ಕೊಬ್ಬರಿ ಎಣ್ಣೆಯ 10 ಪ್ರಯೋಜನಗಳು

ಕೊಬ್ಬರಿ ಎಣ್ಣೆಯ 10 ಪ್ರಯೋಜನಗಳು ಮೆದುಳಿನ ಆರೋಗ್ಯಕ್ಕೆ ಅಥವಾ ನೆನಪಿನ ಶಕ್ತಿ ವೃದ್ಧಿ ಆಗಲು ಕೊಬ್ಬರಿ ಎಣ್ಣೆಯಲ್ಲಿ ಒಗ್ಗರಣೆ ಮಾಡಿದ ಆಹಾರವನ್ನು ಸೇವಿಸಿದರೆ ಉತ್ತಮ ಎಂದು ಹೇಳುತ್ತಾರೆ.

ಸ್ವಲ್ಪ ಕೊಬ್ಬರಿ ಎಣ್ಣೆಯಿಂದ ಬಾಯಿಯನ್ನು ಮುಕ್ಕಳಿಸುವುದರಿಂದ ವಸಡಿನ ಸಮಸ್ಯೆ ಮಾಯವಾಗುತ್ತದೆ.

ತೂಕ ಕಡಿಮೆ ಮಾಡಿಕೊಳ್ಳಲು ಕೊಬ್ಬರಿ ಎಣ್ಣೆಯನ್ನು ಅಡುಗೆಯಲ್ಲಿ ಬಳಸಿದರೆ ಉಪಯೋಗಕಾರಿ ಎಂದು ಹೇಳುತ್ತಾರೆ.

ಕೊಬ್ಬರಿ ಎಣ್ಣೆಯ ಮಸಾಜ್ ಮಾಡುವುದರಿಂದ ದೇಹದಲ್ಲಿ ರಕ್ತ ಸಂಚಲನ ಚೆನ್ನಾಗಿ ಆಗುತ್ತದೆ ಹಾಗೂ ಚರ್ಮಕ್ಕು ಕೂಡ ಒಳ್ಳೆಯದು.

ಕೂದಲಿಗೆ ವಾರದಲ್ಲಿ 2 ಬಾರಿ ಆದರೂ ಕೊಬ್ಬರಿ ಎಣ್ಣೆಯ ಮಸಾಜ್ ಮಾಡಿ ಇದು ಕೂದಲನ್ನು ಉದ್ದವಾಗಿ ಬೆಳೆಯಲು ಹಾಗೂ ಕೂದಲಿನ ಸಮಸ್ಯೆಯನ್ನು ಹೋಗಲಾಡಿಸುತ್ತದೆ.

ತುಟಿಗಳು ಒಣಗುತ್ತಿದ್ದರೆ ಅಥವಾ ಒಡೆದಿದ್ದರೆ ಒಂದು ಚಿಟಿಕೆ ಕೊಬ್ಬರಿ ಎಣ್ಣೆ ತೆಗೆದುಕೊಂಡು ತುಟಿಗಳಿಗೆ ಮಸಾಜ್ ಮಾಡಿ.

ಸುಟ್ಟ ಕಲೆಗಳು ಹಾಗೂ ಯಾವುದಾದರೂ ಮಾರ್ಕ್ ಗಳಿಗೆ ಕೊಬ್ಬರಿ ಎಣ್ಣೆಯಲ್ಲಿ ಮಸಾಜ್ ಮಾಡಿ ಹೀಗೆ ಮಾಡುವುದರಿಂದ ಕ್ರಮೇಣ ಕಲೆಗಳ ಸಮಸ್ಯೆಯಿಂದ ಮುಕ್ತಿ ದೊರಕುತ್ತದೆ.

ರಾತ್ರಿ ಮುಖಕ್ಕೆ ಸ್ವಲ್ಪ ಕೊಬ್ಬರಿ ಎಣ್ಣೆ ಹಚ್ಚಿ ಮಲಗುವುದರಿಂದ ಕಪ್ಪು ಕಲೆಗಳು ದೂರವಾಗುತ್ತವೆ.

ರಾತ್ರಿ ಮಲಗುವ ಮುನ್ನ ಸ್ವಲ್ಪ ಕೊಬ್ಬರಿ ಎಣ್ಣೆಯನ್ನು ಬಿಸಿ ಮಾಡಿ ಹಿಮ್ಮಡಿಗಳಿಗೆ ಹಚ್ಚಿದರೆ ಹಿಮ್ಮಡಿ ಒಡೆಯುವುದನ್ನು ತಪ್ಪಿಸಬಹುದು.

ನಮ್ಮ ಆಹಾರದಲ್ಲಿರುವ ಕೊಬ್ಬಿನ ಅಂಶವನ್ನು ಕಡಿಮೆ ಮಾಡುವ ಗುಣ ಕೊಬ್ಬರಿ ಎಣ್ಣೆಯಲ್ಲಿದೆ ಹಾಗಾಗಿ ಇದನ್ನು ಅಡುಗೆಯಲ್ಲಿ ಬಳಸುವುದು ಒಳ್ಳೆಯದು.

Leave a Comment