ಫೆಬ್ರವರಿ ಮೀನ ರಾಶಿಗೆ ಯಾಕೆ ಹೀಗೆ?

0

ನಾವು ಈ ಲೇಖನದಲ್ಲಿ ಫೆಬ್ರವರಿ ತಿಂಗಳ ಮೀನ ರಾಶಿಯ ಭವಿಷ್ಯ ಹೇಗೆ ಇರುತ್ತದೆ. ಎಂದು ತಿಳಿಯೋಣ . ರಾಶಿಯಲ್ಲಿ ರಾಹು ಮೀನ ರಾಶಿಯಲ್ಲಿ . ಹಿಂದಿನ ರಾಶಿಯಲ್ಲಿ ಅಂದರೆ, ಕುಂಭ ರಾಶಿಯಲ್ಲಿ ಶನಿ ಇರುವಂತದ್ದು, ಒಂದು ಕಡೆ ಸಾಡೇಸಾತಿ . ಇನ್ನೊಂದು ಕಡೆ ರಾಹುವಿನ ಅಸ್ತಿತ್ವ ರಾಶಿಯಲ್ಲಿ . ಇವೆರಡೂ ಬಹಳಷ್ಟು ಅನುಮಾನ ಮತ್ತು ಗೊಂದಲಗಳನ್ನು ಉಂಟು ಮಾಡುತ್ತದೆ . ಇದೆಲ್ಲದರ ಮಧ್ಯೆ ಫೆಬ್ರವರಿ ತಿಂಗಳಲ್ಲಿ ಒಳ್ಳೆಯ ತಿಂಗಳು ಆಗುತ್ತದೆ . ಬೇರೆ ಎಲ್ಲಾ ಗ್ರಹಗಳು ನಿಮ್ಮ ಸಾಕಾರಕ್ಕೆ ಬರುತ್ತದೆ.

ಬಹಳಷ್ಟು ಪರಿವರ್ತನೆಗಳು ಆಗುವ ಸಾಧ್ಯತೆ ಇದೆ. ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗುವ ಸಾಧ್ಯತೆ ಇದೆ . ಅನಾರೋಗ್ಯ ತೊಂದರೆಗಳು ಇದ್ದರೆ, ಅವುಗಳು ದೂರವಾಗುವ ಸಾಧ್ಯತೆ ಇದೆ. ಇಂತಹ ಒಳ್ಳೆಯ ಫಲಗಳು ಸಿಗುವ ಸಾಧ್ಯತೆ ಕೂಡ ಇದೆ. ನಿಮ್ಮ ಜೀವನದಲ್ಲಿ ಜಯ ಸಿಗಬೇಕೆಂದು ನಿರೀಕ್ಷೆ ಮಾಡಲಾಗುತ್ತದೆ . ಆದರೆ ಅದು ಯಾವಾಗಲೂ ಸಿಗುವುದಿಲ್ಲ . ಒಂದು ಸಲ ಸಿಕ್ಕಿದಾಗ ಅದು ಬಹಳಷ್ಟು ಪರಿವರ್ತನೆಯನ್ನು ಉಂಟುಮಾಡುತ್ತದೆ . ನೀವು ಕೆಲಸ ಹುಡುಕುತ್ತಿದ್ದರೆ ,

ಈ ತಿಂಗಳಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದೆ. ವ್ಯಾಪಾರ ವ್ಯವಹಾರಗಳಲ್ಲಿ ಫೆಬ್ರವರಿ ತಿಂಗಳಲ್ಲಿ ನಿರ್ಣಾಯಕವಾಗುವ ಸಾಧ್ಯತೆ ಇರುತ್ತದೆ . ಲಾಭ ಜಾಸ್ತಿ ಆಗುವ ಭರವಸೆಯನ್ನು ಅಥವಾ ಆಶ್ವಾಸನೆಯನ್ನು ನಿಮ್ಮ ದೊಡ್ಡವರಿಂದ ಸಿಗುವ ಸಾಧ್ಯತೆ ಇರುತ್ತದೆ . ಈ ತಿಂಗಳಲ್ಲಿ ಯಶಸ್ಸು ಸಿಗುವ ಸಾಧ್ಯತೆ ಇರುತ್ತದೆ . ಬೇರೆ ಎಲ್ಲ ಗ್ರಹಗಳು ನಿಮ್ಮ ಸಪೋರ್ಟ್ ಗೆ ಬರುತ್ತವೆ . ನಕಾರಾತ್ಮಕ ವಿಚಾರಗಳನ್ನು ಸಂಪೂರ್ಣವಾಗಿ ಬಿಟ್ಟುಬಿಡಿ . ಶನಿ ಮತ್ತು ರಾಹು ಗ್ರಹದ ವಿಚಾರವನ್ನು ಸಹ ತೆಗೆದು ಹಾಕಿ .

ಬಹಳಷ್ಟು ಪ್ರಸ್ತಾಪ ಮಾಡುವುದು ಬೇಡ . ರವಿಯ ಬಲ ಇದ್ದರೆ , ಬೇರೆ ಯಾವುದೇ ತೊಂದರೆಗಳು ಬಂದರೂ , ಅವುಗಳಿಂದ ತೊಂದರೆ ಆಗುವುದಿಲ್ಲ . ಅಂತಹ ಒಂದು ಶ್ರೀ ರಕ್ಷೆ ಈ ತಿಂಗಳಲ್ಲಿ ಸಿಗುತ್ತದೆ. ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಯಶಸ್ಸು ಖಂಡಿತವಾಗಿ ಸಿಗುತ್ತದೆ . ನಿಮ್ಮ ಪ್ರಯತ್ನಗಳಿಗೆ ಮನ್ನಣೆ ಸಿಗುತ್ತದೆ . ಬಹಳಷ್ಟು ಕೆಲಸಗಳಲ್ಲಿ ನಿಮಗೆ ಯಶಸ್ಸು ಹುಡುಕಿಕೊಂಡು ಬರುತ್ತದೆ ಎಂದು ಹೇಳುವುದಕ್ಕೆ ಆಗುವುದಿಲ್ಲ . ಪ್ರಯತ್ನ ಅಂತೂ ನಿಮ್ಮ ಕಡೆಯಿಂದ ನಡೆಯಬೇಕು .

ಮಾನವ ಪ್ರಯತ್ನ ಅನ್ನೋದು ಕೂಡ ಇರಬೇಕು . ಕೆಲವಷ್ಟು ಜನರಿಗೆ ಪ್ರಯತ್ನ ಪಟ್ಟರೂ ಅದರಲ್ಲಿ ಯಶಸ್ಸು ಸಿಗುವುದಿಲ್ಲ . ಮುಂದೆ ಏನಾಗುತ್ತದೆ ಎನ್ನುವ ಭಯ ಮನಸ್ಸಿನಲ್ಲಿ ಶುರುವಾಗುತ್ತದೆ . ಇಂಥಹ ವ್ಯಕ್ತಿಗಳಿಗೆ ನೆಮ್ಮದಿ ದೊರೆಯುವ ಸಾಧ್ಯತೆ ಇದೆ . ರವಿಯ ಗುಣ ಏನು ಅಂದರೆ , ಪ್ರಕಾಶ ಮಾನವನ್ನು ಕೊಡುವುದು . ಆ ಪ್ರಕಾಶ ಒಂದು ಆತ್ಮವಿಶ್ವಾಸದ ರೂಪದಲ್ಲಿ ಬರಬಹುದು . ಮತ್ತು ಭರವಸೆಯ ರೂಪದಲ್ಲಿ ಬರಬಹುದು . ಪರಿಸ್ಥಿತಿಯನ್ನು ಸುಧಾರಿಸುವ ಧೈರ್ಯ ಬರುತ್ತದೆ .

ಬದಲಾವಣೆ ಆಗುವ ಹೊಸ ಆಶಾವಾದ ಮೊಳಕೆಯೊಡೆಯುತ್ತದೆ. ಇದು ತುಂಬಾ ಮಹತ್ವ ಆಗುತ್ತದೆ . ಎಲ್ಲರಿಗೂ ಹಣ ಬೇಕಾಗುತ್ತದೆ. ಇವೆಲ್ಲದಕ್ಕೂ ಮೂಲ ನಿಮ್ಮನ್ನ ನೀವು ಯಾವ ರೀತಿ ಪ್ರಸ್ತುತ ಪಡಿಸಿಕೊಳ್ಳಬಹುದು ಅನ್ನುವ ವಿಚಾರ ಆಗುತ್ತದೆ. ಈ ಸಮಾಜದಲ್ಲಿ ಯಾವ ರೀತಿ ಬಿಂಬಿಸಬಹುದು . ರವಿ ಗ್ರಹದಿಂದ ನಿಮಗೆ ಈ ತಿಂಗಳಲ್ಲಿ ಆತ್ಮವಿಶ್ವಾಸ ಹೆಚ್ಚಾಗುವ ಸಾಧ್ಯತೆ ಇದೆ . ಇದರಿಂದ ನಿಮಗೆ ಬಹಳಷ್ಟು ಯಶಸ್ಸು ತಂದು ಕೊಡುವ ಸಾಧ್ಯತೆ ಇರುತ್ತದೆ . ಯಾರ್ಯಾರು ಯಾವ ಕ್ಷೇತ್ರಗಳಲ್ಲಿ ತೊಡಗಿ ಕೊಂಡಿರುತ್ತಾರೆ ಆ ಕ್ಷೇತ್ರದಲ್ಲಿ ಹೆಚ್ಚಿನ ಕೆಲಸ ಮಾಡುವ ಸಾಧ್ಯತೆ ಇರುತ್ತದೆ .

ವಿದ್ಯಾರ್ಥಿಗಳಿಗೂ ಕೂಡ ಯಶಸ್ಸನ್ನು ತಂದುಕೊಡುತ್ತದೆ . ಪಠ್ಯೇತರ ಚಟುವಟಿಕೆಗಳಲ್ಲೂ ಮುಂದುವರೆಯುವ ಸಾಧ್ಯತೆ ಇದೆ .ಇದನ್ನು ವಿಶೇಷವಾಗಿ ರವಿ ಕೊಡಲಿದ್ದಾನೆ . ಏಕೆಂದರೆ ವಿಶೇಷವಾಗಿ ಫೆಬ್ರವರಿ 19 ನೇ ತಾರೀಖಿನ ವರೆಗೂ ಬುಧ ಕೂಡ ಇದೇ ರಾಶಿಯಲ್ಲಿ ಉಳಿಯುವುದರಿಂದ ಅಂದರೆ, ಲಾಭದ ರಾಶಿಯಲ್ಲಿ ಉಳಿಯುವುದರಿಂದ , ಇವೆರಡೂ ಗ್ರಹಗಳು ಸೇರಿಕೊಂಡು , ಒಂದು ಪ್ರಬಲವಾದ ಬುಧಾಧಿತ್ಯವನ್ನು ಉಂಟು ಮಾಡುತ್ತವೆ. ಈ ಬುಧಾಧಿತ್ಯವೂ ಬಹಳಷ್ಟು ಖ್ಯಾತಿ ಮತ್ತು ಯಶಸ್ಸನ್ನು ತಂದು ಕೊಡುತ್ತದೆ. ಅದು ಲಾಭದ ರಾಶಿಯಲ್ಲಿ ಇರುವುದರಿಂದ ದುಡ್ಡು ಬರುವುದರ ಜೊತೆಗೆ ಪ್ರಸಿದ್ಧಿ ಕೂಡ ಬೆಳೆಯುತ್ತದೆ.

ನಿಮ್ಮ ಮಟ್ಟಿಗೆ ವಿಶೇಷವಾದ ಯೋಗ ಇದೆ ಎಂದು ಹೇಳಬಹುದು . ಬುಧ ಸುಸ್ಥಿತಿಯಲ್ಲಿ ಇರುವುದರಿಂದ ಧನಾಗಮನವನ್ನು ಜಾಸ್ತಿ ಮಾಡುತ್ತದೆ . ಇದಾದ ನಂತರ ರವಿ ಮತ್ತು ಬುಧ ಗ್ರಹ ಸ್ಥಾನ ಪರಿವರ್ತನೆ ಮಾಡುವುದರಿಂದ , ಬೇರೆ ಎಲ್ಲಾ ಗ್ರಹಗಳು ನಿಮಗೆ ಸಪೋರ್ಟ್ ಮಾಡುವುದರಿಂದ , ನಿಮ್ಮ ಜೀವನದಲ್ಲಿ ಪರಿವರ್ತನೆ ಯಾಗುವ ಸಾಧ್ಯತೆ ಇರುತ್ತದೆ .ಇನ್ನು ಕುಜ ಗ್ರಹ ಯಾವ ರೀತಿ ಸಹಕರಿಸುತ್ತದೆ ಎಂಬುದನ್ನು ನೋಡುವುದಾದರೆ , ರಾಹು ಗ್ರಹ ರಾಶಿಯಲ್ಲಿ ಇರುವುದರಿಂದ ,

ವಿದ್ಯಾರ್ಥಿಗಳಿಗೆ ಹೆಚ್ಚಾಗಿ ಒಳ್ಳೆಯದಾಗುವ ಸಾಧ್ಯತೆ ಇದೆ. ರಾಹು ಗ್ರಹ ಬುಧ ಗ್ರಹದ ಜೊತೆ ಸೇರಿ ಹೆಚ್ಚಿನ ಯಶಸ್ಸು ತರುವ ಸಾಧ್ಯತೆ ಇದೆ . ಬುಧ ಗ್ರಹ ನಿಮಗೆ ಎರಡನ್ನೂ ನಿಭಾಯಿಸುವ ಸಮತೋಲನವನ್ನು ತಂದುಕೊಡುತ್ತದೆ .ನೀವು ನಿಮ್ಮ ಮನಸ್ಸನ್ನು ಸಮತೋಲನವಾಗಿ ಇಟ್ಟುಕೊಳ್ಳಲು ಪ್ರಯತ್ನ ಮಾಡಬೇಕು .19 ನೇ ತಾರೀಖಿನ ನಂತರ ವಿದ್ಯಾರ್ಥಿಗಳು ಮನಸ್ಸು ಇಟ್ಟು ಓದುವುದನ್ನು ಅಭ್ಯಾಸ ಮಾಡಬೇಕು . ಅಥವಾ ಪ್ರಯತ್ನ ಮಾಡಬೇಕು . ಪರೀಕ್ಷೆಗಳು ಹತ್ತಿರ ಬರುತ್ತಿದ್ದಂತೆ , ಗಮನ ಕಡಿಮೆಯಾಗುವ ಸಾಧ್ಯತೆ ಇರುವುದರಿಂದ ,

ಹೆಚ್ಚಿನ ಗಮನ ಕೊಡಬೇಕಾಗುತ್ತದೆ .ಬೆಳಗ್ಗೆ ಬೇಗ ಎದ್ದು ಸಾಧ್ಯವಾದಷ್ಟು ಸೂರ್ಯನಾರಾಯಣ ದೇವರ ಪ್ರಾರ್ಥನೆಯನ್ನು ಮಾಡಬೇಕು . ಮೀನ ರಾಶಿಯವರು ಗಮನ ಕೊಟ್ಟು ಕೆಲಸ ಮಾಡುವುದರಿಂದ , ಹೆಚ್ಚಿನ ಲಾಭ ಕಂಡುಕೊಳ್ಳುತ್ತದೆ .ವ್ಯಾಪಾರ ವ್ಯವಹಾರ ಅಥವಾ ಎಲ್ಲಾ ಕ್ಷೇತ್ರಗಳಲ್ಲಿ ಕೆಲಸ ಮಾಡುವವರಿಗೆ ಬಹಳಷ್ಟು ಯಶಸ್ಸು ಇದೆ . ಈ ತಿಂಗಳ ಬಹುಭಾಗ ತುಂಬಾ ಲಾಭ ಆಗುವ ಸಾಧ್ಯತೆ ಇದೆ . ಈ ತಿಂಗಳ ಕೊನೆಯಲ್ಲಿ ಸ್ವಲ್ಪ ಖರ್ಚು ವೆಚ್ಚ ಜಾಸ್ತಿ ಆಗುವ ಸಾಧ್ಯತೆ ಇದೆ .

ಹಾಗಾಗಿ ಹೆಚ್ಚಿನ ಪ್ರಯತ್ನ ಮಾಡಬೇಕಾಗುತ್ತದೆ .ವಿಶೇಷವಾಗಿ ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಇರುವವರು 13 ನೇ ತಾರೀಖಿನೊಳಗೆ ಎಲ್ಲವನ್ನು ಮುಗಿಸಿಕೊಳ್ಳಬೇಕಾಗುತ್ತದೆ . ಇದಾದ ನಂತರ ಸ್ವಲ್ಪ ಹಿನ್ನಡೆ ಉಂಟಾಗಬಹುದು . ತಿರುಗಾಟ ಜಾಸ್ತಿ ಆಗುವ ಸಾಧ್ಯತೆ ಇರುತ್ತದೆ . ನೀವು ಬೇಗ ಕೆಲಸ ಕಾರ್ಯಗಳನ್ನು ಮುಗಿಸಿಕೊಳ್ಳುವುದಕ್ಕೆ ಪ್ರಯತ್ನ ಪಡಬೇಕಾಗುತ್ತದೆ . ರಾಶಿಯಲ್ಲಿ ಇರುವ ರಾಹು ಮತ್ತು ವ್ಯಯದಲ್ಲಿ ಇರುವ ಶನಿ ಒಂದು ಮಟ್ಟಕ್ಕೆ ಗೊಂದಲಗಳನ್ನು ತರುತ್ತವೆ . ನಕಾರಾತ್ಮಕತೆ ಆಗುವ ಲಕ್ಷಣ ಇರುತ್ತದೆ .ಈ ತಿಂಗಳು ಅಷ್ಟೊಂದು ಕೆಟ್ಟ ಪರಿಣಾಮಗಳು ಉಂಟಾಗುವುದಿಲ್ಲ .

ಏಕೆಂದರೆ ಲಾಭದಲ್ಲಿ ಇರುವ ಶುಕ್ರ ನಿಮಗೆ ಸುರಕ್ಷತೆಯನ್ನು ತಂದು ಕೊಡುತ್ತಾನೆ . ಸುರಕ್ಷತೆಯ ಭಾವನೆ ನಿಮ್ಮ ಮನಸ್ಸಿನಲ್ಲಿ ಉಂಟಾಗುತ್ತದೆ . ನಿಮ್ಮ ಜೀವನದಲ್ಲಿ ಸರಿಯಾದ ವ್ಯಕ್ತಿಯಿಂದ ಭರವಸೆಗಳು ಸಿಗಬಹುದು . ನಿಮಗೆ ಪ್ರಮುಖವಾದ ವ್ಯಕ್ತಿಯಿಂದ ಸಹಾಯ ಅಥವಾ ಭರವಸೆ ಸಿಕ್ಕಿ ಭವಿಷ್ಯದ ಬೆಳಕು ಕಾಣುವ ಸಾಧ್ಯತೆ ಇದೆ . ಇದಕ್ಕೆ ಅಡಿಪಾಯ ಹಾಕುವುದಕ್ಕೆ ಧನ ಆಗಮನ ಉಂಟಾಗುತ್ತದೆ. ಗೃಹಿಣಿಯರಿಗೆ ಒಳ್ಳೆಯ ಫಲ ಇದೆ . ಶುಕ್ರನ ಪಾತ್ರ ಬಹಳ ನಿರ್ಣಾಯಕವಾಗಿ ಇರುತ್ತದೆ . ಬಹಳ ಒಳ್ಳೆಯ ಫಲಗಳನ್ನು

ಈ ತಿಂಗಳು ಶುಕ್ರ ಗ್ರಹ ನಿಮಗೆ ತಂದುಕೊಡುತ್ತದೆ .11ನೇ ತಾರೀಖಿನ ನಂತರ ಲಾಭ ಸ್ಥಾನಕ್ಕೆ ಶುಕ್ರ ಗ್ರಹ ಬರುತ್ತದೆ .ಬಹಳಷ್ಟು ಚೇತರಿಕೆಯನ್ನು ನೀವು ನಿರೀಕ್ಷೆ ಮಾಡಬಹುದು . ಈ ತಿಂಗಳಲ್ಲಿ ನಿಮಗೆ ಹಣದ ಕೊರತೆ ಬರುವುದಿಲ್ಲ . ಖರ್ಚು ಮಾಡುವಷ್ಟು ಹಣ ನಿಮಗೆ ದೊರೆಯುತ್ತದೆ . ಈ ತಿಂಗಳ ಕೊನೆಯಲ್ಲಿ ಸ್ವಲ್ಪಮಟ್ಟಿಗೆ ಅಪಜಯ ಉಂಟಾಗುವ ಸಾಧ್ಯತೆ ಇದೆ .ರವಿ ವ್ಯಯದ ಭಾಗಕ್ಕೆ ಬಂದಾಗ ,

ಸಣ್ಣಪುಟ್ಟ ಕಿರಿ ಕಿರಿಗಳು ಮತ್ತು ಸೋಲುಗಳು ಉಂಟಾಗುವ ಸಾಧ್ಯತೆ ಇರುತ್ತದೆ . ಸ್ವಲ್ಪ ಕಂಗಾಲಾಗುವ ಪರಿಸ್ಥಿತಿ ಬರುತ್ತದೆ . ಅಂದರೆ ಮನಸ್ಸಿನಲ್ಲಿ ಹಗ್ಗವನ್ನು ಹಾವು ಅಂದುಕೊಳ್ಳುವುದು .ಇದನ್ನ ಸಮತೋಲನ ಮಾಡುವುದಕ್ಕೆ ಬೇರೆ ಗ್ರಹಗಳ ಸಪೋರ್ಟ್ ನಿಮಗೆ ಇದ್ದೇ ಇರುತ್ತದೆ . ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಗಮನ ಇರುತ್ತದೆ . ಸ್ವಲ್ಪ ಆರೋಗ್ಯದಲ್ಲಿ ಏರುಪೇರು ಉಂಟಾಗುವ ಸಾಧ್ಯತೆ ಇದೆ . ಈ ರಾಶಿಯವರಿಗೆ ಗುರು ಬಲ ಕೂಡ ಇದೆ ಎಂದು ಹೇಳಬಹುದು .

Leave A Reply

Your email address will not be published.