ನಮಸ್ಕಾರ ಸ್ನೇಹಿತರೆ ಎಲ್ಲರಿಗೂ ಮನೆಯ ಹತ್ತಿರ ಅಥವಾ ರಸ್ತೆಯ ಪಕ್ಕದಲ್ಲಿ ಕಾಣಿಸುವ ಎಕ್ಕದ ಗಿಡ ಒಂದು ಔಷಧೀಯ ಗಿಡ ಅಂತ ತುಂಬಾ ಜನರಿಗೆ ಗೊತ್ತಿಲ್ಲ ನಮ್ಮಲ್ಲಿ ಈಗಲೂ ಸಹ ಹಳ್ಳಿಗಳಲ್ಲಿ ಇದನ್ನು ಔಷಧಿಯ ಗಿಡ ಅಂತ ಬೆಳೆಸುತ್ತಾ ಬಂದಿದ್ದಾರೆ ಈ ಗಿಡದಲ್ಲಿ ಎರಡು ಪ್ರಭೇದ ಇದೆ ಅವು ಬಿಳಿ ಹಾಗೂ ಕೆಂಪು ಗಿಡಗಳು ಈ ಗಿಡದ ಎಲೆ ವಿನಾಯಕ ಚತುರ್ಥಿಗೆ
ಬೇಕಾದ ಶ್ರೇಷ್ಠ ಎಲೆಯಾಗಿದೆ ಈ ಗಿಡದಲ್ಲಿ ಬಿಳಿ ಎಕ್ಕದ ಗಿಡ ಕಾಣಿಸುವುದು ತುಂಬಾ ಕಡಿಮೆ ರಥಸಪ್ತಮಿಯ ದಿನ ಎಕ್ಕದ ಎಲೆಯನ್ನು ಧರಿಸಿ ಸ್ನಾನ ಮಾಡಿದರೆ ತುಂಬಾ ಒಳ್ಳೆಯ ಪುಣ್ಯ ಬರುತ್ತದೆ ಅಂತ ನಮ್ಮ ಹಿಂದೂ ಪುರಾಣದಲ್ಲಿ ಹೇಳಿದ್ದಾರೆ ಈ ಗಿಡವನ್ನು ಆಗಿನ ಕಾಲದಲ್ಲಿ ಆಯುರ್ವೇದದ ಗಿಡವಾಗಿ ಬೆಳೆಸುತ್ತಾ ಬಂದಿದ್ದರು ಇದು ಶರೀರದ ಮೂಳೆ ಹಾಗೂ
ಚರ್ಮಕ್ಕೆ ರಾಮಬಾಣ ಇದ್ದಹಾಗೆ ಒಂದು ಮಾತನ್ನು ಎಲ್ಲರೂ ನೆನಪಿನಲ್ಲಿ ಇಟ್ಟುಕೊಳ್ಳಿ ಎಕ್ಕದ ಗಿಡದ ಎಲೆಯನ್ನು ಕೊಯ್ಯುವಾಗ ಆ ಎಕ್ಕದ ಗಿಡದ ಹಾಲು ಕಣ್ಣಿಗೆ ಬೀಳದಂತೆ ನೋಡಿಕೊಳ್ಳುವುದು ನಿಮ್ಮ ಜವಾಬ್ದಾರಿ ಆಗಿರುತ್ತದೆ ಯಾಕೆ ಅಂದರೆ ಎಕ್ಕದ ಗಿಡದ ಹಾಲು ವಿಷಪೂರಿತ ವಿಷಯಕ್ಕೆ ಬರುವುದಾದರೆ ಈ ಗಿಡದ ಎಲೆಯನ್ನು ತೆಗೆದುಕೊಂಡು ಸ್ವಲ್ಪ ಉಪ್ಪು ಬೆರೆಸಿ
ಪೇಸ್ಟ್ ಮಾಡಿಕೊಂಡು ಮೂಳೆ ನೋವು ಇರುವ ಜಾಗಕ್ಕೆ ಹಚ್ಚಿದರೆ ನೋವು ಕಡಿಮೆಯಾಗುತ್ತದೆ ಎಷ್ಟೇ ಗಾಯಗಳಾದರೂ ಇದರ ಎಲೆಯನ್ನು ಒಣಗಿಸಿ, ಪೌಡರ್ ಮಾಡಿಕೊಂಡು ಗಾಯಗಳ ಮೇಲೆ ಹಚ್ಚಿದರೆ ಅವು ಬೇಗ ವಾಸಿಯಾಗುತ್ತದೆ ಮತ್ತೊಂದು ವಿಷಯ ಏನೆಂದರೆ ಭಯ ಬೀಳಿಸುವಂತಹ ಕನಸುಗಳು ಬಂದರೆ ಈ ಗಿಡದ ಬೇರನ್ನು ತಲೆಯ ದಿಂಬಿನ
ಕೆಳಗೆ ಇಟ್ಟು ಮಲಗಿಸುತ್ತಿದ್ದರು ಆಗಿನ ಕಾಲದ ಜನರು ಹೀಗೆ ಮಾಡುವುದರಿಂದ ಗ್ರಹದೋಷ ಕೂಡ ನಿವಾರಣೆ ಆಗುತ್ತದೆ ಅಂತ ನಂಬುತ್ತಿದ್ದರು ಸ್ನೇಹಿತರೆ ಬಿಳಿ ಎಕ್ಕದ ಬೇರಿನಲ್ಲಿ ಗಣಪತಿ ನೆಲೆಸಿದ್ದಾನೆ ಅಂತ ನಮ್ಮ ಹಿಂದೂ ಪುರಾಣಗಳ ನಂಬಿಕೆ ಅಷ್ಟೇ ಅಲ್ಲದೆ ಎಕ್ಕದ ಗಣಪತಿ ಪ್ರತಿಮೆಯನ್ನು ಅರಿಶಿಣದಿಂದ ನೆನೆಸಿ ಪ್ರತಿ ಬುಧವಾರ ಪೂಜೆ ಮಾಡುವುದರಿಂದ ನಮ್ಮ ಮನೆಯಲ್ಲಿರುವ ದುಷ್ಟ ಶಕ್ತಿ ಹಾಗೂ ಕಣ್ಣು ದೃಷ್ಟಿಯನ್ನು ಹೋಗಿಸುತ್ತದೆ ಎಂಬ ನಂಬಿಕೆ ಇದೆ
ಈಗಲೂ ಸಹ ಇದು ಚಾಲ್ತಿಯಲ್ಲಿದೆ ನಮ್ಮ ದೇಹದ ಮೇಲೆ ನೀರು ಗುಳ್ಳೆಗಳು ಬಂದರೆ ಈ ಎಕ್ಕದ ಗಿಡದ ಹಾಲನ್ನು ಮುಟ್ಟಿಸಿದರೆ ಗುಳ್ಳೆಗಳು ಒಣಗಿ ಹೋಗುತ್ತದೆ ಅಂತೆ ಗಿಡದ ಹಾಲು ವಿಷವಾದರೂ ಮುಖದ ಸೌಂದರ್ಯಕ್ಕೆ ತುಂಬಾ ಒಳ್ಳೆಯದು ಈ ಗಿಡದ ಹಾಲಿನಲ್ಲಿ ಅರಿಶಿಣ ಬೆರಸಿ ಕಣ್ಣಿಗೆ ಬೀಳದ ಹಾಗೆ ಮುಖಕ್ಕೆ ಹಚ್ಚುವುದರಿಂದ ಮುಖದ ಮೇಲೆ ಇರುವ ಕಪ್ಪು ಮಚ್ಚೆಗಳು ಮಾಯವಾಗುತ್ತದೆ
ಇದು ನೂರರಷ್ಟು ಸತ್ಯ ನಮಗೆ ಗಾಯವಾಗಿ ಗಾಯದ ಜಾಗದಲ್ಲಿ ರಕ್ತ ಜಾಸ್ತಿ ಬರುತ್ತಿದ್ದರೆ ಕೂಡಲೇ ಗಿಡದ ಹಾಲು ಹಚ್ಚಿದರೆ ರಕ್ತ ಹೊರಗೆ ಬರದಂತೆ ತಡೆಯುತ್ತದೆ ಆದರೆ ಯಾವುದೇ ಕಾರಣಕ್ಕೂ ಎಕ್ಕದ ಗಿಡದ ಹಾಲು ಕಣ್ಣಿಗೆ ಬೀಳದಂತೆ ಕಾಪಾಡಿಕೊಳ್ಳುವುದು ನಿಮ್ಮ ಜವಾಬ್ದಾರಿಯಾಗಿರುತ್ತದೆ ಯಾಕೆ ಅಂದರೆ ಈ ಗಿಡದ ಹಾಲು ಕಣ್ಣಿಗೆ ಹಾನಿಕಾರಕ ಸ್ನೇಹಿತರೆ ಈ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು