ಹಸುವಿನ ದೇಹದ ಈ ಭಾಗ ಮುಟ್ಟಿ ನಮಸ್ಕರಿಸಿ

ಗೋ ಮಾತೆಯ ದೇಹದ ಈ ಭಾಗವನ್ನು ಸ್ಪರ್ಶಿಸಿ ನಮಸ್ಕಾರ ಮಾಡುವುದರಿಂದ ನಿಮ್ಮ ಹಣಕಾಸಿನ ಸಮಸ್ಯೆಗಳೆಲ್ಲಾ ಏಳು ದಿನಗಳಲ್ಲೇ ನಿವಾರಣೆಯಾಗುತ್ತದೆ ಎಂಬುದರ ಬಗ್ಗೆ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ನಮ್ಮ ಸಂಸ್ಕೃತಿ, ಸಂಪ್ರದಾಯದಲ್ಲಿ ಗೋಮಾತೆಯನ್ನು ದೇವತೆಗೆ ಸಮಾನವೆಂದು ಹೇಳಲಾಗಿದೆ. ಗೋಮಾತೆ ಎಲ್ಲೇ ಕಾಣಿಸಿದರೂ ಕೈ ಮುಗಿಯುತ್ತೇವೆ. ಗೋಮಾತೆಯಲ್ಲಿ 33 ಕೋಟಿ ದೇವಾನುದೇವತೆಗಳು ಇದ್ದಾರೆಂಬ ನಂಬಿಕೆ ಇದೆ.

ಗೋ ಮಾತೆಯನ್ನು ಕಾಮಧೇನುವೆಂದು ಕರೆಯುತ್ತೇವೆ. ಇತ್ತೀಚಿನ ದಿನಗಳಲ್ಲಿ ವಾಸ್ತುವಿಗೆ ಹೆಚ್ಚು ಪ್ರಾಮುಖ್ಯತೆಯನ್ನು ಕೊಡುತ್ತಿದ್ದಾರೆ. ವಾಸ್ತುವಿಗೆ ಸಂಬಂಧಿಸಿದ ನಿಯಮಗಳನ್ನು ಅನುಸರಿಸಿಕೊಂಡು ಜೀವನದಲ್ಲಿ ಪಾಸಿಟಿವ್ ಆಗುತ್ತೇವೆ. ವಾಸ್ತು ಮೂಢನಂಬಿಕೆ ಅಲ್ಲ ಇದೊಂದು ವಿಜ್ಞಾನ. ನಮ್ಮ ದೈನಂದಿನ ಜೀವನದಲ್ಲಿ ನಮ್ಮನ್ನು ಅಭಿವೃದ್ಧಿಯ ದಾರಿಯಲ್ಲಿ ನಡೆಸುವ ಅದ್ಬುತವಾದ ದಾರಿದೀಪ ಎಂದರೂ ತಪ್ಪಾಗಲಾರದು. ವಾಸ್ತುಶಾಸ್ತ್ರದಲ್ಲಿ ಗೋಮಾತೆಗೆ ಅತ್ಯಂತ ಉನ್ನತ ಸ್ಥಾನವನ್ನು ನೀಡಲಾಗಿದೆ.

ಮನೆಯಲ್ಲಿ ಹಸುವನ್ನು ಸಾಕುವುದರಿಂದ ಸಾಕಷ್ಟು ವಾಸ್ತುದೋಷಗಳು ನಿವಾರಣೆಯಾಗುತ್ತದೆಂದು ವಾಸ್ತುಶಾಸ್ತ್ರ ಹೇಳುತ್ತದೆ. ಆದರೇ ಪಟ್ಟಣ ಪ್ರದೇಶದಲ್ಲಿರುವವರಿಗೆ ಮತ್ತು ಅಪಾರ್ಟ್ ಮೆಂಟ್ ನಲ್ಲಿ ವಾಸ ಮಾಡುವವರಿಗೆ ಇದು ಕಷ್ಟಕರ. ಅವರು ಹಸುವಿನ ಚಿತ್ರಪ್ರತಿಮೆಯನ್ನು ತಂದು ಇಟ್ಟುಕೊಂಡು ಪೂಜೆ ಮಾಡುವುದರಿಂದ ವಾಸ್ತುದೋಷ ನಿವಾರಣೆಯಾಗುತ್ತದೆ. ನಿಮ್ಮ ಮನೆಯಲ್ಲಿ ಹಸುವಿದ್ದರೇ ನೀವೇ ಅದೃಷ್ಟವಂತರೂ ಎನ್ನಬಹುದು. ಮನೆಯಲ್ಲಿರುವ ಹಸುವಿಗೆ ಒಳ್ಳೆಯ ಆಹಾರವನ್ನು ಮಾತ್ರ ನೀಡಬೇಕು.

ಹಿಂದಿನ ದಿನದ ತಂಗಳು ಆಹಾರವನ್ನು ಹಸುವಿಗೆ ನೀಡಬಾರದು. ನಾವು ಆಹಾರ ಸೇವನೆ ಮಾಡುವ ಮೊದಲು ಹಸುವಿಗೆ ಮೊದಲು ಆಹಾರ ತಿನ್ನಿಸಿ ಗೋ ಮಾತೆಯನ್ನು ಮುಟ್ಟಿ ನಮಸ್ಕಾರ ಮಾಡುವುದರಿಂದ ನಮ್ಮ ಜೀವನದಲ್ಲಿರುವ ಸಕಲ ದೋಷಗಳು ನಿವಾರಣೆಯಾಗುತ್ತವೆ. ಹಿಂದಿನ ಕಾಲದಲ್ಲಿ ಗೋವಿನ ಸಗಣಿಯನ್ನು ಪೂಜೆ ಮಾಡಲಾಗುತ್ತಿತ್ತು. ಗೋವನ್ನು ಪೂಜೆ ಮಾಡಲು ಕೆಲವೊಂದು ನಿಯಮಗಳು ಇವೆ. ಅವುಗಳನ್ನು ಸರಿಯಾಗಿ ತಿಳಿದುಕೊಂಡು ಗೋ ಪೂಜೆಯನ್ನು ಮಾಡಿದರೇ ನಿಮ್ಮ ಕಷ್ಟಗಳು ದೂರವಾಗುತ್ತವೆ.

ಹಸುವಿನ ಯಾವ ಭಾಗವನ್ನು ಮುಟ್ಟಿ ನಮಸ್ಕಾರ ಮಾಡಿದರೇ ನಿಮ್ಮ ಕಷ್ಟಗಳು ಕರಗುತ್ತವೆ ಎಂದರೇ ಮದುವೆಯಾಗಿರುವ ದಂಪತಿಗಳು ಸುಮಾರು ವರ್ಷಗಳಿಂದ ಮಕ್ಕಳಿಲ್ಲದವರು ಸಂತಾನ ಭಾಗ್ಯಕ್ಕಾಗಿ ಹಂಬಲಿಸುತ್ತಿದ್ದರೇ ಗೋಮಾತೆಯ ನಮಸ್ಕಾರ ಮಾಡುವುದರಿಂದ ನಿಮ್ಮ ಮನೆಗೆ ಪುಟ್ಟ ಮಗುವಿನ ಆಗಮನವಾಗುತ್ತದೆ. ನಿಮ್ಮ ಮನೆಯಲ್ಲಿ ಹಸು ಸಾಕುವ ಅನುಕೂಲಗಳು ಇದ್ದರೇ ಹಸುವನ್ನು ತಂದು ಅದಕ್ಕೆ ಹುಲ್ಲನ್ನು ಹಾಕಿ ಮತ್ತು ತಾಜಾ ಆಹಾರ ತಿನ್ನಿಸಿ, ಪಾದ ಮುಟ್ಟಿ ನಮಸ್ಕಾರ ಮಾಡಿ

ಸಂತಾನ ಭಾಗ್ಯಕ್ಕಾಗಿ ಪ್ರಾರ್ಥನೆ ಮಾಡುವುದರಿಂದ ಗೋಮಾತೆ ನಿಮಗೆ ಸಂತಾನ ಭಾಗ್ಯದ ಫಲವನ್ನು ನೀಡುತ್ತಾಳೆಂಬ ನಂಬಿಕೆ ಇದೆ. ಗೋ ಮಾತೆ ಬೇಡಿದ್ದನ್ನು ಕರುಣಿಸುವ ಕಾಮಧೇನು. ಹಸು ಸಾಕಲು ಅನುಕೂಲ ಇಲ್ಲದಿದ್ದರೇ ಕರುವನ್ನು ಮುದ್ದಿಸುವಂತಹ ಹಸು ಕರು ಇರುವಂತಹ ಹಸು ಕರುವಿರುವ ಪ್ರತಿಮೆಯನ್ನು ತಂದು ಪೂಜೆ ಮಾಡಬಹುದು. ಇದು ಕೂಡ ಸಂತಾನಕ್ಕಾಗಿ ಕಾಯುತ್ತಿರುವ ದಂಪತಿಗಳಿಗೆ ಒಳ್ಳೆಯ ಫಲಿತಾಂಶ ಸಿಗುತ್ತದೆ. ನಿಮ್ಮ ಮನೆಯಲ್ಲಿ ಯಾವುದೇ ಶುಭ ಕಾರ್ಯಗಳು ಆರಂಭವಾಗುವುದಕ್ಕೂ

ಮೊದಲು ಗೋ ಮಾತೆಯನ್ನು ಪೂಜಿಸಿದ ನಂತರವೇ ಶುಭ ಕಾರ್ಯಗಳನ್ನ ಆರಂಭ ಮಾಡಬೇಕು. ಇದರಿಂದ ನಿಮ್ಮ ಮನೆಯಲ್ಲಿರುವ ನೆಗೆಟಿವ್ ಎನರ್ಜಿ ಹೋಗುತ್ತದೆ ಮತ್ತು ವಾಸ್ತು ಸಮಸ್ಯೆಗಳು ದೂರವಾಗುತ್ತವೆ. ವೈವಾಹಿಕ ಸಮಸ್ಯೆಗಳು, ಬಂಜೆತನದ ಸಮಸ್ಯೆಗಳು ನಿವಾರಣೆಯಾಗುತ್ತವೆ. ಮಕ್ಕಳು ಮಾತು ಕೇಳುತ್ತಾರೆ, ಉದ್ಯೋಗ, ವ್ಯಾಪಾರ, ವ್ಯವಹಾರಗಳಲ್ಲಿ ತೊಂದರೆ ಇದ್ದರೇ ಎಲ್ಲವೂ ನಿವಾರಣೆಯಾಗುತ್ತದೆ. ಗೋವಿನ ಸಗಣಿ ಮತ್ತು ಗೋ ಮೂತ್ರವನ್ನು ಹೆಚ್ಚು ಹೆಚ್ಚು ಬಳಕೆ ಮಾಡುವುದರಿಂದ ಜೀವನದಲ್ಲಿನ ಸಾಕಷ್ಟು ಕಷ್ಟಗಳು ನಿವಾರಣೆಯಾಗುತ್ತವೆ.

ಸಗಣಿಯಿಂದ ಮಾಡುವ ಬೆರಣಿಯಿಂದ ಅಗ್ನಿಹೋತ್ರ ಹೋಮ ಮಾಡುವುದರಿಂದ ಮನೆಯಲ್ಲಿ ಪರಿವರ್ತನೆಗಳಾಗುತ್ತವೆ. ಮನೆಯಲ್ಲಿ ಆಗಾಗ ಗೋ ಮೂತ್ರವನ್ನು ಸಿಂಪಡಿಸುವುದರಿಂದ ಮನೆಯಲ್ಲಿ ಎಂತಹ ಕೆಟ್ಟ ಶಕ್ತಿಗಳಿದ್ದರೂ ಓಡಿ ಹೋಗುತ್ತವೆ. ಗೋ ಮಾತೆಯನ್ನ ಪೂಜೆ ಮಾಡುವುದರಿಂದ ಮಹಾಲಕ್ಷ್ಮಿ ಮನೆಯಲ್ಲಿ ಸ್ಥಿರವಾಗಿ ನೆಲೆಸುತ್ತಾಳೆ. ಮನೆಯಲ್ಲಿರುವ ಎಲ್ಲಾ ಆರ್ಥಿಕ ಕಷ್ಟಗಳು ದೂರವಾಗುತ್ತವೆ. ಗೋವಿನ ಹಿಂಭಾಗದಲ್ಲಿ ಕುಬೇರ, ಸೂರ್ಯ, ಕೇತು ನೆಲೆಸಿರುವ ಭಾಗ ಮತ್ತು ಗೋಮಾತೆಯ

ತಲೆಯನ್ನು ಪ್ರತಿದಿನ ಮುಂಜಾನೆ ಸ್ಪರ್ಶಿಸುವುದರಿಂದ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ. ಜೊತೆಗೆ ಎಲ್ಲಾ ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ. ನೀವು ದಾರಿಯಲ್ಲಿ ಕಂಡರೂ ಸರಿಯೇ ಆ ಹಸುವಿನ ಬಾಲದ ಹತ್ತಿರ ಅಥವಾ ತಲೆಯನ್ನ ಸ್ಪರ್ಶ ಮಾಡಿ ನಮಸ್ಕರಿಸುವುದರಿಂದ ನಿಮ್ಮ ಜೀವನದಲ್ಲಿ ಪರಿವರ್ತನೆ ಕಾಣಿಸುತ್ತದೆ. ಹಸು ನಿಮ್ಮ ಮನೆಯ ಬಾಗಿಲಿಗೆ ನಿಲ್ಲುತ್ತಿದೆ ಎಂದರೆ ನೀವು ತುಂಬಾ ಅದೃಷ್ಟವಂತರು.

ನಿಮ್ಮ ಜೀವನದಲ್ಲಿ ಮುಂದೆ ಒಳ್ಳೆಯ ದಿನಗಳು ಬರಲಿವೆ ಅಥವಾ ನಿಮಗೆ ಮುಂದೆ ಧನಲಾಭ ಸಿಗಲಿವೆ ಎಂಬ ಸೂಚನೆಗಳನ್ನ ಕೊಡಲು ಗೋ ಮಾತೆ ಪ್ರತಿದಿನ ಅಥವಾ ಹದಿನೈದು ದಿನ ಬಂದು ನಿಲ್ಲುತ್ತಾಳೆ. ಮನೆಯ ಮುಂದೆ ಬಂದು ನಿಂತ ಗೋಮಾತೆಗೆ ತಾಜಾ ಆಹಾರ ನೀಡಿರಿ. ಅಕ್ಕಿ, ಬೆಲ್ಲವನ್ನು ನೀಡಿ ಪಾದ ಮುಟ್ಟಿ ನಮಸ್ಕಾರ ಮಾಡಿ ನಿಮ್ಮ ಜೀವನದಲ್ಲಿ ಒಳ್ಳೆಯ ದಿನಗಳು ಆರಂಭವಾಗುತ್ತವೆ.

Leave a Comment