ಈ ಒಂದು ಹೆಸರಿನ ವ್ಯಕ್ತಿಗಳನ್ನು ಮಾತ್ರ ಎದುರು ಹಾಕಿಕೊಳ್ಳಬೇಡಿ!

0

ನಾವು ಈ ಲೇಖನದಲ್ಲಿ ಈ ಒಂದು ಹೆಸರಿನ ವ್ಯಕ್ತಿಗಳನ್ನು ಮಾತ್ರ ಎದುರು ಹಾಕಿಕೊಳ್ಳುವುದರಿಂದ ಏನು ಆಗುತ್ತದೆ. ಎಂದು ತಿಳಿದುಕೊಳ್ಳೋಣ . A ಅಕ್ಷರದಿಂದ ಆರಂಭವಾಗುವ ಕೆಲವು ವ್ಯಕ್ತಿಗಳ ದೌರ್ಬಲ್ಯವನ್ನು ತಿಳಿದುಕೊಳ್ಳುವ ಕುತೂಹಲ ಮಾಹಿತಿಯನ್ನು ತಿಳಿಯೋಣ . ನಿಮ್ಮ ಮನೆಯಲ್ಲಿ , ಅಥವಾ ಸ್ನೇಹಿತರು , ಅಕ್ಕಪಕ್ಕದವರು, ಸಂಬಂಧಿಕರು “A ” ಅಕ್ಷರದಿಂದ ಆರಂಭವಾಗುವ ಹೆಸರಿನವರು ಇದ್ದರೆ, ಅವರ ಸ್ವಭಾವದ ಬಗ್ಗೆ ವಿಸ್ತಾರವಾಗಿ ತಿಳಿದುಕೊಳ್ಳೋಣ.

A ಅಕ್ಷರದಿಂದ ಆರಂಭವಾಗುವ ಹೆಸರಿನ ವ್ಯಕ್ತಿ ಹೇಗಿರುತ್ತಾರೆ… ? ಅವರ ವ್ಯಕ್ತಿತ್ವ ಹೇಗೆ ಇರುತ್ತದೆ…? ಜೊತೆಗೆ ನಾವು ಒಡನಾಟ ಬೆಳಸಿಕೊಂಡರೆ, ಅವರೊಂದಿಗೆ ಹೇಗೆ ಇರುತ್ತದೆ…? ಎಂದು ತಿಳಿಯೋಣ . ನಮ್ಮ ಜೀವನದಲ್ಲಿ ನಮ್ಮವರು ಎಂದು ಯಾರಾದರೂ ಇರಲೇ ಬೇಕು. ಒಂಟಿಯಾಗಿ ನಾವು ಎಂದೂ ಜೀವನ ನಡೆಸಲು ಸಾಧ್ಯವಿಲ್ಲ. ಜೀವನದ ಖುಷಿ , ದುಃಖಗಳಲ್ಲಿ ನಮ್ಮವರು ನಮ್ಮ ಜೊತೆಗೆ ಇದ್ದರೆ, ಅದೃಷ್ಟವಂತರೂ ಯಾರೂ ಇಲ್ಲ. ನಾವು ಜೀವನದಲ್ಲಿ ಅನೇಕ ವ್ಯಕ್ತಿಗಳನ್ನು ನೋಡಿರುತ್ತೇವೆ.

ಅವರೊಂದಿಗೆ ಕೆಲವು ಸಮಯ ಕೂಡ ಕಳೆದಿರುತ್ತೇವೆ. ಇಂತಹ ಸಮಯದಲ್ಲಿ ಅವರು ನಮಗೆ ಯೋಗ್ಯರೂ ಅನ್ನಿಸಿದರೆ, ಅವರೊಂದಿಗೆ ನಮ್ಮ ಸಂಬಂಧವನ್ನು ಮುಂದುವರಿಸುತ್ತೇವೆ. ಇಲ್ಲಾ ಅಂದರೆ , ಅವರನ್ನು ದೂರ ಇಡುತ್ತೇವೆ. ಹಾಗಾದರೆ, A ಅಕ್ಷರದಿಂದ ಆರಂಭವಾಗುವ ಕೆಲವು ಧನಾತ್ಮಕ ವಿಚಾರ ಮತ್ತು ದೌರ್ಬಲ್ಯವನ್ನು ನೋಡೋಣ .

A ಅಕ್ಷರದಿಂದ ಆರಂಭವಾಗುವ ಹೆಸರಿನವರು ತುಂಬಾ ಆಕರ್ಷಕವಾಗಿ ಇರುತ್ತಾರೆ. ಇವರನ್ನು ಒಮ್ಮೆ ನೋಡಿದರೆ, ಸಾಕು ಮತ್ತೊಮ್ಮೆ ತಿರುಗಿ ನೋಡಬೇಕು ಅನ್ನೋವಷ್ಟು ಆಕರ್ಷಕವಾಗಿ ಇರುತ್ತಾರೆ. ಈ ಹೆಸರಿನವರು ಸೌಂದರ್ಯವನ್ನು ಇಷ್ಟ ಪಡುತ್ತಾರೆ. ಸ್ವತಃ ಅವರೂ ಕೂಡ ತುಂಬಾ ಸೌಂದರ್ಯವಾಗಿ ಇರುತ್ತಾರೆ. ಇವರು ಸುಂದರವಾಗಿ ಇರುತ್ತಾರೆ. ಆದರೆ ಸ್ವಭಾವದಲ್ಲಿ ತುಂಬಾ ಭಾವುಕವಾಗಿ ಇರುತ್ತಾರೆ. ಭಾವ ಜೀವಿ ಎಂದೂ ಕೂಡ ಹೇಳಬಹುದು .

ಇವರಿಗೆ ಸಿಟ್ಟನ್ನು ಕಡಿಮೆ ಮಾಡಲು ಆಗುವುದಿಲ್ಲ. ಹಾಗಾಗಿ ಇವರಿಗೆ ಬಹಳ ಬೇಗ ಸಿಟ್ಟು ಬರುತ್ತದೆ. ಇವರದು ಒಂದು ವಿಶೇಷ ಸ್ವಭಾವ ತಾವು ಹೇಳುವುದನ್ನು ಎಲ್ಲರೂ ಕೇಳಬೇಕು ಅನ್ನೋ ಮನಸ್ಥಿತಿ ಇವರದು ಆಗಿರುತ್ತದೆ. ಅಂದರೆ ತಮ್ಮ ಮಾತು ಎಲ್ಲಾ ಕಡೆ ನಡೆಯಬೇಕು. ತಾವು ಹೇಳಿದ್ದು ಎಲ್ಲರೂ ಕೇಳಬೇಕು , ಒಂದು ವೇಳೆ ಯಾರು ಇವರ ಮಾತನ್ನ ಕೇಳುವುದಿಲ್ಲವೋ , ಒಂದು ವೇಳೆ ಇವರ ಮಾತಿಗೆ ಯಾರು ವಿರುದ್ಧವಾಗುತ್ತಾರೋ , ಇದನ್ನು ಸಹಿಸಿಕೊಳ್ಳುವ ಶಕ್ತಿ ಇರುವುದಿಲ್ಲ .

ಇದರಿಂದ ಈ ಹೆಸರಿನ ಅಕ್ಷರದವರು ಅನೇಕ ಬಾರಿ ನಿರಾಸೆಗೆ ಒಳಗುಗುತ್ತಾರೆ. ಈ ಅಕ್ಷರದಿಂದ ಆರಂಭವಾಗುವ ಹೆಸರಿನ ವ್ಯಕ್ತಿಗಳು ತಮ್ಮ ವಿದ್ಯಾಭ್ಯಾಸ ಮತ್ತು ತಮ್ಮ ವೃತ್ತಿಯನ್ನು ಈ ಎರಡನ್ನು ತುಂಬಾ ಗಂಭೀರವಾಗಿ ತೆಗೆದುಕೊಳ್ಳುತ್ತಾರೆ. ವಿದ್ಯಾಭ್ಯಾಸದಲ್ಲಿ ಸದಾ ಕಾಲ ಮುಂದೆ ಇರುತ್ತಾರೆ . ಚೆನ್ನಾಗಿ ಓದಿ ಒಳ್ಳೆಯ ಕೆಲಸ ಮಾಡಿ, ಜೀವನದಲ್ಲಿ ನೆಲೆಯೂರಬೇಕು ಎಂಬ ಆಶಾವಾದಿಗಳು ಆಗಿರುತ್ತಾರೆ. ಯಾವುದಾದರೂ ಕೆಲಸ ಮಾಡಬೇಕು ಅಂದುಕೊಂಡರೆ , ಅಥವಾ ಯಾವುದಾದರೂ ಕೆಲಸ ಇದ್ದರೆ,

ಮುಗಿಸುವವರೆಗೂ ಕೂಡ ಇವರು ಸುಮ್ಮನೆ ಕೂರುವುದಿಲ್ಲ . ಏನೇ ಆಗಲಿ ಆ ಕೆಲಸ ಮುಗಿಯಬೇಕು ಎಂಬ ಪಣತೊಟ್ಟು , ಕೆಲಸ ಮಾಡಿ ಮುಗಿಸುತ್ತಾರೆ . ಇವರಿಗೆ ಜೀವನದಲ್ಲಿ ಯಶಸ್ಸು ಪಡೆಯಬೇಕು ಅಂದರೂ ಅದು ಸಲೀಸಾಗಿ ಸಿಗುವುದಿಲ್ಲ . ತಡವಾಗಿ ಲಭಿಸುತ್ತದೆ . ಇವರ ಜೀವನದಲ್ಲಿ ಎಷ್ಟೇ ಸಂಘರ್ಷಗಳು ಬಂದರೂ ಕೂಡ , ಅದೆಲ್ಲವನ್ನು ಎದುರಿಸಿ, ತಮ್ಮ ಗುರಿಯನ್ನು ಸಾಧಿಸುತ್ತಾರೆ . ಈ ಹೆಸರಿನ ಅಕ್ಷರರಿಂದ ಆರಂಭವಾಗುವ ವ್ಯಕ್ತಿಗಳ ಜೀವನದಲ್ಲಿ ಪ್ರೀತಿ ಎಂಬುದು ತುಂಬಾ ಮಹತ್ವವನ್ನು ಪಡೆದುಕೊಳ್ಳುತ್ತದೆ .

ಪ್ರೀತಿಗೆ ಅಥವಾ ಪ್ರೀತಿ ಪಾತ್ರರಿಗೆ ಇವರು ಹೆಚ್ಚು ಬೆಲೆಯನ್ನು ಕೊಡುತ್ತಾರೆ . ಇಷ್ಟೆಲ್ಲಾ ಇದ್ದರೂ ಕೂಡ ಇವರು ತಮ್ಮ ಪ್ರೀತಿ ಪಾತ್ರರ ಜೊತೆಗೆ ಹೆಚ್ಚು ಪ್ರೀತಿಯಿಂದ ಇರುವುದಿಲ್ಲ . ತಮ್ಮ ಪ್ರೀತಿ ಪಾತ್ರರನ್ನು ಅತೀ ಹೆಚ್ಚು ಪ್ರೀತಿಸುತ್ತಾರೆ. ಆದರೆ ಇವರಿಗೆ ಇರುವ ಒಂದು ದೌರ್ಬಲ್ಯ ಏನೆಂದರೆ, ಇವರಿಗೆ ಹೆಚ್ಚು ಪ್ರೀತಿಯಿಂದ ಇರಲು ಬರುವುದಿಲ್ಲ . ಪ್ರೀತಿಯ ವಿಷಯದಲ್ಲಿ ಇವರು ತುಂಬಾ ಅದೃಷ್ಟವಂತರು. ಇವರು ಇಷ್ಟ ಪಟ್ಟಿರುವುದಕ್ಕಿಂತ ಹೆಚ್ಚು ಪ್ರೀತಿಯನ್ನು ಇವರು ಪಡೆಯು ತ್ತಾರೆ.

ಪ್ರೀತಿ ಉಳಿಸಿಕೊಳ್ಳುವುದಕ್ಕೆ ಇವರು ಹೆಚ್ಚು ಪ್ರಯತ್ನ ಮಾಡುತ್ತಾರೆ . ಇವರು ತುಂಬಾ ಸಲೀಸಾಗಿ ಸಂಬಂಧವನ್ನು ಮುರಿದುಕೊಳ್ಳುವುದಿಲ್ಲ. ಈ ಹೆಸರಿನಿಂದ ಪ್ರಾರಂಭವಾಗುವ ವ್ಯಕ್ತಿಗಳ ಗುಣ ತುಂಬಾ ಒಳ್ಳೆಯದಾಗಿರುತ್ತದೆ . ಇವರು ಇನ್ನೊಬ್ಬರಿಗೆ ಮೋಸ ಮಾಡುವ ಗುಣವನ್ನು ಹೊಂದಿರುವುದಿಲ್ಲ . ಮೋಸ ಮಾಡುವ ವ್ಯಕ್ತಿಗಳನ್ನು ಇವರು ಇಷ್ಟಪಡುವುದಿಲ್ಲ . ಅಂಥವರಿಂದ ಸದಾಕಾಲ ಇವರು ದೂರ ಇರುತ್ತಾರೆ . ಮೋಸ ಮಾಡುವವರಿಗೆ ದ್ವೇಷ ಮಾಡುವ ಪ್ರವೃತ್ತಿಯನ್ನು ಈ ವ್ಯಕ್ತಿಗಳು ಹೊಂದಿರುತ್ತಾರೆ .

ಈ ವ್ಯಕ್ತಿಗಳು ತುಂಬಾ ಖುಷಿಯಾಗಿರುವುದನ್ನು ಇಷ್ಟಪಡುತ್ತಾರೆ . ಸಮಾರಂಭಗಳಿಗೆ ಹೋಗುವುದು ಎಂದರೆ ವ್ಯಕ್ತಿಗಳಿಗೆ ತುಂಬಾ ಇಷ್ಟ . ಜನರ ಮಧ್ಯೆ ಇರುವುದು ಇವರ ಮತ್ತೊಂದು ಆಸೆ . ಇವರಿಗೆ ಯಾವಾಗಲೂ ಒಂಟಿಯಾಗಿರಲು ಆಗುವುದಿಲ್ಲ . ಧೈರ್ಯವಂತರು ಅಂತ ಎಷ್ಟು ತೋರಿಸಿಕೊಳ್ಳುತ್ತಾರೋ , ಅದರ ದುಪ್ಪಟ್ಟು ಧೈರ್ಯ ಇರುತ್ತದೆ .ಈ ವ್ಯಕ್ತಿಗಳು ತಮ್ಮ ಗುಣಗಾನವನ್ನು ತಾವು ಮಾಡಿಕೊಳ್ಳಲು ಇಷ್ಟಪಡುವುದಿಲ್ಲ . ಹುಟ್ಟಿನಿಂದಲೇ ಒಳ್ಳೆಯ ಗುಣಗಳನ್ನು ಬೆಳೆಸಿಕೊಂಡು ಬಂದಿರುತ್ತಾರೆ .

ಸಮಾಜದಲ್ಲಿ ವ್ಯಕ್ತಿಗಳಿಗೆ ವಿಶೇಷ ಸ್ಥಾನ ಇರುತ್ತದೆ .ಮನೆಯಲ್ಲೂ ಕೂಡ ಈ ವ್ಯಕ್ತಿಗೆ ವಿಶಿಷ್ಟ ಸ್ಥಾನವನ್ನು ನೀಡುತ್ತಾರೆ . ಈ ವ್ಯಕ್ತಿಗಳು ತಮ್ಮಲ್ಲಿರುವ ವಿಷಯವನ್ನು ಯಾರ ಮುಂದೆ ಕೂಡ ಹಂಚಿಕೊಳ್ಳುವುದಿಲ್ಲ. ಇವರಲ್ಲಿ ಇರುವ ಒಂದು ದೌರ್ಬಲ್ಯ ಇವರ ವ್ಯಕ್ತಿತ್ವವನ್ನು ಹಾಳು ಮಾಡುತ್ತದೆ. ಇವರಲ್ಲಿ ಇರುವ ಕೋಪಿಷ್ಠ ಗುಣವೇ ಇವರ ದೌರ್ಬಲ್ಯ . ಇವರು ತಮ್ಮ ಕೋಪವನ್ನು ತಡೆದು ಕೊಳ್ಳುವುದಿಲ್ಲ .ಮಾತು ಮಾತಿಗೂ ಇವರು ಕೋಪಗೊಳ್ಳುತ್ತಾರೆ . ಇಷ್ಟೆಲ್ಲಾ ಒಳ್ಳೆಯ ಕೆಲಸವನ್ನು ಮಾಡಿದ

ಈ ವ್ಯಕ್ತಿಗಳು ತಮ್ಮ ಕೋಪದಿಂದ ತಾವು ಮಾಡಿದ ಎಲ್ಲಾ ಒಳ್ಳೆಯ ಕೆಲಸಗಳು ನೀರಲ್ಲಿ ಹುಣಸೆ ಹಣ್ಣು ಹಿಂಡಿದಂತೆ ಆಗುತ್ತದೆ. ಈ ಒಂದು ನಕಾರಾತ್ಮಕ ಗುಣದಿಂದ ಇವರು ಬೇರೆಯವರಿಗೆ ಕೆಟ್ಟವರು ಆಗುತ್ತಾರೆ . ಇವೆಲ್ಲಾ A ಈ ಹೆಸರಿನಿಂದ ಆರಂಭವಾಗುವ ವ್ಯಕ್ತಿಗಳ ಗುಣಗಳು. ಈ ವ್ಯಕ್ತಿಗಳನ್ನು ನಂಬಿದರೆ ಯಾವುದೇ ಮೋಸ ಇರುವುದಿಲ್ಲ . ತಮ್ಮ ಪ್ರಾಣವನ್ನು ಪಣಕ್ಕಿಟ್ಟಾದರೂ ಈ ವ್ಯಕ್ತಿಗಳು ತಮ್ಮ ಸಂಬಂಧವನ್ನು ಉಳಿಸಿಕೊಳ್ಳುತ್ತಾರೆ . ಈ ಹೆಸರಿನ ವ್ಯಕ್ತಿಗಳು ನಿಮ್ಮ ಜೊತೆಗೆ ಇದ್ದರೆ , ಯಾವುದೇ ಕಾರಣಕ್ಕೂ ಕಳೆದುಕೊಳ್ಳಬೇಡಿ . ಕೋಪಿಷ್ಟರು ಅನ್ನುವ ಗುಣದಿಂದ ಇವರನ್ನು ದೂರ ಮಾಡಿಕೊಳ್ಳಬೇಡಿ .

Leave A Reply

Your email address will not be published.