ದೀಪಾವಳಿ ಅಮವಾಸ್ಯೆ “ಧನಲಕ್ಷ್ಮಿ” ಪೂಜೆ ಮಾಡುವ ವಿಧಾನ

0

ಸಾಂಪ್ರದಾಯಿಕವಾಗಿ ದೀಪಾವಳಿ ಅಮಾವಾಸ್ಯೆ ಧನಲಕ್ಷ್ಮಿ ಪೂಜೆ ಮಾಡುವ ವಿಧಾನ ನೋಡಿ ಅಮಾವಾಸ್ಯೆ ದಿವಸ ನಾವು ಧನಲಕ್ಷ್ಮಿ ಪೂಜೆಯನ್ನು ಯಾವ ರೀತಿ ಮಾಡಬೇಕು ಅಂತ ತಿಳಿಸಿ ಕೊಡ್ತಾ ಇದ್ದೇನೆ. ಇವತ್ತಿನ ಪೂಜೆ ನಾನು ತುಂಬಾ ಸರಳವಾಗಿ ತಿಳಿಸಿ ಕೊಡ್ತಾ ಇದ್ದೇನೆ.

ಬನ್ನಿ ಹಾಗಾದ್ರೆ ಯಾವ ರೀತಿ ಮಾಡೋದು ಅಂತ ಹೇಳಿ ತಿಳಿದುಕೊಳ್ಳೋಣಂತೆ. ಮೊದಲು ಒಂದು ಪೀಠದ ಸಿದ್ಧತೆ ಮಾಡ್ಕೋಬೇಕು. ಈಗಾಗಲೇ ರಂಗೋಲಿ ಬಗ್ಗೆ ಮಾಹಿತಿ ಕೊಟ್ಟಿದ್ದೇನೆ. ಒಂದು ರಂಗೋಲಿ ಹಾಕಿ ನಂತರದಲ್ಲಿ ನೀವು ಒಂದು ಬಾಳೆ ಎಲೆ ತೆಗೆದುಕೊಳ್ಳಬೇಕಾಗುತ್ತದೆ. ಬಾಳೆ ಎಲೆ ಮೇಲೆ ಅಕ್ಕಿಯನ್ನು ಹಾಕಬೇಕು. ಮೂರು ಹಿಡಿ, ಐದ್ ಹಿಡಿ ಈ ರೀತಿಯಾಗಿ ಅಕ್ಕಿಯನ್ನ

ಹಾಕಿ ಅದರ ಮೇಲೆ ಸ್ವಸ್ತಿಕ್ ಮತ್ತೆ ಓಂ ಮತ್ತೆ ಶ್ರೀ ಅಂತೇಳಿ ಚಿಹ್ನೆಯನ್ನ ಬರಿಬೇಕು. ನಂತರದಲ್ಲಿ ಎರಡು ವೀಳ್ಯದೆಲೆ ತೆಗೆದುಕೊಳ್ಳಿ. ವೀಳ್ಯದೆಲೆ ಮೇಲೆ ಶ್ರೀ ಅಂತೇಳಿ ಬರೆದು ನಂತರದಲ್ಲಿ ನೀವು ಕಳಸವನ್ನು ಸಿದ್ಧತೆ ಮಾಡ್ಕೊಂಡ್ರೆ ಕಳಸ ಇಡಬಹುದು. ಇಲ್ಲಾಂದ್ರೆ ಬಿಂದಿಗೆ ನೀವು ಸಿದ್ಧತೆ ಮಾಡಿಕೊಂಡಿದ್ದರೆ ಬಿಂದಿಗೆ ಇಡಬಹುದು. ಬಿಂದಿಗೆ ಇಡುವಂತಹ ಸಂದರ್ಭದಲ್ಲಿ ನೀವು ಈಗ ಮನೆಯಲ್ಲಿರುವಂತಹ

ನೀರನ್ನು ಉಪಯೋಗಿಸೋದಿಕ್ಕೆ ಬರೋದಿಲ್ಲ ಕಳಸಕ್ಕೆ ಹಾಕೋದಕ್ಕೆ. ಹಾಗಾಗಿ ನೀವು ಮನೆಯಿಂದ ಹೊರ ಭಾಗದಲ್ಲಿ ನಲ್ಲಿಯಿಂದ, ನೀವು ಬಾವಿಯಿಂದ ಆಗಿರಬಹುದು ಅಥವಾ ದೇವಸ್ಥಾನದ ಬಳಿ ಆಗಿರಬಹುದು, ನಿಮ್ಮ ಮನೆಯ ಹೊರಭಾಗದಲ್ಲಿರುವಂತಹ ನಲ್ಲಿ ಇಂದ ನೀವು ನೀರನ್ನ ತೆಗೆದುಕೊಂಡು ಬಂದು ಆ ಕಳಸದ ಒಳಗೆ ಹಾಕಿ ನಂತರ ನೀವು ಪೂಜೆಯನ್ನ ಪ್ರಾರಂಭ ಮಾಡಬೇಕಾಗುತ್ತದೆ.

ಅದಕ್ಕೂ ಮುಂಚೆ ನೋಡಿ ತುಂಬಾ ಬಹುಮುಖ್ಯ ವಾದದ್ದು, ಅಮಾವಾಸ್ಯೆ ಆಗಿರೋದ್ರಿಂದ ನಾವು ಮೊದಲು ನಮ್ಮ ಮನೆ ದೇವರಿಗೆ ಪ್ರಾಮುಖ್ಯತೆ ಕೊಡಬೇಕು. ನಾವು ನಮ್ಮ ಮನೆಯಲ್ಲಿ ನಾವು ದಿನನಿತ್ಯ ನೀವು ದೇವರ ಮನೆ ಪೂಜೆ ಏನ್ ಮಾಡ್ತಿರೋ ಆ ಒಂದು ದೇವರ ಮನೆಯಲ್ಲಿ ನೀವು ಮೊದಲು ನೀವು ದೇವರ ಪೂಜೆಯನ್ನ ಮಾಡ್ಕೊಂಡು ಆಮೇಲೆ

ನೀವು ಕಳಸವನ್ನೆಲ್ಲಾ ಸ್ಥಾಪನೆ ಮಾಡ್ಕೊಂಡು ಪೂಜೆಯನ್ನು ಮಾಡ್ಕೊಂಡಿರ್ತೀರಿ. ನಂತರದಲ್ಲಿ ನೀವು ಈ ಒಂದು ಲಕ್ಷ್ಮಿ ಪೂಜೆಯನ್ನು ಪ್ರಾರಂಭ ಮಾಡಬೇಕಾಗುತ್ತೆ. ಕಳಸಕ್ಕೆ ಮೊದಲು ಒಂದು ಕಂಕಣವನ್ನು ಕಟ್ಟಬೇಕು ನೀವು. ಕಂಕಣ ಅಂತ ಬಂದಾಗ ಎರಡು ವೀಳ್ಯದೆಲೆಗೆ ಒಂದು ಹೂವನ್ನು ಸೇರಿಸಿ ನೀವು ಅಂಗಾನೂಲಿನಿಂದ ಒಂದು ಕಂಕಣವನ್ನು ಸಿದ್ಧತೆ ಮಾಡಿಕೊಂಡು ನೀವು

ಆ ಬಿಂದಿಗೆಗೆ ಕಟ್ಬಿಟ್ಟು ನಂತರದಲ್ಲಿ ನಾವು ಅದಕ್ಕೆ ಅರಿಶಿಣ ಕುಂಕುಮ ಹಚ್ಚಿ ಆಮೇಲೆ ನಾವು ಕಳಸದ ಒಳಗೆ ಸ್ವಲ್ಪ ಹಸುವಿನ ಗೋಮೂತ್ರ ಅಂದ್ರೆ ಗಂಜಲವನ್ನು ಹಾಕಬೇಕು. ಆಮೇಲೆ ಗಂಗಾಜಲ ಜೊತೇಲಿ ರೋಸ್ ವಾಟರ್ ಹಾಗೆ ನೋಡಿ ನಾನು ಗೋರಂಜನ್ ಹಾಕ್ತಾ ಇದ್ದೀನಿ. ಇದು ಸಿಗ್ದೇ ಹೋದ್ರೆ ಪರ್ವಾಗಿಲ್ಲ, ತೊಂದರೆ ಇಲ್ಲ. ನೀವು ಜಾವತ್ ಪೌಡರ್ ಅಂತ ಸಿಕ್ಕೇ ಸಿಗುತ್ತೆ.

ಜಾವತ್ ಪೌಡರ್ ಮತ್ತೆ ಸ್ವಲ್ಪ ಪಚ್ಚ ಕರ್ಪೂರವನ್ನು ಹಾಕಿ ಹಾಗೆ ಜಾವತ್ ಪೌಡರ್ ನ್ನ ನೀವು ರಂಗೋಲಿಗೆ ಹಾಕಿರ್ತೀರ ರಂಗೋಲಿ ಮೇಲೆನೂ ನೀವು ಸ್ವಲ್ಪಮಟ್ಟಿಗೆ ಹಾಕಬೇಕಾಗುತ್ತೆ. ಯಾಕಂದ್ರೆ ಇದು ಲಕ್ಷ್ಮೀ ಪೂಜೆ ಆಗಿರೋದ್ರಿಂದ ಲಕ್ಷ್ಮಿಗೆ ಸುಗಂಧ ಭರಿತವಾದ ವಸ್ತುಗಳು ತುಂಬಾ ಪ್ರಿಯವಾದದ್ದು ಆದ್ದರಿಂದ ನಾವು ಸ್ವಲ್ಪ ಮಟ್ಟಿಗೆ ಜಾವದ್ ಪೌಡರ್ ಹಾಗೂ ಪಚ್ಚಕರ್ಪೂರವನ್ನು

ಹಾಕಿ ನಂತರ ಕಳಸದೊಳಗೂ ಸ್ವಲ್ಪ ಹಾಕಬೇಕಾಗುತ್ತದೆ. ಆಮೇಲೆ ಅರಿಶಿನ ಕುಂಕುಮ ಎರಡು ಅಡಿಕೆ ಹಾಕಿ ಎರಡು ಯಾಲಕ್ಕಿ ಹಾಕಿ ಅದರ ಬಿಟ್ಟು ಮತ್ತಿನ್ನೇನು ಹಾಕೋದು ಬೇಡ. ನಂತರದಲ್ಲಿ ಒಂದು ಬೆಳ್ಳಿ ಕಾಯಿನ್ ಅಥವಾ ಒಂದು ಫೈವ್ ರೂಪೀಸ್ ಕಾಯಿನ್ ಆದ್ರೂನು ಸರಿನೇ ಆ ಕಳಸದೊಳಗೆ ನೀವು ದಿನನಿತ್ಯ ಉಪಯೋಗಿಸುವಂತಹ

ಒಂದು ಕಾಯಿನ್ ಇತ್ತು ಅಂತಂದ್ರೆ ಅದನ್ನೇ ನೀವು ಹಾಕಬಹುದು. ನಂತರದಲ್ಲಿ ನೀವು ಅದರ ಜೊತೆಯಲ್ಲೇ ಮಾಡಬೇಕಾದ ಮತ್ತೊಂದು ಮಾಡ್ಬೇಕಾಗಿರುವಂತದ್ದು ತುಂಬಾ ಬಹುಮುಖ್ಯವಾಗಿರುವಂಥದ್ದು ಅಂತಂದ್ರೆ ನೋಡಿ ಅದಕ್ಕೆ ಒಂದು ವಸ್ತು ಹಾಕಲೇಬೇಕು. ಅದು ಗರಿಕೆ ಇಪ್ಪತ್ತೊಂದು ಗರಿಕೆ ತೆಗೆದುಕೊಳ್ಳಿ, ಹಾಗೆನೇ ಒಂದು ಹೂವನ್ನು ತೆಗೆದುಕೊಂಡು ಕಳಸದ

ಮೇಲೆ ಕೈ ಇಟ್ಟು ಒಂದು ಸಂಕಲ್ಪ ಮಾಡ್ಕೊಳ್ಳಿ. ಯಾವುದೇ ವಿಘ್ನಗಳು ಬರಬಾರದು ನಾನು ಪೂಜೆ ಮಾಡ್ತಾ ಇದ್ದೇನೆ ಇವತ್ತು ನಮ್ಮ ಒಂದು ಕೋರಿಕೆಯನ್ನು ಈಡೇರಿಸು ಅಮ್ಮ ಅಂತೇಳಿ ನೀವು ಕೇಳ್ಕೊಂಡು ಆ ಗ್ರಹಿಕೆ, ಹೂವು, ಅಕ್ಷತೆಯನ್ನು ನೀವು ಕಳಸದೊಳಗೆ ಹಾಕಿ ನಂತರದಲ್ಲಿ ಐದು ವೀಳ್ಯದೆಲೆ ಹಾಗೆ ಮಾವಿನ ಎಲೆ ಸಿಕ್ರೆ ಮಾವಿನ ಎಲೆ ತುಂಬಾನೇ ಒಳ್ಳೆಯದು.

ಹಬ್ಬದ ಸಂದರ್ಭದಲ್ಲಿ ಬಂದಿರುತ್ತವೆ ಮಾರ್ಕೆಟ್ ನಲ್ಲಿ, ನೀವು ಆ ಮಾವಿನ ಎಲೆ ತೆಗೆದುಕೊಂಡು ಬಂದು ಒಂದು ಕುಡಿಯನ್ನು ಆ ಮಾವಿನ ಎಲೆ ಅದರೊಳಗೆ ಇಡಬೇಕಾಗುತ್ತದೆ. ನಂತರದಲ್ಲಿ ಚೆನ್ನಾಗಿರುವಂತ ಒಂದು ಕಾಯನ್ನು ತೆಗೆದುಕೊಳ್ಳಿ. ಆ ಕಾಯಿಗೆ ಅರಿಶಿಣವನ್ನು ಹಚ್ಚಿ ಅದಕ್ಕೆ ಅರಿಶಿಣ ಕುಂಕುಮದ ಅಲಂಕಾರ ಮಾಡಿ ಆ ವೀಳ್ಯದೆಲೆ ಮೇಲೆ ಇಡಬೇಕಾಗುತ್ತದೆ. ಕಳಸ ಸ್ಥಾಪನೆ ಮಾಡಬೇಕಾದರೆ

ನೀವು ಇಷ್ಟು ಪಾಲಿಸಬೇಕಾಗಿರುವಂತದ್ದು. ನಂತರದಲ್ಲಿ ನೀವು ಒಂದು ಬ್ಲೌಸ್ ಪೀಸ್ ನ್ನಾದ್ರೂ ಇಟ್ಟು ಪೂಜೆ ಮಾಡ್ಬಹುದು. ಅಥವಾ ಸೀರೆ ಉಡಿಸ್ತೀನಿ ಅಂತ ಅಂದ್ರೆ ಸೀರೆ ಉಡಿಸಬಹುದು ನಾನಿವತ್ತು ಬ್ಲೌಸ್ ಪೀಸ್ ನಿಂದ ಅಲಂಕಾರ ಮಾಡ್ತಾ ಇದ್ದೇನೆ. ಅದರ ನಂತರದಲ್ಲಿ ಗೆಜ್ಜೆ ವಸ್ತ್ರ ಹಾಕಿ ಹಾಗೆ ನೀವು ಎಷ್ಟು ಸಾಧ್ಯನೋ ಅಷ್ಟು ನಿಮ್ಮ ಮನೆಯಲ್ಲಿರುವಂತ ನೀವು ಹಾಕ್ಕೊಳ್ಳುವಂತ

ಒಂದು ಆಭರಣಗಳನ್ನ ಹಾಕಿ ಪೂಜೆ ಮಾಡಬಹುದು. ಅದರ ಹಾಕೋಕಿಂತ ಮುಂಚೆ ಮೊದಲು ಸ್ವಲ್ಪ ಗಂಜಲ ಮತ್ತೆ ಅರಿಶಿಣದ ಪುಡಿ ಮತ್ತೆ ಸ್ವಲ್ಪ ಹಸಿ ಹಾಲನ್ನ ಹಾಕಿ ಚೆನ್ನಾಗಿ ನೀವ್ ಅದನ್ನ ಶುದ್ಧಿ ಮಾಡಿ ನಂತರದಲ್ಲಿ ನೀವು ದೇವರಿಗೆ ಹಾಕುವಂತದ್ದು ತುಂಬಾ ಸೂಕ್ತವಾದದ್ದು. ಆಮೇಲೆ ಅರಿಶಿನ ಕೊಂಬಿನಿಂದ ನಾನು ಮಾಂಗಲ್ಯವನ್ನು ಮಾಡಿ ಹಾಕ್ತಾ ಇದ್ದೇನೆ.

ನೀವು ಒರಿಜಿನಲ್ ಅಂದ್ರೆ ನೀವು ಬಂಗಾರದ ಮಾಂಗಲ್ಯ ಹಾಕ್ತಿನಿ ಅಂದ್ರೆ ಅದನ್ನು ಹಾಕಬಹುದು ತೊಂದರೆ ಇಲ್ಲ. ಎಲ್ಲದಕ್ಕಿಂತ ಶ್ರೇಷ್ಠವಾದದ್ದು ಅರಿಶಿನದ ಕೊಂಬು ಹಾಗಾಗಿ ನಾವು ಹಳದಿ ದಾರಕ್ಕೆ ಅಥವಾ ಅಂಗಾನೂಲಿಗೆ ಅರಿಶಿಣವನ್ನು ಹಚ್ಚಿ ಅದರಿಂದ ನೀವು ಒಂದು ಮಾಂಗಲ್ಯ ಸಿದ್ಧತೆ ಮಾಡಿಕೊಂಡು ಅಮ್ಮನವರಿಗೆ ಹಾಕುವುದು ಒಳ್ಳೆಯದು. ಈ ಮಾಂಗಲ್ಯದ ಸಿದ್ಧತೆ

ಈಗಾಗಲೇ ನಿಮಗೆ ವರಮಹಾಲಕ್ಷ್ಮಿ ಹಬ್ಬದ ಸಮಯದಲ್ಲಿ ನಾನು ತಿಳಿಸ್ಕೊಟ್ಟಿದ್ದೇನೆ. ಇನ್ನು ಅಮ್ಮನವರಿಗೆ ನೀವು ಮುಖ ಪದ್ಮ ವರಮಹಾಲಕ್ಷ್ಮಿ ಹಬ್ಬದಲ್ಲಿ ಹಾಕಿರುವಂತದ್ದನ್ನೇ ನೀವು ಮುಖ ಪದ್ಮ ಹಾಕ್ಬೋದು. ತುಂಬಾ ಜನ ಕೇಳ್ತಾರೆ ಹೊಸದಾಗಿ ತರಬೇಕಾ ಅಂತ ಹೇಳಿ ಹಾಗೇನಿಲ್ಲ ನೀವು ಒಮ್ಮೆ ತಂದಿಟ್ಟುಕೊಂಡರೆ ನೀವು ಎಲ್ಲಾ ಹಬ್ಬಕ್ಕೂನು ಉಪಯೋಗಿಸಿಕೊಳ್ಳಬಹುದು.

ನಂತರದಲ್ಲಿ ಅಮ್ಮನವರಿಗೆ ಒಂದು ಸ್ವಲ್ಪ ಮಡಲಕ್ಕಿ ಅಂತೇಳಿ ಒಂದು ಬ್ಲೌಸ್ ಪೀಸ್ ಅಥವಾ ನೀವು ಸೀರೆ ಉಡಿಸ್ದೇ ಹೋದ್ರೆ ಬ್ಲೌಸ್ ಪೀಸ್ ಇಟ್ಟಿದ್ದರೆ ಅದೇ ಸೀರೇನೇ ನೀವು ಅಮ್ಮನವರ ಮಡಲಕ್ಕಿ ಕೆಳಗಿಟ್ಟು ನಂತರದಲ್ಲಿ ಉಪಯೋಗಿಸಿಕೊಳ್ಳಬಹುದು. ಹಾಗೆ ದುಡ್ಡಿನ ಮೇಲೆ ನಾನು ಗಣೇಶನನ್ನು ಇಟ್ಟಿದ್ದೇನೆ. ನಿಮಗೆ ಎಲ್ಲಿ ಸಾಧ್ಯ ಆಗುತ್ತೋ ಅಲ್ಲಿ ಇಡಬಹುದು.

ಆಮೇಲೆ ಅಮ್ಮನೋರಿಗೆ ನೀವು ಒಂದು ಡಸೆನ್ ಬಳೆ ತೆಗೆದುಕೊಂಡರೆ ಅದರಲ್ಲಿ 11 ಅಥವಾ 9 ಬಳೆಗಳನ್ನ ಹಾಕಬಹುದು. ಇನ್ನು ಲಕ್ಷ್ಮೀ ಅಮ್ಮನವರಿಗೆ ನಾನು ಪ್ರತಿಷ್ಠಾಪನೆ ಮಾಡ್ಕೊಂಡಿದ್ದೇನೆ, ಒಂದು ರಂಗೋಲಿ ಹಾಕಿದ್ದೇನೆ. ಒಂದು ತಟ್ಟೆಯಲ್ಲಿ ನಾನು ಅಕ್ಕಿಯನ್ನು ಹಾಕಿ ಅದ್ರ ಮೇಲೆ ಲಕ್ಷ್ಮಿ ಅಮ್ಮನವರ ಪ್ರತಿಷ್ಠಾಪನೆ ಮಾಡ್ಕೊಂಡು ಅಮ್ಮನವರಿಗೆ ಪ್ರಿಯವಾದ ವಸ್ತುಗಳನ್ನೆಲ್ಲ ಇಟ್ಟಿದ್ದೇನೆ.

ಕವಡೆ, ಗೋಮತಿ ಚಕ್ರ, ಬಳೆ, ಯಾಲಕ್ಕಿ ಆಮೇಲೆ ಲವಂಗ ಹೀಗೆ ಅಮ್ನೋರ ಒಂದು ಪಾದಗಳನ್ನ ಇಟ್ಟಿದ್ದೇನೆ, ಶಂಖು ಇಟ್ಟಿದ್ದೇನೆ. ಇವೆಲ್ಲವನ್ನೂ ಸಹ ಇಟ್ಟಿದ್ದೇನೆ. ಆಮೇಲೆ ಅಮ್ಮನೋರಿಗೆ ಬೆಳಗೋದಕ್ಕೆ ಅಂತ ಹೇಳಿ ಒಂದು ಕಳಸ ಸಿದ್ಧತೆ ಮಾಡಲೇಬೇಕು. ಆಮೇಲೆ ಒಂದು ಕೆಂಪಾರತಿ, ಇದನ್ನ ನಾವು ಅಮಾವಾಸ್ಯೆ ಪೂಜೆ ಆಗಿರೋದ್ರಿಂದ ಕೆಂಪು ಆರತಿಯನ್ನು ಮಾಡ್ಬೇಕು,

ಜೊತೇಲಿ ನಾವು ಒಂದು ಕಳಸವನ್ನು ಕೂಡ ಸಿದ್ಧತೆ ಮಾಡ್ಕೋಬೇಕು. ಹಾಗೆ ಅಮ್ಮನವರಿಗೆ ಒಂದು ಪ್ರಿಯವಾದ ಒಂದು ದೀಪಾರಾಧನೆ ಇದು. ಇದನ್ನ ನಾನು ನೆಕ್ಸ್ಟ್ ವಿಡಿಯೋದಲ್ಲಿ ತಿಳಿಸಿಕೊಡ್ತಾ ಹೋಗ್ತೇನೆ. ಮತ್ತೊಂದು ಏನಪ್ಪಾ ಅಂದ್ರೆ ಅಮ್ಮನವರಿಗೆ ಮೂರು ದೀಪಗಳು ಈಗಾಗಲೇ ಇದರ ಬಗ್ಗೆ ಮಾಹಿತಿ ಕೊಟ್ಟಿದ್ದೇನೆ. ಪಿತೃ ದೋಷ ಪರಿಹಾರಕ್ಕೆ, ಪಿತೃಗಳ ಅನುಗ್ರಹ ಪಡೆಯುವುದಕ್ಕೋಸ್ಕರ,

ಲಕ್ಷ್ಮೀ ಅಮ್ಮನವರ ಅನುಗ್ರಹ ಪಡೆಯುವುದಕ್ಕೋಸ್ಕರ, ಕುಲದೇವರ ಅನುಗ್ರಹ ಪಡೆಯುವುದಕ್ಕೋಸ್ಕರ ಉಪ್ಪು ಎಳ್ಳು, ಅಕ್ಕಿಯನ್ನು ಹಾಕಿ ವೀಳ್ಯದೆಲೆ ಮೇಲೆ ಅದರ ನಂತರದಲ್ಲಿ ಅದರ ಮೇಲೆ ಮೂರು ದೀಪವನ್ನು ಇಟ್ಟು ಆ ದೀಪವನ್ನು ನಾವು ಹಚ್ಬೇಕಾಗುತ್ತೆ. ಇದನ್ನು ನೀವು ನೋಡ್ತಾ ಇರಬಹುದು ಅಮ್ಮನವರನ್ನ ಏನು ಪ್ರತಿಷ್ಠಾಪನೆ ಮಾಡ್ಕೊಂಡಿದ್ದೀನೋ ಕೆಳಭಾಗದಲ್ಲಿ

ನಾನು ಮೂರು ದೀಪಗಳನ್ನ ಹಚ್ಚಿಡ್ತಾ ಇದ್ದೀನಿ. ನೀವು ಇದೇ ರೀತಿನೇ ಮಾಡ್ಬಹುದು. ಪುಟ್ಟದಾದ ರಂಗೋಲಿ ಹಾಕಿ ಮೂರು ದೀಪಗಳನ್ನು ಹಚ್ಚಿ ಇಡಬಹುದು. ಇದರ ಸಿದ್ಧತೆಗಳಾಗಿರಬಹುದು ಹಾಗೆನೇ ವಿಸರ್ಜನೆ ಹೇಗೆ ಅಂತ ಹೇಳಿ ಈಗಾಗಲೇ ಅದರ ಬಗ್ಗೆ ತಿಳಿಸಿಕೊಟ್ಟಿದ್ದೇನೆ. ಇನ್ನು ಪ್ರಸಾದ ಅಂತ ಬಂದಾಗ ಲಕ್ಷ್ಮಿ ಪೂಜೆನ ಆಗಿರೋದ್ರಿಂದ ಆದಷ್ಟನ್ನು ಒಳಗೆ ಮಾಡುವುದು ಸೂಕ್ತವಾದದ್ದು.

ಹಾಗೆ ಸಿಹಿ ಪೊಂಗಲ್ ಆಮೇಲೆ ಅಮ್ಮನವರಿಗೆ ಪ್ರಿಯವಾದದ್ದು ಒಂದು ಐದು ರೀತಿಯ ಅಥವಾ ಮೂರು ರೀತಿಯ ಅನ್ನದಲ್ಲಿ ಮಾಡಿರುವಂತಹ ಖಾದ್ಯಗಳು ಅಂದ್ರೆ ಎಳ್ಳು ಪುಡಿ ಚಿತ್ರಾನ್ನ ಆಗಿರಬಹುದು, ಅಥವಾ ಲಿಂಬೆಹಣ್ಣಿನ ಚಿತ್ರಾನ್ನ ಆಗಿರಬಹುದು, ಎರಳಿಕಾಯಿ ಚಿತ್ರಾನ್ನ ಆಗಿರಬಹುದು ಅಥವಾ ಪೊಂಗಲ್ ಆಗಿರಬಹುದು ಹೀಗೆ ಅಮ್ಮನವರಿಗೆ ಪ್ರಿಯವಾದ ಅನ್ನದಲ್ಲಿ ಮಾಡಿರುವಂತಹ

ಐಟಂಸ್ ಗಳನ್ನೆಲ್ಲ ನೀವು ಮಾಡಬಹುದು. ಹೀಗೆ ನಾನಿದಷ್ಟು ಇವತ್ತು ಸಿದ್ಧತೆ ಮಾಡ್ಕೊಂಡಿರುವಂಥದ್ದು ಮತ್ತೊಂದು ಸಿದ್ಧತೆಗಳು ಅಂತಂದ್ರೆ ಕುಂಬಳಕಾಯಿ ನೀವೇನಲ್ಲ ದೃಷ್ಟಿ ತೆಗೆದು ಮನೆಗೆ ಕಟ್ಟಬೇಕು ಅಂದುಕೊಂಡಿದ್ದರೆ ಅದನ್ನು ಸಹ ಅವತ್ತಿನ ದಿವಸವೇ ನೀವು ಕುಂಬಳಕಾಯಿಯನ್ನು ಸಿದ್ಧತೆ ಮಾಡಿ ಇಟ್ಟುಕೊಳ್ಳಬೇಕು. ನಾನಿವತ್ತು ತುಂಬಾ ಸರಳವಾಗಿ ತಿಳಿಸಿ ಕೊಡ್ತಾ ಇದ್ದೇನೆ.

ಆಮೇಲೆ ಅವತ್ತಿನ ದಿವಸ ಕೇದಾರ ಗೌರಿ ವ್ರತನು ಕೂಡನೂ ಮಾಡ್ತಾರೆ. ನೋಂಬು ಆಚರಣೆಯನ್ನ ಸಹ ಮಾಡ್ತಾರೆ. ನಿಮ್ಮ ನಿಮ್ಮನೆ ಪದ್ಧತಿಯಂತೆ ದೀಪಾವಳಿ ಹಬ್ಬವನ್ನು ನೀವ್ ಹೇಗೆ ಆಚರಣೆ ಮಾಡ್ತಿರೋ ಅದೇ ರೀತಿನೇ ಮಾಡಬಹುದು. ನಾನು ಕಳಸ ಇಟ್ಟು ಯಾವ ರೀತಿ ಮಾಡಬೇಕು, ನಮ್ಮನೇಲಿ ಯಾವ ರೀತಿ ರೀತಿಯಾಗಿ ಆಚರಣೆ ಮಾಡ್ತೀನೋ ಆ ರೀತಿಯಾಗಿ ನಿಮಗೆ ಪೂಜೆಯನ್ನ ತಿಳಿಸಿ ಕೊಡ್ತಾ ಇರ್ತೇನೆ.

ಈಗ ಮಡಲಕ್ಕಿಯನ್ನ ನೀವು ನಂತರದಲ್ಲಿ ಏನಾದರೂ ಆಕಸ್ಮಾತ್ ನಿಮಗೆ ದಸರಾದಲ್ಲಿ ಒಂದು ಪಿರಿಯಡ್ಸ್ ಪ್ರಾಬ್ಲಮ್ ಅಂತಾನೋ ಅಥವಾ ಮತ್ತೊಂದು ಕಾರಣಕ್ಕೆ ಅಮ್ಮನವರಿಗೆ ಮಡಿಲಕ್ಕಿ ಕೊಡಲಿಕ್ಕೆ ಆಗದೆ ಹೋದಾಗ ಒಂದು ಮಡಿಲಕ್ಕಿ ಅಂತ ಸಿದ್ಧತೆ ಮಾಡಿ ಅಮ್ಮನೋರ್ ಜೊತೆಲಿ ಪೂಜೆಯಲ್ಲಿ ಇಷ್ಟು ನೀವು ಪೂಜೆ ಎಲ್ಲ ಆದ್ಮೇಲೆ ನೀವು ದೇವಸ್ಥಾನಕ್ಕೆ ಕೊಡಬಹುದು

ಇಲ್ಲ ಅಂದ್ರೆ ನಿಮ್ಮ ಸ್ವಂತ ತಾಯಿ ತಂದೆ ಇದ್ರು ಅಂದ್ರೆ ನಿಮ್ಮ ತಾಯಿಗೂ ಸಹ ಕರೆದು ಕೊಡಬಹುದು, ಅಥವಾ ನಿಮ್ಮ ಅಕ್ಕ ತಂಗಿಯರಿಗೂ ಸಹ ನೀವು ಕೊಡಬಹುದು. ತೊಂದರೆ ಇಲ್ಲ ಯಾರಿಗ್ ಸರಿನೋ ಲಕ್ಷ್ಮಿಯ ಸಂಕೇತ ಅಂತ ಹೇಳಿ ನೀವು ಅವರಿಗೆ ಕರೆದು ಕೊಡಬಹುದು. ಇದಿಷ್ಟು ಸಿದ್ಧತೆಗಳು ನೀವು ಮಾಡ್ಕೋಬೇಕಾಗಿರುವಂತದ್ದು . ನಂತರದಲ್ಲಿ ಊದುಬತ್ತಿಯನ್ನು ಬೆಳಗಿ ಧೂಪವನ್ನ ಹಚ್ಚಬೇಕು.

ಧೂಪವನ್ನು ನಾವು ದೇವರ ಮುಂದೆ ಅಷ್ಟೇ ಅಲ್ಲದೆನೇ ಇಡೀ ಮನೆ ಪೂರ್ತಿಯಾಗಿ ನಾವು ಧೂಪದ ಒಂದು ಹೊಗೆಯನ್ನ ತೋರಿಸಬೇಕು. ಅಂದ್ರೆ ಅಮ್ಮನವರಿಗೆ ತುಂಬಾ ಪ್ರಿಯವಾದದ್ದು ಅದು ಹಾಗಾಗಿ ಅದಕ್ಕೆ ಸ್ವಲ್ಪ ಲವಂಗ ಮತ್ತೆ ಪಚ್ಚಕರ್ಪೂರ ವನ್ನ ಹಾಕಿ ನೀವು ದೂಪವನ್ನು ತೋರಿಸಿ ನಂತರದಲ್ಲಿ ಅಷ್ಟೋತ್ತರವನ್ನು ಮಾಡಿಕೊಳ್ಳಬೇಕು.

ಈ ಒಂದು ದೀಪಾರಾಧನೆ ನಾನು ಮುಂದಿನ ವಿಡಿಯೋದಲ್ಲಿ ತಿಳಿಸಿ ಕೊಡ್ತಾ ಹೋಗ್ತೇನೆ. ಇದು ಸ್ವಲ್ಪ ವಿಶೇಷವಾದ ದೀಪಾರಾಧನೆ ಇದಕ್ಕೆ ತುಪ್ಪವನ್ನು ಹಾಕಿ ನಾವು ದೀಪಾರಾಧನೆ ಮಾಡಬೇಕಾಗುತ್ತದೆ. ಆಮೇಲೆ ನೀವು ಕುಂಕುಮಾರ್ಚನೆ ಮಾಡ್ಕೋಬಹುದು. ಕುಂಕುಮಾರ್ಚನೆಯಲ್ಲಿ ನೀವು ಕುಂಕುಮದಿಂದ ಅರ್ಚನೆಯನ್ನು ಮಾಡಿದ ನಂತರದಲ್ಲಿ

ನೀವು ಬೇಕಾದರೆ ಬಳೆಗಳಿಂದಲೂ ಕೂಡ ಅರ್ಚನೆಯನ್ನು ಮಾಡಬಹುದು. ಬೆಳಿಗ್ಗೆ ಒಮ್ಮೆ ಸಂಜೆ ಒಮ್ಮೆ ನೀವು ಅರ್ಚನೆಯನ್ನು ಮಾಡಬಹುದು. ಬೆಳಗ್ಗೆ ಕುಂಕುಮಾರ್ಚನೆ ಮಾಡಿ ಸಂಜೆ ಬಳೆ ಅಥವಾ ಕವಡೆಗಳಿಂದ ಅರ್ಚನೆಯನ್ನು ಮಾಡಬಹುದು. ಹಾಗೆ ಮೂರು ದೀಪಗಳನ್ನು ಹಚ್ಚುವುದನ್ನು ಮರಿಬೇಡಿ. ನಾವು ಪಿತೃಗಳ ಅನುಗ್ರಹ ಪಡೆಯುವುದಕ್ಕೋಸ್ಕರ

ಕುಲದೇವರ ಮತ್ತು ಲಕ್ಷ್ಮಿ ಅನುಗ್ರಹ ಪಡೆಯುವುದಕ್ಕೋಸ್ಕರ ಈ ಮೂರು ದೀಪವನ್ನು ಹಚ್ತೇವೆ. ಹಾಗಾಗಿ ನಾವು ಒಂದು ಅಮ್ಮನವರ ಕೆಳಗಿನ ಭಾಗದಲ್ಲಿ ದೀಪವನ್ನು ಇಟ್ಟು ದೀಪ ಹಚ್ಬೇಕಾಗುತ್ತೆ. ನೀವು ಅಷ್ಟೋತ್ತರ ಎಲ್ಲಾ ಆದ ನಂತರದಲ್ಲಿ ಮತ್ತೊಮ್ಮೆ ನೀವು ಧೂಪವನ್ನು ತೋರಿಸಿ ಆಮೇಲೆ ಮಂಗಳಾರತಿ ಮಾಡಬೇಕು. ಮಂಗಳಾರತಿ ಅಂತ ಬಂದಾಗ ನಾವು ದಿನನಿತ್ಯ ಏನ್ ಮಾಡ್ತೀವಿ ಅಂತಂದ್ರೆ ಏಕಾರತಿ ಮಾಡ್ತೀವಿ ಅಷ್ಟೇ.

ಈ ಒಂದು ಪೂಜೆಯಲ್ಲಿ ವಿಶೇಷವಾಗಿ ನಾವು ಪಂಚಾರತಿ ಮಾಡೋದು ಏಕಾರತಿ ಮಾಡೋದು, ವಿಶೇಷವಾಗಿ ದೀಪಾರಾಧನೆಗಳನ್ನ ಮಾಡೋದು ತುಂಬಾ ವಿಶೇಷವಾದದ್ದು. ಎಷ್ಟು ಸಾಧ್ಯನೋ ಅಷ್ಟು ದೀಪಾರಾಧನೆ ಮಾಡಿ ತುಂಬಾ ಅಂದ್ರೆ ತುಂಬಾನೇ ಫಲ ಸಿಗ್ತಾ ಹೋಗತ್ತೆ. ಈಗ ಮನೆ ಹೊರಗೂ ಕೂಡ ಮಾಡಿರುತ್ತೀರಿ. ಸಗಣಿ ಪೂಜೆ ಮಾಡಿರ್ತೀರಿ. ಅಲ್ಲೂ ದೀಪಾರಾಧನೆ ಮಾಡಿರ್ತೀರಿ.

ತುಳಸಿ ಕಟ್ಟೆ ಹತ್ರ ಹಚ್ಚೀರ್ತೀರಿ. ಈಗ ಬನ್ನಿ ಗಿಡ ಮನೆಯಲ್ಲಿ ನೀವು ಬೆಳೆಸಿದ್ರೆ ಅಲ್ಲಿ ಕೂಡ ದೀಪ ಹಚ್ಚಿ ಹಾಗೆ ಈಗ ಬಾಲ್ಕನಿ ಕೆಲವೊಬ್ಬರಿಗೆ ಬಾಲ್ಕನಿ ಇರುತ್ತೆ ಅಲ್ಲೂ ಕೂಡ ದೀಪ ಹಚ್ಚೋದನ್ನ ಮರಿಬೇಡಿ. ಹೀಗೆ ಮನೆ ಪೂರ್ತಿಯಾಗಿ ನೀವು ಆದಷ್ಟು ದೀಪದ ಬೆಳಕಿನಲ್ಲಿ ನೀವು ಪೂಜೆ ಮಾಡ್ಕೊಳ್ಳೋದು, ದೀಪದ ಬೆಳಕಿನಲ್ಲಿ ದೇವರನ್ನು ನೋಡುವುದು ತುಂಬಾ ಅಂದ್ರೆ ತುಂಬಾನೇ ಫಲ ಸಿಗುವಂತದ್ದು.

ನೀವು ದೀಪದ ಬೆಳಕಿನಲ್ಲಿ ಒಮ್ಮೆ ದೇವರನ್ನು ನೋಡಿ ನಿಮಗೆ ಎಷ್ಟು ಖುಷಿಯಾಗುತ್ತೆ ಅಂದ್ರೆ ಅದು ಹೇಳೋದಕ್ಕೆ ಅಸಾಧ್ಯವಾದ ಮಾತು. ಯಾಕಂದ್ರೆ ನಾವು ಅಷ್ಟು ಚೆನ್ನಾಗಿ ಅಲಂಕಾರ ಮಾಡಿರ್ತೀವಿ. ಆ ದೀಪದ ಬೆಳಕಿನಲ್ಲಿ ನಾವು ಅಮ್ಮನವರನ್ನು ನೋಡಿದಾಗ ಸ್ವತಃ ಅಮ್ಮನವರೇ ಬಂದು ನಮ್ಮ ಮನೆಯಲ್ಲಿ ಕುಳಿತುಕೊಂಡಿದ್ದಾರೆ ಅನ್ನೋ ಮಟ್ಟಕ್ಕೆ ನಮಗೆ ಅದು ಫೀಲ್ ಆಗುತ್ತೆ.

ಗುಡ್ ಫೀಲ್ ಆಗುತ್ತೆ ಹಾಗಾಗಿ ಆದಷ್ಟು ಎಲ್ಲರೂ ಕೂಡ ದೀಪಾರಾಧನೆ ಮಾಡಿ ನಂತರದಲ್ಲಿ ಪೂಜೆಯಲ್ಲ ಆದಮೇಲೆ ನೀವು ಕಳಸವನ್ನ ಬೆಳಗಬೇಕು. ಬೆಳಗ್ಗೆನೂ ಒಮ್ಮೆ ಒಂದ್ಸಲ ಕಳಸ ಬೆಳಗಿ ಈಗ ನೀವು ಸಂಜೆ ಮಾಡಿದ್ರೆ ಸಂಜೆ ಕಳಸ ಬೆಳಗಬಹುದು. ಕೆಲವೊಬ್ಬರು ಅಮಾವಾಸ್ಯೆ ಪೂಜೆಯನ್ನು ಸಂಜೆ ಸಮಯದಲ್ಲಿ ಮಾಡ್ತಾರೆ. ಈ ಲಕ್ಷ್ಮಿ ಪೂಜೆ ಮಾಡೋದೇ ಸಂಜೆ ಸಮಯದಲ್ಲಿ ಅಂದ್ರೆ ಆಫೀಸ್ ನಲ್ಲಿ ಆಗಿರಬಹುದು

ಅಥವಾ ನೀವು ಬಿಸಿನೆಸ್ ಮಾಡ್ತಾ ಇದ್ರೆ ನಿಮ್ಮ ಒಂದು ವ್ಯಾಪಾರ ಸ್ಥಳಗಳಲ್ಲಿ ಸಾಮಾನ್ಯವಾಗಿ ಸಂಜೆ ಸಮಯದಲ್ಲೇ ಮಾಡುವಂತದ್ದು ಇದನ್ನ. ಹಾಗಾಗಿ ನೀವು ಈಗ ಭಾನುವಾರ ಸಂಜೆ ಮಾಡ್ತಾ ಇದ್ದೀರಿ ಅಂತಂದ್ರೆ ಇದೇ ರೀತಿನೇ ಮಾಡಿ ಅಥವಾ ಸೋಮವಾರ ಬೆಳಗ್ಗೆ ಮಾಡ್ತಾ ಇದೀನಿ ಅಂದ್ರೆ ಇದೇ ರೀತಿನೇ ಮಾಡಿ ಮತ್ತೊಮ್ಮೆ ಸಂಜೆ ಇನ್ನೊಮ್ಮೆ ನೀವು ಮಂಗಳಾರತಿಯನ್ನ ಮಾಡಿ

ಮತ್ತೊಮ್ಮೆ ಕಳಸವನ್ನು ಬೆಳಗಿ ಕೊನೆಯಲ್ಲಿ ಕೆಂಪಾರತಿ ಮಾಡಬೇಕು. ಈಗ ನೀವು ಆಫೀಸ್ ಗಳಲ್ಲಿ ನೀವು ಪೂಜೆ ಮಾಡಿದ್ದೀರಿ ಅಂದ್ರೆ ರಾತ್ರಿಯ ಸಮಯದಲ್ಲಿ ನೀವು ಕೆಂಪಾರತಿ ಮಾಡಿ ಅಂದ್ರೆ ಸಂಜೆ ನೀವು ಆಫೀಸನ್ನ ಕ್ಲೋಸ್ ಮಾಡುವಂತ ಸಮಯದಲ್ಲಿ ನೀವು ಒಂದ್ಸಲ ಕೆಂಪಾರತಿ ಮಾಡಿ ನಂತರ ಅದನ್ನು ಕ್ಲೋಸ್ ಮಾಡಿ. ಈಗ ಮನೇಲಿ ಮಾಡಿದ್ರು ಅಷ್ಟೇನೆ ಒಂದ್ ಸಲ ಕೆಂಪಾರತಿ ಮಾಡಿ ಆದರೆ ಅಮಾವಾಸ್ಯೆಯ

ದಿವಸ ಪೂಜೆ ಮಾಡಿದ ಮೇಲೆ ಕಳಸ ಕತ್ತರಿಸೋದಕ್ಕೆ ಬರೋದಿಲ್ಲ. ಈ ಕಳಸದ ಬಗ್ಗೆ ನಾನು ತುಂಬಾನೇ ಮಾಹಿತಿ ಕೊಡೋದಿದೆ. ಯಾಕಂದ್ರೆ ತುಂಬಾ ಜನ ನನಗೆ ಅದರ ಬಗ್ಗೆ ಕೇಳಿದ್ದೀರಿ. ಹಾಗಾಗಿ ನಿಮಗೆ ಅರ್ಥವಾಗುವ ರೀತಿಯಲ್ಲಿ ನಾನು ಖಂಡಿತವಾಗಿ ತಿಳಿಸಿಕೊಡುತ್ತೇನೆ ಮುಂದಿನ ವಿಡಿಯೋದಲ್ಲಿ ಕಳಸದ ಬಗ್ಗೆ ಹೇಳಲೇಬೇಕು ನಾನು. ಈ ಕೆಂಪಾರತಿಯನ್ನು ಬೆಳಗಿ ಅಮ್ಮನವರಿಗೆ ಸ್ವಲ್ಪ ಹಚ್ಚ್ ಬಿಟ್ಟು

ಆ ಕೆಂಪಾರತಿಯನ್ನು ಹಾಗೇನೇ ಇಡಿ. ಹೊರಗೆ ಹಾಕೋದಕ್ಕೆ ಹೋಗ್ಬೇಡಿ. ಬೆಳಗಿನ ಸಮಯದಲ್ಲಿ ಸೂರ್ಯೋದಯದ ನಂತರ ಸಮಯದಲ್ಲಿ ನಾವು ಆ ನೀರನ್ನ ಮನೆಯಿಂದ ಹೊರಗೆ ಹಾಕಬೇಕಾಗುತ್ತದೆ. ಇದಿಷ್ಟು ನೀವು ಲಕ್ಷ್ಮಿ ಪೂಜೆ ಮಾಡ್ಬೇಕಾಗಿರುವಂತದ್ದು, ಇನ್ನು ಕಾಯಿ ಅಂತ ಬಂದಾಗ ಕಾಯನ್ನ ಒಂದು ಸಂಕಲ್ಪ ಮಾಡಿಟ್ಟಿರ್ತೀರ,

ಅದೇ ಒಂದು ಕಾಯನ್ನು ಒಡೆದು ಮಂಗಳಾರತಿಯನ್ನ ಮಾಡಿ ನಂತರದಲ್ಲಿ ಪ್ರಸಾದ ನೈವೇದ್ಯ ಮಾಡಿ, ತೀರ್ಥವನ್ನು ಪ್ರೋಕ್ಷಣೆ ಮಾಡಿ ಆಮೇಲೆ ನೀವು ಮನೆಗೆ ಕುಂಕುಮಕ್ಕೆ ಕರೆದಿದ್ದರೆ ಅಥವಾ ನಿಮ್ಮ ಆಫೀಸ್ ಗಳಲ್ ಆಗಿರಬಹುದು ಅಲ್ಲಿ ನೀವು ಯಾರನ್ನಾದರೂ ಪೂಜೆಗೆ ಅಂತ ಕರೆದಿದ್ದರೆ ಅವರಿಗೆ ಒಂದು ಸ್ವಲ್ಪ ಸಿಹಿಯನ್ನ ಹಂಚಿ ನಂತರದಲ್ಲಿ ನೀವು ಪೂಜೆಯನ್ನು ಮುಕ್ತಾಯ ಮಾಡಬೇಕಾಗುತ್ತದೆ.

ಇದಿಷ್ಟು ನೀವು ಫ್ರೆಂಡ್ಸ್ ಲಕ್ಷ್ಮಿ ಪೂಜೆ ಮಾಡ್ಬೇಕಾಗಿರುವಂತದ್ದು. ನಾನು ಮುಂದಿನ ದಿನಗಳಲ್ಲಿ ನಿಮಗಿನ್ನೂ ಹಬ್ಬದ ಬಗ್ಗೆ ಮಾಹಿತಿ ಕೊಡೋದಿದೆ. ಆದಷ್ಟು ಬೇಗ ಮಾಹಿತಿ ಕೊಡುತ್ತೇನೆ. ಯಾವುದು ಕೂಡ ಮಿಸ್ ಮಾಡಿಕೊಳ್ಳುವುದಕ್ಕೆ ಹೋಗೋದಿಲ್ಲ. ಇದೇ ರೀತಿ ಪೂಜೆನ ಬಲಿಪಾಡ್ಯಮಿ ದಿವಸ ಲಕ್ಷ್ಮಿ ಪೂಜೆ ಮಾಡುವಂತವರು ಸಹ ಇದೇ ರೀತಿನೇ ಮಾಡ್ತಾರೆ.

ನೀವು ದೇವರ ಮನೆಯಲ್ಲಿ ನೀವು ಮಾಮೂಲಿ ಈಗ ಅಮಾವಾಸ್ಯೆ ಪೂಜೆ ಯಾವ ರೀತಿ ಮಾಡ್ತಿರೋ ಅದೇ ರೀತಿನೇ ಮಾಡ್ಕೊಳ್ಳಿ ಆದ್ರೆ ಲಕ್ಷ್ಮಿ ಪೂಜೆ ವಿಶೇಷವಾಗಿ ನೀವು ಮಾಡಬೇಕಾಗಿರೋದು ಇದೇ ರೀತಿನೇ ಆಗಿರುತ್ತದೆ. ಸೋ ನಾನು ಇವತ್ತು ನಿಮಗೆ ತಿಳಿಸಿ ಕೊಟ್ಟಿರೋ ಮಾಹಿತಿ ಹೇಗಿತ್ತು ಅಂತ ಹೇಳಿ ಒಂದು ಕಮೆಂಟ್ ಮಾಡಿ.

Leave A Reply

Your email address will not be published.