ರುದ್ರಾಕ್ಷಿ ರಾಶಿಯ ಅನುಸಾರವಾಗಿ ಹೇಗೆ ಮತ್ತು ಯಾವುದನ್ನ ಧರಿಸಿಕೊಳ್ಳಬೇಕು ಸ್ನೇಹಿತರೆ ರುದ್ರಾಕ್ಷಿಯ ವಿಷಯದ ಮೇಲೆ ಅನೇಕ ವಿಷಯಗಳು ಇದರ ಮಹತ್ವವನ್ನ ತಿಳಿಸಿಕೊಡುತ್ತವೆ. ರುದ್ರಾಕ್ಷಿಯು ಒಂದು ಅದ್ಭುತವಾದ ರತ್ನ ಆಗಿದೆ. ಇದು ಅನೇಕ ಪ್ರಕಾರದ ಲಾಭಗಳನ್ನ ಕೊಡುತ್ತದೆ. ರುದ್ರಾಕ್ಷಿಯಿಂದ ವ್ಯಕ್ತಿಯ ಮನಸ್ಸು ಪಾವನ ರೂಪವನ್ನು ಪಡೆದುಕೊಳ್ಳುತ್ತದೆ.
ಜೊತೆಗೆ ಇದರ ಮೂಲಕ ಮುಕ್ತಿಯ ಮಾರ್ಗವು ಕೂಡ ತೆರೆದುಕೊಳ್ಳುತ್ತದೆ. ಇದೇ ಒಂದು ಕಾರಣದಿಂದಾಗಿ ರುದ್ರಾಕ್ಷಿಯಿಂದ ಸಿಗುವಂತ ಲಾಭಗಳ ಬಗ್ಗೆ ಅನೇಕ ಪ್ರಕಾರದಲ್ಲಿ ಉಲ್ಲೇಖಿಸಿದ್ದಾರೆ. ರುದ್ರಾಕ್ಷಿಯು ಒಂದು ಸಾವಿರಾರು ಸಮಸ್ಯೆಗಳ ಸರಳವಾದ ಉಪಾಯ ಆಗಿದೆ. ಹಾಗಾದ್ರೆ ಬನ್ನಿ ಸ್ನೇಹಿತರೆ ರಾಶಿಯ ಅನುಸಾರವಾಗಿ ಯಾವ ವ್ಯಕ್ತಿಗಳು ಯಾವ ರೀತಿಯ ರುದ್ರಾಕ್ಷಿಯನ್ನ ಧರಿಸಿಕೊಳ್ಳಬಹುದು ತಿಳಿದುಕೊಳ್ಳೋಣ.
ಇದರಿಂದ ಹೊಸ ವೀಡಿಯೋಗಳನ್ನ ನೀವು ಮಿಸ್ ಮಾಡ್ದೆ ನೋಡಬಹುದು. ಹಾಗೆ ಭಕ್ತಿಯಿಂದ ಕಮೆಂಟ್ ನಲ್ಲಿ ಓಂ ನಮಃ ಶಿವಾಯ ಹರ ಹರ ಮಹಾದೇವ ಅಂತ ಬರೆಯಿರಿ. ಮೊದಲನೆಯದು ಮೇಷ ರಾಶಿ. ಮೇಷ ರಾಶಿಯ ಸ್ವಾಮಿ ಮಂಗಳಗ್ರಹ ಆಗಿದೆ. ಮೇಷ ರಾಶಿಯ ಜನರು ಮೂರು ಮುಖಗಳಿರುವಂತ ರುದ್ರಾಕ್ಷಿಯನ್ನ ಧರಿಸೋದು ಉತ್ತಮ ಅಂತ ತಿಳಿಯಲಾಗಿದೆ. ಇದರ ಸಂಬಂಧವು ಅಗ್ನಿ ದೇವರೊಂದಿಗೆ ಇರುತ್ತದೆ.
ಮೂರು ಮುಖ ಇರುವಂತಹ ರುದ್ರಾಕ್ಷಿಯನ್ನ ಧರಿಸಿಕೊಳ್ಳುವುದರಿಂದ ಹಿಂದಿನ ಜನ್ಮ ಮತ್ತು ಈ ಜನ್ಮದ ಪಾಪ ಕರ್ಮಗಳಿಂದ ಮುಕ್ತಿ ಸಿಗುತ್ತದೆ. ಇದಲ್ಲದೆ ನೆಗೆಟಿವ್ ವಿಚಾರಗಳು, ಅಪರಾಧದ ಭಾವನೆಗಳು, ಹೀನ ಭಾವನೆ ಇತ್ಯಾದಿಗಳು ಕಡಿಮೆಯಾಗುತ್ತವೆ. ಇಲ್ಲಿ ನಿಮ್ಮ ವ್ಯಕ್ತಿತ್ವದ ವಿಕಾಸವೂ ಆಗುತ್ತದೆ. ಜೊತೆಗೆ ಇದನ್ನ ಧರಿಸುವುದರಿಂದ ಬಿಪಿ, ದುರ್ಬಲತೆ ಮತ್ತು ಹೊಟ್ಟೆಗೆ ಸಂಬಂಧಪಟ್ಟಂತ ರೋಗಗಳಿಂದಲೂ ಸಹ ಮುಕ್ತಿ ಸಿಗುತ್ತದೆ. ಎರಡನೇದಾಗಿರೋದು ವೃಷಭ ರಾಶಿ.
ವೃಷಭ ರಾಶಿಯ ಸ್ವಾಮಿ ಶುಕ್ರ ದೇವರಾಗಿದ್ದಾರೆ. ವೃಷಭ ರಾಶಿಯ ಜನರು ಆರು ಮುಖಗಳಿರುವಂತ ರುದ್ರಾಕ್ಷಿಯನ್ನ ಧರಿಸೋದು ಉತ್ತಮ ಅಂತ ತಿಳಿಯಲಾಗಿದೆ. ಈ ರುದ್ರಾಕ್ಷಿಯ ಸೂಚಕ ಶಿವನ ಪುತ್ರ ಆದ ಕಾರ್ತಿಕ ಸ್ವಾಮಿ ಅಂತ ತಿಳಿಯಲಾಗಿದೆ. ಇದರಿಂದ ಬುದ್ಧಿಯ ವಿಕಾಸವೂ ಆಗುತ್ತದೆ. ವ್ಯಕ್ತಿಯ ಕುಶಲತೆ, ಇಚ್ಚಾ ಶಕ್ತಿ ಹೆಚ್ಚಾಗುತ್ತದೆ. ಜೊತೆಗೆ ಇದನ್ನ ಧರಿಸೋದ್ರಿಂದ ಶೌರ್ಯದ ಜೊತೆಗೆ ಪ್ರೇಮದ ಪ್ರಾಪ್ತಿಯು ಆಗುತ್ತದೆ.
ಒಂದು ವೇಳೆ ಇದರ ಔಷಧೀಯ ಗುಣಗಳ ಬಗ್ಗೆ ಹೇಳೋದಾದ್ರೆ ಇದರಿಂದ ನಿಮಗೆ ಅನೇಕ ಲಾಭಗಳೂ ಇವೆ. ಬಾಯಿಗೆ, ಗಂಟಲಿಗೆ ಸಂಬಂಧಪಟ್ಟಂತ ರೋಗಗಳು ಕೂಡ ಇಲ್ಲಿ ವಾಸಿಯಾಗುತ್ತವೆ. ಮೂರನೇದಾಗಿರೋದು ಮಿಥುನ ರಾಶಿ. ಮಿಥುನ ರಾಶಿಯ ಸ್ವಾಮಿ ಬುಧ ಗ್ರಹ ಅಂತ ತಿಳಿಯಲಾಗಿದೆ. ಮಿಥುನ ರಾಶಿಯ ಜನರು ನಾಲ್ಕು ಮುಖಗಳಿರುವಂತ ರುದ್ರಾಕ್ಷಿಯನ್ನ ಧರಿಸಿಕೊಳ್ಳೋದು ಉತ್ತಮವಾಗಿರತ್ತೆ.
ಈ ರುದ್ರಾಕ್ಷಿಗೆ ಬ್ರಹ್ಮದೇವರ ಆಶೀರ್ವಾದ ಸಿಕ್ಕಿದೆ. ನಾಲ್ಕು ಮುಖಗಳಿರುವಂತ ರುದ್ರಾಕ್ಷಿಯನ್ನ ಧರಿಸುವುದರಿಂದ ಮನುಷ್ಯರಿಗೆ ಮೇಧಾವಿಯೂ ಸಿಗುತ್ತದೆ ಜೊತೆಗೆ ಅವರು ತೇಜಸ್ವಿ ಕೂಡ ಆಗ್ತಾರೆ. ಇವರ ಮಾನಸಿಕ ಸಮತೋಲನ ಚೆನ್ನಾಗಿರುತ್ತದೆ. ಇವ್ರು ಟೆನ್ಶನ್, ಡಿಪ್ರೆಶನ್ ಅಂತ ವಿಷಯಗಳಿಂದ ಮುಕ್ತಿಯನ್ನ ಪಡೆದುಕೊಳ್ತಾರೆ. ಮತ್ತು ಇವರ ವಾಣಿಯಲ್ಲಿ ಮಧುರತೆ ಕಾಣುತ್ತದೆ. ಇನ್ನು ನಾಲ್ಕನೇದಾಗಿರೋದು ಕರ್ಕ ರಾಶಿ. ಕರ್ಕ ರಾಶಿಯ ಸ್ವಾಮಿ ಚಂದ್ರ ದೇವರು ಅಂತ ತಿಳಿಯಲಾಗಿದೆ.
ಕರ್ಕ ರಾಶಿಯ ಜನರು ದ್ವಿಮುಖಿ ರುದ್ರಾಕ್ಷಿಯನ್ನು ಧರಿಸೋದು ಉತ್ತಮ ಅಂತ ತಿಳಿಯಲಾಗಿದೆ. ಎರಡು ಮುಖಗಳಿರುವಂತ ದ್ವಿಮುಖಿ ರುದ್ರಾಕ್ಷಿಯನ್ನ ಶಿವನ ಅರ್ಧನಾರೀಶ್ವರ ರೂಪ ಅಂದ್ರೆ ಇಲ್ಲಿ ಶಿವ ಮತ್ತು ಶಕ್ತಿಯ ಸಂಯೋಗ ಇರುತ್ತದೆ. ಅವರ ವರ ಈ ರುದ್ರಾಕ್ಷಿಗೆ ಸಿಕ್ಕಿದೆ. ಪದ್ಮ ಪುರಾಣದ ಅನುಸಾರವಾಗಿ ದ್ವಿಮುಖಿ ರುದ್ರಾಕ್ಷಿಗೆ ಅಗ್ನಿಯ ವರವು ಕೂಡ ಸಿಕ್ಕಿದೆ. ಇದನ್ನ ಧರಿಸಿದಂತ ವ್ಯಕ್ತಿಗೆ ಯಜ್ಞ, ಹೋಮ ಇತ್ಯಾದಿಗಳಿಂದ ಸಿಗುವಂತಹ ಪುಣ್ಯಫಲ ಈ ವ್ಯಕ್ತಿಗೆ ಸಿಗುತ್ತದೆ.
ಈ ರುದ್ರಾಕ್ಷಿಯು ಕುಟುಂಬದಲ್ಲಿ ಸಂತೋಷ, ನೆಮ್ಮದಿಗಳನ್ನ ಹೆಚ್ಚಿಗೆ ಮಾಡುತ್ತದೆ. ವಿವಾಹ ಕಾರ್ಯಗಳಿಗಾಗಿ ಉತ್ತಮ ಅಂತ ತಿಳಿಯಲಾಗಿದೆ. ಐದನೇದಾಗಿರೋದು ಸಿಂಹ ರಾಶಿ. ಸಿಂಹ ರಾಶಿಯ ಸ್ವಾಮಿಯು ಸೂರ್ಯಗ್ರಹ ಅಂತ ತಿಳಿಯಲಾಗಿದೆ. ಸಿಂಹ ರಾಶಿಯ ಜನರು 12 ಮುಖಗಳಿರುವಂತ ರುದ್ರಾಕ್ಷಿಯನ್ನ ಧರಿಸೋದು ಉತ್ತಮ ಅಂತ ತಿಳಿಯಲಾಗಿದೆ. ಈ ರುದ್ರಾಕ್ಷಿಗೆ ಸೂರ್ಯ ದೇವರ ಆಶೀರ್ವಾದ ಸಿಕ್ಕಿದೆ. ಇದನ್ನ ಧರಿಸೋದ್ರಿಂದ ಯಾವುದೇ ಪ್ರಕಾರದ ಭಯದಿಂದ ಮುಕ್ತಿ ಸಿಗುತ್ತದೆ.
ಇದು ವ್ಯಕ್ತಿಯನ್ನ ನಿರ್ಭಯ ಮತ್ತು ನಿಸ್ಸಂಕಟ ಮಾಡುತ್ತದೆ. ಧರಿಸಿದಂತ ವ್ಯಕ್ತಿಯ ಆರ್ಥಿಕ ಪಕ್ಷವು ಶಕ್ತಿಶಾಲಿಯಾಗುತ್ತದೆ. ಇವರಿಗೆ ಬಡತನ ಕಾಡೋದಿಲ್ಲ. ಜೊತೆಗೆ ಹನ್ನೆರಡುಮುಖಿ ರುದ್ರಾಕ್ಷಿಯಿಂದ ಹೃದಯ, ತ್ವಚೆ ಮತ್ತು ಕಣ್ಣುಗಳ ರೋಗದ ನಿವಾರಣೆ ಕೂಡ ಆಗುತ್ತದೆ. ಆರನೇದಾಗಿರೋದು ಕನ್ಯಾ ರಾಶಿ. ಕನ್ಯಾ ರಾಶಿಯ ಸ್ವಾಮಿ ಬುಧ ಗ್ರಹ ಅಂತ ತಿಳಿಯಲಾಗಿದೆ. ಕನ್ಯಾ ರಾಶಿಯ ಜನರು ಏಕಮುಖಿ ರುದ್ರಾಕ್ಷಿನ ಧರಿಸಿಕೊಳ್ಳೋದು ಉತ್ತಮ ಅಂತ ತಿಳಿಯಲಾಗಿದೆ.
ಏಕಮುಖಿ ರುದ್ರಾಕ್ಷಿಯನ್ನು ಎಲ್ಲಕ್ಕಿಂತ ಶುಭ ಅಂತಾನೂ ತಿಳಿಯಲಾಗಿದೆ. ಈ ರುದ್ರಾಕ್ಷಿಗೆ ಸದಾಶಿವನ ವರ ಸಿಕ್ಕಿದೆ. ಈ ಬೀಜವು ಪರಮಸುಖ ಮತ್ತು ಮೋಕ್ಷವನ್ನ ಕೊಡುತ್ತದೆ. ಮಾಹಿತಿಯ ಅನುಸಾರವಾಗಿ ಯಾವ ಸ್ಥಾನದಲ್ಲಿ ಏಕಮುಖಿ ರುದ್ರಾಕ್ಷಿಯ ಪೂಜೆ ಆಗುತ್ತದೆಯೋ ಅಲ್ಲಿ ತಾಯಿ ಲಕ್ಷ್ಮಿದೇವಿಯು ವಾಸ ಮಾಡ್ತಾರೆ. ಏಕಮುಖಿ ರುದ್ರಾಕ್ಷಿಯು ವೃದ್ದಿ, ಸಿದ್ದಿ ಎರಡನ್ನು ಕೊಡುತ್ತದೆ. ಜೊತೆಗೆ ಈ ರುದ್ರಾಕ್ಷಿ ಧರಿಸಿದಂತ ವ್ಯಕ್ತಿಗೆ ಏಕಾಗ್ರತೆ, ಮನಸ್ಸಿಗೆ ಶಾಂತಿಯನ್ನು ಕೊಡುತ್ತದೆ.
ಇವರ ಎಲ್ಲ ಮನಸ್ಸಿಚ್ಛೆಗಳನ್ನು ಸಹ ಪೂರ್ಣಗೊಳಿಸುತ್ತದೆ. ಏಳನೇದಾಗಿರೋದು ತುಲಾ ರಾಶಿ. ತುಲಾ ರಾಶಿಯ ಸ್ವಾಮೀ ಶುಕ್ರ ಗ್ರಹ ಅಂತ ತಿಳಿಯಲಾಗಿದೆ. ತುಲಾ ರಾಶಿಯ ಜನರು ಎಂಟು ಮುಖಗಳಿರುವಂತ ರುದ್ರಾಕ್ಷಿಯನ್ನ ಧರಿಸೋದು ಉತ್ತಮ ಅಂತ ತಿಳಿಯಲಾಗಿದೆ. ಎಂಟು ಮುಖಗಳಿರುವಂತ ರುದ್ರಾಕ್ಷಿಗೆ ವಿಘ್ನ ನಿವಾರಕ ಗಣೇಶನ ಆಶೀರ್ವಾದ ಇದೆ. ಎಂಟು ಮುಖಗಳಿರುವಂತ ರುದ್ರಾಕ್ಷಿಯು ಬುದ್ಧಿಯ ವಿಕಾಸದ ಜೊತೆಗೆ ಸರ್ಕ್ಯುಲೇಶನ್ ಶಕ್ತಿ ಮತ್ತು ಉತ್ತಮ ಆರೋಗ್ಯದ ಪ್ರಾಪ್ತಿ ನೀಡುತ್ತದೆ.
ಜೊತೆಗೆ ಇದರಿಂದ ಯಶಸ್ಸು, ಸಮೃದ್ಧಿಪೂರ್ವಕ ಜೀವನ ಸಿಗುತ್ತದೆ. ಎಂಟನೆಯದಾಗಿರೋದು ವೃಶ್ಚಿಕ ರಾಶಿ. ವೃಶ್ಚಿಕ ರಾಶಿಯ ಸ್ವಾಮಿ ಮಂಗಳಗ್ರಹ ಅಂತ ತಿಳಿಯಲಾಗಿದೆ. ಈ ರಾಶಿಯ ಜನರು ಪಂಚಮುಖಿ ರುದ್ರಾಕ್ಷಿಯನ್ನು ಧರಿಸೋದು ಉತ್ತಮ ಆಗಿರುತ್ತದೆ. ಈ ರುದ್ರಾಕ್ಷಿಯ ಶಿವನ ರೂಪ ಆದ ಕಾಳಿಂಗ ರುದ್ರನ ಆಶೀರ್ವಾದ ಸಿಕ್ಕಿದೆ. ಮಾಹಿತಿಯ ಅನುಸಾರವಾಗಿ
ಮೂರು ದೊಡ್ಡದಾಗಿರುವ ಪಂಚಮುಖಿ ರುದ್ರಾಕ್ಷಿನ ಧರಿಸೋದ್ರಿಂದ ಅಕಾಲಿಕ ಮೃತ್ಯು ಕೂಡ ನಾಶ ಆಗುತ್ತದೆ. ಜೊತೆಗೆ ದೇಹ, ಮನಸ್ಸಿನ ಶುದ್ದಿ ಕೂಡ ಆಗುತ್ತದೆ. ಇಲ್ಲಿ ಇದರ ಔಷಧಿಯ ಗುಣದ ಬಗ್ಗೆ ಹೇಳೋದಾದರೆ ಇದು ಬಿಪಿಯಾಗಲಿ, ಶುಗರ್ ಆಗ್ಲೀ ಕಣ್ಣು, ಹೊಟ್ಟೆ ಮತ್ತು ಒಳ್ಳೆಯ ಮನಸ್ಸಿನ ಆರೋಗ್ಯವನ್ನ ಕಾಪಾಡುತ್ತದೆ. ಇನ್ನು ಒಂಭತ್ತನೇದಾಗಿರೋದು ಧನು ರಾಶಿ.
ಧನು ರಾಶಿಯ ಸ್ವಾಮಿ ಗುರು ಗ್ರಹ ಅಂತ ತಿಳಿಯಲಾಗಿದೆ. ಧನು ರಾಶಿಯ ಜನರು 9 ಮುಖಗಳಿರುವಂತ ರುದ್ರಾಕ್ಷಿನ ಧರಿಸುವುದು ಅತಿ ಉತ್ತಮ ಅಂತ ತಿಳಿಯಲಾಗಿದೆ. ಒಂಭತ್ತುಮುಖಿ ರುದ್ರಾಕ್ಷಿಗೆ ದೇವಿ ದುರ್ಗಾ ಮಾತೆಯ ಆಶೀರ್ವಾದ ಸಿಕ್ಕಿದೆ. ಈ ರುದ್ರಾಕ್ಷಿಯನ್ನ ಧರಿಸಿಕೊಳ್ಳುವಂತ ವ್ಯಕ್ತಿಯು ನಿರ್ಭಯ ಮತ್ತು ನೆಮ್ಮದಿಯಿಂದ ಇರ್ತಾರೆ. ಇದನ್ನ ಧರಿಸೋದ್ರಿಂದ ವ್ಯಕ್ತಿಯ
ಅಂತರ್ಮುಖಿ ಅಗ್ನಿಯಿಂದ ಅವರ ಶರೀರ ಶುದ್ಧಿ ಆಗುತ್ತದೆ. ಜೊತೆಗೆ ಇದನ್ನ ಧರಿಸಿದಂತ ವ್ಯಕ್ತಿಯನ್ನ ಶಕ್ತಿಶಾಲಿ ಮತ್ತು ಆತ್ಮವಿಶ್ವಾಸಿಯನ್ನಾಗಿಸುತ್ತದೆ. ನಂಬಿಕೆಯ ಅನುಸಾರವಾಗಿ ಕಾಲ ಅಂದ್ರೆ ಯಮರಾಜ ಮತ್ತು ಕಾಲಭೈರವರಿಬ್ಬರೂ ಒಂಭತ್ತು ಮುಖ ಇರುವಂತ ರುದ್ರಾಕ್ಷಿಯನ್ನ ಧರಿಸಿದಂತ ವ್ಯಕ್ತಿಯನ್ನ ಯಾವತ್ತಿಗೂ ಅವರು ರಕ್ಷಣೆ ಮಾಡ್ತಾರೆ. ಇನ್ನೂ ಮಕರ ರಾಶಿ.
ಮಕರ ರಾಶಿಯ ಸ್ವಾಮಿ ಶನಿದೇವರಾಗಿದ್ದಾರೆ. ಈ ರಾಶಿಯ ಜನರು 10 ಮುಖಗಳಿರುವಂತ ರುದ್ರಾಕ್ಷಿಯನ್ನು ಧರಿಸೋದು ಉತ್ತಮ ಆಗಿರುತ್ತದೆ. ಈ ಹತ್ತು ಮುಖಿ ರುದ್ರಾಕ್ಷಿಗೆ ಶಿವನ ಆಶೀರ್ವಾದ ಸಿಕ್ಕಿದೆ. ಇದನ್ನ ಪೂಜೆಯ ಸ್ಥಾನದಲ್ಲಿ ಇಟ್ಟು ಹರಿಹರರ ಆಶೀರ್ವಾದವನ್ನು ಪಡೆಯಬಹುದಾಗಿದೆ. ಇದು ಎರಡು ಮಹಾಶಕ್ತಿಗಳನ್ನು ಜೋಡಿಸಿಕೊಂಡು ಭೂತ, ಪ್ರೇತ ಮಾಟ, ಮಂತ್ರ ಇತ್ಯಾದಿ ಸಂಕಟಗಳಿಂದ ಮುಕ್ತಿಯನ್ನು ಕೊಡುತ್ತದೆ. ಜೊತೆಗೆ ಇದು ಮನೆಯ ಕಾರ್ಯಾಲಯದ ವಾಸ್ತುದೋಷವನ್ನು ಸಹ ದೂರ ಮಾಡುತ್ತದೆ.
ಇವುಗಳಷ್ಟೇ ಅಲ್ಲದೆ ಜಗಳಗಳಾಗಲಿ, ಶತ್ರುಗಳ ಕಾಟ ಹೆಚ್ಚಾದಾಗಲು ಈ ಬೀಜವೂ ಕಾಪಾಡುತ್ತದೆ. ಒಂದು ಮಾಹಿತಿಯ ಪ್ರಕಾರ ಎಲ್ಲಾ ಗ್ರಹಗಳನ್ನು ನಿಯಂತ್ರಿಸಲು ಈ ಒಂದು ರುದ್ರಾಕ್ಷಿ ಇದ್ದರೆ ಸಾಕು. ಎಲ್ಲಾ ಗ್ರಹಗಳ ಕೆಟ್ಟ ಪ್ರಭಾವದಿಂದ ಉಳಿದುಕೊಳ್ಳಲು ಈ ರುದ್ರಾಕ್ಷಿಯು ಪ್ರಭಾವಶಾಲಿ ಆಗಿರುತ್ತದೆ. ಇನ್ನು ಹನ್ನೊಂದನೆಯದಾಗಿರೋದು ಕುಂಭ ರಾಶಿ.
ಕುಂಭ ರಾಶಿಯ ಸ್ವಾಮಿ ಶನಿದೇವರಂತ ತಿಳಿಯಲಾಗಿದೆ. ಕುಂಭ ರಾಶಿಯ ಜನರು ಏಳು ಮುಖಗಳಿರುವಂತ ರುದ್ರಾಕ್ಷಿಯನ್ನು ಧರಿಸುವುದು ಉತ್ತಮವಾಗಿರುತ್ತದೆ. ಈ ರುದ್ರಾಕ್ಷಿಯು ಸೂರ್ಯ, ಸಪ್ತ ಋಷಿ, ಕಾರ್ತಿಕೇಯ ಸ್ವಾಮಿ, ಕಾಮದೇವ, ಅನಂತ ಅಂದ್ರೆ ವಾಸುಕಿ ಮತ್ತು ನಟರಾಜರಿಗೆ ಸಮರ್ಪಣೆಯಾಗಿದೆ. ಜೊತೆಗೆ ಸಪ್ತದೇವತೆಗಳಾದ ಬ್ರಾಹ್ಮೀ, ಮಹೇಶ್ವರಿ, ಕುಮಾರಿ, ವೈಷ್ಣವಿ,
ವರಾಹಿ, ಇಂದ್ರಾಣಿ ಮತ್ತು ಚಾಮುಂಡೇಶ್ವರಿಗೆ ಸಮರ್ಪಣೆಯಾಗಿರುವುದರ ಜೊತೆಗೆ ಇದು ಲಕ್ಷ್ಮಿಯನ್ನ ಒಲಿಸಿಕೊಳ್ಳುತ್ತದೆ. ಈ ಒಂದು ಕಾರಣದಿಂದಾಗಿ ಇದನ್ನು ಧರಿಸಿಕೊಳ್ಳುವಂತ ವ್ಯಕ್ತಿಯ ಜೀವನದಲ್ಲಿ ಸಮೃದ್ಧಿ, ಕೀರ್ತಿ ಮತ್ತು ಧನಸಂಪತ್ತಿನ ಮಳೆ ಸುರಿಯುತ್ತಲೇ ಇರುತ್ತದೆ. ಇದು ಧರಿಸಿದಂತ ವ್ಯಕ್ತಿಯ ದುರ್ಭಾಗ್ಯವನ್ನು ಸಹ ನಾಶ ಮಾಡುತ್ತದೆ.
ಜೊತೆಗೆ ಇದನ್ನ ಧರಿಸಿಕೊಳ್ಳೋವಂತ ವ್ಯಕ್ತಿಗೆ ಗುಪ್ತ ಧನ ಸಂಪತ್ತು ಮತ್ತು ಜೀವನದಲ್ಲಿ ಜೀವನ ಸಂಗಾತಿಯ ಅಪರೂಪವಾದ ಪ್ರೇಮ ಸಿಗುತ್ತದೆ. ಶತ್ರುಗಳ ಮೇಲೆ ಇವರು ವಿಜಯವನ್ನ ಸಾಧಿಸುತ್ತಾರೆ. ಇನ್ನು ಹನ್ನೆರಡನೆಯದಾಗಿರೋದು ಮೀನ ರಾಶಿ. ಮೀನ ರಾಶಿಯ ಸ್ವಾಮಿ ಗುರುಗ್ರಹ ಅಂತ ತಿಳಿಯಲಾಗಿದೆ. ಮೀನ ರಾಶಿಯ ಜನರು 11 ಮುಖಗಳಿರುವಂತ ರುದ್ರಾಕ್ಷಿಯನ್ನು ಧರಿಸೋದು ಅತಿ ಉತ್ತಮ ಅಂತ ತಿಳಿಯಲಾಗಿದೆ. ಹನ್ನೊಂದು ಮುಖಗಳಿರುವಂತ ರುದ್ರಾಕ್ಷಿಗೆ ಆಂಜನೇಯ ಸ್ವಾಮಿಯ ಕೃಪೆ ಸಿಕ್ಕಿದೆ.
ಇದನ್ನ ಧರಿಸಿದಂತ ವ್ಯಕ್ತಿಗೆ ಆಂಜನೇಯ ಸ್ವಾಮಿಯಂತ ಗುಣಗಳು ಸಿಗುತ್ತವೆ. ಅಂದರೆ ಮಾತನಾಡುವ ಕುಶಲತೆ, ಆತ್ಮವಿಶ್ವಾಸ, ಶಕ್ತಿ, ಬುದ್ಧಿ ಇತ್ಯಾದಿಗಳು ಸಿಗುತ್ತವೆ. ಯೋಗ ಮತ್ತು ತಂತ್ರಗಳಿಗೆ ಸಂಬಂಧಪಟ್ಟಂತ ವ್ಯಕ್ತಿಗೂ ಕೂಡ ಈ ರುದ್ರಾಕ್ಷಿ ಅತ್ಯಂತ ಲಾಭಕಾರಿಯಾಗಿದೆ. ಜೊತೆಗೆ ಈ ರುದ್ರಾಕ್ಷಿಯು ರಕ್ಷಣೆಯನ್ನ ನೀಡುತ್ತದೆ. ಔಷಧೀಯ ರೂಪದಲ್ಲಿ ಈ ರುದ್ರಾಕ್ಷಿಯು ಹೊಟ್ಟೆ, ಹೃದಯ, ಲಿವರ್ ಗೆ ಸಂಬಂಧ ಪಟ್ಟಂತ ರೋಗಗಳನ್ನು ದೂರ ಮಾಡುತ್ತದೆ. ಮಾಹಿತಿ ಇಷ್ಟವಾದರೆ ಲೈಕ್ ಮಾಡಿರಿ, ಹರ ಹರ ಮಹಾದೇವ ಅಂತ ಕಾಮೆಂಟ್ ಹಾಕಿರಿ, ಧನ್ಯವಾದಗಳು.