ಪಾರಿಜಾತ ನೆಲಕ್ಕೆ ಬಿದ್ದರೂ ದೋಷವಿಲ್ಲ ಯಾಕೆ?

0

ಪಾರಿಜಾತ ನೆಲಕ್ಕೆ ಬಿದ್ದರೂ ದೋಷ ಅಂಟದು ಶ್ರೇಷ್ಠ ಹೂ ಇದರ ವಿಶೇಷತೆ ತಿಳಿಯಿರಿ.
ಪಾರಿಜಾತ ಇವುಗಳನ್ನು ದೇವತೆಗಳ ಹೂ ಎಂತಲೂಪಾರಿಜಾತ ಮರವನ್ನು ದೇವತಾ ವೃಕ್ಷ ಎಂತಲೂ ಕರೆಯುತ್ತಾರೆ ಪಾರಿಜಾತದ ಜೊತೆಗೆ ಮಂದಾರ, ಸಂತಾನ ವೃಕ್ಷ ,ಕಲ್ಪವೃಕ್ಷ ಮತ್ತು ಚಂದನವನ್ನು ದೇವರ ವೃಕ್ಷಗಳು ಎನ್ನುವರು. ಅವು ಮಾಲಿನ್ಯ ಕಾರಕವಲ್ಲ

ಲಕ್ಷ್ಮಿ ದೇವತೆಯೊಂದಿಗೆ ಕ್ಷೀರಸಾಗರದಿಂದ ಜನಿಸಿದ ಪಾರಿಜಾತವೇ ತುಂಬಾ ಶ್ರೇಷ್ಠವಾಗಿದೆ ಪುರಾಣದ ಪ್ರಕಾರ ಸತ್ಯಭಾಮೆಯ ಕೋರಿಕೆಯಂತೆ ಶ್ರೀ ಕೃಷ್ಣನ ದೇವಲೋಕಕ್ಕೆ ಹೋಗಿ, ಇಂದ್ರನನ್ನು ಜಹಿಸಿ ಪಾರಿಜಾತ ವೃಕ್ಷವನ್ನು ಭೂಲೋಕಕ್ಕೆ ತಂದನು ಎಂಬ ಕಥೆ ಇದೆ. ಮಧ್ಯದಲ್ಲಿ ಕಿತ್ತಳೆ ಬಣ್ಣವನ್ನು ಹೊಂದಿರುವ ಈ ಹೂ ನೆಲಕ್ಕೆ ಇದ್ದರೆ ದೋಷ ಅಂಟುವುದಿಲ್ಲವಂತೆ.

ಆದ್ದರಿಂದಲೇ ಪೂಜೆಗೆಂದು ಹೂ ಬಿಡಿಸಲು ಹೋದಾಗ ಕೆಳಗೆ ಬಿದ್ದರೂ ಅವುಗಳನ್ನು ತರಲಾಗುತ್ತದೆ. ಸಾಮಾನ್ಯ ನೆಲಕ್ಕೆ ಬಿದ್ದ ಹೂ ದೇವರಿಗೆ ಶ್ರೇಷ್ಠ ಅಲ್ಲ ಎಂಬುದು ನಂಬಿಕೆ. ಆದರೆ ಪಾರಿಜಾತ ದೈವಿಕ ಹೂಗಳು ಲಕ್ಷ್ಮಿ ದೇವಿಗೆ ಪ್ರಿಯವಾದ ಹೂ ಆದ್ದರಿಂದಲೇ ಪೂಜೆಗೆ ಬಳಸುವ ಅಪರೂಪದ ಅದ್ಭುತ ಎನಿಸಿವೆ. ಸುಗಂಧಭರಿತ ಪಾರಿಜಾತ ಪುಷ್ಪಗಳಿಂದ ದೇವರನ್ನು ಪ್ರಾರ್ಥಿಸಿದರೆ ಸಕಲ ಸೌಭಾಗ್ಯ ದೊರೆಯುತ್ತದೆ ಎನ್ನುತ್ತಾರೆ.

ವಿದ್ವಾಂಸರು. ಈ ಹೂ ಗಳು ರಾತ್ರಿಯಲ್ಲಿ ತಮ್ಮ ಪರಿಮಳವನ್ನು ಹರಡುತ್ತವೆ ಮಾತ್ರವಲ್ಲ ಪಾರಿಜಾತ ವೃಕ್ಷವಿರುವಲ್ಲಿ ಲಕ್ಷ್ಮಿ ದೇವಿ ನಲೆಸುತ್ತಾಳೆ ಎಂದು ಹೇಳಲಾಗುತ್ತದೆ. ಆದರೆ ಹಲವು ವೈಶಿಷ್ಟ್ಯಗಳನ್ನು ಹೊಂದಿರುವ ಪಾರಿಜಾತ ರಾತ್ರಿ ಅರಳಿ ಬೆಳಗಾಗುವುದರೊಳಗೆ ನೆಲಕ್ಕೆ ಬೀಳುತ್ತವೆ ಇದಕ್ಕೆ ದೇವೇಂದ್ರನ ಶಾಪವಿದೆ.
ಕೆಳಗೆ ಬಿದ್ದರೂ ಹೂವಿನ ಸೌಂದರ್ಯ

ಪರಿಮಳ ಸ್ವಲ್ಪವೂ ಕಡಿಮೆ ಆಗುವುದಿಲ್ಲ ರತ್ನ ಕಂಬಳಿಯಂತೆ ಮರದ ಕೆಳಗೆ ಪಾರಿಜಾತದ ಸೊಬಗನ್ನು ನೋಡಿದಾಗ ಮನಸ್ಸು ಆನಂದದಿಂದ ತುಂಬಿ ತುಳುಕುತ್ತದೆ ಮರದ ಕೆಳಗೆ ಬೀಳುವ ಹೂಗಳನ್ನು ಮಾತ್ರ ಜಾಗರೂಕತೆಯಿಂದ ಆಯ್ತು ದೇವರ ಸೇವೆಗೆ ಬಳಸುತ್ತಾರೆ. ಪಾರಿಜಾತದ ಗಿಡ ನೆಟ್ಟರೆ ಸಾಮಾನ್ಯವಾಗಿ ಗಿಡಗಳಂತೆ ಬೆಳೆಸಬಾರದು ಸಿಕ್ಕಿ ಸಿಕ್ಕಿ ನೀರನ್ನು

ಗಿಡಕ್ಕೆ ಹಾಕುವಂತಿಲ್ಲ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ಪಾರಿಜಾತ ಮರದ ಸುತ್ತಲೂ ಸ್ವಚ್ಛವಾಗಿರಬೇಕು ಏಕೆಂದರೆ ಈ ಮರದ ನೆರಳಿನಲ್ಲಿ ಲಕ್ಷ್ಮೀದೇವಿ ನೆಲೆಸಿದ್ದಾಳೆ ಎಂದು ಹೇಳಲಾಗುತ್ತದೆ. ಸಗಣಿ ನೀರಿನಿಂದ ಮರದ ಕೆಳಗೆ ಸಾಧಿಸಿ ಅದರ ಮೇಲೆ ಬೀಳುವ ಹೂಗಳನ್ನು ದೇವರಿಗೆ ಬಳಸ ಬೇಕು. ಪಾರಿಜಾತ ಆರೋಗ್ಯಕ್ಕೆ ಉಪಯೋಗ ಇದರ ಎಲೆಗಳಲ್ಲಿರುವ ಮಂಡಿ ನೋವನ್ನು ಕಡಿಮೆ ಮಾಡುತ್ತದೆ. ನಿಫಾ ವೈರಸಗೆ ಪಾರಿಜಾತದ ಎಲೆಗಳು ಉಪಯುಕ್ತ ಎನ್ನುತ್ತಾರೆ ಸಂಶೋಧಕರು ಪಾರಿಜಾತ ಮರ ಎಲೆಗಳು ಹೂಗಳು ಮತ್ತು ಬೀಜಗಳು ಎಲ್ಲವೂ ಅದ್ಭುತವಾಗಿದೆ.

Leave A Reply

Your email address will not be published.