ಊಟ ಮಾಡುವಾಗ ಈ ತಪ್ಪುಗಳು ಆಗಲೇಬಾರದು ಎಚ್ಚರ…!!! ಊಟಕ್ಕೆ ಕುಳಿತುಕೊಳ್ಳುವ ಮೊದಲು ಬಾಯಿ ಮುಕ್ಕಳಿಸಿಕೊಂಡು ಶುಚಿಯಾಗಿ ಕೈ ತೊಳೆಯ ತೊಳೆದುಕೊಳ್ಳಬೇಕು…. ಊಟಕ್ಕೆ ಕುಳಿತುಕೊಳ್ಳುವ ಜಾಗ ಶುಚಿಯಾಗಿರಬೇಕು…
ಊಟಕ್ಕೆ ಕುಳಿತಾಗ ತಲೆಯ ಮೇಲೆ ಪೇಟಾ ಅಥವಾ ಟೋಪಿ ಇರಬಾರದು. ಊಟದ ತಟ್ಟೆ ಅಥವಾ ಊಟದ ಎಲೆ, ಶುಚಿಯಾಗಿದ್ದರೂ ಮತ್ತೊಮ್ಮೆ ಸ್ವಲ್ಪ ನೀರಿನಿಂದ ತೊಳೆಯಬೇಕು…ಊಟ ಮಾಡುವ ಮೊದಲು ದೇವರನ್ನು ಸ್ಮರಿಸಿ ತುತ್ತನ್ನು ಕಣ್ಣಿಗೆ ಒತ್ತಿಕೊಂಡು ನಂತರ ಊಟ ಮಾಡಬೇಕು.
ಚಪ್ಪಲಿಗಳನ್ನು ಅಥವಾ ಪಾದರಕ್ಷೆಗಳನ್ನು ಹಾಕಿಕೊಂಡು ಊಟಕ್ಕೆ ಕುಳಿತುಕೊಳ್ಳಬಾರದು…ಗಂಡಸರು ಊಟ ಅಥವಾ ತಿಂಡಿ ತಿನ್ನುತ್ತಿರುವಾಗ ಗೃಹಿಣೆಯು ಹಾಲಿಗೆ ಹೆಪ್ಪು ಹಾಕಬಾರದು, ಇದರಿಂದ ಗಂಡ ಹೆಂಡತಿ ಮಧ್ಯೆ ಹುಳಿ ಹಾಕಿದ ಹಾಗೆ ಎನ್ನುತ್ತಾರೆ ಹಿರಿಯರು…
ಊಟದ ತಟ್ಟೆಯಲ್ಲಿ ಉಪ್ಪನ್ನು ತಪ್ಪದೇ ಬಡಿಸಬೇಕು ಇದರಿಂದ ಊಟ ಮಾಡಿದವರಿಗೆ ಕೆಟ್ಟ ದೃಷ್ಟಿ ತಾಗುವುದಿಲ್ಲ, ಕೆಲವೊಬ್ಬರು ಎಷ್ಟೊಂದು ಊಟ ಮಾಡುತ್ತಾರೆ ಎಂದು ಅಂದುಕೊಂಡರು ಆ ಕೆಟ್ಟ ದೃಷ್ಟಿ ಉಪ್ಪಿನ ಮೇಲೆ ಹೋಗುತ್ತದೆ…
ಊಟ ಮಾಡುವಾಗ ಬೇರೆಯವರು ಅತ್ತ ಇತ್ತ ಓಡಾಡಬಾರದು…ಊಟ ಮಾಡುವ ಸಮಯದಲ್ಲಿ ಕಸವನ್ನು ಗುಡಿಸಬಾರದು…ನಿದ್ರೆ ಕಣ್ಣಿನಲ್ಲಿ ತೂಕಡಿಸುತ್ತಾ ಊಟ ಮಾಡಬಾರದು…ನೀರನ್ನು ಕಚ್ಚಿ ಕುಡಿಯಬಾರದು ತಲೆ ಮೇಲೆತ್ತಿ ಕುಡಿಯಬೇಕು…
ಊಟ ಮಾಡುವಾಗ ಪದೇ ಪದೇ ತಲೆಯೆತ್ತಿ ನೋಡಬಾರದು.ನಾವು ಊಟ ತಿನ್ನುವ ಶಬ್ದ ಪಕ್ಕದಲ್ಲಿರುವ ವ್ಯಕ್ತಿಗೂ ಕೇಳಬಾರದು (ಅಂದರೆ ಲೊಚ್ ಲೊಚ್ ಅಂತ ಶಬ್ದ ಮಾಡಿ ತಿನ್ನಬಾರದು)ಊಟ ಮಾಡುವಾಗ ನೆಲದ ಮೇಲೆ ಎಡಗೈ ಊರಿರಬಾರದು…
ತಿನ್ನುವ ಊಟದ ತುತ್ತನ್ನು ಎಣಿಸಬಾರದು…ಕುಳಿತುಕೊಂಡು ಸಮಾಧಾನವಾಗಿ ಊಟ ಮಾಡಬೇಕು…ನಿಂತುಕೊಂಡು ಓಡಾಡಿಕೊಂಡು ಊಟ ಮಾಡಬಾರದು….ಊಟ ಮಾಡುವಾಗ ನಗುವುದಾಗಲಿ ಮಾತನಾಡವುದಾಗಲಿ ಮಾಡಬಾರದು…
ತಿನ್ನುವದುತ್ತನ್ನು ಕೈಯಲ್ಲಿ ತೂಕ ಮಾಡಿಕೊಂಡು ತಿನ್ನಬಾರದು…ಊಟದ ತಟ್ಟೆ ಅಥವಾ ಎಲೆಯ ಸುತ್ತಲೂ ಅನ್ನದ ಅಗುಳನ್ನು ಚೆಲ್ಲಬಾರದು…ಊಟದ ಮಧ್ಯ ನೀರು ಕುಡಿಯಬಾರದು, ಊಟ ಮಾಡಿ ಮುಗಿಸಿದ ನಂತರ ನೀರು ಕುಡಿಯಬೇಕು…
ತಟ್ಟೆಯಲ್ಲಿ ಸ್ವಲ್ಪವೂ ಅನ್ನ ಬಿಡದೇ ತಿನ್ನಬೇಕು…ಊಟ ಮುಗಿದ ಕೂಡಲೇ ಊಟಕ್ಕೆ ಕುಳಿತ ಜಾಗದಿಂದ ಎದ್ದೇಳಬೇಕು…ಎಂಜಲು ಕೈಯಲ್ಲಿ ಊಟದ ತಟ್ಟೆ ಅಥವಾ ಊಟದ ಎಲೆ ಎತ್ತಬಾರದು ಎಂಜಲು ತಟ್ಟೆ ಎತ್ತಬೇಕು….
ಊಟ ಮಾಡಿದ ಕೂಡಲೇ ಕೈ ತೊಳೆದುಕೊಳ್ಳಬೇಕು ಎಂಜಲು ಕೈ ಒಣಗಿಸಬಾರದು….ತಲೆ ಬಗ್ಗಿಸಿಕೊಂಡು ಊಟ ತಿನ್ನಬೇಕು…ಊಟ ಮಾಡಿದ ತಕ್ಷಣ ಮಲಗಬಾರದು, ನಾಲ್ಕು ಹೆಜ್ಜೆ ನಡೆಯಬೇಕು…ಊಟ ಮಾಡಿದ ನಂತರ ಬಾಯಿ ಮುಕ್ಕಳಿಸಬೇಕು….