ಸಿಂಹ ರಾಶಿ ನವೆಂಬರ್ ಮಾಸ ಭವಿಷ್ಯ

0

ನವೆಂಬರ್ ತಿಂಗಳಿನಲ್ಲಿ ಸಿಂಹರಾಶಿಯವರಿಗೆ ಅದೃಷ್ಟದ ಮಾಸವೆಂದೇ ಹೇಳಬಹುದು. ಈ ತಿಂಗಳು ಉತ್ಸಾಹ, ಚೈತನ್ಯವಿರುತ್ತದೆಂದು ಹೇಳಬಹುದು. ವಿಶೇಷವಾಗಿ ಲೀಡರ್ ಶಿಪ್ ನಲ್ಲಿರುವ ವ್ಯಕ್ತಿಗಳಿಗೆ ಕೆಲಸಗಳು ಸಲೀಸಾಗಿ ನಡೆದುಕೊಂಡು ಹೋಗುತ್ತದೆ. ರಾಜಕೀಯ ಮುಂದಾಳುಗಳಿಗೆ, ಮೇಲಿನ ಹುದ್ಧೆಯಲ್ಲಿರುವವರು, ಸರ್ಕಾರಿ ಮತ್ತು ಖಾಸಗಿ ಉದ್ಯೋಗಿಗಳು,

ಸ್ವಂತ ಉದ್ಯೋಗದಲ್ಲಿರುವವರಿಗೆ ಕೆಲಸಗಳು ಬಹು ಬೇಗನೆ ಆಗುತ್ತದೆ. ಏನೂ ತೊಂದರೆ ಇಲ್ಲದೇ ಸುಲಲಿತವಾಗಿ ಕೆಲಸವು ನಡೆಯುತ್ತದೆ. ಆದರೇ ಕೆಲವೊಂದು ವಿಚಾರದಲ್ಲಿ ಎಚ್ಚರಿಕೆ ವಹಿಸಬೇಕಾಗುತ್ತದೆ. ಕೆಲವು ಸಮಯದಲ್ಲಿ ಉತ್ಸಾಹ, ಚೈತನ್ಯ ಇಲ್ಲದೇ ಇರಬಹುದು, ಅದು ಬಿಟ್ಟರೇ ಈ ತಿಂಗಳು ಸಂಪೂರ್ಣವಾಗಿ ಚೆನ್ನಾಗಿಯೇ ಇದೆ. ಸಿಂಹರಾಶಿಯಲ್ಲಿ ಶುಕ್ರನಿರುವುದರಿಂದ ಶುಕ್ರದೆಸೆ ಎಂದರೆ ತಪ್ಪಾಗಲಾರದು.

ಶುಕ್ರ ಗ್ರಹವು ಒಳ್ಳೆಯದನ್ನೇ ತರುತ್ತದೆ, ಧನಾತ್ಮಕವಾಗಿರುತ್ತದೆ. ಕೌಟುಂಬಿಕ ವಿಚಾರದಲ್ಲಿ ಸಂತೋಷ ಸಿಗುತ್ತದೆ. ಹೊರಗಡೆ ಊಟ, ಪ್ರಯಾಣದ ಯೋಗವಿರುತ್ತದೆ. 2ನೇ ತಾರೀಖು ಶುಕ್ರನು ದ್ವಿತೀಯ ಭಾಗಕ್ಕೆ ಪರಿವರ್ತನೆಯಾಗುತ್ತಾನೆ. ಅದುಕನ್ಯಾರಾಶಿಯಲ್ಲಿರುವುದರಿಂದ ಅದು ನೀಚ ಸ್ಥಾನ ಆದರೂ ಕೂಡ ದ್ವಿತೀಯ ಭಾಗದಲ್ಲಿ ಶುಕ್ರನು ಒಳ್ಳೆಯದ್ದನ್ನೇ ಮಾಡುತ್ತಾನೆ.

ಹಣಕಾಸಿನ ಬಗ್ಗೆ ಹೇಳುವುದರಾದರೇ ರವಿ ಮತ್ತು ಕುಜ ಎರಡು ಗ್ರಹಗಳು ರಾಶಿಯ ಅಧಿಪತಿ ರವಿ ತೃತೀಯ ಭಾವದಲ್ಲಿರುವುದರಿಂದ ರವಿಗೆ ನೀಚ ಸ್ಥಾನವಾಗುತ್ತದೆ ಆದರೂ ತೃತೀಯ ಭಾವ ಒಳ್ಳೆಯದು. ಇದರಿಂದ ನಿಮಗೆ ಧೈರ್ಯ ಸಿಗುತ್ತದೆ. ಕುಜನ ಜೊತೆ ಇರುವುದರಿಂದ ಧೈರ್ಯ ಮತ್ತು ಯಶಸ್ಸು ದುಪ್ಪಟ್ಟು ಆಗುತ್ತದೆ. ಈ ಎರಡೂ ಗ್ರಹಗಳು ಚೈತನ್ಯ ಮತ್ತು ಆಶಾವಾದವನ್ನು ಕೊಡುತ್ತವೆ.

ಮುನ್ನುಗ್ಗುವ ಛಲ, ಉತ್ಸಾಹವೂ ನಿಮ್ಮಲ್ಲಿ ಹೆಚ್ಚಾಗಿರುತ್ತದೆ. ಈ ರಾಶಿಯವರಿಗೆ ಅಸಡ್ಡೆ, ಸೋಮಾರಿತನ ಸಾಮಾನ್ಯವಾಗಿರುತ್ತದೆ ಆದರೇ ಈ ತಿಂಗಳು ಇರುವುದಿಲ್ಲ. ಮೊದಲಿನ 16 ದಿನಗಳು ಬಹಳ ಚೆನ್ನಾಗಿರುತ್ತದೆ. ಯಾವುದೇ ಹೊಸ ಯೋಜನೆಗಳು ಇದ್ದರೇ ಅದು ನೆರವೇರಲು ಪಾಸಿಟಿವ್ ಅವಕಾಶಗಳು ಸಿಗುತ್ತವೆ. ಸರ್ಕಾರಿ ಕೆಲಸ ಕಾರ್ಯಗಳು, ಸರ್ಕಾರಕ್ಕಾಗಿ ಕೆಲಸ ಮಾಡುವ ವ್ಯಕ್ತಿಗಳು,

ಖಾಸಗಿ ಉದ್ಯೋಗಿಗಳು, ರಿಯಲ್ ಎಸ್ಟೇಟ್ ಏಜೆಂಟ್ ಗಳು, ಫ್ರಿಲಾನ್ಸ್ ಗಳು, ಮುಂದಾಳುಗಳು ಇವರುಗಳು ಮುಖ್ಯವಾದ ಕೆಲಸಗಳನ್ನು ತಾರೀಖು 16ನೇ ಒಳಗೆ ಮುಗಿಸಿಕೊಳ್ಳಿ ಏಕೆಂದರೆ ಅದೇ ಉತ್ಸಾಹ, ಚೈತನ್ಯ ಆಮೇಲೆ ಇರುವುದಿಲ್ಲ ಮತ್ತು ಅನುಕೂಲಗಳು ಮತ್ತು ಅವಕಾಶಗಳು ಆಮೇಲೆ ಕಡಿಮೆಯಾಗುತ್ತಾ ಹೋಗುತ್ತವೆ. ದುಡ್ಡು ಬರುವುದು ಮತ್ತು ಯಶಸ್ಸು 16ನೇ ತಾರೀಖಿನ ಒಳಗೆ ಲಭಿಸುವ ಅವಕಾಶಗಳಿವೆ.

ಸಂತೋಷವಾಗಿರುತ್ತೀರಿ ಮತ್ತು ಚಿನ್ನದ ಖರೀದಿಯು ಈ ತಿಂಗಳು ಮಾಡುತ್ತೀರಿ. ಈ ತಿಂಗಳಿನಲ್ಲಿ ವ್ಯವಹಾರಾಸ್ಥರು, ಉದ್ಯೋಗಿಗಳು, ಬಹಳಷ್ಟು ದುಡ್ಡನ್ನು ಉಳಿಸುತ್ತೀರಿ. ಅಂದರೆ ನಿಮ್ಮ ಖರ್ಚಿಗಿಂತ ಲಾಭವು ಈ ತಿಂಗಳು ನಿಮಗೆ ಸಿಗುತ್ತದೆ. ಪ್ರಯತ್ನಕ್ಕಿಂತ ಹೆಚ್ಚಿನ ಯಶಸ್ಸು ಈ ತಿಂಗಳು ಸಿಗುತ್ತದೆ. ಮೊದಲ 15 ದಿನಗಳು ತುಂಬಾ ಚೆನ್ನಾಗಿ ಇರುತ್ತದೆ.

ನಂತರ ಸುಖಸ್ಥಾನಕ್ಕೆ ರವಿ ಮತ್ತು ಕುಜ ಇಬ್ಬರು ಹೋಗುವುದರಿಂದ ಅಷ್ಟೊಂದು ಶುಭವಲ್ಲ. ಸ್ವಲ್ಪ ನೆಗೆಟಿವ್ ಭಾವನೆಗಳು, ಅಡ್ಡಿ ಆತಂಕಗಳು ಶುರುವಾಗುತ್ತವೆ. ಸುಖ ಭಾವದಲ್ಲಿ ಕ್ರೂರ ಗ್ರಹಗಳು ಕುಳಿತುಕೊಳ್ಳುವುದರಿಂದ ಅಷ್ಟೇನು ಸಂತೋಷ ಇರುವುದಿಲ್ಲ ಮತ್ತು ಮಾನಸಿಕ ನೆಮ್ಮದಿ ಇರುವುದಿಲ್ಲ. ಏನೇ ಪ್ಲಾನ್ ಮಾಡಿದರೂ ಅದರಿಂದ ನಡೆಯಲ್ ಸಾಧ್ಯವಾಗದಂತಹ ವಾತಾವರಣ ನಿರ್ಮಾಣವಾಗುತ್ತದೆ.

16ನೇ ತಾರೀಖಿನ ನಂತರ ನಿಮ್ಮ ಆರೋಗ್ಯದಲ್ಲಿ ಎಚ್ಚರಿಕೆಯಿಂದ ಇರಬೇಕು. ಜ್ವರ ಬರುವ ಸಾಧ್ಯತೆ ಇರುತ್ತದೆ. ಮಕ್ಕಳ ವಿಚಾರದಲ್ಲಿ ಸ್ವಲ್ಪ ಎಚ್ಚರಿಕೆಯನ್ನ ವಹಿಸಬೇಕು. ಅವರ ಆಟ, ಪಾಠಗಳು ಸರಿಯಾಗಿ ನಡೆಯುತ್ತಿದೆಯಾ ಎಂಬುದನ್ನ ನೋಡಿಕೊಳ್ಳಬೇಕು. ದುಡ್ಡಿನ ವಿಚಾರದಲ್ಲಿ ಎಚ್ಚರಿಕೆಯಿಂದ ಇರಿ,

ಯಾರಾದರೂ ದುಡ್ಡು ಕೇಳಿದರೇ ತಪ್ಪಿಸಿಕೊಳ್ಳಿ. ನೀವು ಯಾರಿಗಾದರೂ ದುಡ್ಡು ಕೊಡಬೇಕಿದ್ದರೇ ಕೊಟ್ಟು ಬಿಡಿ. ಅನಗತ್ಯವಾದ ಅತೀಯಾದ ಅಪೇಕ್ಷೆಗಳನ್ನ ಇಟ್ಟುಕೊಳ್ಳಬೇಡಿ. ಸಿಂಹರಾಶಿಯವರು ಸೂರ್ಯಾನಾರಾಯಣನನ್ನು ಪ್ರಾರ್ಥನೆ ಮಾಡಿ ಮತ್ತು ಸಾಧ್ಯವಾದರೇ ಬೆಳಿಗ್ಗೆ ಎಳೆ ಬಿಸಿಲಿನಲ್ಲಿ ವಾಕಿಂಕ್ ಮಾಡಿದರೇ ಒಳ್ಳೆಯದು.

Leave A Reply

Your email address will not be published.