ಯಾವ ಮನೆಯ ಸುಖಶಾಂತಿ ಸಂಮೃದ್ಧಿಯು ಆ ಮನೆಯ ಮಹಿಳೆಯರ ಮೇಲೆ ಅವಲಂಬಿತವಾಗಿರುತ್ತದೆ. ಯಾವ ಮನೆಯಲ್ಲಿ ಮಹಿಳೆಯರು ಇರುವುದಿಲ್ಲವೋ ಆ ಮನೆಯು ಮನೆ ಅನಿಸುವುದಿಲ್ಲ. ಮಹಿಳೆಯರು ಇದ್ದಾಗ ಮಾತ್ರ ಆ ಮನೆಗೆ ಶೋಭೆ ಬರುತ್ತದೆ. ಮದುವೆ ಯಾವ ರೀತಿ ಬಂಧನವಾಗಿದೆ ಎಂದರೆ ಮಹಿಳೆಯರು ಮತ್ತು ಪುರುಷರು ಏಳು ಜನ್ಮಗಳ ಅನುಬಂಧದಿಂದ ಜೊತೆಯಾಗಿರುತ್ತಾರೆ. ಮದುವೆಗೆ ಮುಂಚೆ ಪುರುಷ ಅಥವಾ ಮಹಿಳೆಯರಾಗಲೀ ತಮ್ಮ ಜೀವನ ಸಂಗಾತಿಗಳ ಬಗ್ಗೆ ಹಲವಾರು ಅಪೇಕ್ಷೆಗಳನ್ನು ಹೊಂದಿರುತ್ತಾರೆ.
ಯಾವಾಗ ಮಹಿಳೆಯರು ತಮ್ಮ ಜೀವನ ಸಂಗಾತಿಯ ಕಲ್ಪನೆಯನ್ನು ಮಾಡಿಕೊಳ್ಳುತ್ತಾರೋ ಅವರ ಮನಸ್ಸಿನಲ್ಲಿ ಗಂಡನ ರೂಪದಲ್ಲಿ ಯಾವ ರೀತಿಯ ಜೋಡಿಯ ಕಲ್ಪನೆ ಇರುತ್ತದೆಯೋ ತಾನು ಮದುವೆಯಾಗುವ ಗಂಡ ನನ್ನ ಮೇಲೆ ಕಾಳಜಿವಹಿಸುವಂತಹ ಗಂಡ ಇರಬೇಕು ಎಂದು ಇಷ್ಟಪಡುತ್ತಾರೆ. ಯಾವಾಗ ಪುರುಷನು ತನ್ನ ಕೈ ಹಿಡಿಯುವ ಮಹಿಳೆಯು ತನ್ನ ಮನೆಯನ್ನು ಪ್ರೀತಿಯಿಂದ ತುಂಬಲಿ ಎಂದು ಇಷ್ಟಪಟ್ಟಿರುತ್ತಾರೆ.
ಹಿರಿಯರಿಗೆ ಗೌರವ ಕೊಡುವಂತಹವಳು ಆಗಿರಲಿ ಎಂದು ಇಷ್ಟಪಡುತ್ತಾರೆ. ಆದರೇ ಮದುವೆಗೂ ಮುನ್ನ ಯಾರ ಬಗ್ಗೆಯೂ ತಿಳಿದುಕೊಳ್ಳಲು ಸಾಧ್ಯವಾಗುವುದಿಲ್ಲ. ಸ್ತ್ರೀಯರು ಗುಣಶೀಲರು, ಭಾಗ್ಯಶಾಲಿಗಳಾಗಿರುತ್ತಾರಾ? ಎಂಬುದನ್ನು ಸಾಮುದ್ರಿಕಾ ಶಾಸ್ತ್ರದಲ್ಲಿ ಮಹಿಳೆಯರ ಕೆಲವು ಅಂಗಗಳ ಬಗ್ಗೆ ತಿಳಿಸಿದ್ದಾರೆ. ಈ ಶಾಸ್ತ್ರದ ಪ್ರಕಾರ ಅವರ ಸ್ವಭಾವ, ಚರಿತ್ರೆಯ ಬಗ್ಗೆ ತಿಳಿದುಕೊಳ್ಳಬಹುದು.
ಉದ್ದವಾದ ತಲೆಕೂದಲುಗಳು: ಯಾವ ಮಹಿಳೆಯರ ಕೂದಲುಗಳು ದಟ್ಟವಾಗಿ, ಉದ್ದವಾಗಿ ಇರುತ್ತದೆಯೋ ಇಂಥಹ ಮಹಿಳೆಯರು ತುಂಬಾ ಅದೃಷ್ಟವಂತರು ಎಂದು ಹೇಳಬಹುದು. ತಾಯಿ ಲಕ್ಷ್ಮಿದೇವಿಯ ಫೋಟೋವನ್ನು ನೋಡಿದರೇ ನಿಮಗೆ ಗೊತ್ತಾಗುತ್ತದೆ. ತಾಯಿಯ ತಲೆ ಕೂದಲು ಉದ್ದವಾಗಿ ದಟ್ಟವಾಗಿ ಇರುತ್ತದೆ. ಇದು ಸಂಮೃದ್ಧಿಯ ಸಂಕೇತವಾಗಿದೆ.
ದುಂಡಾದ ಮುಖ: ಯಾವ ಮಹಿಳೆಯರ ಮುಖ ದುಂಡಾಗಿರುತ್ತದೆಯೋ, ದುಂಡಾದ ಕಣ್ಣುಗಳನ್ನು ಹೊಂದಿರುತ್ತಾರೋ ಅವರು ತುಂಬಾನೇ ಕರುಣಾಮಯಿಯಾಗಿರುತ್ತಾರೆ. ಇಂಥಹವರು ನಿಯತ್ತಿನಿಂದ ಇರುತ್ತಾರೆ. ಯಾರ ಮನೆಗೆ ಇವರು ಸೊಸೆಯಾಗಿರುತ್ತಾರೋ ಅಂತಹವರ ಮನೆಯು ಸಂಮೃದ್ಧಿಯಿಂದ ಕೂಡಿರುತ್ತದೆ. ಇವರ ಆಗಮನದಿಂದ ಕುಟುಂಬದ ಅದೃಷ್ಟವು ಬದಲಾಗುತ್ತದೆ.
ಅಗಲವಾದ ಹಣೆ: ಯಾವ ಮಹಿಳೆಯರ ಹಣೆಯು ಅಗಲವಾಗಿರುತ್ತದೆಯೋ ಇಂಥಹವರು ಅದೃಷ್ಟವನ್ನು ಹೊಂದಿರುತ್ತಾರೆ. ಕುಟುಂಬದವರಿಗೂ ಅತ್ಯಂತ ಶುಭವಾಗಿರುತ್ತಾರೆ.
ಮೂಗಿನ ಮೇಲೆ ಮಚ್ಚೆ: ಯಾವ ಮಹಿಳೆಯರ ಮೂಗಿನ ಮೇಲೆ ಮಚ್ಚೆ ಇರುತ್ತದೆಯೋ ಅವರು ತುಂಬಾ ಅದೃಷ್ಟವಂತರು ಎಂದು ಹೇಳಬಹುದು. ಇವರು ಸುಖ ಸಂಮೃದ್ಧಿಯಿಂದ ಜೀವನ ಸಾಗಿಸುತ್ತಾರೆ. ಇಂತಹ ಮಹಿಳೆಯರ ಕಾರಣದಿಂದಾಗಿ ಎರಡು ಕುಲದಲ್ಲಿ ಸುಖ ಸಂಮೃದ್ಧಿ ಬರುತ್ತದೆ.
ಶುಭ್ರವಾದ ಹಲ್ಲು: ಯಾವ ಮಹಿಳೆಯಲ್ಲಿ ಹಲ್ಲುಗಳು ಶುಭ್ರವಾಗಿ, ಒಂದೇ ರೀತಿಯಾಗಿರುತ್ತದೆಯೋ ಮತ್ತು ಮೇಲ್ಭಾಗದಲ್ಲಿರುವ ಎರಡು ಹಲ್ಲುಗಳ ನಡುವೆ ಗ್ಯಾಪ್ ಇದ್ದರೇ, ನಾಲಿಗೆ ತೆಳುವಾಗಿ ಗುಲಾಬಿ ವರ್ಣದಲ್ಲಿದ್ದರೇ, ತುಟಿಗಳು ಮೃದು ಗುಲಾಬಿ ಬಣ್ಣದಲ್ಲಿದ್ದರೇ ಇಂತಹ ಮಹಿಳೆಯರು ಅದೃಷ್ಟವಂತರೆಂದು ಹೇಳಲಾಗುತ್ತದೆ. ಇಂತಹ ಮಹಿಳೆಯರು ತಮ್ಮ ಕುಟುಂಬವನ್ನು ಬಹಳ ಕಾಳಜಿಯಿಂದ ನೋಡಿಕೊಳ್ಳುತ್ತಾರೆ.
ಕುತ್ತಿಗೆ ಉದ್ದ ಮತ್ತು ಸಣ್ಣ: ಯಾವ ಮಹಿಳೆಯರ ಕುತ್ತಿಗೆ ಉದ್ದ ಮತ್ತು ಸಣ್ಣವಾಗಿರುತ್ತದೆಯೋ ಇಂತಹ ಮಹಿಳೆಯರು ಭಾಗ್ಯಶಾಲಿಗಳಾಗಿರುತ್ತಾರೆ. ಇವರು ಕೈಯಾಕಿದ ಎಲ್ಲಾ ಕೆಲಸಗಳು ಯಶಸ್ವಿಯಾಗುತ್ತದೆ.
ಮುಂದಕ್ಕೆ ಬಾಗಿದ ಭುಜ: ಯಾವ ಮಹಿಳೆಯರ ಭುಜಗಳು ಮುಂದಕ್ಕೆ ಬಾಗಿರುತ್ತವೆಯೋ , ಭುಜ ತೋಳಗಳು ಉದ್ದವಾಗಿದ್ದರೇ, ಅಂಗೈಗಳು ಮೃದುವಾಗಿ ರವಿವರ್ಣದಲ್ಲಿದ್ದರೇ, ಶಂಖ, ತ್ರಿಶೂಲದಂತಹ ಶುಭ ಚಿಹ್ನೆಗಳು ಇದ್ದರೇ , ಕೈಬೆರಳುಗಳು ಉದ್ದವಾಗಿ, ಸುಂದರವಾಗಿದ್ದರೇ ಇಂತಹ ಮಹಿಳೆಯ ಈ ಚಿಹ್ನೆಗಳಿಂದ ಗಂಡನ ಅದೃಷ್ಟ ಚೆನ್ನಾಗಿರುತ್ತದೆ. ಈ ಮಹಿಳೆಯರು ಹಣವನ್ನು ಸರಿಯಾಗಿ ಖರ್ಚು ಮಾಡುತ್ತಾರೆ. ಹಣವನ್ನು ಕೂಡಿ ಇಡುತ್ತಾರೆ.
ಪಾದಗಳು ಉದ್ದವಾಗಿರುವಿಕೆ: ಯಾವ ಮಹಿಳೆಯರಲ್ಲಿ ಪಾದಗಳು ಉದ್ದವಾಗಿ ಮೃದುವಾಗಿ ಚೆನ್ನಾಗಿರುತ್ತವೆಯೋ , ಪಾದದ ಬೆರಳುಗಳು ಒಂದಕ್ಕೊಂದು ಹತ್ತಿರದಲ್ಲಿದ್ದರೇ ಇಂತಹ ಮಹಿಳೆಯರನ್ನು ಮಹಾಲಕ್ಷ್ಮಿದೇವಿಯ ಸ್ವರೂಪವೆಂದು ಹೇಳುತ್ತಾರೆ.
ಹೆಬ್ಬೆಟ್ಟಿನ ಗುರುತು: ಯಾವ ಸ್ತ್ರೀಯ ಹೆಬ್ಬೆಟ್ಟಿನ ತುದಿಯಲ್ಲಿ ಅರ್ಧ ಚಂದ್ರಾಕೃತಿಯ ಗುರುತು ಮೂಡುತ್ತದೆಯೋ ಇಂತಹ ಮಹಿಳೆಯರನ್ನು ಅತ್ಯಂತ ಶುಭವೆಂದು ಪರಿಗಣಿಸಲಾಗಿದೆ.
ಮಹಿಳೆಯರಿಗೆ ಕೆಲವೊಂದು ಭಾಗದಲ್ಲಿ ಮಚ್ಚೆ ಇದ್ದರೇ ಶುಭವಾಗುತ್ತದೆ. ಅವೆಂದರೆ ಮಹಿಳೆಯ ಹಣೆಯ ಮೇಲೆ ಮಚ್ಚೆ ಇದ್ದರೇ ಆತ್ಮವಿಶ್ವಾಸ ಹೆಚ್ಚಾಗಿರುತ್ತದೆ ಮತ್ತು ಜೀವನದಲ್ಲಿ ಯಶಸ್ಸನ್ನು ಕಾಣುತ್ತಾರೆ. ಹಣೆಯ ಮಧ್ಯದಲ್ಲಿ ಮಚ್ಚೆ ಇದ್ದರೇ ಒಳ್ಳೆಯ ಪ್ರಯಾಣಗಳನ್ನು ಮಾಡುತ್ತಾರೆ. ಕುತ್ತಿಗೆಯ ಮೇಲೆ ಇರುವ ಮಚ್ಚೆಯು ಧೈರ್ಯದ ಸಂಕೇತವಾಗಿದೆ. ಇಂತಹ ಮಹಿಳೆಯರು ಜೀವನದಲ್ಲಿ ತುಂಬಾ ಶ್ರಮಪಡುವಂತಹವರು ಆಗಿದ್ದಾರೆ. ಸೊಂಟದ ಮೇಲೆ ಇರುವ ಮಚ್ಚೆಗಳು ಧನಸಂಪತ್ತಿನ ಪ್ರತೀಕವಾಗಿದೆ.
ಇಂತಹ ವ್ಯಕ್ತಿಗಳು ತುಂಬಾ ಸಮಯದವರೆಗೆ ಅಧ್ಯಯನ ಮಾಡಿದರೇ ಒಳ್ಳೆಯ ಪದವಿಗಳನ್ನು ಪಡೆದುಕೊಳ್ಳುತ್ತಾರೆ. ಹುಬ್ಬುಗಳ ನಡುವೆ ಮಚ್ಚೆ ಇದ್ದರೇ ಇಂತಹ ಮಹಿಳೆಯರು ತುಂಬಾ ಅದೃಷ್ಟವಂತರಾಗಿರುತ್ತಾರೆ. ಎಡ ಮತ್ತು ಬಲ ಹುಬ್ಬಿನ ತುದಿಯಲ್ಲಿ ಮಚ್ಚೆ ಇದ್ದರೇ ಇಂತಹ ಮಹಿಳೆಯರು ಜೀವನದಲ್ಲಿ ಕಠಿಣವಾದುದ್ದನ್ನು ಎದುರಿಸುವುದಿಲ್ಲ. ಹೆಗಲಿನ ಮೇಲೆ ಮಚ್ಚೆ ಇದ್ದರೆ ಸುಖ ಶಾಂತಿಯಿಂದ ಜೀವನ ನಡೆಸುತ್ತಾರೆ. ಇಂತಹ ಮಹಿಳೆಯರು ಸ್ವಭಾವದಿಂದ ವಿನಮ್ರವಾಗಿರುತ್ತಾರೆ.
ಯಾವ ಮಹಿಳೆಯರ ಬಲಗಾಲಿನ ಬೆರಳುಗಳಲ್ಲಿ ಮಚ್ಚೆ ಇರುತ್ತದೆಯೋ ಇಂತಹವರು ಬುದ್ಧಿವಂತರು ಮತ್ತು ಜೀವನದಲ್ಲಿ ಯಶಸ್ಸನ್ನು ಗಳಿಸುತ್ತಾರೆ. ತುಟಿಗಳ ಮೇಲೆ ಕೇಶಗಳು ಇರುತ್ತದೆಯೋ ಅಂತಹ ಮಹಿಳೆಯರು ಸಿಟ್ಟನ್ನು ಹೊಂದಿರುತ್ತಾರೆ. ಇಂತಹ ಮಹಿಳೆಯರು ತಮ್ಮ ಮಾತುಗಳನ್ನು ಒಪ್ಪಿಸುವಂತಹ ಮತ್ತು ಗಂಡನ ಮೇಲೆ ಅಧಿಕಾರವನ್ನು ಚಲಾಯಿಸುವಂತಹವರು ಆಗಿರುತ್ತಾರೆ. ಕೆಲವೊಮ್ಮೆ ಇವರ ಸ್ವಭಾವ ಸ್ವಲ್ಪ ಕ್ರೂರವಾಗುತ್ತದೆ. ಇವರು ತಮ್ಮ ಮಾತುಗಳನ್ನು ಒಪ್ಪಿಸಲು ಯಾವ ಮಟ್ಟಿಗೂ ಹೋಗುತ್ತಾರೆ. ಇವರ ಮಾತನ್ನು ಕೇಳದೇ ಇದ್ದರೇ ಕೋಪಿಸಿಕೊಳ್ಳುತ್ತಾರೆ. ಆದ್ದರಿಂದ ತುಟಿಯ ಮೇಲೆ ಇರುವ ಕೇಶಗಳನ್ನು ತೆಗೆದು ಹಾಕುವುದು ಒಳ್ಳೆಯದು.