ಪುರುಷರಲ್ಲಿ ಈ 3 ಲಕ್ಷಣಗಳಿದ್ರೆ ಶ್ರೀಮಂತರಾಗುತ್ತಾರೆ

0

ನಾವು ಈ ಲೇಖನದಲ್ಲಿ ಪುರುಷರಲ್ಲಿ ಈ 3 ಲಕ್ಷ ಣಗಳು ಇದ್ದರೆ ಕೋಟ್ಯಾಧಿಪತಿ ಆಗುತ್ತಾರೆ. ಅನ್ನೋ ಕುತುಹಲಕಾರಿ ವಿಷಯವನ್ನು ನಾವು ಈ ಲೇಖನದಲ್ಲಿ ನೋಡೋಣ. ಹಿಂದೂ ಧರ್ಮದ ಗ್ರಂಥದಲ್ಲಿ ಸ್ಟೀಯನ್ನು ಲಕ್ಷ್ಮಿಯ ರೂಪ ಎಂದು ಹೇಳಲಾಗಿದೆ. ಹಾಗೆಯೇ ಪುರುಷರನ್ನು ವಿಷ್ಣುವಿನ ರೂಪದಲ್ಲಿ ನೋಡಲಾಗಿದೆ. ಸ್ಟೀ ಮನೆಯ ಹೊರಗೆ ಒಳಗೆ ಹೇಗೆ ತನ್ನ ಜವಾಬ್ದಾರಿಗಳನ್ನು ನಿರ್ವಹಿಸುತ್ತಾಳೋ ಹಾಗೆಯೇ ಪುರುಷ ಮನೆಯ ಹೊರಗೆ ನಿಬಾಯಿಸುತ್ತಾನೆ .ತನ್ನ ಜವಾಬ್ದಾರಿಗಳನ್ನು ಸಂಪೂರ್ಣವಾಗಿ ತನ್ನ ಮೇಲೆ ತೆಗೆದುಕೊಂಡು ಮನೆಯನ್ನು ನಡೆಸುತ್ತಾನೆ.

ಅಂತಹ ಪುರುಷರಲ್ಲಿ ಕೂಡ ಭಾಗ್ಯಶಾಲಿ ಲಕ್ಷಣಗಳು ಇರುತ್ತವೆ. ಎಂದು ಹೇಳಲಾಗಿದೆ. ಒಬ್ಬ ಪುರುಷ ಅದೃಷ್ಟ ಶಾಲಿಯಾಗಿರಬೇಕು ಅಂದರೆ ಸಾಮುದ್ರಿಕ ಶಾಸ್ತ್ರದಲ್ಲಿ ಹೇಳಿರುವ ಹಾಗೆ ಈ ನಾಲ್ಕು ಲಕ್ಷಣಗಳು ಆ ಪುರುಷನಲ್ಲಿ ಇರಬೇಕು. ಈ ನಾಲ್ಕು ಲಕ್ಷಣಗಳು ಯಾವುವು ಎಂಬುದನ್ನು ನಾವು ಈ ಲೇಖನದಲ್ಲಿ ನೋಡೋಣ. ಸಾಮುದ್ರಿಕ ಶಾಸ್ತ್ರದಲ್ಲಿ ಕೇವಲ ಭಾಗ್ಯಶಾಲಿ ಸ್ತ್ರೀ ಬಗ್ಗೆ ಅಷ್ಟೇ ಅಲ್ಲ ಬದಲಾಗಿ ಪುರುಷರ ಮಹತ್ವ ಪೂರ್ಣ ಲಕ್ಷಣಗಳ ಬಗ್ಗೆಯೂ ಹೇಳಲಾಗಿದೆ.

ಯಾವಾಗಲೂ ಭಾಗ್ಯ ಶಾಲಿಗಳಾಗಿರುವ ಮತ್ತು ಜೀವನದಲ್ಲಿ ಯಾವಾಗಲೂ ಯಶಸ್ಸು ಯಾವ ಪುರುಷರಿಗೆ ಸಿಗುತ್ತದೆ ಎಂದು ಸಾಮುದ್ರಿಕ ಶಾಸ್ತ್ರ ನಮಗೆ ಹೇಳುತ್ತದೆ. ಅನ್ನೋದನ್ನು ಸ್ವತಃ ಬ್ರಹ್ಮ ದೇವರು ಭವಿಷ್ಯದ ಪುರಾಣಗಳಲ್ಲಿ ಉಲ್ಲೇಖವಿದೆ . ಮೊದಲನೆಯ ಲಕ್ಷಣ ಯಾವುದೆಂದರೆ ಅದು ಅಗಲವಾದ ಹಣೆ . ಸಮುದ್ರ ಶಾಸ್ತದ ಪ್ರಕಾರ ಯಾರ ಹಣೆ ಅಗಲವಾಗಿರುತ್ತದೋ ಅಂದರೆ ನಾಲ್ಕು ಬೆರಳುಗಳು ಹಣೆಯ ಮೇಲೆ ತುಂಬಿಕೊಳ್ಳುತ್ತದೋ ಅಂತಹ ವ್ಯಕ್ತಿಗಳ ಭಾಗ್ಯ ಪ್ರಭಾವಶಾಲಿ ಎಂದು ಹೇಳಲಾಗುತ್ತದೆ.

ಇಂತಹ ವ್ಯಕ್ತಿಗಳಿಗೆ ಯಾವಾಗಲೂ ಸಹ ಅದೃಷ್ಟ ಅವರ ಜೊತೆಗೇ ಇರುತ್ತದೆ .ಅವರು ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಿದರೂ ಅವರಿಗೆ ಅದರಲ್ಲಿ ಯಶಸ್ಸು ಬೇಗ ಸಿಗುತ್ತದೆ. ಆದರೆ ಯಾರ ಹಣೆ ಅಗಲವಾಗಿದ್ದೂ ಅವರ ಹಣೆಯ ಮೇಲೆ ಗಾಯದ ಗುರುತು ಇದ್ದರೆ, ಅವರಿಗೆ ಯಶಸ್ಸಿನ ಹಾದಿ ತುಂಬಾ ಕಷ್ಟವಾಗಿರುತ್ತದೆ. ಆದರೆ ಕೊನೆಗೆ ಯಶಸ್ಸು ಸಿಕ್ಕೇ ಸಿಗುತ್ತದೆ ಎಂದು ಸಾಮುದ್ರಿಕ ಶಾಸ್ತ್ರದಲ್ಲಿ ಹೇಳಲಾಗಿದೆ. ಎರಡನೇ ಲಕ್ಷಣ ಅಂದರೆ ಎದೆಯ ಮೇಲೆ ಹೆಚ್ಚು ಕೊದಲು

ಇರುತ್ತೋ ಅಂತಹವರಿಗೆ ಜೀವನದಲ್ಲಿ ಸುಖ ಮತ್ತು ಹಣ ಹೆಚ್ಚಾಗಿಯೇ ಇರುತ್ತದೆ. ಸ್ವಭಾವದಲ್ಲಿ ಇಂತಹ ವ್ಯಕ್ತಿಗಳು ಸಂತೃಪ್ತರಾಗಿರುವುದಲ್ಲದೇ ವಿಶ್ವಾಸಾರ್ಹ ರೂ ಕೂಡ ಆಗಿರುತ್ತಾರೆ. ಆದರೆ ಪುರುಷರಲ್ಲಿ ಹೆಚ್ಚು ಬೆವರು ಬರುವುದು. ಅಥವಾ ಅವರ ಶರೀರದಿಂದ ದುರ್ವಾಸನೆ ಬರುತ್ತದೋ ಅಂತವರು ಜೀವನದಲ್ಲಿ ಜಾಸ್ತಿ ಕಷ್ಟ ಪಡಬೇಕಾಗುತ್ತದೆ. ಈ ತರ ಯಾಕೆ ಆಗುತ್ತದೆ. ಅಂದರೆ ಮಂಗಳ ಗ್ರಹ ಯಾವಾಗಲೂ ದೋಷಪೂರಿತವಾಗಿರುತ್ತದೆ ಎಂದು ಹೇಳಲಾಗಿದೆ. ಇಂತಹ ಪುರುಷರ ಪರಿಸ್ಥಿತಿ ಅವರಿಗೆ ಅನುಕೂಲವಾಗುವಂತೆ ಇರುವುದಿಲ್ಲ.

ಜೀವನದಲ್ಲಿ ಕಷ್ಟ ಕಾರ್ಪಣ್ಯ ಅನುಭವಿಸುತ್ತಾ , ಸುಖ , ಸಂಮೃದ್ಧಿ ಅನ್ನೋದು ಕ್ಷೀಣಿಸುತ್ತಾ ಹೋಗುತ್ತದೆ. ಹಾಗಾಗಿ ಯಾವಾಗಲೂ ಮನುಷ್ಯ ಸ್ವಚ್ಛತೆಯಿಂದ ಶುಭ್ರತೆಯಿಂದ ಇರಬೇಕು. ನಿಮ್ಮ ಬೃಹಸ್ಪತಿ ದೇವರು ಯಾವಾಗಲೂ ಉಜ್ವಲವಾಗಿರುತ್ತಾರೆ. ಜೀವನದಲ್ಲಿ ಅಭಿವೃದ್ಧಿಯಾಗಬೇಕು ಅಂದರೆ ಮೊದಲು ನಮ್ಮ ಶರೀರವನ್ನ ಶುದ್ಧವಾಗಿ ಇಟ್ಟಿಕೊಳ್ಳಬೇಕು. ಶುದ್ಧವಾಗಿರುವುದಕ್ಕೆ ಚಂದನದ ಲೇಪನವನ್ನು ನಿಮ್ಮ ಶರೀರಕ್ಕೆ ಲೇಪಿಸಿಕೊಳ್ಳಬೇಕು .
ಮೂರನೆಯ ಲಕ್ಷಣ್ ಸ್ಪಷ್ಟ ಧ್ವನಿ .

ಯಾರ ಧ್ವನಿ ಗಟ್ಟಿಯಾಗಿ ಸ್ಪಷ್ಟವಾಗಿರುತ್ತೇ ಅವರ ಜೊತೆ ಸೂರ್ಯ ದೇವ ಯಾವಾಗಲೂ ಇರುತ್ತಾನೆ. ಇಂತಹ ಪುರುಷರಿಗೆ ಕೆಲಸ , ಹಣ, ವ್ಯವಹಾರ ಬೇಗ ಲಭಿಸುತ್ತದೆ. ಧ್ವನಿಯೊಂದು ಸ್ಪಷ್ಟ ವಾಗಿದ್ದರೆ , ಆ ಪುರುಷ ಯಾವುದೇ ಕ್ಷೇತ್ರದಲ್ಲಿ ತನ್ನ ಶಕ್ತಿಯಿಂದ ಯಶಸ್ಸು ಪಡೆದುಕೊಳ್ಳುತ್ತಾನೆ . ಅದಕ್ಕಾಗಿ ನಾವು ಮಾತನಾಡುವುದು ಸ್ಪಷ್ಟವಾಗಿರಬೇಕು . ನಮ್ಮ ಮಾತು ಮತ್ತೊಬ್ಬರ ಮೇಲೆ ಒಳ್ಳೆಯ ರೀತಿ ಪ್ರಭಾವ ಬೀರಬೇಕು ಅಂದಾಗ ಮಾತ್ರ ನಮ್ಮಲ್ಲಿ ಆತ್ಮ ವಿಶ್ವಾಸ ಹೆಚ್ಚಾಗುತ್ತದೆ.

ಯಾರ ಧ್ವನಿ ಗಟ್ಟಿಯಾಗಿರುವುದಿಲ್ಲ, ಮಾತು ಸ್ಪಷ್ಟವಾಗಿರುವುದಿಲ್ಲವೋ ಹೇಳಿದ್ದು ಅರ್ಥವಾಗುವುದಿಲ್ಲವೋ ಅಂತಹವರು ಜೀವನಲ್ಲಿ ಹಿಂದೆಯೇ ಇರುತ್ತಾರೆ. ಜೀವನದಲ್ಲಿ ಬೆಳವಣಿಗೆ ಕುಂಠಿತವಾಗುತ್ತದೆ. ಕೆಲಸಗಳು ಸಮಯಕ್ಕೆ ಸರಿಯಾಗಿ ಆಗೋದಿಲ್ಲ. ನಮ್ಮ ಆತ್ಮವಿಶ್ವಾಸ ಕುಗ್ಗುತ್ತಾ ಹೋಗುತ್ತದೆ. ಜೀವನದಲ್ಲಿ ಯಶಸ್ಸು ಸಿಗಲೂ ತುಂಬಾ ಸಮಯ ತೆಗೆದುಕೊಳ್ಳುತ್ತದೆ. ನಾಲ್ಕನೇಯ ಲಕ್ಷಣ ಯಾವುದೆಂದರೆ, ಕಪ್ಪು ಮತ್ತು ದೊಡ್ಡ ಕಣ್ಣು . ಹಾಗೆ ನೋಡುವುದಾದರೆ ನಮ್ಮ ಕಣ್ಣುಗಳೇ ನಮ್ಮ ವ್ಯಕ್ತಿತ್ವವನ್ನು ತೋರಿಸುತ್ತದೆ.

ನಮ್ಮಲ್ಲಿರುವ ಭಾವನೆಗಳನ್ನು ನಮ್ಮ ಕಣ್ಣುಗಳೇ ಹೇಳುತ್ತವೆ. ಅದಕ್ಕಾಗಿಯೇ ಹೇಳುವುದು ಕಣ್ಣುಗಳಿಂದಲೇ ಮನುಷ್ಯನ ಮನಸ್ಸುನ್ನು ಅರ್ಥ ಮಾಡಿಕೊಳ್ಳಬಹುದು ಎಂದು ಹೇಳಲಾಗಿದೆ. ಯಾವ ಪುರುಷನ ಕಣ್ಣು ದೊಡ್ಡದು ಮತ್ತು ಕಪ್ಪು ಇರುತ್ತೋ ಕಣ್ಣಿನ ಕೆಳಗೆ ಕಪ್ಪು ಬಣ್ಣ ಇರುವುದಿಲ್ಲವೋ ಅಂತಹ ಪುರುಷರ ಮೇಲೆ ಸ್ವತಃ ಹರಿ ನಾರಾಯಣನ ಕೃಪೆ ಇರುತ್ತದೆ. ಚಂದ್ರ ಯಾವಾಗಲೂ ಅವರ ಜೊತೆ ಇರುತ್ತಾನೆ. . ಅವರೂ ಮಾಡುವ ಪ್ರತಿಯೊಂದು ಕಾರ್ಯದಲ್ಲೂ ಯಶಸ್ಸು ಸಿಗುತ್ತದೆ.

ಇದೇ ತರ ಒಬ್ಬ ವ್ಯಕ್ತಿ ಅದೃಷ್ಟವಂತ ಅಲ್ಲವೋ ಎಂಬುದನ್ನು ಅವನ ಕಾಲುಗಳಿಂದ ನೋಡಬಹುದು. ಇದೇ ಕಾರಣಕ್ಕೆ ಹಿರಿಯರು ಮದುವೆ ಆಗುವಾಗ ಹುಡುಗ ಮತ್ತು ಹುಡುಗಿಯ ಕಾಲುಗಳನ್ನು ನೋಡುತ್ತಿದ್ದರು. ಇದರಿಂದ ನಮಗೆ ಎರಡು ವಿಷಯಗಳ ಬಗ್ಗೆ ಗೊತ್ತಾಗುತ್ತದೆ. ಮೊದಲನೆಯ ಬೆರಳಿಗಿಂತ ಎರಡನೇ ಬೆರಳು ಉದ್ದವಾಗಿದ್ದರೆ ಅಂತಹ ವ್ಯಕ್ತಿ ಬಹಳ ಅದೃಷ್ಟವಂತ .

ಕರುಣಾಮಯಿ, ಸಹನಾ ಶೀಲನಾಗಿರುತ್ತಾನೆ. ಆ ಪುರುಷನು ನಡೆಯುವ ಶೈಲಿ ಸರಿಯಾಗಿರುವುದಿಲ್ಲವೋ ಆ ವ್ಯಕ್ತಿ ವಿಶ್ವಾಸರ್ಹನಾಗಿರುವುದಿಲ್ಲ. ಆತನನ್ನ ನಂಬಿದರೆ ನಂಬಿಕೆ ದ್ರೋಹ ಮಾಡುವ ಎಲ್ಲಾ ಸಾಧ್ಯತೆಗಳು ಇರುತ್ತವೆ. ಇದೆಲ್ಲಾ ಜೊತೆಗೆ ವ್ಯಕ್ತಿಯ ಸ್ವಭಾವದಿಂದ ಆ ವ್ಯಕ್ತಿಯ ಬಗ್ಗೆ ಗೊತ್ತಾಗುತ್ತದೆ. ಯಾವ ಪುರುಷ ಎಲ್ಲರನ್ನು ಹೊಗಳುವುದಿಲ್ಲ, ಹಾಗೂ

ಆತನಲ್ಲಿ ಅಹಂಕಾರ ಇಲ್ಲದಿದ್ದಾಗ ಸೂರ್ಯ ದೇವನ ಕೃಪೆ ಆತನ ಮೇಲೆ ಸಹಾ ಇರುತ್ತದೆ. ಯಾವ ಪುರುಷ ಸ್ತ್ರೀಯರಿಗೆ ಗೌರವ ಕೊಡುತ್ತಾನೋ ಅವರ ಮೇಲೆ ಶನಿದೇವರ ಕೃಪೆ ಹೆಚ್ಚು ಇರುತ್ತದೆ. ಯಾವ ಪುರುಷನ ಮನಸ್ಸು ನಿಶ್ಕಲ ಮಷವಾಗಿರುತ್ತದೋ , ಯಾವ ವ್ಯಕ್ತಿ ನಗುವಾಗ ಮನ ಪೂರ್ವಕವಾಗಿ ನಗುತ್ತಾ ನೋ ಅಂತಹ ಪುರುಷರ ಮೇಲೆ ಮಹಾಲಕ್ಷ್ಮಿಯ ಕೃಪೆ ಆತನ ಮೇಲೆ ಇರುತ್ತದೆ. ಇಂತಹ ಲಕ್ಷಣಗಳು ಯಾವ ಪುರುಷರಲ್ಲಿ ಇರುತ್ತದೋ ಅವರು ಅದೃಷ್ಟಶಾಲಿಗಳು ಆಗುತ್ತಾರೆ. ಎಂದು ಸಾಮುದ್ರಿಕ ಶಾಸ್ತ್ರದಲ್ಲಿ ಹೇಳಲಾಗಿದೆ.

Leave A Reply

Your email address will not be published.