ನಾವು ಈ ಲೇಖನದಲ್ಲಿ ಸಿಂಹ ರಾಶಿಯವರ ಭಾಗ್ಯಸ್ಥಾನದ ಬಗ್ಗೆ ತಿಳಿದುಕೊಳ್ಳೋಣ. ಗುರುವು ಸಿಂಹ ರಾಶಿಯವರಿಗೆ ಇಷ್ಟು ದಿನ ಭಾಗ್ಯಸ್ಥಾನದಲ್ಲಿ ಇದ್ದುಕೊಂಡು ಒಳ್ಳೆಯ ಲಾಭಗಳನ್ನು ಕೊಡುತ್ತಿದ್ದನು. ಹಣಕಾಸಿನ ಹರಿವು ಅಥವಾ ಪ್ರಭಾವ ಹೆಚ್ಚಾಗಿ ಇದರಿಂದ ಒಳ್ಳೆಯ ಲಾಭಗಳನ್ನು ಗಳಿಸುತ್ತಿದ್ದೀರಿ. ಮೇ 1 2024 ರಲ್ಲಿ ಬದಲಾಗುವಂತಹ ಗುರುವಿನ ಬದಲಾವಣೆಯಿಂದ ಏನೆಲ್ಲ ತೊಂದರೆಗಳು ಆಗಬಹುದು ಎಂಬುದನ್ನು ತಿಳಿದುಕೊಳ್ಳೋಣ. ಇಷ್ಟು ದಿನ ನಿಮ್ಮ ಜೀವನ ಎನ್ನುವ ಪಯಣ ತುಂಬಾ ಆರಾಮದಾಯಕವಾಗಿತ್ತು.
ಮೇ 1 2024 ರಿಂದ ನಿಮ್ಮ ಜೀವನದಲ್ಲಿ ಮುಂದಿನ ಒಂದು ವರ್ಷ ಅಡೆತಡೆಗಳು ಉಂಟಾಗಲಿದೆ. ಯಾಕಂದರೆ ಗುರು ಹೋಗುತ್ತಿರುವುದು ಹತ್ತನೇ ಮನೆಯಾದ ವೃಷಭ ರಾಶಿಗೆ ಗುರು ಬದಲಾವಣೆಯಾಗುತ್ತಿದ್ದಾನೆ. ಈ ಮನೆಗೆ ಕರ್ಮಸ್ಥಾನ ಎಂದು ಹೇಳುತ್ತೇವೆ. ಇದು ನಿಮ್ಮ ಅಧಿಕಾರ ಕೆಲಸ ಗೌರವ ಇಂತಹ ಕಾರ್ಯಗಳಿಗೆ ಸಂಬಂಧಿಸಿದಂತೆ. ಈ ವಿಚಾರಗಳಲ್ಲಿ ನೀವು ಎಷ್ಟು ಜಾಗರೂಕರಾಗಿರಬೇಕು ಎಂಬುದನ್ನು ತಿಳಿದುಕೊಳ್ಳೋಣ. ನಂತರ ಒಂದಿಷ್ಟು ಶುಭ ಸಮಾಚಾರಗಳನ್ನು ತಿಳಿದುಕೊಳ್ಳೋಣ.
ನೀವು ಉದ್ಯೋಗ ಮಾಡುವ ಸ್ಥಳದಲ್ಲಿ ತುಂಬಾ ಜಾಗರೂಕರಾಗಿರಬೇಕು. ಯಾರನ್ನು ಸಹ ನಂಬಬೇಡಿ. ಸಣ್ಣ ಪುಟ್ಟ ತಪ್ಪುಗಳಿಂದ ದೊಡ್ಡದಾದಂತಹ ನಷ್ಟಗಳನ್ನು ಅನುಭವಿಸುತ್ತೀರಾ. ಕೆಲಸ ಮಾಡುವ ಕಡೆ ತುಂಬಾ ಶ್ರದ್ಧೆಯಿಂದ ಜಾಗರೂಕರಾಗಿ ಕೆಲಸ ಮಾಡಬೇಕು. ಮತ್ತು ಸಹೋದ್ಯೋಗಿಗಳ ಜೊತೆ ಮನಸ್ತಾಪಗಳು ಉಂಟಾಗಬಹುದು. ನಿಮ್ಮ ಕೆಲಸ ನೋಡಿ ನಿಮ್ಮ ಸಹೋದ್ಯೋಗಗಳಿಗೆ ನಿಮ್ಮ ಮೇಲೆ ಹೆಚ್ಚಿನ ಹೊಟ್ಟೆ ಕಿಚ್ಚು ಉಂಟಾಗುವ ಸಾಧ್ಯತೆ ಇದೆ. ಅವರ ಕೆಲಸ ನೋಡಿ ನಿಮಗೆ ಹೊಟ್ಟೆ ಕಿಚ್ಚು ಉಂಟಾಗುವ ಸಾಧ್ಯತೆ ಇದೆ .
ಇದರಿಂದ ನಿಮ್ಮ ಸಹೋದ್ಯೋಗಿಗಳ ಮತ್ತು ನಿಮ್ಮ ನಡುವೆ ವೈ ಮನಸ್ಸು ಉಂಟಾಗುತ್ತದೆ. ಕೆಲವು ಬಾರಿ ನಿಮ್ಮ ಮನಸ್ಥಿತಿ ಬದಲಾವಣೆಯಾಗುತ್ತದೆ. ಹೆಚ್ಚಿನ ಜನರಲ್ಲಿ ಅಸಮಾಧಾನ ಮನಸ್ತಾಪಗಳು ಉಂಟಾಗುತ್ತದೆ. ನಕಾರಾತ್ಮಕತೆ ಬೆಳವಣಿಗೆಗಳು ಉಂಟಾಗುತ್ತದೆ. ಅವರು ಮಾನಸಿಕ ನೆಮ್ಮದಿಯನ್ನು ಸಹ ಕಳೆದುಕೊಳ್ಳುತ್ತಾರೆ. ಇನ್ನು ಕೆಲವರು ಅವರ ಮೇಲಾಧಿಕಾರಿಗಳಿಗೆ ತೊಂದರೆಯನ್ನು ಸಹ ಕೊಡಬಹುದು. ಮನೆಯವರ ಜೊತೆ ಕೋಪ ಕಿರಿಕಿರಿ ಉಂಟಾಗುತ್ತದೆ.
ಸಿಂಹ ರಾಶಿಯವರು ರಾಜಾರಾಶಿಯಾಗಿರುವುದರಿಂದ ಎಲ್ಲಾ ಕೆಲಸದಲ್ಲೂ ಸಹ ಕೊಂಕು ಹುಡುಕುವ ಸಾಧ್ಯತೆ ಹೆಚ್ಚಾಗಿರುತ್ತದೆ. ತಾವು ಹೇಳಿದಂತೆ ನಡೆಯಬೇಕು ಎಂಬಂತಹ ಮನಸ್ಥಿತಿಯವರು ಹೆಚ್ಚಾಗಿರುತ್ತಾರೆ. ಗುರು ಉದ್ಯೋಗ ಸ್ಥಾನದಲ್ಲಿ ತಟಸ್ಥನಾಗಿರುವುದರಿಂದ, ತಮ್ಮ ಕೈಯ ಕೆಳಗಡೆ ಕೆಲಸ ಮಾಡುವವರ ಮೇಲೆ ಅಧಿಕಾರ ಮತ್ತು ದರ್ಪವನ್ನು ಚಲಾಯಿಸುತ್ತಾರೆ . ಇನ್ನು ಕೆಲವರು ಮೇಲಾಧಿಕಾರಿಗಳ ಜೊತೆಯೂ ಸಹ ವಾದಕ್ಕೆ ಹಿಡಿಯುತ್ತಾರೆ .
ಈ ರಾಶಿಯ ಕೆಲವು ಜನರು ಹೊಗಳಿಕೆಯನ್ನು ಪಡೆಯಲು ಮತ್ತು ಜನರ ಮಧ್ಯೆ ಕೇಂದ್ರಬಿಂದುವಾಗಿರಬೇಕೆಂದು ಪ್ರಯತ್ನಿಸುತ್ತಾರೆ. ಇಂತಹ ಭಾವನೆಗಳು ನಿಮ್ಮಲ್ಲಿ ಇದ್ದರೆ ಮೇ ಒಂದರ ನಂತರ ಇಂತಹ ವಿಚಾರಗಳಿಂದ ದೂರವಿರುವುದು ಒಳ್ಳೆಯದು. ಇಲ್ಲವಾದರೆ ಜನರ ಪ್ರಶಂಸೆ ಪಡೆದುಕೊಳ್ಳುವ ಬದಲು ಅವಮಾನವಾಗುವಂತಹ ಪರಿಸ್ಥಿತಿ ಬಂದರೂ ಬರಬಹುದು. ಒಣ ಪ್ರತಿಷ್ಠೆ ತೋರಿಸಿಕೊಳ್ಳುವ ಸಲುವಾಗಿ ಮೋಸ ಹೋಗುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಗುರುವು ಉದ್ಯೋಗ ಸ್ಥಾನದಲ್ಲಿ ಇರುವುದರಿಂದ ಕೆಲಸ ಇಲ್ಲದಿರುವವರಿಗೆ ಕೆಲಸ ಸಿಗುವ ಸಾಧ್ಯತೆಯೂ ಇರುತ್ತದೆ. ಕೆಲಸ ಸಿಕ್ಕರೂ ಆ ಕೆಲಸಕ್ಕೆ ನಿಮಗೆ ಅರ್ಹತೆ ಇದೆಯೋ ಇಲ್ಲವೋ ಎಂಬುದನ್ನು ತೋರಿಸಿಕೊಳ್ಳುವುದರಲ್ಲಿ ಎಡರುವ ಸಾಧ್ಯತೆ ಹೆಚ್ಚು. ಆಲೋಚನೆ ಮಾಡಿಕೊಳ್ಳದೆ ಎಡವಟ್ಟು ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ. ಗುರುವನ್ನು ನಾವು ವಾಣಿ ಕಾರಕ ಎಂದು ಸಹ ಕರೆಯುತ್ತೇವೆ . ಅಂದರೆ ಯಾವ ವಿಷಯವನ್ನು ಮಾತನಾಡಬೇಕು ಯಾರ ಮುಂದೆ ಮಾತನಾಡಬೇಕು ಎಂದು ಯೋಚನೆ ಮಾಡದೆ ಮಾತನಾಡಿ ಎದುರಿಗಿರುವವರ ವೈರತ್ವವನ್ನು ಕಟ್ಟಿಕೊಳ್ಳುವ ಸಾಧ್ಯತೆ ಹೆಚ್ಚು. ಮತ್ತು ಮನಸ್ತಾಪಕ್ಕೆ ಕಾರಣವಾಗಬಹುದು.
ಅದರಲ್ಲೂ ಸಿಂಹ ರಾಶಿಯವರಿಗೆ ಕೋಪ ಹೆಚ್ಚಾಗಿರುವುದರಿಂದ ಕೋಪದ ಬರದಲ್ಲಿ ಮಾತನಾಡಿ ಮನಸ್ಸು ನೋಯಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ಕೆಲಸದಲ್ಲಿ ವಿಚಾರದಲ್ಲಿ ಕೆಲವೊಂದು ವಿಷಯಗಳನ್ನು ಗೌಪ್ಯವಾಗಿ ಇಡುವುದು ಒಳ್ಳೆಯದು. ಇಷ್ಟನ್ನು ನೆನಪಿನಲ್ಲಿಟ್ಟುಕೊಂಡರೆ ಗುರುವು ಉಳಿದಿದ್ದನ್ನು ಶುಭವಾಗುವ ಹಾಗೆ ಮಾಡುತ್ತಾನೆ. ಗುರು ಕೊಡುವ ಶುಭ ಫಲಗಳ ಬಗ್ಗೆ ತಿಳಿದುಕೊಳ್ಳೋಣ. ಬಹಳಷ್ಟು ಜನ ಕೆಲಸದ ವಿಚಾರದಲ್ಲಿ ಶುಭ ಸುದ್ದಿಗಳನ್ನು ಕೇಳುತ್ತೀರಾ.
ನಾವು ಮೇಲೆ ಹೇಳಿದ್ದ ಲೇಖನದಲ್ಲಿ ಮೇಲೆ ಹೇಳಿದ ಎಚ್ಚರಿಕೆಗಳನ್ನು ಪಾಲಿಸಿದರೆ ನಿಮಗೆ ಒಳ್ಳೆಯ ಅವಕಾಶಗಳು ಸಿಗುತ್ತದೆ. ಬಡ್ತಿ ಸಂಬಳದಲ್ಲಿ ಹೆಚ್ಚಳ ಇಂಥ ವಿಚಾರಗಳಲ್ಲಿ ಎಲ್ಲರಿಗೂ ಸಿಗುವುದಿಲ್ಲ. ಆದರೆ ಸಿಂಹ ರಾಶಿಯ ಬಹುತೇಕ ಜನರಿಗೆ ಈ ರೀತಿ ಅವಶ್ಯಕತೆ ಇದೆ . ಆದರೆ ನಿಮ್ಮ ಶ್ರಮ ಮತ್ತು ದುಡಿಮೆಯ ಅವಶ್ಯಕತೆ ಇದೆ. ಕೆಲಸವನ್ನು ನಿರ್ಲಕ್ಷ್ಯ ಮಾಡುವಂತಿಲ್ಲ. ಅಧಿಕಾರ ಸಿಕ್ಕಿದೆ ಎಂದು ಅದನ್ನು ದುರುಪಯೋಗಪಡಿಸಿಕೊಳ್ಳುವಂತಿಲ್ಲ. ಇಷ್ಟನ್ನು ನೀವು ಮಾಡಿದರೆ ಜನರಿಂದ ಒಳ್ಳೆಯ ಪ್ರಶಂಸೆ ಮಾತುಗಳನ್ನು ಕೇಳಬಹುದು.
ಕೆಲಸ ಮಾಡುವ ಕಡೆಗಳಲ್ಲಿ ಬದಲಾವಣೆಯೂ ಸಹ ಆಗಬಹುದು . ನೀವು ಕೆಲಸ ಮಾಡಿದಾಗ ಕಿರಿಕಿರಿ ಮಾಡುವಂತಹವರು ನಿಮ್ಮಿಂದ ದೂರವಾಗುವ ಸಾಧ್ಯತೆ ಹೆಚ್ಚು. ಮೇ ಒಂದು ಎರಡು ಸಾವಿರದ ಇಪ್ಪತ್ನಾಲ್ಕರಿಂದ ಮೇ 14 2025 ರ, ತನಕ ಗುರುವು ಕರ್ಮಸ್ಥಾನದಲ್ಲಿ ಇರುವುದರಿಂದ ಇಂಥ ಬೆಳವಣಿಗೆಗಳು ಆಗುವ ಸಾಧ್ಯತೆ ಹೆಚ್ಚಿರುತ್ತದೆ. ಈ ಒಂದು ವರ್ಷದಲ್ಲಿ ಕೆಲವೊಂದು ಲಾಭಗಳನ್ನು ಸಹ ನೀವು ಪಡೆದುಕೊಳ್ಳುತ್ತೀರಾ. ಕೆಲವರಿಗೆ ಉತ್ತಮ ಉದ್ಯೋಗದಾರರು ಎಂಬ ಪ್ರಶಂಸೆಗೂ ಪಾತ್ರರಾಗುತ್ತೀರಾ.
ನಿಮ್ಮ ಶ್ರಮಕ್ಕೆ ತಕ್ಕಂತೆ ಪ್ರತಿಫಲಗಳು ಸಹ ಸಿಗುತ್ತದೆ. ಕೆಲವು ದಿನಗಳಿಂದ ವರ್ಗಾವಣೆ ಬೇಕಿದ್ದರೆ ಅದು ಈ ಸಮಯದಲ್ಲಿ ಸಿಗುವ ಸಾಧ್ಯತೆ ಹೆಚ್ಚಿರುತ್ತದೆ. ಬೇರೆ ಕಂಪನಿಗಳಿಂದ ಕೆಲಸದ ಅವಕಾಶ ಕೂಡ ಸಿಗುತ್ತದೆ. ಮತ್ತು ನಿಮ್ಮ ತಂದೆಯಿಂದ ನೀವು ಮಾಡುವ ಕೆಲಸಕ್ಕೆ ಸಹಕಾರ ದೊರಕುತ್ತದೆ. ಹೊಸ ವ್ಯಾಪಾರ ವ್ಯವಹಾರಗಳನ್ನು ಶುರು ಮಾಡುತ್ತಿದ್ದರೆ ನಿಮ್ಮ ತಂದೆಯಿಂದ ಸಹಕಾರ ದೊರಕುತ್ತದೆ. ನಿಮ್ಮ ಆಸೆ ಮತ್ತು ಕನಸುಗಳಿಗೆ ಬೆಂಬಲವಾಗಿ ನಿಲ್ಲುತ್ತಾರೆ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದು ಉದ್ಯೋಗದ ನಿರೀಕ್ಷೆಯಲ್ಲಿದ್ದರೆ
ಇದು ನಿಮಗೆ ಒಳ್ಳೆಯ ಫಲವನ್ನು ಕೊಡುತ್ತದೆ. ಖಾಸಗಿ ಉದ್ಯೋಗವಾಗಲಿ ಸರ್ಕಾರಿ ಉದ್ಯೋಗ ವಾಗಲಿ ಒಂದಲ್ಲ ಒಂದು ರೀತಿಯ ಅವಕಾಶ ಸಿಗುತ್ತದೆ. ಅದರಲ್ಲೂ ಗುರುವನ್ನು ನಾವು ಬುದ್ಧಿ ಕಾರಕ ಎಂದು ಹೇಳುತ್ತೇವೆ . ಬುದ್ಧಿವಂತಿಕೆಯಿಂದ ಎಲ್ಲವನ್ನು ಸಾಧಿಸುವ ಹಾಗೆ ಆಗುತ್ತದೆ. ಕೃಷಿ ಮತ್ತು ಕಾರ್ಮಿಕರ ಬಗ್ಗೆ ಹೇಳುವುದಾದರೆ ಒಂದಷ್ಟು ಕೃಷಿಯ ಕೆಲಸಗಳು ಕಾಮಗಾರಿ ನಡೆಯುತ್ತಿದ್ದರೆ , ಗುರು ದಶಮ ಭಾಗದಲ್ಲಿರುವ ಆ ಕೆಲಸಗಳು ನಿಂತು ಹೋಗಿದ್ದರೆ ಮತ್ತೊಂದು ಸಲ ಗುರು ಕೃಪೆಯಿಂದ ಶುರುವಾಗುವ ಸಾಧ್ಯತೆ ಇರುತ್ತದೆ.
ಶ್ರದ್ಧೆಯಿಂದ ಕೆಲಸ ಮಾಡುವ ಮನಸ್ಸಿದ್ದರೆ ಗುರುವು ನಿಮಗೆ ಒಳ್ಳೆಯದನ್ನೇ ಮಾಡುತ್ತಾನೆ. ಕೌಟುಂಬಿಕ ಜೀವನದಲ್ಲಿ ಶಾಂತಿ ಮತ್ತು ನೆಮ್ಮದಿ ಇರುತ್ತದೆ. ಮೇ 1ಕ್ಕೆ ಗುರು ಪರಿವರ್ತನೆಯಾಗುವ ಮೊದಲು ಬಹಳಷ್ಟು ಜನಕ್ಕೆ ಪೂಜೆ ಪುನಸ್ಕಾರ ಪದೇ ಪದೇ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವ ಮನಸ್ಸು ಇರುತ್ತದೆ. ಇದೇ ರೀತಿಯ ಭಕ್ತಿ ಭಾವ ಗುರು ದಶಮದಲ್ಲಿರುವಾಗಲೂ ಮುಂದುವರೆಯುತ್ತದೆ . ಬಹಳಷ್ಟು ಜನ ಧಾರ್ಮಿಕ ಸಮಾರಂಭಗಳನ್ನು ನಡೆಸುತ್ತೀರಾ. ಇದರಿಂದ ಶುಭ ಫಲಗಳನ್ನು ಕಾಣುತ್ತೀರ. ಆದರೆ ಯಾರನ್ನು ಸಹ ನಂಬಬೇಡಿ. ಯೋಚನೆ ಮಾಡಿ ನಿರ್ಧಾರಗಳನ್ನು ಕೈಗೊಳ್ಳಿ. ಒಟ್ಟಿನಲ್ಲಿ ಹೇಳುವುದಾದರೆ ಗುರು ಬಲವು 65 ರಿಂದ 75% ರಷ್ಟು ಬಲವಾಗಿರುತ್ತದೆ .ಇದರಿಂದ ನಿಮಗೆ ಒಳ್ಳೆಯ ಪ್ರಭಾವ ಉಂಟಾಗುತ್ತದೆ.