ನೀನು ಹೇಗಿದೆಯೋ ಇರು

ನಾವು ಈ ಲೇಖನದಲ್ಲಿ ನೀನು ಹೇಗಿದ್ದಿಯಾ ಹಾಗೇ ಇರು . ಯಾರನ್ನೂ ಮೆಚ್ಚಿಸುವ ಪ್ರಯತ್ನ ಮಾಡಬೇಡ ಎಂಬ ವಿಷಯದ ಬಗ್ಗೆ ತಿಳಿಯೋಣ .ಜೀವನ ಒಂದು ಪುಸ್ತಕದಂತೆ. ಕೆಲವು ಅಧ್ಯಾಯ ದುಃಖದಿಂದ ಇದ್ದರೆ , ಇನ್ನು ಕೆಲವು ಅಧ್ಯಾಯ ಸಂತಸದಿಂದ ಇರುತ್ತದೆ .

ಸುಮಾರು ಉತ್ತೇಜಕವಾಗಿ ಇರುತ್ತದೆ . ಆದರೆ ನೀನು ಪುಟಗಳನ್ನೇ ತಿರುವದಿದ್ದರೆ, ನಿನಗೆ ಎಂದು ತಿಳಿಯದು ಮುಂದೇನಿದೆ ಎಂದು, ದುಃಖದಿಂದ ಕುಗ್ಗದೆ ಖುಷಿಯಿಂದ ಹಿಗ್ಗದೇ ಪ್ರತಿ ಪುಟವು ನಿನ್ನದೇ ಎಂದು ನಡೆಸು ಜೀವನ ..

ಜೀವನದಲ್ಲಿ ಯಾವತ್ತೂ ನಟಿಸಬೇಡ .ನೀನು ಹೇಗಿದ್ದೀಯಾ ಹಾಗೆ ಇರು .ಯಾರನ್ನು ಮೆಚ್ಚಿಸುವ ಪ್ರಯತ್ನ ಮಾಡಬೇಡ , ಏಕೆಂದರೆ ನಟನೆ ಒಮ್ಮೆ ಅಭ್ಯಾಸವಾದರೆ ಜೀವನಪೂರ್ತಿ ನಟಿಸುತ್ತಲೇ ಇರಬೇಕಾಗುತ್ತದೆ .

ಯಾರಾದರೂ ನಿಮ್ಮ ಬಳಿ ಬಂದು ತಮ್ಮ ಸಮಸ್ಯೆಯನ್ನು ನಿಮ್ಮೆದುರು ವ್ಯಕ್ತಪಡಿಸುತ್ತಾನೆ ಅಂದರೆ… ದೇವರಲ್ಲಿ ಇರುವಂತಹ ಪೂರ್ಣವಿಶ್ವಾಸ ಅವನಿಗೆ ನಿಮ್ಮ ಮೇಲಿದೆ ಎಂದು ಅರ್ಥ ….. ! ಆ ವಿಶ್ವಾಸಕ್ಕೆ ಸೂಕ್ತ ಮೌಲ್ಯ ಕೊಡಿ,ಜೀವನ ಕಲಿಸಿದ ಪಾಠಕ್ಕಿಂತ , ನಾವುನಂಬಿದವರು ಕಲಿಸಿದ ಪಾಠವೇ ಹೆಚ್ಚು.

ಜನರ ಗಮನ ಸೆಳೆಯುವುದಕ್ಕಾಗಿ ನಿನ್ನ ಗೌರವವನ್ನು ಎಂದಿಗೂ ಹಾಳು ಮಾಡಿಕೊಳ್ಳಬೇಡ .ರೂಪ ಆಗಲಿ … ರೂಪಾಯಿಯಾಗಲಿ ತುಂಬಾ ದಿನ ಇರುವುದಿಲ್ಲ ….ಮನುಷ್ಯನ ಒಳ್ಳೆಯತನ ಅನ್ನೋದು ಮಾತ್ರ ಶಾಶ್ವತ…

ಕಾಲಿಗೆ ಆದ ಗಾಯ ಹೇಗೆ ನಡೆಯಬೇಕೆಂದು ಕಲಿಸಿಕೊಟ್ಟರೆ , ಮನಸ್ಸಿಗೆ ಆದ ಗಾಯ ಹೇಗೆ ಬದುಕಬೇಕೆಂದು ಕಲಿಸಿಕೊಡುತ್ತದೆ .

ಗೆದ್ಧ ವ್ಯಕ್ತಿಗೆ ಚಪ್ಪಾಳೆ ಹೊಡೆಯುವವರು ದೊಡ್ಡ ವ್ಯಕ್ತಿಗಳು ಆಗುವುದಿಲ್ಲ .ಬಿದ್ದ ವ್ಯಕ್ತಿಯನ್ನು ಕೈಹಿಡಿದು ಎತ್ತುವ ವರು ದೊಡ್ಡವರಾಗುತ್ತಾರೆ .ವ್ಯಕ್ತಿಗಿಂತ ವ್ಯಕ್ತಿತ್ವ ದೊಡ್ಡದು .

ತಿಳುವಳಿಕೆ ಇರುವ ಜನರು ಯಾರೊಂದಿಗೂ ಸೇಡು ತೀರಿಸಿ ಕೊಳ್ಳುವುದಿಲ್ಲ . ಏಕೆಂದರೆ ಕೊಳೆತ ಹಣ್ಣು ತಾನಾಗಿಯೇ ಮಣ್ಣಲ್ಲಿ ಮಣ್ಣಾಗುತ್ತದೆ ಅಂದುಕೊಂಡು ಸಮಾಧಾನದಿಂದ ಇರುತ್ತಾರೆ .

ಜನರ ಗಮನ ಸೆಳೆಯುವುದಕ್ಕಾಗಿ ಗೌರವವನ್ನು ಎಂದಿಗೂ ಹಾಳು ಮಾಡಿಕೊಳ್ಳಬೇಡ .

“ವಿಷ ” ಹಾಗೂ ”ವೇಷ ” ಈ ಎರಡು ಕೂಡ ಒಂದೇ . ಯಾಕೆಂದರೆ, ವಿಷ ಮನುಷ್ಯನನ್ನು ಕೊಲ್ಲುತ್ತದೆ. ವೇಷ ಮನಸ್ಸನ್ನು ಕೊಲ್ಲುತ್ತದೆ . . . !

ಯಾರ ವಿಷಯದಲ್ಲೂ, ಯಾವ ವಿಷಯವನ್ನು ಅತಿಯಾದ ಆತ್ಮವಿಶ್ವಾಸ , ನಂಬಿಕೆ, ಪ್ರೀತಿ ಒಳ್ಳೆಯದಲ್ಲ. ಯಾಕೆಂದರೆ ಯಾರು ಯಾವಾಗ ಬದಲಾಗುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ .

ಜೀವನದಲ್ಲಿ ಬೆಳೆಯಬೇಕು ಎಂದರೆ, ಕೆಲವೊಮ್ಮೆ ಕೆಳಗೆ ಬೀಳಲೇ ಬೇಕು . ಏಕೆಂದರೆ, ಬದುಕಿನ ಶ್ರೇಷ್ಠ ಪಾಠಗಳು ತಿಳಿಯುವುದು ನೋವಿನಲ್ಲಿ ಮಾತ್ರ .

Leave a Comment