ನಾವು ಈ ಲೇಖನದಲ್ಲಿ ಜನ್ಮ ನಕ್ಷತ್ರ ಮತ್ತು ಅಧಿ ದೇವತೆಗಳನ್ನು ಹೇಗೆ ಪೂಜಿಸಬೇಕು ಎಂಬುದನ್ನು ನಾವು ಲೇಖನದಲ್ಲಿ ನೋಡೋಣ .ಎಲ್ಲಾ ನಕ್ಷತ್ರ ಗಳಿಗೂ ಅಧಿ ದೇವತೆಗಳು ಇರುತ್ತಾರೆ . ಅಧಿ ದೇವತೆಗಳನ್ನ ನಾವು ಸ್ಮರಿಸಿ ಕೊಳ್ಳುವುದರ ಮೂಲಕ ದೋಷಗಳನ್ನು ನಿವಾರಣೆ ಮಾಡಿಕೊಳ್ಳಬಹುದು.
ಈಗ ಯಾವ ಯಾವ ನಕ್ಷತ್ರದವರು ಯಾವ ಅಧಿ ದೇವತೆಗಳನ್ನ ಪೂಜಿಸಬೇಕು ಎನ್ನುವುದನ್ನು ತಿಳಿದುಕೊಳ್ಳೋಣ . 1 ಅಶ್ವಿನಿ ನಕ್ಷತ್ರದ ಅಧಿದೇವತೆ, ಅಶ್ವಿನಿ ಕುಮಾರರು. ” ಓಂ ಅಶ್ವಿನಿ ಕುಮಾರಾಯ ನಮಃ “.ಎಂದು ಪ್ರಾರ್ಥಿಸಬೇಕು. 2 ಭರಣಿ ನಕ್ಷತ್ರದ ಅಧಿದೇವತೆ ಯಮ. ” ಓಂ ಯಮಾಯ ನಮಃ”ಎಂದು ಪ್ರಾರ್ಥಿಸಬೇಕು.
3 ಕೃತಿಕಾ ನಕ್ಷತ್ರದ ಅಧಿದೇವತೆ ಅಗ್ನಿ . ” ಓಂ ಅಗ್ನಿ ದೇವಾಯ ನಮಃ”ಎಂದು ಪ್ರಾರ್ಥಿಸಬೇಕು.4 ರೋಹಿಣಿ ನಕ್ಷತ್ರದ ಅಧಿದೇವತೆ ಬ್ರಹ್ಮ. ( ಪ್ರಜಾಪತಿ ) “ಓಂ ಬ್ರಹ್ಮಾಯ ನಮಃ” ಎಂದು ಪ್ರಾರ್ಥಿಸಬೇಕು .
5 ಮೃಗಶಿರ ನಕ್ಷತ್ರದ ಅಧಿದೇವತೆ ಚಂದ್ರ. “” ಓಂ ಚಂದ್ರ ದೇವಾಯ ನಮಃ” ಎಂದು ಪ್ರಾರ್ಥಿಸಬೇಕು .6 ಆರಿದ್ರಾ ನಕ್ಷತ್ರದ ಅಧಿದೇವತೆ ರುದ್ರ . “ಓಂ ರುದ್ರಾಯ ನಮಃ”ಎಂದು ಪ್ರಾರ್ಥಿಸಬೇಕು .
7 ಪುನರ್ವಸು ನಕ್ಷತ್ರದ ಅಧಿದೇವತೆ ಅದಿತಿ . (ದೇವತೆಗಳ ತಾಯಿ) ” ಓಂ ಅದಿತಿ ದೇವಿಯೇ ನಮಃ” ಎಂದು ಪ್ರಾರ್ಥಿಸಬೇಕು . 8 ಪುಷ್ಯ ನಕ್ಷತ್ರದ ಅಧಿದೇವತೆ ಬೃಹಸ್ಪತಿ .. ಓಂ ಬೃಹ ಸ್ಪತಿಯೇ ನಮಃ ” ಎಂದು ಪ್ರಾರ್ಥಿಸಬೇಕು .
9 ಆಶ್ಲೇಷ ನಕ್ಷತ್ರದ ಅಧಿದೇವತೆ ನಾಗದೇವತೆ. “ಓಂ ನಾಗದೇವತೆ ನಮಃ” ಎಂದು ಪ್ರಾರ್ಥಿಸಬೇಕು . 10 ಮಘ ನಕ್ಷತ್ರದ ಅಧಿದೇವತೆ ಪಿತೃ . “ಓಂ ಪಿತೃ ದೇವಾಯ ನಮಃ” ಎಂದು ಪ್ರಾರ್ಥಿಸಬೇಕು.
11 ಹುಬ್ಬಾ ನಕ್ಷತ್ರದ ಅಧಿದೇವತೆ ಭಗ . ” ಓಂ ಭಗಾಯ ನಮಃ” ಎಂದು ಪ್ರಾರ್ಥಿಸಬೇಕು . 12 ಉತ್ತರ ನಕ್ಷತ್ರದ ಅಧಿದೇವತೆ ಆರ್ಯಮನ್ . ” ಓಂ ಆರ್ಯಮನ್ ನಮಃ “ಎಂದು ಪ್ರಾರ್ಥಿಸಬೇಕು .
13 ಹಸ್ತ ನಕ್ಷತ್ರದ ಅಧಿದೇವತೆ ಸವಿತೃ . (ಸೂರ್ಯನ ರೂಪ) “ಓಂ ಸವಿತೃ ನಮಃ ” ಎಂದು ಪ್ರಾರ್ಥಿಸಬೇಕು . 14 ಚಿತ್ತ ನಕ್ಷತ್ರದ ಅಧಿದೇವತೆ ವಿಶ್ವಕರ್ಮ ” ಓಂ ವಿಶ್ವ ಕರ್ಮಯ ನಮಃ” ಎಂದು ಪ್ರಾರ್ಥಿಸಬೇಕು.
15 ಸ್ವಾತಿ ನಕ್ಷತ್ರದ ಅಧಿದೇವತೆ ವಾಯು . “ಓಂ ವಾಯು ದೇವಾಯ ನಮಃ” ಎಂದು ಪ್ರಾರ್ಥಿಸಬೇಕು.
16 ವಿಶಾಖ ನಕ್ಷತ್ರದ ಅಧಿದೇವತೆ ಇಂದ್ರ .ಮತ್ತು ಅಗ್ನಿ . ” ಓಂ ಇಂದ್ರ ದೇವಾಯ ನಮಃ” .. .”ಓಂ ಅಗ್ನಿ ದೇವಾಯ ನಮಃ “ಎಂದು ಪ್ರಾರ್ಥಿಸಬೇಕು .
17 ಅನುರಾಧ ನಕ್ಷತ್ರದ ಅಧಿದೇವತೆ ಮಿತ್ರ. ” ಓ o ಮಿತ್ರ ದೇವಾಯ ನಮಃ “ಎಂದು ಪ್ರಾರ್ಥಿಸಬೇಕು. . 18 ಜೇಷ್ಠ ನಕ್ಷತ್ರದ ಅಧಿದೇವತೆ ಇಂದ್ರ. “ಓಂ ಇಂದ್ರ ದೇವಾಯ ನಮಃ “ಎಂದು ಪ್ರಾರ್ಥಿಸಬೇಕು . 19 ಮೂಲ ನಕ್ಷತ್ರದ ಅಧಿದೇವತೆ ನಿಋತಿ …ಓಂ ನಿಋತಿ ದೇವಿಯೆ ನಮಃ ”ಎಂದು ಪ್ರಾರ್ಥಿಸಬೇಕು.
2೦ ಪೂರ್ವಾಷಾಡ ನಕ್ಷತ್ರದ ಅಧಿದೇವತೆ ಆಪಃ . (ಜಲದೇವತೆ ) “ಓಂ ಆಪಃ ದೇವಿಯೇ ನಮಃ” ಎಂದುಪ್ರಾರ್ಥಿಸಬೇಕು .
21 ಉತ್ತರಾಷಾಡ ನಕ್ಷತ್ರದ ಅಧಿದೇವತೆ ವಿಶ್ವ ದೇವ .. “ಓಂ ವಿಶ್ವ ದೇವಾಯ ನಮಃ “ಎಂದು ಪ್ರಾರ್ಥಿಸಬೇಕು.. 22 ಶ್ರವಣ ನಕ್ಷತ್ರದ ಅಧಿದೇವತೆ ವಿಷ್ಣು . ” ಓಂ ವಿಷ್ಣು ದೇವಾಯ ನಮಃ “ಎಂದು ಪ್ರಾರ್ಥಿಸಬೇಕು.
23 ಧನಿಷ್ಠ ನಕ್ಷತ್ರದ ಅಧಿದೇವತೆ ಅಷ್ಟವಸು . “ಓಂ ಅಷ್ಟವಸು ನಮಃ” ಎಂದು ಪ್ರಾರ್ಥಿಸಬೇಕು. 24 ಶತತಾರ ನಕ್ಷತ್ರದ ಅಧಿದೇವತೆ ವರುಣ . ” ಓಂ ವರುಣ ದೇವಾಯ ನಮಃ “ಎಂದು ಪ್ರಾರ್ಥಿಸಬೇಕು.
25 ಪೂರ್ವಾ ಭಾದ್ರ ನಕ್ಷತ್ರದ ಅಧಿದೇವತೆ, ಅಜೈಕ ಪಾತ್ (ಶಿವನ ಉಗ್ರ ರೂಪ ) “ಓಂ ಅಜೈಕ ಪಾತ್ ನಮಃ” ಎಂದು ಪ್ರಾರ್ಥಿಸಬೇಕು. 26 ಉತ್ತರ ಭಾದ್ರ ನಕ್ಷತ್ರದ ಅಧಿದೇವತೆ ಅಹಿರ್ಬುದ್ನ್ಯ . (ಆಳದಲ್ಲಿರುವ ಸರ್ಪ ) ” ಓಂ ಅಹಿರ್ಬುದ್ನ್ಯ ನಮಃ” ಎಂದು ಪ್ರಾರ್ಥಿಸಬೇಕು .
27 ರೇವತಿ ನಕ್ಷತ್ರದ ಅಧಿದೇವತೆ ಪೂಷಾ . ( ಪೋಷಣೆಯ ದೇವರು ) “ಓಂ ಪೂಷಾಯ ನಮಃ “ಎಂದು ಪ್ರಾರ್ಥಿಸಬೇಕು . ಹೀಗೆ ಜನ್ಮ ನಕ್ಷತ್ರಗಳ ಅಧಿದೇವತೆಗಳನ್ನು ಪೂಜಿಸಬೇಕು ಎಂದು ಹೇಳಲಾಗಿದೆ.