಾಲಿ ಆಗಿರಬಾರದು.
ಇದಲ್ಲದೆ ತಾಯಿ ಮಹಾಲಕ್ಷ್ಮಿಯು ರಾತ್ರಿ ಭೂ ಲೋಕ ಸಂಚಾರ ಬಂದಾಗ ಅವಳು ಮನೆಗೆ ಬಂದು ನೋಡಿದಾಗ ಒಂದು ತುತ್ತು ಅನ್ನವಾದರೂ ಇರಬೇಕು. ರಾತ್ರಿ ಇಟ್ಟಂತಹ ಒಂದು ತುತ್ತು ಅನ್ನ ಅಥವಾ ರೊಟ್ಟಿ ಏನೇ ಆದರೂ ಅದನ್ನು ಮಾರನೆಯ ದಿನ ಬೆಳಗ್ಗೆ ಕೈಕಾಲು ಮುಖ ತೊಳೆದು ಕೊಂಡ ನಂತರ ಅದನ್ನು ಯಾವುದಾದರೂ ಪ್ರಾಣಿ ಪಕ್ಷಿಗಳಿಗೆ ತಿನ್ನಲು ಕೊಡಬೇಕು.
ಈ ರೀತಿ ಮಾಡುವುದರಿಂದ ಪ್ರಾಣಿ ಪಕ್ಷಿ ಆಹಾರ ತಿಂದ ನಂತರ ನಿಮಗೆ ಒಳ್ಳೆಯದಾಗಲಿ ನಮಗೆ ಹಾರೈಸುತ್ತವೆ. ಇದು ವಿಶೇಷವಾದ ನಂಬಿಕೆಯಾಗಿದೆ ಈ ಪದ್ಧತಿಯನ್ನು ಸಾಕಷ್ಟು ಜನರು ನಡೆಸಿಕೊಂಡು ಬಂದಿರುತ್ತಾರೆ. ಇಂತಹ ನಿಯಮಗಳನ್ನು ಪಾಲಿಸಿಕೊಂಡು ಬಂದರೆ ಮನೆಯಲ್ಲಿ ಲಕ್ಷ್ಮೀದೇವಿ ನೆಲೆಸುತ್ತಾಳೆ. ಮನೆಯಲ್ಲಿ ಯಾವುದೇ ಸಮಸ್ಯೆಗಳು ಇರುವುದಿಲ್ಲ. ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸುತ್ತದೆ.